ವ್ಯಂಗ್ಯ -  ಸ್ಮಿತಾ ಜೈನ್‌ 

ನಾನು ಅಂದು ಬೆಳಗ್ಗಿನಿಂದಲೇ ವ್ಯಸ್ತಳಾಗಿದ್ದೆ. ನನ್ನ ಗಂಡನ ಆಫೀಸಿಗೆ ಹೊಸ ಬಾಸ್‌ ಬರುವವರಿದ್ದರು. ನನ್ನ ಗಂಡ ಅವರನ್ನು ಬರುವ ಭಾನುವಾರ ಮನೆಗೆ ಊಟಕ್ಕೆ ಬರಬೇಕೆಂದು ಆಹ್ವಾನಿಸಿದ್ದರು. 6 ದಿನಗಳ ನಂತರ ಬಂದ ರಜೆಯ ಹೆಚ್ಚಿನ ಸಮಯ ಮನೆಯನ್ನು ವ್ಯವಸ್ಥಿತವಾಗಿಡಲು ಮತ್ತು ಅಡುಗೆ ಮಾಡಲು ಕಳೆದುಹೋಗಿತ್ತು.

ಬಾಸ್‌ ಹೊರಟ ನಂತರ ನಾನು ಬೇಗನೆ ಸಾಮಾನುಗಳನ್ನು ಎತ್ತಿಟ್ಟು ವಿಶ್ರಾಂತಿ ಪಡೆಯುವ ಮೂಡ್‌ನಲ್ಲಿದ್ದೆ. ಆಗಲೇ ನನ್ನ ಚಿಕ್ಕ ಮಗಳು ಆಟದಿಂದ ಹಿಂದಿರುಗಿದಳು. ಅವಳ ಬಟ್ಟೆಗಳೆಲ್ಲಾ ಮಣ್ಣು ಮೆತ್ತಿಕೊಂಡಿದ್ದು ಕಂಡು ನನಗೆ ಕೋಪ ಬಂತು, ``ಎಲ್ಲಿ ಆಡಿ ಬಂದೆ? ಇಷ್ಟು ಕೊಳೆ ಬಟ್ಟೆಗಳನ್ನು ಒಗೆಯೋದು ಹೇಗೆ? ನೋಡಿಕೊಂಡು ಆಡೋಕಾಗಲ್ವಾ? ದಿನ ಇಷ್ಟು ಕೊಳೆ ಬಟ್ಟೆಗಳನ್ನು ಒಗೆಯೋಕೆ ನನಗಾಗಲ್ಲ!'' ಎಂದು ಸಿಡುಕಿದೆ.

ನನ್ನ ಮಾತು ಕೇಳಿ ಮಗಳು ಬಹಳ ಮುಗ್ಧವಾಗಿ ಹೇಳಿದಳು, ``ಆದರೆ ಅವರು ಹೇಳ್ತಾರೆ ಕಲೆ ಒಳ್ಳೆಯದೂಂತ.''

ನಾನು ಆಶ್ಚರ್ಯದಿಂದ, ``ಯಾರು....?'' ಎಂದು ಕೇಳಿದೆ.

``ಅದೇ ಟಿವೀಲಿ ಬರ್ತಾರಲ್ಲ ಅವರು,'' ಎಂದಳು.

``ಅದಾ, ಅದು ಬರೀ ಜಾಹೀರಾತು ಅಷ್ಟೆ,'' ಎಂದು ನಾನು ತಲೆ ಹಿಡಿದುಕೊಂಡೆ. ಬಹಳಷ್ಟು ಕೆಲಸಗಳ ಮಧ್ಯೆ ಒಳ್ಳೆಯ ಮೆಶೀನ್‌ ಅಥವಾ ಒಳ್ಳೆಯ ಸಾಬೂನು ಇರುವುದು ಅಗತ್ಯವಿಲ್ಲ. ಸಮಯ ಇರಬೇಕು. ನಾನು ಅವಳಿಗೆ ಹೇಳಿದೆ, ``ಶೃತಿ, ಇವೆಲ್ಲಾ ವಿಷಯಗಳು ಜಾಹೀರಾತುಗಳಲ್ಲಿ ಇರುತ್ತದೆ. ಈಗಲೇ ಇಷ್ಟು ಕೆಲಸ ಮಾಡಿದ್ದೇನೆ. ನನಗೆ ಬಹಳ ಆಯಾಸ ಆಗಿದೆ.''

ಅದಕ್ಕೆ ಶೃತಿ ಹೇಳಿದಳು, ``ಅಮ್ಮಾ ಜಾಹೀರಾತು ಆಂಟಿ ತಮ್ಮ ಪತಿ ಅಥವಾ ಮಕ್ಕಳ ಬಹಳಷ್ಟು ಗೆಳೆಯರಿಗೆ ಚಿಟಿಕೆ ಹೊಡೆಯುವಷ್ಟರಲ್ಲಿ ಅಡುಗೆ ಮಾಡಿ ಹಾಕ್ತಾಳೆ. ಅವರಿಗೆ ಚೂರೂ ಆಯಾಸ ಆಗಲ್ಲ.''

ಅವಳ ಜೊತೆ ವಾದ ಮಾಡೋಕೆ ಅಥವಾ ಅವಳಿಗೆ ಅರ್ಥ ಮಾಡಿಸೋಕೆ ಮನಸ್ಸಾಗಲಿಲ್ಲ. ಆದ್ದರಿಂದ ಮಾತು ಮರೆಸೋಕೆ ಹೋದೆ, ``ಅವರ ವಿಷಯ ಬಿಡು...... ನನಗೆ ಸೊಂಟ ನೋಯ್ತಿದೆ. ಸ್ವಲ್ಪ ಹೊತ್ತು ರೆಸ್ಟ್ ತಗೋತೀನಿ.''

``ಅಮ್ಮಾ, ನಾನು ಆಯಿಂಟ್‌ಮೆಂಟ್‌ ಹಚ್ತೀನಿ. ಆಹ್‌ ನಿಂದ ಆಹಾ ಆಗುತ್ತದೆ,'' ಶೃತಿ ಹೇಳಿದಳು. ನಾನು ಆಶ್ಚರ್ಯದಿಂದ ಅವಳ ಮುಖವನ್ನೇ ನೋಡತೊಡಗಿದೆ. ಅವಳು ಬೆಳೆದಿದ್ದಾಳೆ ಹಾಗೂ ತಿಳಿವಳಿಕೆಯಿಂದ ಕೂಡಿದ್ದಾಳೆ ಅನ್ನಿಸಿತು. ಆದ್ದರಿಂದಲೇ ಪ್ರತಿ ಜಾಹೀರಾತನ್ನೂ ಗಮನವಿಟ್ಟು ನೋಡೋದು, ಅರ್ಥ ಮಾಡಿಕೊಳ್ಳೋದು, ಜಾಹೀರಾತಿನ ಅಮ್ಮನ ಪಾತ್ರಧಾರಿಯನ್ನು ನನ್ನೊಂದಿಗೆ ಹೋಲಿಸುವುದು ಎಲ್ಲ ಮಾಡುತ್ತಾಳೆ. ಕೆಲವು ದಿನಗಳ ಹಿಂದೆ ಹೇಳುತ್ತಿದ್ದಳು, ``ಅಮ್ಮಾ, ಬೇರೆ ಸೋಪು ತಗೊಂಡು ಬಾ,''

ನಾನು ಯಾವ ಸೋಪು ಎಂದು ಕೇಳಿದಾಗ, ``ಅದೇಮ್ಮಾ, ಅದನ್ನು ತ್ವಚೆಗೆ ಹಚ್ಚಿದ್ರೆ ವಯಸ್ಸೇ ಗೊತ್ತಾಗಲ್ವಲ್ಲಾ, ಆ ಸೋಪು. ಅದನ್ನು ಹಚ್ಚಿಕೊಂಡ್ರೆ ನೀನೂ ಸುಂದರವಾಗಿ ಕಾಣ್ತೀಯ. ಆ ಸೋಪನ್ನೇ ತಗೊಂಡು ಬಾ.''

ಅಂದು ಅವಳ ಮಾತಿಗೆ ನಕ್ಕು, ``ಆಯ್ತು, ತರ್ತೀನಿ,'' ಎಂದು ಮುಂದಕ್ಕೆ ಹಾಕಿದೆ. ಆದರೆ ಆ ಜಾಹೀರಾತನ್ನು ನೋಡಿದ್ದ ನನಗೆ ಇದುವರೆಗೆ ಸ್ವಲ್ಪವೂ ಅಂಥ ಅನುಭವವಾಗಿರಲಿಲ್ಲ. ಆದರೆ ಇಂದು ನನ್ನ ಮಗಳಿಗೆ ಜಾಹೀರಾತಿನ ಅಮ್ಮ ನನ್ನಮ್ಮನಿಗಿಂತ ಏಕೋ ಗ್ರೇಟ್‌ ಎಂದು ಅನ್ನಿಸುತ್ತಿದೆ. ಇರಲಿ, ನಾನು ಮಗಳಿಗೆ ಹೇಳಿದೆ, ``ಶೃತಿ, ಎಲ್ಲರದೂ ಊಟ ಆಯ್ತು. ಟೇಬಲ್ ಮೇಲೆ ಊಟ ಇಟ್ಟಿದ್ದೀನಿ. ತಿನ್ನು ಹೋಗು ಈ ನ್ಯಾಪ್‌ಕಿನ್‌ ತಗೋ. ಗಮನವಿಟ್ಟು ತಿನ್ನು... ಮುಖಕ್ಕೆ ಅಂಟಿಕೊಂಡ್ರೆ ಇದರಿಂದ ಒರೆಸ್ಕೋ.'' ಶೃತಿ ಬಹಳ ಮುಗ್ಧತೆಯಿಂದ ಹೇಳಿದಳು, ``ಅಮ್ಮಾ, ಟಿ.ವಿ.ಯಲ್ಲಿ ಅಣ್ಣ ಮತ್ತು ಅಕ್ಕ ಚಾಕಲೇಟ್ ತಿಂದಾಗ ಎಲ್ಲರ ಬಾಯಿ ಹಾಗೂ ಕೈಗಳಿಗೆ ಅಂಟಿರುತ್ತದೆ. ಅವರ ಅಮ್ಮನಂತೂ ಅವರನ್ನು ಬೈಯ್ಯುವುದಿಲ್ಲ. ನೀನಂತೂ ನನ್ನನ್ನು ಬೈತಾನೇ ಇರ್ತೀಯ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ