ಕಥೆ - ಆರ್‌.  ಸುಧಾಮಣಿ 

ವಿನೋದ್‌ ಮದುವೆಯಾಗಿ ಎರಡು ವರ್ಷ ಕಳೆದಿತ್ತು ಜಾಹೀರಾತು ಸಂಸ್ಥೆಯೊಂದರಲ್ಲಿ ಉತ್ತಮ ಹುದ್ದೆಯಲ್ಲಿದ್ದ ಅವನಿಗೆ ಮೊದಲಿನಿಂದಲೂ  ಅಡ್ವೆಂಚರ್‌, ಥ್ರಿಲ್‌ ಎಂದರೆ ಬಹಳ ಆಸಕ್ತಿ. ಕೆಲವೊಮ್ಮೆ ಬೇರೆಯವರಿಗೆ ಇವನದ್ದು ಹುಚ್ಚಾಟವೆಂತಲೂ ಅನಿಸುತ್ತಿತ್ತು. ಆದರೆ  ಯಾವಾಗಲೂ ತನ್ನ ಇಷ್ಟದಂತೆಯೇ, ಬದುಕುತ್ತಿದ್ದ ವಿನೋದ್‌ಗೆ ಮಾತ್ರ ಯಾರ ಮಾತಿಗೂ ಬೆಲೆ ಕೊಡದೆ ಖುಷಿ ಖುಷಿಯಾಗಿರುತ್ತಿದ್ದ. ಅತ್ಯಂತ ಹೆಚ್ಚಾಗಿ ಪ್ರೀತಿಸುವ ಪತ್ನಿ, ಓಡಾಡಲು ಕಾರ್‌, ಅಪಾರ್ಟ್‌ಮೆಂಟ್‌ನಲ್ಲಿ ವಾಸ ಇಷ್ಟರ ಹೊರತು ಇನ್ನೇನು ಬೇಕು?

ಅದೊಮ್ಮೆ ಪತ್ನಿ ಮೂರು ದಿನಗಳ ಮಟ್ಟಿಗೆ  ಅವಳ ತಂದೆಯ ಮನೆಗೆ ಹೋಗಿದ್ದಳು. ವಿನೋದ್‌ ಹೊಸದೊಂದು ಥ್ರಿಲ್ಲಿಂಗ್‌ ಪಡೆಯುವುದಕ್ಕೆ ಮುಂದಾಗಿದ್ದ. ಅದರಂತೆ ಪ್ರಖ್ಯಾತವಾಗಿರುವ ವೈವಾಹಿಕ ನೋಂದಣಿ ಜಾಲತಾಣದಲ್ಲಿ ತನ್ನ ಹೆಸರು, ಸ್ವವಿವರವನ್ನು ಅಪ್‌ಲೋಡ್‌ ಮಾಡಿ ತನಗೆ ಸುಂದರ, ವಿದ್ಯಾವಂತ ಯುವತಿ ಬೇಕಾಗಿದ್ದಾಳೆ ಎಂದು ಕೇಳಿದ್ದ. ಅದರ ಮರುದಿನವೇ ಬಹಳಷ್ಟು ಯುವತಿಯರಿಂದ ಅವರ ಪೋಷಕರಿಂದ ವಿನೋದ್‌ಗೆ ಇಮೇಲ್‌ ಬರಲಾರಂಭಿಸಿದವು. ಕಡೆಗೆ ಆ ಜಾಲತಾಣದವರ ಕಡೆಯಿಂದ ತಿಂಗಳ ಕಡೆಯ ಭಾನುವಾರ ನಗರದ ಪ್ರಸಿದ್ಧ ಹೋಟೆಲ್‌ನಲ್ಲಿ ವಧೂವರರ ಸಮಾವೇಶ ಕಾರ್ಯಕ್ರಮವಿದ್ದು, ಆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕರೆ ಬಂದಿತು.

ವಿನೋದ್‌ ಇಂತಹ ಅವಕಾಶವನ್ನು ಕಳೆದುಕೊಳ್ಳುವನೇ? ಕಾರ್ಯಕ್ರಮಕ್ಕೆ ಹೊರಟೇಬಿಟ್ಟ.ಹೋಟೆಲ್‌ನ ಪಾರ್ಟಿ ಹಾಲ್‌ ತುಂಬಾ ತರುಣ, ತರುಣಿಯರು, ಅವರ ಪೋಷಕರಿದ್ದರು. ಎರಡೂ ಕಡೆಯವರು ಪರಸ್ಪರ ಪರಿಚಯಿಸಿಕೊಳ್ಳುವುದು, ಹೊಂದಾಣಿಕೆ, ಆದರ ಮೊಗದಲ್ಲಿ ಆನಂದ, ಉತ್ಸಾಹ, ಲವಲವಿಕೆ ಒಟ್ಟಾರೆ ವಾತಾವರಣವೇ ಸಂಭ್ರಮ, ಸಡಗರಗಳಿಂದ ಕೂಡಿತ್ತು.

ವಿನೋದ್‌ ಉತ್ತಮವಾದ ಆಕರ್ಷಕ ಉಡುಗೆ ತೊಟ್ಟು ಜೊತೆಗೆ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡಿದ್ದ. ಪಾರ್ಟಿ ಹಾಲ್ ಸಾಕಷ್ಟು ದೊಡ್ಡದಾಗಿತ್ತು. ಅದರಲ್ಲಿ ಎರಡು ಸುತ್ತು ಸುತ್ತಿದ ವಿನೋದ್‌ಗೆ ಅಲ್ಲಿ ಕೆಂಪು ಬಣ್ಣದ ಸೀರೆ, ಅದಕ್ಕೆ ಮ್ಯಾಚಿಂಗ್‌ ಬ್ಲೌಸ್‌ ತೊಟ್ಟು ಜೊತೆಗೆ ಜ್ಯೂವೆಲರಿ ಧರಿಸಿದ್ದ ಯುವತಿಯೊಬ್ಬಳು ಕಾಣಿಸಿದಳು.

``ಹಾಯ್‌....''

``ಹಲೋ....''

``ಐ ಆ್ಯಮ್ ವಿನೋದ್‌.''

``ರಶ್ಮಿ.....'' ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡರು. ವಿನೋದ್‌ ಅಲ್ಲೇ ಇದ್ದ ಡೈನಿಂಗ್‌ ಹಾಲ್‌ಗೆ ಅವಳನ್ನು ಕರೆದು ಅಲ್ಲಿ ಕೂಲ್‌ ಡ್ರಿಂಕ್ಸ್ ಗೆ ಆರ್ಡರ್‌ ಮಾಡಿದ. ಇಬ್ಬರೂ ಕುಳಿತು ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಕೆಲವೇ ನಿಮಿಷಗಳಲ್ಲಿ ಇಬ್ಬರೂ ಸ್ನೇಹಿತರಾದರು. ಕೆಲವು ನಿಮಿಷಗಳಲ್ಲಿ ವಿನೋದ್‌ ಮತ್ತು ರಶ್ಮಿ ಇಬ್ಬರಿಗೂ ತಾವು ಪರ್ಫೆಕ್ಟ್ ಮ್ಯಾಚ್‌ ಎನಿಸುತ್ತಿತ್ತು. ಅಷ್ಟರಲ್ಲಿ ರಶ್ಮಿ ಅರ್ಧದಲ್ಲೇ ಎದ್ದು ಹೊರ ಹೋಗಲು ತೊಡಗಿದಳು.

``ಏಕೆ.... ಏನಾಯ್ತು?'' ವಿನೋದ್‌ ಅವಳನ್ನೇ ಹಿಂಬಾಲಿಸಿ ಕೇಳಿದ.

``ಏನಿಲ್ಲ...''

``ಮತ್ತೆ ಏಕೆ ಅರ್ಧಕ್ಕೆ ಎದ್ದು ಹೊರಟಿರಿ?''

``ಅದು ನನಗೆಲ್ಲೋ ನಿಮ್ಮ ಮೇಲೆ ಇಷ್ಟವಾಗುಂತೆ ಕಾಣುತ್ತಿದೆ. ನಿಮಗೂ ನಾನು ಇಷ್ಟವಾಗಿರಬಹುದು. ಅದಕ್ಕೆ ನೀನು ಇಲ್ಲಿ ನಾನು ಪ್ರಪೋಸ್‌ ಮಾಡುವ ಮುನ್ನ ನಾವಿಬ್ಬರೂ ದೂರವಾಗುವುದೇ ಉತ್ತಮ.''

``ಹ್ಞಾಂ! ಏನು ಹೇಳುತ್ತಿದ್ದೀರಿ? ಏಕೆ....?''

``ಅದು.... ನಾನು ಸತ್ಯವನ್ನು ಹೇಳಿಬಿಡುತ್ತೇನೆ.....'' ರಶ್ಮಿ ತುಸು ತಡೆದು ನುಡಿದಳು, ``ನಾನು ಇಲ್ಲಿಗೆ ಬಂದದ್ದು ಯಾರೊಬ್ಬರನ್ನು ಮದುವೆಯಾಗಬೇಕೆಂದು ಅಲ್ಲ. ಕೇವಲ ಮನರಂಜನೆಗಾಗಿ ಮಾತ್ರ! ಯಾವ ಹುಡುಗನೊಂದಿಗೂ ವಿವಾಹವಾಗಲು ನನಗೆ ಇಚ್ಛೆ ಇಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ