ನೀಳ್ಗಥೆ  -  ಚಂದ್ರಿಕಾ ಸುಧೀಂದ್ರ

ಗಂಡನಿಂದ ಸಂಸಾರದಲ್ಲಿ ತಾನು ಬಯಸಿದಂಥ ಸುಖ ಕಾಣದ ಲಾವಣ್ಯಾ, ತನ್ನನ್ನು ಆರಾಧಿಸುತ್ತಿದ್ದ ವೈಭವ್ ಗೆ ತನ್ನನ್ನೇ ಸಮರ್ಪಿಸಿಕೊಂಡಳು. ಅವಳ ವ್ಯವಹಾರ ಅರಿತ ಗಂಡ, ಮಗಳು ದೂರಾದರು. ಏಕಾಂಗಿಯಾದ ಲಾವಣ್ಯಾ ಹಳೆಯ ಜೀವನ ಮರೆತು ಅನಾಥಾಶ್ರಮ ಸ್ಥಾಪಿಸಿದಳು. ಮುಂದೆ ನಡೆದುದೇನು....?

 ಕಳೆದ ಸಂಚಿಕೆಯ ಕಥೆ : ತುಂಬು ಶ್ರೀಮಂತರ ಒಬ್ಬಳೇ ಮಗಳು ಲಾವಣ್ಯಾ ಅಪರೂಪದ ಸೌಂದರ್ಯವತಿ. ಮನೆಗೆ ಒಬ್ಬಳೇ ಮಗಳಾಗಿ ಅತಿ ಮುದ್ದಿನಿಂದ ಬೆಳೆದಳು, ಹಿರಿಯರ ಆಯ್ಕೆಯಂತೆ ಅನುಕೂಲಸ್ಥ ಧನುಷ್‌ನನ್ನು ಮದುವೆಯಾದಳು. ಮಿತಭಾಷಿ, ಹೆಚ್ಚು ರಸಿಕನಲ್ಲದ ಧನುಷ್‌ ಹೆಂಡತಿಗೆ ಹೊತ್ತು ಹೋಗಲೆಂದು ಲೇಡೀಸ್‌ ಕ್ಲಬ್‌ಗೆ ಸೇರಿಸಿದ. ಅಲ್ಲಿ ವೈಭವ್ ಅವಳ ಎಲ್ಲಾ ಚಟುವಟಿಕೆ, ಹಾಡುಗಾರಿಕೆಗೆ ಪಾರ್ಟ್‌ನರ್‌ ಆದ. ಮುಂದೆ ಮುದ್ದಾದ ಮಗುವಿನ ತಾಯಿಯಾದ ಲಾವಣ್ಯಾಳ ದಾಂಪತ್ಯದಲ್ಲಿ ನಡೆದದ್ದೇನು? ಇಂಥ ಲಾವಣ್ಯಾ ಪ್ರೌಢಾವಸ್ಥೆಗೆ ಬಂದು ಇಂದಿರಮ್ಮನಾಗಿ ಅನಾಥಾಶ್ರಮ ನಡೆಸುವಂಥದ್ದು ಏನಾಯಿತು....?

ಮುಂದೆ ಓದಿ......

ಆದರೆ ಹೆಚ್ಚು ಹೊತ್ತು ಸೌಜನ್ಯಾಳ ಜೊತೆ ಆಟವಾಡುತ್ತಾ ಕಾಲ ಕಳೆದನು ವೈಭವ್. ಅವನಿಗೆ ಧನುಷ್‌ ಮುಂದೆ ಸೌಜನ್ಯಾಳನ್ನು ಎಷ್ಟು ಹೊಗಳಿದರೂ ಸಾಲದು. ಹೊರಡುವ ಮುಂಚೆ, ಸೌಜನ್ಯಾಳಿಗೆ ಚಿನ್ನದ ಸರ ಕೊಡುವುದರ ಜೊತೆಗೆ ಲಾವಣ್ಯಾಳಿಗೆ ಚಿನ್ನದ ನೆಕ್ಲೇಸ್‌ ಉಡುಗೊರೆ ನೀಡಿದ. ನನ್ನ ಮಗಳಿಗೆ ಕೊಡಬೇಕಾದ್ದು ಸರಿ. ಆದರೆ ನನ್ನ ಹೆಂಡತಿಗೆ ಯಾಕೆ ಉಡುಗೊರೆ ಎಂದು ಧನುಷ್‌ ಕೇಳಿದಾಗ, ಏನಿಲ್ಲ ಒಬ್ಬರಿಗೆ ಕೊಟ್ಟು ಇನ್ನೊಬ್ಬರಿಗೆ ಕೊಡದಿರುವುದು ಸರಿಯಲ್ಲ ಎಂದು ಇಬ್ಬರಿಗೂ ತಂದೆ ಎಂದು ವೈಭವ್ ಮಾತನ್ನು ತೇಲಿಸಿಬಿಟ್ಟ. ಅದಾದ ನಂತರ ಆಗಾಗ್ಗೆ ವೈಭವ್ ಲಾವಣ್ಯಾಳ ಮನೆಗೆ ಬರುವುದು ಜಾಸ್ತಿಯಾಯಿತು. ನಿಮ್ಮ ಮಗಳು ನನ್ನನ್ನು ಎಷ್ಟು ಆಕರ್ಷಿಸಿಬಿಟ್ಟಿದ್ದಾಳೆ ಎಂದು ಸೌಜನ್ಯಾಳಿಗಾಗಿ ಗಿಫ್ಟ್ ತರುವುದರ ಜೊತೆಗೆ ಲಾವಣ್ಯಾಳಿಗೂ ಸೀರೆ, ಅಲಂಕಾರ ಸಾಮಗ್ರಿಗಳನ್ನು ತಂದುಕೊಡುತ್ತಿದ್ದ. ಹೊರಗೆ ಕರೆದುಕೊಂಡು ಹೋಗುವ, ತನ್ನೊಡನೆ ಆಟವಾಡುತ್ತಾ ಕಾಲ ಕಳೆಯುವ ವೈಭವ್ ಅಂಕಲ್ ಎಂದರೆ ಸೌಜನ್ಯಾಳಿಗೆ ಬಹಳ ಇಷ್ಟ. ಏಕೆಂದರೆ ತಂದೆಯಾಗಿ ಒಂದು ದಿನ ಧನುಷ್‌ ಮಗಳನ್ನು ಹತ್ತಿರ ಕರೆದು ಎತ್ತಿ ಮುದ್ದಿಸುತ್ತಿರಲಿಲ್ಲ. ಅವಳ ಜೊತೆ ಕಾಲ ಕಳೆಯುತ್ತಿರಲಿಲ್ಲ. ಹೊರಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಈ ಎಲ್ಲಾ ಕೊರತೆ ತುಂಬಿದವನು ವೈಭವ್. ಆದ್ದರಿಂದ ಅವನ ಬರುವಿಕೆ ಸೌಜನ್ಯಾಳಿಗೆ ಬಹಳ ಇಷ್ಟ.ಒಮ್ಮೆ ಲಾವಣ್ಯಾ ಯಾಕೆ ವೈಭವ್ ನೀವು ಇನ್ನೂ ಮದುವೆಯಾಗಿಲ್ಲ. ನೋಡಲು ಎಷ್ಟು ಸ್ಮಾರ್ಟ್‌ ಆಗಿದ್ದೀರಾ? ಎಂದು ಕೇಳಿದಳು. ಥ್ಯಾಂಕ್ಸ್ ಫಾರ್‌ ಯುವರ್‌ ಕಾಂಪ್ಲಿಮೆಂಟ್ಸ್ ನನಗೆ ಮದುವೆಯಾಗಿ ಆ ಬಂಧನಕ್ಕೆ ಸಿಲುಕವ ಆಸೆ ಇಲ್ಲ. ಇರುವಷ್ಟು ದಿನ ಜೀವನ ಎಂಜಾಯ್‌ ಮಾಡಿ ಕಾಲ ಕಳೆಯಬೇಕೆಂಬಾಸೆ ಅಷ್ಟೆ. ನಮ್ಮ ತಂದೆ ತಾಯಿ ತುಂಬಾ ಬಲವಂತ ಮಾಡಿ ಸಾಕಷ್ಟು ಹೆಣ್ಣುಗಳನ್ನು ತೋರಿಸಿದರು. ಆದರೆ ನಾನೇ ಯಾವುದನ್ನೂ ಒಪ್ಪಲಿಲ್ಲ. ಕಡೆಗೆ ನಿರ್ಧಾರವಾಗಿ ಹೇಳಿಬಿಟ್ಟೆ, ನಾನು ಮದುವೆಯಾಗುವುದಿಲ್ಲ. ಹೇಗಿದ್ದರೂ ನನ್ನ ತಮ್ಮ ಆಕಾಶ್‌ ಇದ್ದಾನೆ, ಅವನ ಮದುವೆ ಮಾಡಿ. ನೀವು ನನಗಾಗಿ ಕೊರಗುವುದು ಬೇಡವೆಂದೆ. ಸದ್ಯಕ್ಕೆ ನನ್ನನ್ನು ಹೆಣ್ಣು ನೋಡು ಎಂದು ಪೀಡಿಸುತ್ತಿಲ್ಲ. ನಾನು ಗೆದ್ದೆ. ಈಗ ನೋಡಿ ನಿಮ್ಮಂತಹ ಸುಂದರವಾದ ಹೆಣ್ಣು ನನ್ನ ಜೊತೆ ಕಾಲ ಕಳೆಯಲು ಇರುತ್ತೀರಾ ಹಾಗೆ  ಕ್ಲಬ್‌ನಲ್ಲೂ ಎಲ್ಲರೂ ನನ್ನ ಸ್ವಭಾವ ಮೆಚ್ಚಿ ನನ್ನೊಂದಿಗೆ ಆಟವಾಡಲು ಬರುತ್ತಾರೆ. ಇದೇ ನಿಜವಾದ ಜೀವನ ಅಲ್ವಾ? ಎಂದಾಗ ಬಹಳ ವಿಚಿತ್ರ ನಡವಳಿಕೆಯ ವ್ಯಕ್ತಿ ಎನಿಸಿತು ಲಾವಣ್ಯಾಳಿಗೆ. ಆದ್ದರಿಂದ ಹೆಚ್ಚಿಗೆ ಕೆದಕುವ ಗೋಜಿಗೆ ಹೋಗಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ