ಅದಾಗಲೇ ರಾತ್ರಿ 10 ಗಂಟೆ ದಾಟಿತ್ತು. 10ನೇ ಮಹಡಿಯಲ್ಲಿದ್ದ ತನ್ನ ಫ್ಲಾಟ್‌ನಿಂದ ಸೋಮು ಈ ಕೋಣೆಯ ಕಿಟಕಿಯಿಂದ ಒಮ್ಮೆ, ಆ ಕೋಣೆಯ ಕಿಟಕಿಯಿಂದ ಮತ್ತೊಮ್ಮೆ ಇಣುಕಿ ಕೆಳಗೆ ನೋಡುತ್ತಿದ್ದ. ಅವನ ಪತ್ನಿ ಸ್ವಾತಿ ಡಿನ್ನರ್‌ ಮುಗಿಸಿ, ಅಪಾರ್ಟ್‌ಮೆಂಟ್‌ಸುತ್ತಾ ವಾಕ್‌ ಮಾಡಲಿಕ್ಕೆಂದು ಹೋಗಿದ್ದಳು, ಅದವಳ ಡೇಲಿ ರೊಟೀನ್‌. ಆದರೆ ಬಹಳ ಹೊತ್ತಾದರೂ ಅವಳು ಮೇಲೆ ಬರಲೇ ಇಲ್ಲ. ಇವರ 6 ವರ್ಷದ ಮಗ ಧ್ರುವ ಟಿವಿಯಲ್ಲಿ ಕಾರ್ಟೂನ್‌ ನೋಡುತ್ತಿದ್ದ. ಸೋಮುವಿನ ಆಫೀಸ್‌ ಕೆಲಸ ಇನ್ನೂ ಮುಗಿದಿರಲಿಲ್ಲ, ಹೀಗಾಗಿ 10 ದಾಟಿದರೂ ಲ್ಯಾಪ್‌ಟಾಪ್‌ ಹರಡಿಕೊಂಡು ಕೆಲಸದಲ್ಲಿ ತಲ್ಲೀನನಾಗಿದ್ದ. ಬಹಳ ಬೋರ್‌ ಎನಿಸಿ, ಮನೆ  ಕೀ  ಜೇಬಿಗೆ ಹಾಕಿಕೊಂಡು, ಬಾಗಿಲು ಎಳೆದುಕೊಂಡು ಕೆಳಗೆ ಲಾನ್‌ ಕಡೆ ಹೊರಟ.

ಲಾನ್‌ನಲ್ಲಿ ಇನ್ನೂ ಜನರ ಓಡಾಟ ದಟ್ಟವಾಗಿತ್ತು. ಕೆಲವರು ವಾಕಿಂಗ್‌, ಹಲವರು ಜಿಮ್, ಹರಟೆಯಲ್ಲಿ ತಲ್ಲೀನರಾಗಿದ್ದರು. ಸೋಮುವಿಗೆ ಸ್ವಾತಿ ಎಲ್ಲೂ ಕಾಣಿಸಲಿಲ್ಲ. ಅವನು ಹಾಗೇ ಅಡ್ಡಾಡುತ್ತಾ ಅಪಾರ್ಟ್‌ಮೆಂಟ್‌ನ ಶಾಪಿಂಗ್‌ ಕಾಂಪ್ಲೆಕ್ಸ್ ಕಡೆಯೂ ಹುಡುಕಿ ನೋಡಿದ. ಸಣ್ಣಪುಟ್ಟ ಅರ್ಜೆಂಟ್‌ ಶಾಪಿಂಗ್‌ಗೆ ಇವರು ಅಲ್ಲಿಗೇ ಹೋಗುತ್ತಿದ್ದರು. ಅಲ್ಲಿಂದ ಪಾರ್ಕಿನ ಕಡೆ ಕಾರ್ನರ್‌ನಲ್ಲಿ ಬೆಳಕಿನ ಕಾಂತಿ ಕಡಿಮೆ ಇದ್ದ ಕಡೆ ಸ್ವಾತಿ ಬೇರೆ ಯಾರೋ ಗಂಡಸಿನೊಂದಿಗೆ ಗಹಗಹಿಸಿ ನಗುತ್ತಾ ಹರಟೆ ಹೊಡೆಯುತ್ತಿದ್ದಳು. ಅದನ್ನು ಕಂಡು ಅವನ ತಲೆ ಸುತ್ತಲಾರಂಭಿಸಿತು. ಅವಳ ಕೆನ್ನೆಗೊಂದು ಬಾರಿಸುವಷ್ಟು ಅವನಿಗೆ ಕೋಪ ಬಂತು. ಆದರೆ ಸುತ್ತಮುತ್ತಲ ಜನರ ಓಡಾಟ ಕಂಡು ತನ್ನ ಕೋಪ ನಿಯಂತ್ರಿಸಿಕೊಳ್ಳುತ್ತಾ, ಆ ಕಡೆ ಹುಡುಕುತ್ತಾ ಬಂದವನಂತೆ ``ಸ್ವಾತಿ!`` ಎಂದು ಕಿರುಚಿದ.

ಬೆಚ್ಚಿಬಿದ್ದ ಸ್ವಾತಿ ತಿರುಗಿ ನೋಡಿದಳು. ಒಮ್ಮೆಲೇ ಅವಳ ಮುಖದಲ್ಲಿ ಹಲವು ಭಾವಗಳು ಸುಳಿದಾಡಿದವು. ಅಲ್ಲಿ ಓಡಾಡುತ್ತಿದ್ದ ಜನರೆಲ್ಲ ಬಹಳ ಪರಿಚಿತರು. ಹೀಗಾಗಿ ಆ ಸಂದರ್ಭ ನಿಭಾಯಿಸಲು ತನ್ನೊಂದಿಗಿದ್ದ ಗಂಡಸನ್ನು ಆಗತಾನೇ ಕಂಡವಳಂತೆ, ``ಅರೆ ಪ್ರಶಾಂತ್‌.... ಹೇಗಿದ್ದೀರಿ?'' ಎಂದು ಮಾತನಾಡಿಸಿದಳು. ಪ್ರಶಾಂತ್‌ ಬೇಕೆಂದೇ ಏನೂ ಅರಿಯದ ಅಮಾಯಕನಂತೆ, ಇವನ ಕಡೆ ತಿರುಗಿ, ``ಹಾಯ್‌ ಸೋಮು! ಹೌ ಆರ್‌ ಯೂ? ಓ.... ಸ್ವಾತೀನೂ ಇಲ್ಲೇ ಇದ್ದಾರೆ.....'' ಎಂದ.

ಸೋಮು ಕೋಪಕ್ಕೆ ಬುದ್ಧಿ ಕೊಡಬಾರದೆಂದು ಅದನ್ನು ಕಂಟ್ರೋಲ್ ‌ಮಾಡುತ್ತಾ ಲೋಕಾಭಿರಾಮವಾಗಿ ಅದೂ ಇದೂ ಮಾತನಾಡಿದ. ಸ್ವಾತಿ ಮೌನಕ್ಕೆ ಶರಣಾದಳು. ಸೋಮು ಹೆಚ್ಚುತ್ತಿದ್ದ ಚಳಿ, ಅಪಾರ್ಟ್‌ಮೆಂಟ್‌ನ ಪಾಲಿಟಿಕ್ಸ್ ಇತ್ಯಾದಿ ಬೇಡದ ವಿಷಯ ತೆಗೆದು ಹರಟಲಾರಂಭಿಸಿದ. ಸ್ವಲ್ಪ ದೂರ ಈ ದಂಪತಿಗಳ ಜೊತೆ ವಾಕಿಂಗ್‌ ನಾಟಕವಾಡಿದ ಪ್ರಶಾಂತ್‌, ``ಮನೆಯವರು ಕಾಯುತ್ತಿರಬಹುದು,'' ಎಂದು ಕೈ ಬೀಸಿ ಹೊರಟುಹೋದ.

ಪ್ರಶಾಂತ್‌ ಹೊರಟ ನಂತರ ಸೋಮು ಸ್ವಾತಿಯತ್ತ ಗುರಾಯಿಸುತ್ತಾ, ``ಏನು ನಡೆಯುತ್ತಿದೆ ಇಲ್ಲಿ.... ಇಷ್ಟು ಹೊತ್ತಿನಲ್ಲಿ?'' ಎಂದು ತೀಕ್ಷ್ಣವಾಗಿ ಕೇಳಿದ.

``ನೀವು ಕಣ್ಣಾರೆ ನೋಡಿದ್ರಿ ತಾನೇ......? ಹೇಗೆ ಬೇಕೋ ಅರ್ಥ ಮಾಡಿಕೊಳ್ಳಿ,'' ಎಂದು ಉಡಾಫೆಯಿಂದ ನುಡಿದಳು. ಸ್ವಾತಿ ದಾಪುಗಾಲು ಹಾಕುತ್ತಾ ಮನೆ ಕಡೆ ಹೆಜ್ಜೆ ಹಾಕಿದಳು. ಇಬ್ಬರೂ ಮನೆಗೆ ಬಂದಾಗ ಟಿವಿ ಓಡುತ್ತಿತ್ತು, ಧ್ರುವ ಸೋಫಾದಲ್ಲೇ ಒರಗಿ ನಿದ್ರಿಸಿಬಿಟ್ಟಿದ್ದ. ಸ್ವಾತಿ ಅವನನ್ನು ಎತ್ತಿಕೊಂಡು ಹೋಗಿ ಅವನ ಕೋಣೆಯಲ್ಲಿ ಮಲಗಿಸಿ ಬಂದಳು. ಮಾರನೇ ದಿನ ಅವನು ಶಾಲೆಗೆ ಹೋಗಬೇಕಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ