ಕೇಶವ್ ರಾವ್ ಭಾರದ್ವಾಜ್ಮತ್ತು ನಿರ್ಮಲಾ ದಂಪತಿಗಳದು ತುಂಬು ಸಂಸಾರ. ಇವರ ಹಿರಿ ಮಗ ಸೊಸೆ ರಾಜೇಶ್ಜಾನಕಿ ಎಲ್ಲರ ಮೇಲೆ ದರ್ಪ ತೋರಿಸುತ್ತಾ ಮೆರೆಯುತ್ತಿದ್ದರು. ಕಿರಿಮಗ ನಿತೀಶ್ಗೆ ಕಾಲು ಊನವಾಗಿದ್ದರಿಂದ ಮನೆಯವರೆಲ್ಲರ ತಿರಸ್ಕಾರ ಎದುರಿಸಬೇಕಿತ್ತು. ಅವನ ಪತ್ನಿ ಮಾಯಾ ಮನೆಯವರೆಲ್ಲರಿಗೂ ಬಿಟ್ಟಿ ಆಳಾಗಿ ದುಡಿಯುವುದೇ ಆಗಿಹೋಯಿತು. ಬಿ.. ಪದವೀಧರನಾದ ನಿತೀಶ್ಗೆ ಮುಂದೆ ಅಮೆರಿಕಾದಲ್ಲಿ ಕೆಲಸ ಸಿಗಲು, ಹೆಂಡತಿ ಮಕ್ಕಳ ಜೊತೆ ಅಲ್ಲೇ ನೆಲೆಸುವಂತಾಯಿತು. ಬಾಲ್ಯದಿಂದಲೂ ಮನೆಯವರ ಅನಾದರಕ್ಕೆ ತುತ್ತಾಗಿ, ಮೊದಲಿನಿಂದಲೂ ಅವರೊಂದಿಗೆ ಆತ್ಮೀಯತೆ ಇಲ್ಲದ ಆರ್ಯನ್ಭಾರತದ ತನ್ನ ಊರಿಗೆ ಹೋಗಲು ಬಯಸುತ್ತಿರಲಿಲ್ಲ. ಡಾಕ್ಟರ್ಆಗಿ ಎಲಿಜಬಲ್ ಬ್ಯಾಚುಲರ್ಆಗಿದ್ದ ಅವನಿಗೆ ಹೆಣ್ಣು ಕೊಡಲು ಎಲ್ಲರೂ ಕಾಯುತ್ತಿದ್ದರು. ಅಜ್ಜ ಅಜ್ಜಿಯರಿಗಾಗಿಯೇ ಊರ ಜಾತ್ರೆಗಾಗಿ ಭಾರತಕ್ಕೆ ಬಂದಿದ್ದ ಆರ್ಯನ್‌, ಅಲ್ಲಿ ಅಸ್ಮಿತಾಳ ಸರಳ ವ್ಯಕ್ತಿತ್ವಕ್ಕೆ ಮಾರುಹೋದ.

ಮುಂದೆ......?

ಅಮೆರಿಕಾದಿಂದ ಜಾತ್ರೆಗೆಂದು ಊರಿಗೆ ಬಂದಿದ್ದ ಆರ್ಯನ್‌, ತನಗಾಗಿ ಸೋದರತ್ತೆಯರ ಹೆಣ್ಣುಮಕ್ಕಳು ಹಾಗೂ ದೊಡ್ಡಮ್ಮನ ತಮ್ಮನ ಮಗಳು ಕಾದು ನಿಂತಿದ್ದರೂ, ಅವನು ಅವರಾರಿಗೂ ಮರುಳಾಗದೆ ಸರಳ ಸುಂದರ ಹುಡುಗಿ ಅಸ್ಮಿತಾಳನ್ನೇ ಇಷ್ಟಪಡುವಂತೆ ಆದದ್ದು ಹೇಗೆ.....?

ಜಾತ್ರೆಗೆ ಮೂರು ದಿನಗಳ ಮೊದಲೇ ನೆಂಟರು ಬಂದಿದ್ದರು. ಜಾನಕಿಯ ತಮ್ಮನ ಪರಿವಾರ ಬಂದಿತ್ತು. ಅವರ ಕೊನೆಯ ಮಗಳನ್ನು ತಮ್ಮ ಸೊಸೆಯಾಗಿ ಮಾಡಿಕೊಳ್ಳಬೇಕೆಂದು ಜಾನಕಿಗೆ ಆಸೆ ಇತ್ತು.

``ಅಕ್ಕಾ... ಆರ್ಯನ್‌ ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ,'' ಎಂದು ಮೊದಲೇ ಹೇಳಿಬಿಟ್ಟಿದ್ದರಿಂದ ಜಾನಕಿಯ ಉಮೇದು ಮತ್ತಷ್ಟು ಹೆಚ್ಚಿತ್ತು.

ಹುಡುಗಿ ನೋಡಲು ಚೆನ್ನಾಗಿದ್ದಳು. ಜಾನಕಿ ಅವಳ ಕೈ ಹಿಡಿದು ಕರೆತಂದು, ``ಆರ್ಯನ್‌, ಇವಳು ನನ್ನ ತಮ್ಮನ ಮಗಳು ಚೈತ್ರಾ. ಮೆಡಿಕಲ್ ಕೊನೆಯ ವರ್ಷ ಓದುತ್ತಿದ್ದಾಳೆ. ಅವಳಿಗೆ ಮುಂದೆ ಅಮೆರಿಕಾದಲ್ಲಿ ಕಲಿಯುವ ಆಸೆ ಇದೆ. ನನ್ನ ತಮ್ಮ ಎಂ.ಎಲ್.ಎ ಆಗಿದ್ದಾನೆ!'' ಎಂದು ಹೇಳಿದರು ದೊಡ್ಡಮ್ಮ.

ಅವಳು ಸಹ ಅವನೊಂದಿಗೆ ಸಂಕೋಚವಿಲ್ಲದೆ ಮಾತನಾಡ ತೊಡಗಿದಳು. ನೀವಿಬ್ಬರು ಮಾತನಾಡ್ತಿರಿ ಎಂದು ಹೇಳಿ ಒಳ ಹೋದಳು ಜಾನಕಿ. ಅವಳೊಂದಿಗೆ ಏನು ಮಾತನಾಡಬೇಕೆಂದು ತಿಳಿಯದೆ ಆರ್ಯನ್‌ ಚಡಪಡಿಸಿದ. ಅವಳೇನಾದರೂ ಮೆಡಿಕಲ್ ವಿಷಯದ ಬಗ್ಗೆ ಮಾತನಾಡಿದ್ದರೆ, ಅವನು ಗಂಟೆ ಗಟ್ಟಲೇ ನಿರರ್ಗಳವಾಗಿ ಮಾತನಾಡಿರುತ್ತಿದ್ದ. ಆದರೆ ಅವಳು ಕಾಲೇಜಿನ ಹುಡುಗಿಯರು, ಬಾಯ್‌ ಫ್ರೆಂಡ್‌, ಸೋಶಿಯಲ್ ಮೀಡಿಯಾ ಇದರ ಬಗ್ಗೆ ಮಾತನಾಡುತ್ತಿದ್ದಳು. ಅದರಿಂದ ಅವನಿಗೆ ಉತ್ತರಿಸಲು ಆಗಿರಲಿಲ್ಲ. ಅಲ್ಲಿಯೇ ಕುಳಿತು ಹೂ ಕಟ್ಟುತ್ತಿದ್ದ ಅಸ್ಮಿತಾಳ ಮೇಲೆ ಅವನ ಕಣ್ಣು ನೆಟ್ಟಿತ್ತು. ಅವಳು ಕುಳಿತಿದ್ದ ಭಂಗಿ ಅಳೆದೆಯ ಮೇಲೆ ಹಾವಿನಂತೆ ಬಿದ್ದುಕೊಂಡಿದ್ದ ಜಡೆ ಅವನನ್ನು ಮತ್ತಷ್ಟು ಆಕರ್ಷಿಸಿತ್ತು. ಹೇಗಾದ್ರೂ ಅವಳನ್ನು ಮಾತಾಡಿಸಬೇಕು ಎಂದುಕೊಂಡರೂ ಆಗಿರಲೇ ಇಲ್ಲ. ಅವಳು ತನ್ನ ಕೆಲಸ ಮುಗಿಸಿ ಅದೆಲ್ಲಿಗೆ ಹೋಗಿಬಿಡುತ್ತಿದ್ದಳೋ ಕಾಣುತ್ತಲೇ ಇರಲಿಲ್ಲ.

ಅವಳು ಉಡುತ್ತಿದ್ದ ಸಾಧಾರಣ ಸೀರೆಯಲ್ಲಿಯೂ ಅವನ ಕಣ್ಣಿಗೆ ಅವಳು ಬಹಳ ಸುಂದರವಾಗಿ ಕಾಣುತ್ತಿದ್ದಳು. ಜಾತ್ರೆಗಾಗಿ ಮನೆಯಲ್ಲಿ ಬಹಳ ಜನ ಸೇರಿದ್ದರು. ಆರ್ಯನ್‌ ಎಲ್ಲೇ ಇದ್ದರೂ ಅಜ್ಜಿಯೇ ಹುಡುಕಿಕೊಂಡು ಬಂದು ಅವನನ್ನು ಕೇಳಿ ಅವನಿಗೆ ಬೇಕಾದ್ದನ್ನು ಮಾಡಿಕೊಡುತ್ತಿದ್ದರು. ದೊಡ್ಡಮ್ಮ, ಅತ್ತೆಯರ ಉಪಚಾರ ಜೋರಾಗಿಯೇ ನಡೆದಿತ್ತು. ಚೈತ್ರಾ ಮತ್ತು ಸಮನ್ವಿತಾ ಅವನ ಹಿಂದೆಯೇ ಇದ್ದರೂ. ಬೇಕೆಂದೇ ಮೈ ಮೇಲೆ ಬಿದ್ದು ಮಾತನಾಡಿಸುವ ಅವರ ಓವರ್‌ ಆ್ಯಕ್ಟಿಂಗ್‌ ಸ್ವಭಾವ ಅವನಿಗೆ ಇಷ್ಟವೇ ಆಗುತ್ತಿರಲಿಲ್ಲ. ಅಮೆರಿಕಾದಲ್ಲಿ ಇದೆಲ್ಲಾ ಸಾಧಾರಣ ವಿಷಯ. ಡೇಟಿಂಗ್‌ ಎಲ್ಲಾ ಕಾಮನ್‌. ಆದರೆ ಇಲ್ಲಿಯೂ ಇದೇ ಸಂಸ್ಕೃತಿ ಬೆಳೆಯುತ್ತಿದೆಯಲ್ಲ ಎಂದು ಅವನಿಗೆ ಬೇಸರವೇ ಆಗಿತ್ತು. ಜೊತೆಗೆ ಇಲ್ಲಿ ಅವನಿಗೆ ಯಾರೂ ಸ್ನೇಹಿತರು ಇರಲಿಲ್ಲ, ಅದು ಅವನಿಗೂ ಇನ್ನೂ ಬೇಸರವಾಗಿತ್ತು. ಇವರ ಯಾರ ಮನೆಯಲ್ಲಿಯೂ ಗಂಡು ಮಕ್ಕಳಿಲ್ಲವಲ್ಲ ಎಂದು ಹಲುಬಿದ್ದೆ ಬಂತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ