ಒಂದು ದಿನ ಗೌತಮ್ ತನ್ನ ಮೋಟರ್‌ ಬೈಕ್‌ ಮೇಲೆ ಆಶಾಳನ್ನು ಕೂರಿಸಿಕೊಂಡು ಬೆಂಗಳೂರು ಮಹಾನಗರದಿಂದ ತುಸು ದೂರದಲ್ಲಿದ್ದ ಒಂದು ಪಾರ್ಕಿನತ್ತ ಲಾಂಗ್‌ ಡ್ರೈವ್ ‌ಹೊರಟ. ಅಲ್ಲೊಂದು ಸುಂದರ ಕಾರಂಜಿ ಇತ್ತು. ಮೂಲೆ ಬೆಂಚನ್ನು ಹುಡುಕಿ ಪ್ರೇಮಿಗಳಿಬ್ಬರೂ ಏಕಾಂತದಲ್ಲಿ ಗುಸುಗುಸು ಸಂಭಾಷಣೆಯಲ್ಲಿ ಮುಳುಗಿಹೋದರು. ತಮ್ಮನ್ನು ಆ ಮುಸ್ಸಂಜೆಯಲ್ಲಿ ಗಮನಿಸುವವರು ಯಾರೂ ಇಲ್ಲ ಎಂಬುದೇ ದೊಡ್ಡ ವರದಾನವಾಗಿತ್ತು.

ಕಾರಂಜಿಯಿಂದ ಅಲ್ಲಿ ಪುಟ್ಟದೊಂದು ಕೊಳ ಆಗಿತ್ತು. ಯಾರೋ ಅದಕ್ಕೆ ಕಲ್ಲು ಎಸೆದು ಛಳ್‌..... ಎಂದು ಸದ್ದು ಮಾಡಿದರು. ``ಯಾರೋ ಹತ್ತಿರಾನೇ ಬಂದಿದ್ದಾರೆ ಅನ್ಸುತ್ತೆ, ಕೊಳಕ್ಕೆ ಕಲ್ಲು ಬಿದ್ದ ಸದ್ದಾಯಿತು. ನಮ್ಮನ್ನು ನೋಡಿಬಿಟ್ಟರೆ ಕಷ್ಟ.....'' ``ಅರೆ...... ಹಾಗೇನಿಲ್ಲ ಬಿಡು. ಒಮ್ಮೊಮ್ಮೆ ಮೀನುಗಳು ಸಹ ಮೇಲೆ ಬಂದು ಕುಪ್ಪಳಿಸುತ್ತಿರುತ್ತವೆ. ಬಹುಶಃ ಇದೂ ಅದರದೇ ಸದ್ದಿರಬೇಕು,'' ಎಂದು ಅವಳಿಗೆ ಇನ್ನಷ್ಟು ಒತ್ತರಿಸಿ ಕುಳಿತುಕೊಂಡ. ಅವಳ ಮೈನ ಸುಗಂಧ ಅವನಿಗೆ ಮತ್ತೇರಿಸುತ್ತಿತ್ತು. ಅವಳ ತಲೆಗೂದಲನ್ನು ಚುಂಬಿಸುತ್ತಾ, ``ನೀನು ಯಾವ ಶ್ಯಾಂಪೂ ಬಳಸುತ್ತೀಯಾ?'' ಎಂದು ಕೇಳಿದ. ನಸುನಗುವೇ ಅವಳ ಉತ್ತರವಾಯಿತು.

ಹಾಯಾಗಿ ಆ ಕಲ್ಲು ಬೆಂಚಿನಲ್ಲಿ ಕಾಲು ನೀಟಿ, ಅವಳ ಮಡಿಲಲ್ಲಿ ಒರಗಿದ. ಅವಳು ಬಗ್ಗಿ, ಅವನ ಮುಖದ ಮೇಲೆ ತನ್ನ ಕೂದಲು ಹರಡುತ್ತಾ, ಅವನ ಮೀಸೆ ಜೊತೆ ಚಿನ್ನಾಟವಾಡತೊಡಗಿದಳು. ಅವಳನ್ನು ಚುಂಬಿಸುತ್ತಾ, ಮತ್ತೆ ಮತ್ತೆ ಅವಳ ಕಣ್ಣಲ್ಲೇ ದೃಷ್ಟಿ ನೆಟ್ಟಿದ್ದ.

``ಇದೇನು ಇಷ್ಟೊದು ದಿಟ್ಟಿಸುತ್ತಿರುವೆ? ನಾವೇನು ಹೊಸ ಪ್ರೇಮಿಗಳೇ?'' ಎಂದಳು.

``ನಿನ್ನ ಕಂಗಳನ್ನು ನೋಡುತ್ತಿದ್ದರೆ ನಾನು ಈ ಪ್ರಪಂಚವನ್ನೇ ಮರೆಯುತ್ತೇನೆ.....''

``ಓಹೋ..... ಕವಿ ಮಹಾಶಯ ವರ್ಣನೆ ಸಾಕು. ಇನ್ನು ಹೊರಡೋಣವೇ? ಕತ್ತಲೆ ಆಗುವಷ್ಟರಲ್ಲಿ ನಾನು ಮನೆಯಲ್ಲಿರಬೇಕು. ಗೆಳತಿ ಮನೆಗೆ ಅಂತ ಸುಳ್ಳು ಹೇಳಿ ಬಂದಿದ್ದೀನಿ.....'' ಎನ್ನುತ್ತಾ ಅವಳು ಅಲ್ಲಿಂದ ನಿಧಾನ ಎದ್ದಳು. ತನ್ನ ಸೀರೆಯನ್ನು ಸರಿಪಡಿಸಿ, ತಲೆಗೂದಲನ್ನು ಹಿಂದಕ್ಕೆ ಬಾಚಿಕೊಂಡಳು. ತೆಳು ನೀಲಿ ಸೀರೆ ಅವಳ ಚೆಲುವಿಗೆ ಚೆನ್ನಾಗಿ ಒಪ್ಪುತ್ತಿತ್ತು. ಅಷ್ಟರಲ್ಲಿ ಗಾಳಿ ಬೀಸಲು ಅವಳ ಸೆರಗು ಅವನ ಮುಖಕ್ಕೆ ಬಡಿಯಿತು.

ಗೌತಮ್ ಅವಳ ಸೆರಗನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡ. ``ಅಯ್ಯೋ.... ಸೆರಗು ಬಿಡು..... ನೋಡಿದವರು ಏನೆಂದುಕೊಂಡಾರು?''

``ಈ ಹಿತಕರವಾದ ತಂಗಾಳಿಯಲ್ಲಿ ಇಂಥ ಚೆಲುವೆ ಬಳಿ ಇರಲು..... ಇಷ್ಟು ಬೇಗ ಕಳಿಸಲಾದೀತೇ?''

``ಬಿಡೀಪ್ಪಾ..... ಲೇಟ್‌ ಆಗೋಗಿದೆ......''

``ಇದೋ ಬಿಟ್ಟೆ......'' ಎನ್ನುತ್ತಾ ಅವಳ ನಡು ಬಳಸಿ ಹಿತವಾಗಿ ಅಪ್ಪಿಕೊಂಡ. ಅವನನ್ನು ಬಿಟ್ಟು ಹೋಗಲು ಅವಳಿಗೂ ಮನಸ್ಸಿಲ್ಲ.  ಆದರೆ ತಡವಾಗಿ ಹೋದರೆ....? ಒಲ್ಲದ ಮನದಿಂದ ಇಬ್ಬರೂ ಮನೆ ಕಡೆ ನಡೆದರು.

ಇವರಿಬ್ಬರ ಈ ಪ್ರೇಮಲೀಲೆಯನ್ನು ದೂರದಲ್ಲಿ ಕುಳಿತಿದ್ದ ಪ್ರೌಢ ದಂಪತಿ ನೋಡುತ್ತಿದ್ದರು. ಅವರೇ ಡಾಕ್ಟರ್‌ ಪ್ರೇಮನಾಥ್‌ ಹಾಗೂ ಡಾಕ್ಟರ್‌ ಶೀಲಾ ಮೂರ್ತಿ. ಆ ಪಾರ್ಕಿನ ಹತ್ತಿರದಲ್ಲೇ ಅವರ ಖಾಸಗಿ ನರ್ಸಿಂಗ್‌ ಹೋಂ ಇತ್ತು. ಆಸ್ಪತ್ರೆಯ ಜಂಜಾಟದಿಂದ ತುಸು ಬಿಡುವಾದಾಗ ಎಂದಾದರೂ ಈ ಪಾರ್ಕಿನ ಕೊಳದ ಬಳಿ ಬಂದು ಕುಳಿತು ರಿಲ್ಯಾಕ್ಸ್ ಆಗುತ್ತಿದ್ದರು. ಆ ಪ್ರೇಮಿಗಳು ಹೊರಟ ನಂತರ ಶೀಲಾ ಹೇಳಿದಳು, ``ನನಗೆ ಈ ಹುಡುಗ ಗೊತ್ತು..... ನನ್ನ ತವರಿನ ಮನೆ ಹತ್ತಿರವೇ ಇವನು ವಾಸವಿದ್ದ. ಮಹಾ ಷೋಕಿವಾಲ, ಹುಡುಗು ಬುದ್ಧಿಯವನು. ಶ್ರೀಮಂತ ತಂದೆಯ ಒಬ್ಬನೇ ಮಗ, ಹಣದ ಮದದಿಂದ ಹೀಗಾಗಿದ್ದಾನೆ. ಇನ್ನೂ ಡಿಗ್ರಿ ಸಹ ಮುಗಿಸಿಲ್ಲ, ಫೇಲ್ ‌ಆಗಿ ಆಗಿ ಅದೇ ಅಂತಿಮ ವರ್ಷದ ವಿದ್ಯಾರ್ಥಿ ಅಂತ ಬಸ್ಕಿ ಹೊಡೀತಿದ್ದಾನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ