ಪರೀಕ್ಷೆಯ ಕೊನೆಯ ಪೇಪರ್‌ ಬರೆದು ಬಂದಿದ್ದ ಪವಿತ್ರಾ ಬಹಳ ಸುಸ್ತಾಗಿ ಹೋಗಿದ್ದಳು. ಮನೆಗೆ ಬಂದು 2 ತುತ್ತು ಉಂಡವಳೇ ಹಲವು ದಿನಗಳ ತಪ್ಪಿದ ನಿದ್ದೆಯನ್ನು ಪೂರೈಸುವಂತೆ ಮಲಗಿದವಳೇ, ಎದ್ದಾಗ ಸಂಜೆ 6 ಗಂಟೆ ಆಗಿತ್ತು. ಪೋರ್ಟಿಕೋದಲ್ಲಿ ನೋಡಿದಾಗ ಅಮ್ಮನ ಕಾರು ನಿಂತಿತ್ತು. ಓ..... ಅಮ್ಮ ಬಂದುಬಿಟ್ಟಿದ್ದಾರೆ ಅಂದುಕೊಂಡಳು. ಆವಳು ರಾಮುವಿಗೆ ಅಮ್ಮನ ಕೋಣೆಗೇ ಟೀ ತರುವಂತೆ ಹೇಳಿ, ನಿಧಾನವಾಗಿ ಅಮ್ಮನ ಕೋಣೆಯ ಕದ ಸರಿಸಿ ಒಳಗೆ ಹೋಗಲು ನೋಡಿದಳು.

ಅಮ್ಮ ಯಾವುದೋ ಫೋಟೋ ಕೈಯಲ್ಲಿ ಹಿಡಿದು ಬಿಕ್ಕಳಿಸುತ್ತಿದ್ದಳು, ``ಇಂದು ಪವಿತ್ರಾಳ ಐಎಎಸ್‌ ಪರೀಕ್ಷೆ ಮುಗಿದಿದೆ. ಅದರಲ್ಲಿ ಅವಳು ಯಶಸ್ವಿಯಾಗಿ ಗೆದ್ದು ಬರುತ್ತಾಳೆ ಎಂದು ಅವಳ ತಂದೆಗೂ ಗ್ಯಾರಂಟಿ ಇದೆ. ಮಗಳನ್ನು ಐಎಎಸ್‌ ಆಫೀಸರ್‌ ಆಗಿಸುವ ನಿನ್ನ ಹಲವು ವರ್ಷಗಳ ಕನಸು ಇಷ್ಟರಲ್ಲೇ ನನಸಾಗಲಿದೆ.....''

ಪವಿತ್ರಾ ಅಲ್ಲಿಂದ ಮೌನವಾಗಿ ಹೊರಟುಹೋಗುವುದೇ ಸರಿ ಎಂದು ಭಾವಿಸಿದಳು. ಅವಳಿಗೆ ತಲೆ ಸುತ್ತಿ ಬಂದಂತಾಯಿತು. ಅಮ್ಮ ಅಳುತ್ತಾ ಹಾಗೇಕೆ ಹೇಳುತ್ತಿದ್ದಾಳೆ? `ಅವಳ ತಂದೆಗೂ ಅದರಲ್ಲಿ ಗ್ಯಾರಂಟಿ ಇದೆ..... ಮಗಳನ್ನು ಐಎಎಸ್‌ ಅಧಿಕಾರಿ ಆಗಿಸುವ ನಿನ್ನ ಕನಸು ನನಸಾಗಲಿದೆ.....? ಇದೆಂಥ ಅಸಂಬದ್ಧ ಮಾತುಗಳನ್ನಾಡುತ್ತಿದ್ದಾಳೆ ಡಿಗ್ರಿ ಕಾಲೇಜಿನ ಪ್ರಿನ್ಸಿಪಾಲ್ ‌ಆಗಿರುವ ನಮ್ಮಮ್ಮ ಪ್ರತಿಷ್ಠೆಗೆ ಹೆಸರಾದ ಮಾಲಿನಿ ಶರ್ಮಾಳ ಬಾಯಲ್ಲಿ ಇದೆಂಥ ಮಾತು? ಹಾಗಾದರೆ ಅವಳ ಕೈಯಲ್ಲಿದ್ದ ಆ ಫೋಟೋ ಯಾರದು? ಅವಳೇಕೆ ಹಾಗೆಲ್ಲ ಮಾತಾಡುತ್ತಿದ್ದಾಳೆ?'

ಟೀ ಟ್ರಾಲಿಯನ್ನು ತಳ್ಳಿಕೊಂಡು ಅಮ್ಮನ ಕೋಣೆಗೆ ಹೋಗುತ್ತಿದ್ದ ರಾಮುವನ್ನು ತಡೆದ ಪವಿತ್ರಾ, ``ಅಲ್ಲಿ ಬೇಡ, ಡೈನಿಂಗ್ ರೂಮಿಗೆ ತೆಗೆದುಕೊಂಡು ಬಾ!''

``ಇದೇನಾಯ್ತು ಅಕ್ಕಾ? ಆಗಲೇ ಅಮ್ಮಾವ್ರ ಕೋಣೆ ಅಂದ್ರಿ, ಇದೀಗ ಡೈನಿಂಗ್‌ ರೂಂ ಅಂತೀರಿ..... ಮಧ್ಯಾಹ್ನ ಸಿನಿಮಾ ಸಿಡಿ ಹಾಕು ಅಂತ ನನಗೆ ಹೇಳಿ ಕೋಣೆಯಲ್ಲಿ ಚೆನ್ನಾಗಿ ನಿದ್ದೆ ಮಾಡಿಬಿಟ್ಟಿದ್ರಿ..... ಅಮ್ಮಾವ್ರು ನನ್ನನ್ನು ಬೈತಾ ಇದ್ರು......''

``ಓ..... ಅಮ್ಮಾ ಮಧ್ಯಾಹ್ನವೇ ಬಂದುಬಿಟ್ಟಿದ್ದರೇನು?'' ಪವಿತ್ರಾ ರಾಮುವಿನ ಮಾತು ತಡೆಯುತ್ತಾ ಕೇಳಿದಳು.

``ಅಲ್ಲ.... ಬಂದದ್ದೇನೋ ಈಗಲೇ.... ನನಗೆ ಚೆನ್ನಾಗಿ ಬೈದು ತಮ್ಮ ಕೋಣೆಗೆ ಹೊರಟುಹೋದರು.''

`ಕೋಣೆಗೆ ಹೋಗಿ ಆ ಫೋಟೋ ಜೊತೆ ಮಾತನಾಡುತ್ತಿದ್ದಾಳೆ...... ಆದರೆ ಆ ಫೋಟೋ ಯಾರದಿರಬಹುದು?' ಪವಿತ್ರಾ ಯೋಚಿಸತೊಡಗಿದಳು. ಅಷ್ಟರಲ್ಲಿ ಮಾಲಿನಿ ಇವರಿದ್ದ ಹಾಲ್‌ಗೆ ಬಂದಿದ್ದಳು. ಮುಖದಲ್ಲಿ ಅಳುವಿನ ಗುರುತು ಒಂದು ಚೂರು ಇಲ್ಲದಂತೆ ಒರೆಸಿಕೊಂಡು ಬಲವಂತದ ನಗು ತರಿಸಿದ್ದಳು.

ಆದರೆ ಕಂಗಳು ಮಾತ್ರ ಇನ್ನೂ ಡಲ್ ಆಗಿದ್ದ.ಅಮ್ಮನನ್ನು ಕಂಡು ಪವಿತ್ರಾ ಏನಾದರೂ ಕೇಳುವ ಮೊದಲೇ ಅಪ್ಪಾಜಿ ಅಲ್ಲಿಗೆ ಬಂದಿದ್ದರು, ``ಹೋ ಡಿಪ್ಲೊಮ್ಯಾಟ್‌.....''

``ಡಿಪ್ಲೊಮ್ಯಾಟ್‌.....? ಯಾರಿಗೆ ಹೇಳ್ತಿದ್ದೀರಾ ಅಜಿತ್‌?''

``ಇನ್ನಾರು? ನನ್ನ ಮಗಳು ಪವಿತ್ರಾಗೆ ಹೇಳ್ತಿದ್ದೀನಿ.... ಅವಳು ಐಎಎಸ್‌ ಅಧಿಕಾರಿ ಅಂದ್ರೆ ಡಿಪ್ಲೊಮ್ಯಾಟ್‌ ಆಗೋದು ಗ್ಯಾರಂಟಿ ಆಯ್ತು ಅನ್ನು ಖುಷಿಯಲ್ಲಿ ಹೇಳ್ತಿದ್ದೀನಿ,'' ಅವರ ಸಂತಸ ಮಾತುಗಳಲ್ಲಿ ತುಂಬಿ ತುಳುಕುತ್ತಿತ್ತು.

``ಇವತ್ತು ಕೊನೆಯ ಪೇಪರ್‌ನ ಎಲ್ಲಾ ಪ್ರಶ್ನೆಗಳೂ ಇವಳಿಗೆ ಬಲು ಸುಲಭ ಎಂದು ಪೇಪರ್‌ ನೋಡುತ್ತಲೇ ತಿಳಿಯಿತು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ