ಬೋರ್ಡಿಂಗ್ ಸ್ಕೂಲ್ : ಸುರಕ್ಷತೆ ಮತ್ತು ಓದಿಗೆ ಕುತ್ತು
ಒಂದು ಒಳ್ಳೆಯ ದುಬಾರಿ ಬೋರ್ಡಿಂಗ್ ಶಾಲೆ ಹುಡುಗಿಯರಿಗೆ ಸುರಕ್ಷತೆ ಕೊಡುತ್ತದೆ ಎನ್ನುವುದರಲ್ಲಿ ಯಾವುದೇ ಗ್ಯಾರಂಟಿ ಇಲ್ಲ. ಬಹಳಷ್ಟು ಪೋಷಕರು ತಮ್ಮ ಮಗಳನ್ನು ಬೋರ್ಡಿಂಗ್ ಸ್ಕೂಲಿಗೆ ಹಾಕಿದರೆ ಓದಿನಲ್ಲಿ ಅವಳು ಪರ್ಫೆಕ್ಟ್ ಹಾಗೂ ಸುರಕ್ಷತೆ ಗ್ಯಾರಂಟಿ ಇರುತ್ತದೆ ಎಂದು ಭಾವಿಸುತ್ತಾರೆ. ಈ ಎರಡನ್ನೂ ಅವರು ಹಣ ಕೊಟ್ಟು ಖರೀದಿಸಲು ಯತ್ನಿಸುತ್ತಾರೆ. ಆದರೆ ವಿಷಾದದ ಸಂಗತಿಯೆಂದರೆ, ಈ ಬೋರ್ಡಿಂಗ್ ಸ್ಕೂಲ್‌ಗಳು ಸ್ವಚ್ಛ ಮೋರಿಗಿಂತ ಬೇರೇನೂ ಅಲ್ಲ.
ಬಹಳಷ್ಟು ಹುಡುಗಿಯರು ಒಂದೇ ಕಡೆ ಜೊತೆ ಜೊತೆಗೆ ಇರಬಹುದು. ಅಲ್ಲಿಯೂ ಕೂಡ ಸುರಕ್ಷತೆ ಹಾಗೂ ಓದುವ ವಾತಾವರಣ ಇರುತ್ತದೆ ಎಂದೇನಿಲ್ಲ. ಇದಕ್ಕೆ ತದ್ವಿರುದ್ಧವೆಂಬಂತೆ ಅಲ್ಲಿ ಪುಂಡಾಟಿಕೆ, ತಂದೆತಾಯಿಯಿಂದ ದೂರ, ಪ್ರೀತಿಯ ಹಸಿವಿನ ತಮ್ಮ ದೈಹಿಕ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಮತ್ತಷ್ಟು ಮುಕ್ತ ಹಾಗೂ ನಿರ್ಭಯರಾಗಿ ಪ್ರತಿಯೊಂದು ತೆರನಾದ ಪ್ರಯೋಗ ಮಾಡಲು ಸ್ವತಂತ್ರರಾಗಿರುತ್ತಾರೆ.
ಡೆಹ್ರಾಡೂನಿನ ಒಂದು ಶಾಲೆಯಲ್ಲಿ ಹುಡುಗಿಯ ಜೊತೆ ಗ್ಯಾಂಗ್ ರೇಪ್ ಮತ್ತು ಶಾಲಾ ಆಡಳಿತ ಮಂಡಳಿಯಿಂದ ಅನಧಿಕೃತವಾಗಿ ಗರ್ಭಪಾತ ಮಾಡಲು ಪ್ರಯತ್ನ ಏನನ್ನು ತೋರಿಸುತ್ತದೆಂದರೆ, ಈ ಶಾಲೆ ಎಷ್ಟೊಂದು ಹಿಂದುಳಿದಿದೆಯೆಂದು ಗೊತ್ತಾಗುತ್ತದೆ. ಭಾರಿ ಭವ್ಯ ಕಟ್ಟಡ, ವಿಶಾಲ ಆಟದ ಮೈದಾನ, ಬಹುದೊಡ್ಡ ಮೆಸ್, ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್, ಕಂಪ್ಯೂಟರ್, ಕಠಿಣ ಶಿಸ್ತು ಇವೆಲ್ಲ ಹುಡುಗಿಯರಿಗೆ ಸೂಕ್ತ ವಾತಾವರಣ ಎಂದು ಹೇಳಲಾಗದು. ಅದು ಗಂಗೆಯಲ್ಲಿರುವ ಚರಂಡಿಗಿಂತಲೂ ಹೆಚ್ಚು ಕೊಳಕು. ಆ ಹುಡುಗಿಯನ್ನು 4 ಹುಡುಗರು ಗ್ಯಾಂಗ್ ರೇಪ್ ಮಾಡಿದರು. ಹುಡುಗಿಯ ತಂದೆ ದೂರು ಕೊಟ್ಟಿದ್ದರಿಂದ ಪ್ರಕರಣ ದಾಖಲಾಯಿತು. ಹುಡುಗಿಯ ಗರ್ಭಪಾತ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ. ಹುಡುಗರನ್ನು ಬಂಧಿಸಲಾಗಿದೆ. ಆದರೆ ಇದರಿಂದ ಏನು ಸುಧಾರಣೆ ಆಗುತ್ತದೆ? ಇಲ್ಲಿನ ಪ್ರಕರಣ ಬಯಲಿಗೆ ಬಂತು. ಆದರೆ ಪ್ರತಿಯೊಂದು ಬೋರ್ಡಿಂಗ್ ಸ್ಕೂಲಿನಲ್ಲೂ ಇಂಥದು ನಡೆಯುತ್ತದೆ. ಏಕೆಂದರೆ ಅಲ್ಲಿ ಹುಡುಗರು ಅಥವಾ ಹುಡುಗಿಯರೇ ಇರಬಹುದು ಅವರು ಉದ್ದಂಡತನ ತೋರುತ್ತಿರುತ್ತಾರೆ. ಒಬ್ಬರಿಂದ, ಒಬ್ಬರ ಬ್ಲ್ಯಾಕ್ ಮೇಲ್ ನಡೆಯುತ್ತಲೇ ಇರುತ್ತದೆ. ಉದ್ದಂಡತನ ಪ್ರತಿಯೊಂದು ಉಪಾಯವನ್ನೂ ಕಲಿಸುತ್ತದೆ. ಹುಡುಗಿಯರಲ್ಲೂ ಗ್ಯಾಂಗ್ ನಿರ್ಮಾಣ ಆಗುತ್ತವೆ. ಹುಡುಗರಲ್ಲೂ ಕೂಡ. ಡ್ರಗ್ಸ್, ಮದ್ಯ, ಸಿಗರೇಟು, ಸೆಕ್ಸ್, ತುಂಟಾಟ ಇತರರಿಗೆ ಹಿಂಸೆ ಕೊಡುವುದು ಶಾಲಾ ಜೀವನದ ಅಂಗಗಳಾಗಿಬಿಡುತ್ತವೆ. ಬೋರ್ಡಿಂಗ್ ಶಾಲೆಯ ಯಾವೊಬ್ಬ ವಿದ್ಯಾರ್ಥಿಯೂ ಇವುಗಳಿಂದ ಹೊರಬರಲು ಆಗುವುದಿಲ್ಲ.
ಮನೆಯಲ್ಲಿರುವ ಮಕ್ಕಳು ಹೆಚ್ಚು ಸುರಕ್ಷಿತರು. ಮನೆಗೆಲಸದವರು ಹಾಗೂ ಆಯಾಗಳ ಆಸರೆಯಲ್ಲಿ ಬೆಳೆಯುವ ಮಕ್ಕಳು ಕೂಡ ಸುರಕ್ಷಿತರು. ಏಕಾಂಗಿ ತಂದೆಯ ಆಶ್ರಯದಲ್ಲಿ ಬೆಳೆಯುವ ಹುಡುಗಿಯರು ಹಾಸ್ಟೆಲ್‌ನಲ್ಲಿರುವ ಹುಡುಗಿಯರಿಗಿಂತ ಹೆಚ್ಚು ಸುರಕ್ಷಿತರು. ಅವರಿಗೆ ಯಾವಾಗಲೂ ಮಾನಸಿಕ ಸುರಕ್ಷತೆ ದೊರೆಯುತ್ತಿರುತ್ತದೆ. ಮುಂಜಾನೆಯ ಸಮಸ್ಯೆ ಸಂಜೆ ಹೊತ್ತಿಗೆ ಬಗೆಹರಿದಿರುತ್ತದೆ. ಬೋರ್ಡಿಂಗ್ ಶಾಲೆಗಳಲ್ಲಂತೂ ದೂರು ಕೊಡುವವರನ್ನು ನಿಕೃಷ್ಟರೆಂಬಂತೆ ಕಾಣಲಾಗುತ್ತದೆ. ಅಲ್ಲಿನ ಶಾಲೆಗಳು ಪ್ರತಿಯೊಂದು ಬಗೆಯ ದೂರುಗಳನ್ನೂ ನಿವಾರಿಸಲು ಆಗುವುದಿಲ್ಲ. ಅವರ ಬಳಿ ಎಷ್ಟೇ ಹಣವಿದ್ದರೂ ವಾರ್ಡನ್ ಅಥವಾ ಸಹಪಾಠಿಗಳು ಆತ್ಮೀಯತೆ ತೋರಿಸುವುದಿಲ್ಲ.
ದುಬಾರಿ ಬೋರ್ಡಿಂಗ್ ಶಾಲೆಗಳ ದಂಧೆ ಪ್ರಚಾರದ ಬಲದಿಂದ ನಡೆಯುತ್ತಿರುತ್ತದೆ. ಈ ಪ್ರಚಾರದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಕಗಳು, ಅತ್ಯಾಧುನಿಕ ಸಲಕರಣೆಗಳಿಂದ ಸಜ್ಜುಗೊಂಡ ಲ್ಯಾಬ್‌ಗಳು, ಜಿಮ್, ಆಡಿಟೋರಿಯಂ ಹೀಗೆ ಏನೆಲ್ಲ ಇರುತ್ತವೆ. ಆದರೆ ಇವೆಲ್ಲವುಗಳ ಹಿಂದೆ ಪ್ರತಿಯೊಬ್ಬ ವಿದ್ಯಾರ್ಥಿಯ ನೋವು, ಸಂಕಟ ಮಾನಸಿಕ ತೊಂದರೆಗಳು, ಇತರರ ನಡುವೆಯೂ ಏಕಾಂಗಿತನ, ಪ್ರತಿದಿನ, ಪ್ರತಿರಾತ್ರಿಯ ಕಮೆಂಟ್ಸ್ ಕಂಡವರಾರು? ಪ್ರಚಾರವೇನೊ ಸರಿ, ಆದರೆ ಅದನ್ನೇ ಅವಲಂಬಿಸಬೇಡಿ.
ದೇಶಾದ್ಯಂತ ಬೋರ್ಡಿಂಗ್ ಸ್ಕೂಲ್‌ಗಳು ಭಾರಿ ಪ್ರಮಾಣದಲ್ಲಿ ತೆರೆಯುತ್ತಿವೆ. ಇದು ನಿಜಕ್ಕೂ ತಪ್ಪು. ಇದಕ್ಕೆ ಪರ್ಯಾಯ ಕಂಡುಕೊಳ್ಳಬೇಕು. ಆಸುಪಾಸಿನ ಯಾರಾದರೂ ಅಂಕಲ್ ಆಂಟಿಯರ ಬಳಿ 8-10 ಹುಡುಗರನ್ನು ದಿನವಿಡೀ ಅಥವಾ ಯಾವಾಗಲಾದರೊಮ್ಮೆ ರಾತ್ರಿ ಹೊತ್ತು ಅಥವಾ ಕೆಲವು ದಿನಗಳ ಮಟ್ಟಿಗೆ ಬಿಡುವುದು ಹೆಚ್ಚು ಉಪಯುಕ್ತವಾಗಿರುತ್ತದೆ. ಬೋರ್ಡಿಂಗ್ ಶಾಲೆಯಂತೂ ಮನೆಗಳಿಂದ ಬರುವ ಒಳ್ಳೆಯ ಪ್ರವೃತ್ತಿಯ ಮಕ್ಕಳು ಹಾಗೂ ಹದಗೆಟ್ಟ ಕೌಟುಂಬಿಕ ವಾತಾವರಣದಿಂದ ಬಂದ ಮಕ್ಕಳು ಒಂದೇ ಕಡೆ ಇರುತ್ತವೆ.
ಮಕ್ಕಳನ್ನು ಹುಟ್ಟಿಸಿರುವಿರಾದರೆ, ಜವಾಬ್ದಾರಿ ನಿಭಾಯಿಸಿ. ಅವರು ಹೊರೆಯಲ್ಲ, ಅವರು ಆಸ್ತಿ. ಅವರು ನಿಮಗೆ ಜೀವನವಿಡೀ ಉಪಯೋಗಕ್ಕೆ ಬರುತ್ತಾರೆ.
ಎಲ್ಲರೂ ಜನರನ್ನು ಲೂಟಿ ಮಾಡುವವರೇ!
ಆಧುನಿಕ ಇಂಟರ್‌ನೆಟ್ ಆಧಾರಿತ ತಂತ್ರಜ್ಞಾನವನ್ನು ಸದಾ ಹೊಗಳುವವರಿಗೆ ಹಲವು ನಗರಗಳಲ್ಲಿ `ಊಬರ್’ ಹಾಗೂ `ಓಲಾ’ ಟ್ಯಾಕ್ಸಿಗಳು ಮುಷ್ಕರ ನಡೆಸಿದಾಗ ಈ ಆಘಾತ ಉಂಟಾಯಿತು.
ಈ ಎರಡೂ ಕಂಪನಿಗಳು ಇಂಟರ್‌ನೆಟ್ ಆಧಾರಿತ ಆ್ಯಪ್‌ನ್ನು ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಪರ್ಯಾಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನೀಡುತ್ತಿವೆ. ಭಾರತದಲ್ಲಷ್ಟೇ ಅಲ್ಲ, ಹಲವು ದೇಶಗಳಲ್ಲೂ ಈ ಎರಡು ಕಂಪನಿಗಳು ಸಾಕಷ್ಟು ಜನಪ್ರಿಯವಾಗಿವೆ. ಅವೆರಡು ಟ್ಯಾಕ್ಸಿ ಬಿಸ್‌ನೆಸ್‌ನ ಸ್ವರೂಪವನ್ನೇ ಬದಲಿಸಿಬಿಟ್ಟಿವೆ. ಅದೇ ಸೇವೆ ಈಗ ಜನರಿಗೆ ಪ್ರಾಣಾಂತಕಾರಿ ಆಗುತ್ತಿದೆ.
ಈ ಕಂಪನಿಗಳು ಆರಂಭದಲ್ಲಿ ಸಾಕಷ್ಟು ಅಗ್ಗದ ದರದಲ್ಲಿ ಸೇವೆ ನೀಡಿದವು. ಚಾಲಕರಿಗೂ ಸಾಕಷ್ಟು ಹಣ ಕೊಟ್ಟವು. ಚಾಲಕರು ತಿಂಗಳಿಗೆ 80,000 ರೂ. ತನಕ ಆದಾಯ ಪಡೆಯುತ್ತಿದ್ದರು. ಕಂಪನಿಗಳ ಹಾನಿಯ ಪ್ರಮಾಣ ಯಾವಾಗ ಹೆಚ್ಚುತ್ತಾ ಹೋಯಿತೊ, ಪೆಟ್ರೋಲ್, ಡೀಸೆಲ್ ದರಗಳು ಹೆಚ್ಚುತ್ತಾ ಹೋದವು, ಗ್ರಾಹಕರ ಅವಲಂಬನೆ ಹೆಚ್ಚುತ್ತಾ ಹೋಯಿತೊ ಆಗ ಪ್ರತಿಯೊಬ್ಬರ ಜೇಬಿಗೂ ಕತ್ತರಿ ಹಾಕತೊಡಗಿದವು. ರಾತ್ರಿ ಹೊತ್ತು ಹಾಗೂ ಹೆಚ್ಚು ಜನಸಂಚಾರ ಇರುವ ಸಮಯದಲ್ಲಿ ಓಲಾ ಮತ್ತು ಊಬರ್‌ಸಾಫ್ಟ್ ವೇರ್‌ಗಳು ತಂತಾನೇ ದರ ಹೆಚ್ಚಿಸುತ್ತವೆ. ಚಾಲಕರ ಕಮೀಶನ್ ಕಡಿಮೆಯಾಗತೊಡಗಿತು. ಹೆಚ್ಚಿನ ಪ್ರಮಾಣದ ವಾಹನಗಳಿಂದಾಗಿ ಸ್ಪರ್ಧೆ ಹೆಚ್ಚತೊಡಗಿತು.
ಇದರ ಪರಿಣಾಮ ಏನಾಯ್ತೆಂದರೆ, ಈ ಸೇವೆಯ ಸ್ಥಿತಿ ಸರ್ಕಾರಿ ಸೇವೆಯಂತಾಗಿಬಿಟ್ಟಿತು. ಡ್ರೈವರ್‌ಗಳ ಮುಷ್ಕರಕ್ಕೆ ಕಾರಣ ಅವರು ಹೆಚ್ಚಿನ ಲಾಭ ಅಪೇಕ್ಷಿಸುತ್ತಾರೆ. ಆದರೆ ಕಂಪನಿಗಳು ಇನ್ನಷ್ಟು ರಿಯಾಯ್ತಿ ಕೊಡಲು ಇಚ್ಛಿಸುವುದಿಲ್ಲ.
ಗ್ರಾಹಕರನ್ನು ಇನ್ನಷ್ಟು ಸುಲಿಗೆ ಮಾಡುವುದು ಕಷ್ಟಕರವಾಗಿದೆ. ಜನರು ಏರ್ ಕಂಡೀಶನ್ ವಾಹನಗಳ ಬದಲಿಗೆ, ತುಂಬಿದ ಬಸ್ಸುಗಳು ಹಾಗೂ ಟೆಂಪೋಗಳಲ್ಲಿ ಕುಳಿತು ಪ್ರಯಾಣಿಸಲು ಇಷ್ಟಪಡುತ್ತಾರೆ. ರಸ್ತೆಯುದ್ದಕ್ಕೂ ಬೆವರು ಸುರಿಸುತ್ತ ಹೋದರೂ ಅವರಿಗೆ ಯಾವುದೇ ವ್ಯತ್ಯಾಸ ಉಂಟಾಗದು. ಹೈಫೈ ಆಗಿದ್ದರು, ಹೆಚ್ಚು ದುಡ್ಡು ಕೊಡಲು ತಯಾರಾದರು. ಆದರೆ ಟ್ಯಾಕ್ಸಿ ಆ್ಯಪ್‌ನಿಂದ ಕೇಳಿದ ಕಡೆ ಬರುತ್ತಿಲ್ಲ.
ಇದು ಇಂಟರ್‌ನೆಟ್ ಅತಿಯಾಗಿ ಅವಲಂಬಿಸಿದ ಪರಿಣಾಮ. ಜನರು ಬಹಳಷ್ಟು ಸಂಗತಿಗಳನ್ನು ಖಚಿತ ಎಂದು ಭಾವಿಸುತ್ತಾರೆ. ಈವರೆಗಿನ ಇಂಟರ್‌ನೆಟ್ ಫಾರ್ಮುಲಾ ಏನೆಂದರೆ, ಮೊದಲು ಅಗ್ಗದ ಸೇವೆ ಕೊಡುವುದು ನಂತರ ದರ ಹೆಚ್ಚಿಸುವುದು. ಈಗಂತೂ ಅವರು ಬಾಯಿಗೆ ಬಂದಂತೆ ದರ ಕೇಳುತ್ತಿದ್ದಾರೆ. ಟಿವಿಯಲ್ಲಿ ಟಾಟಾ ಸ್ಕೈ ಇದನ್ನೇ ಮಾಡುತ್ತಿದೆ. ಕ್ರೆಡಿಟ್ ಕಾರ್ಡ್‌ಕಂಪನಿಗಳು ಕೂಡ ಹಾಗೆಯೇ ಮಾಡುತ್ತಿವೆ. ಏರ್‌ಲೈನ್ಸ್ ಕಂಪನಿಗಳು ಹೆಚ್ಚು ಕಡಿಮೆ ಟ್ರಾವೆಲ್ ಏಜೆಂಟ್‌ರ ಸೇವೆ ನಿಲ್ಲಿಸಿಬಿಟ್ಟಿದೆ. ಆದರೆ ಇಂಟರ್‌ನೆಟ್ ಸೇವೆಗಾಗಿ ಗ್ರಾಹಕರಿಂದ ಬಹು ದೊಡ್ಡ ಮೊತ್ತ ವಸೂಲಿ ಮಾಡುತ್ತಿವೆ. ಈ ಕಂಪನಿಗಳ ಮೇಲೆ ತಪ್ಪು ಹೊರಿಸಬೇಡಿ. ಅದೆಲ್ಲ ಸರ್ಕಾರದ್ದು. ಪ್ರತಿಯೊಬ್ಬರನ್ನು ಸಂಪರ್ಕಕ್ಕೆ ತರಲು ದಿನದಿನ ಜನರನ್ನು ಕಂಪ್ಯೂಟರ್ ದಾಸರನ್ನಾಗಿ ಮಾಡುತ್ತಿದೆ. ಆದರೆ ಇಂಟರ್‌ನೆಟ್ ಕಂಪನಿಯ ಮಾಲೀಕ ಯಾರು ಎನ್ನುವುದು ಸುಲಭವಾಗಿ ಗೊತ್ತಾಗದು. ಕಂಪ್ಯೂಟರ್ ಮೂಲಕ ಕರಾಮತ್ತು ತೋರಿಸುವ ಹ್ಯಾಕರ್‌ಗಳು ಮನೆಯಲ್ಲೇ ಕುಳಿತು ಕೋಟಿ ಕೋಟಿ ದೋಚುತ್ತಿದ್ದಾರೆ.
ಓಲಾ ಮತ್ತು ಊಬರ್ ಡ್ರೈವರ್ ಹಾಗೂ ಅವರ ಕಂಪನಿಗಳು ಈ ಕಳ್ಳರಲ್ಲಿ ಸೇರಿಕೊಂಡಿದ್ದಾರೆ. ಭಾರತ ಸರ್ಕಾರ ಕೂಡ ಅದರ ಪಾಲುದಾರ. ಎಲ್ಲರೂ ಸೇರಿ ಜನರನ್ನು ದೋಚುತ್ತಿದ್ದಾರೆ. ಮೊದಲು ಪುರೋಹಿತರು, ಪಾದ್ರಿಗಳು, ಮುಲ್ಲಾಗಳು ಜನರ ಮೇಲೆ ನಿಯಂತ್ರಣ ಹೊಂದಿರುತ್ತಿದ್ದರು. ಈಗ ಆ ಕೆಲಸವನ್ನು ಇಂಟರ್‌ನೆಟ್ ಮಾಡುತ್ತಿದೆ.
ಮೂರ್ಖತನಕ್ಕೂ ಒಂದು ಮಿತಿ ಬೇಕು
ಶಬರಿಮಲೈ ವಿವಾದದ ಬಗ್ಗೆ ಸ್ಮೃತಿ ಇರಾನಿ ಹೇಳಿಕೆ, “ನಾನು ಋತುಸ್ರಾವದಿಂದ ಮೆತ್ತಿದ ಪ್ಯಾಡ್‌ನ್ನು ಹೊತ್ತುಕೊಂಡು ಯಾರಾದರೂ ಸ್ನೇಹಿತರ ಮನೆಗೆ ಹೋಗಲು ಸಾಧ್ಯವೇ?” ಇದು ಅವರ ಮೂರ್ಖತನದ ಹಾಗೂ ಕಂದಾಚಾರದ ಸಂಕೇತ. ಶಬರಿಮಲೈ ದೇಗುಲದಲ್ಲಿ ಮಹಿಳೆಯರಿಗೆ ಪ್ರವೇಶ ಯಾವುದೊ ಕಾರಣದಿಂದ ಸ್ಥಗಿತಗೊಂಡಿರಬಹದು. ಅದು ಋಚುಚಕ್ರದ ರಕ್ತಸ್ರಾವದಿಂದ ದೂಷಿತವಾಗಿರುವ ಕಾರಣದಿಂದಂತೂ ಅಲ್ಲ.
ಸುಪ್ರೀಂಕೋರ್ಟ್ ತೀರ್ಪು ಸರಿಯಾಗಿಯೇ ಇದೆ. ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ತಪ್ಪು. ಸ್ನೇಹಿತನ ಮನೆಗೆ ರಕ್ತ ಬೆರೆತ ಪ್ಯಾಡ್ ಹೊತ್ತುಕೊಂಡು ಹೋಗಲಾಗದು ಎಂಬ ಸ್ಮೃತಿ ಇರಾನಿ ಹೇಳಿಕೆ ಸುಪ್ರೀಂಕೋರ್ಟಿಗೆ ಯಾವುದೇ ಮಹತ್ವ ಇಲ್ಲ ಎಂದರ್ಥ. ಅವರ ಮೂರ್ಖತನದ ಹೇಳಿಕೆಯ ಮತ್ತೊಂದು ಅರ್ಥ, ರಕ್ತಸಿಕ್ತ ಪ್ಯಾಡ್ ಜೊತೆ ಮಹಿಳೆ ಎಲ್ಲಿಗೂ ಹೋಗಲಾಗದು ಎಂದಾದ ಮೇಲೆ, ಸಚಿವರ ಕುರ್ಚಿಯ ಮೇಲೂ ಕುಳಿತುಕೊಳ್ಳಲಾಗದು.
ಒಂದು ವೇಳೆ ವಿಷಯ ರಕ್ತಸಿಕ್ತ ಪ್ಯಾಡ್‌ನದ್ದಾಗಿದ್ದರೆ ಶಬರಿಮಲೈನಲ್ಲಿ ಮಹಿಳೆಗೆ ಋತಸ್ರಾವದ ಸಂದರ್ಭದಲ್ಲಷ್ಟೇ ನಿಷೇಧ ಹೇರಬೇಕಾಗಿತ್ತು. ಆದರೆ ಗರ್ಭಿಣಿಯರಿಗಾದರೂ ಪ್ರವೇಶ ಸಿಗಬೇಕಾಗಿತ್ತು.
ಸ್ಮೃತಿ ಇರಾನಿಯ ಈ ಹೇಳಿಕೆ `ಘರ್ ಘರ್ ಕೀ ಕಹಾನಿ’ಯ ಕೊಡುಗೆ ಎನ್ನಬಹುದು. ಅದರ ಪ್ರತಿ ಎರಡು ದೃಶ್ಯದಲ್ಲಿ ಪೂಜೆ ಪುನಸ್ಕಾರ, ದೇವಾಲಯಗಳು, ಸಂತರು ಮಹಾಂತರ ಜೈ ಜೈಕಾರಗಳಿದ್ದವು. ಸ್ಮೃತಿ ಇರಾನಿಯನ್ನು ಸಂಘದವರು ಕ್ಯಾಚ್ ಮಾಡಿದ್ದು ಅಲ್ಲಿಯೇ. ಇದೇ ಕಾರಣದಿಂದ ಅವರಿಗೆ ಸಾಕಷ್ಟು ಮಾತನಾಡಲು ಅವಕಾಶ ದೊರಕಿತು. `ಘರ್ ಘರ್ ಕೀ ಕಹಾನಿ’ಯಲ್ಲಿ ಮಹಿಳೆ ಸ್ವತಂತ್ರಳಲ್ಲ, ಅವಳು ವಿಧಿವಿಧಾನಗಳ ಗುಲಾಮಳು ಎಂಬಂತೆ ತೋರಿಸಲಾಗಿತ್ತು. ಸ್ಮೃತಿ ಈಗಲೂ ಅದೇ ಯೋಚನೆಯ ಗುಲಾಮರಾಗಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್, ಸಮಾಜವಾದಿಗಳು ಕೂಡ ಹಿಂದೆ ಬಿದ್ದಿಲ್ಲ.
ಶಬರಮಲೈನ ಅರ್ಚಕರು ತಾವು ದೇಗುಲವನ್ನೇ ಬಂದ್ ಮಾಡುತ್ತೇವೆ, ಆದರೆ ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಪ್ರವೇಶ ಕೊಡುವುದಿಲ್ಲವೆಂದು ಹಟ ಹಿಡಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಸುದ್ದಿಯೇ! ದೇವಾಲಯಗಳು ಎಲ್ಲೆಲ್ಲೂ ಬಂದ್ ಆಗಬೇಕು. ಏಕೆಂದರೆ ಕಳೆದ 2000 ವರ್ಷಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ದೇವಾಲಯ, ಚರ್ಚ್ ಹಾಗೂ ಮಸೀದಿಗಳಿಂದ ಹೆಚ್ಚು ಯಾತನೆ ಉಂಡಿದ್ದಾರೆ. ಪುರುಷರು ಅವರನ್ನು ಭೋಗಿಸುತ್ತಾರೆ. ಜೊತೆಗೆ ಅವರನ್ನು ಖುಷಿಯಿಂದಲೂ ಇಡುತ್ತಾರೆ. ದೇವಾಲಯಗಳು ಅವರಿಂದ ಪಡೆಯುತ್ತವೆ ಹೊರತು ಏನೂ ಕೊಡುವುದಿಲ್ಲ. ಸ್ಮೃತಿ ಇರಾನಿಯವರ ತರ್ಕದ ಪ್ರಕಾರ, ಪುರುಷ ಭಕ್ತರ ದೇಹದಲ್ಲೂ ಯಾವುದೇ ಮಲಮೂತ್ರ ಇರಬಾರದು, ಅದರಿಂದ ದೇವರಿಗೆ ದೂಷಣೆ ಆಗಬಾರದು. ದೇವಾಲಯಗಳಿಗೆ ಹೋಗುವ ಪುರುಷರು ಮಲ ಮೂತ್ರವನ್ನು ಏನು ಮಾಡುತ್ತಾರೆ? ಅದನ್ನು ಸ್ಮೃತಿ ಹೇಳುವರೆ?