ಇಡೀ ದಿನ ನಮ್ಮ ಕೈಗಳು ಅನೇಕ ಕೆಲಸಗಳಿಂದ ದಣಿಯುತ್ತವೆ. ಒಮ್ಮೆ ಸಾಬೂನಿನ ಶುಷ್ಕತೆ ಮತ್ತೊಮ್ಮೆ ಆಹಾರ ಪದಾರ್ಥಗಳ ಅಂಟಂಟು, ಮತ್ತೆ ಕೆಮಿಕಲ್ಸ್ ಎಫೆಕ್ಟ್, ಮತ್ತೊಮ್ಮೆ ಧೂಳುಮಣ್ಣು…… ಇತ್ಯಾದಿ. ಇದೆಲ್ಲದರಿಂದ ಟ್ಯಾನಿಂಗ್‌ನ ದುಷ್ಪ್ರಭಾವ ಆಗೇ ಆಗುತ್ತದೆ. ಕೈಗಳ ತ್ವಚೆಯಲ್ಲಿ ತೈಲೀಯ ಗ್ರಂಥಿಗಳು ಇಲ್ಲದ ಕಾರಣ ಅವಕ್ಕೆ ಹೆಚ್ಚಿನ ಸುರಕ್ಷತೆಯ ಅಗತ್ಯವಿದೆ. ಆಗ ಮಾತ್ರ ಅವು ಸ್ವಸ್ಥ, ಸುಂದರ ಆಗಿರಬಲ್ಲವು. ಕೈಗಳ ತ್ವಚೆಗೆ ಡ್ರೈ ಸ್ಕಿನ್‌, ಡಾರ್ಕ್‌ ಟ್ಯಾನಿಂಗ್‌,  ಅಲರ್ಜಿ, ರಾಶೆಸ್‌, ಇನ್ಫೆಕ್ಷನ್‌, ತುರಿಕೆ, ನೇಲ್‌ಇಂಜುರಿ ಇತ್ಯಾದಿಗಳನ್ನೂ ಎದುರಿಸಬೇಕಾಗುತ್ತದೆ. ಹೀಗಿರುವಾಗ ಕೆಲವು ವಿಶೇಷ ಸಲಹೆಗಳ ಕಡೆ ಗಮನಹರಿಸಿದರೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

ಕೈಗಳ ರಕ್ಷಣೆ

ಕೈಗಳನ್ನು ತೊಳೆಯಲು ಕೆಮಿಕಲ್ ಯುಕ್ತ ಆ್ಯಂಟಿ ಸೆಪ್ಟಿಕ್‌ ಸಾಬೂನಿನ ಬದಲಿಗೆ ಸೌಮ್ಯ ಲಿಕ್ವಿಡ್‌ ಸೋಪ್‌ ಬಳಸಿರಿ. ವಾರದಲ್ಲಿ ಕನಿಷ್ಠ 2 ಸಲ ಕೈಗಳಿಗೆ ಮೈಲ್ಡ್ ಸ್ಕ್ರಬ್‌ ಮಾಡಿ, ಆಗ ಮಾತ್ರ ಡೆಡ್‌ ಸೆಲ್ಸ್ ನಿಂದ ಬಿಡುಗಡೆ ಸಿಗತ್ತದೆ. ಹಾರ್ಡ್‌ ನೇಲ್ಸ್ ಕತ್ತರಿಸಲು ಕಷ್ಟ ಎನಿಸಿದರೆ, ನೇಲ್ ‌ಸಾಫ್ಟ್ ನರ್‌ ಬಳಸಬೇಕು. ಇದು ಯಾವುದೇ ಮೆಡಿಕಲ್ ಸ್ಟೋರ್‌ನಲ್ಲಿ ಸುಲಭವಾಗಿ ಸಿಗುತ್ತದೆ. ನೇಲ್ ಪಾಲಿಶ್‌ ರಿಮೂವ್ ಮಾಡಲು ಅಸೆಟೋನ್‌ ಫ್ರೀ ರಿಮೂವರ್‌ ಬಳಸಬೇಕು. ರಾತ್ರಿ ಮಲಗುವ ಮುನ್ನ ಬ್ರ್ಯಾಂಡೆಡ್‌ ಹ್ಯಾಂಡ್‌ ಕ್ರೀಂ  ಆಯಿಲ್‌ನಿಂದ ಕೈಗಳಿಗೆ ನಿಯಮಿತವಾಗಿ ಮಸಾಜ್‌ ಮಾಡಿ, ಆಗ ಮಾತ್ರ ಕೈಗಳ ತ್ವಚೆ ಸೌಮ್ಯ ಹಾಗೂ ಹೈಡ್ರೇಟ್‌ ಆಗಿರುತ್ತದೆ.

ನ್ಯೂಟ್ರಿಜೀನಾ ಹ್ಯಾಂಡ್‌ ಕ್ರೀಂ ರೂ.1128/

ಬ್ಲಾಸಂ ಕೋಚರ್‌ ಆ್ಯರೋಮಾ ಮ್ಯಾಜಿಕ್‌ರೂ. 135/

ಎಚ್‌ಟುಓ + ಹ್ಯಾಂಡ್‌ನೇಲ್ ‌ಕ್ರೀಂ  ರೂ.1100/

ರಿನ್ಯೂ ರಿಪೇರ್‌ರೂ.169/

ನ್ಯಾಚುರಲ್ ಬೀವ್ಯಾಕ್ಸ್ ಹ್ಯಾಂಡ್‌ ಕ್ರೀಂ ರೂ.100/

ಸೆಲೂನ್‌/ ಪಾರ್ಲರ್‌ ಟ್ರೀಟ್‌ಮೆಂಟ್‌ ವಾರದಲ್ಲಿ 1-2 ಸಲ ಸೆಲೂನ್‌ಗೆ ಹೋಗಿ ನೇಲ್‌ಹ್ಯಾಂಡ್‌ ಟ್ರೀಟ್‌ಮೆಂಟ್‌ ಪಡೆಯಿರಿ. ಮೆನಿಕ್ಯೂರ್‌, ಮೆನಿಸ್ಪಾ, ಚಾಕಲೇಟ್‌ ಮೆನಿಕ್ಯೂರ್‌, ಸ್ಕಿನ್‌ ಪಾಲಿಶಿಂಗ್‌, ಹ್ಯಾಂಡ್‌ ಎಕ್ಸ್ ಪಾಲಿಯೇಶನ್‌, ಪ್ಯಾರಾಫಿನ್‌ ಟ್ರೀಟ್‌ಮೆಂಟ್‌, ಕೆಮಿಕಲ್ ಪೀಲಿಂಗ್‌ ಇತ್ಯಾದಿಗಳಲ್ಲಿ ನೀವು ನಿಮ್ಮ ಕೈಗಳ ಅಗತ್ಯಕ್ಕೆ ತಕ್ಕಂತೆ ಟ್ರೀಟ್‌ಮೆಂಟ್‌ ಪಡೆಯಬಹುದು.

ನೇಲ್ ‌ಕೇರ್‌ ಬ್ಯೂಟಿಫುಲ್ ಲಾಂಗ್‌ ನೇಲ್ಸ್ ಪ್ರತಿಯೊಬ್ಬ ಮಹಿಳೆಯ ಆಸೆ. ಆದರೆ ಅಗತ್ಯಕ್ಕಿಂತಲೂ ಉದ್ದನೆ ಉಗುರು ಕೈಗಳ ಸೌಂದರ್ಯ ಹಾಳುಮಾಡುತ್ತವೆ. ಹೀಗಾಗಿ ಅವನ್ನು ಆಗಾಗ ಟ್ರಿಮ್ ಮಾಡುತ್ತಿರಿ. ಉಗುರಿನ ಪೋಷಣೆಗಾಗಿ ನಾರು ತುಂಬಿದ ಆಹಾರ ಸೇವಿಸಿ. ಉಗುರು ಶಕ್ತಿಯುತವಾಗಲು ನಿಮ್ಮ ಆಹಾರದಲ್ಲಿ ಸೋಯಾ, ಪಾಲಕ್‌ ಸೊಪ್ಪು, ಬೀಟ್‌ರೂಟ್‌, ಡ್ರೈಫ್ರೂಟ್ಸ್, ಯೋಗರ್ಟ್‌, ಮೀನು, ಮೊಟ್ಟೆ, ಬೆಳ್ಳುಳ್ಳಿ ಇತ್ಯಾದಿ ಬಳಸಿರಿ. ವಿಟಮಿನ್‌ `ಇ’ ಕ್ಯಾಪ್ಸೂಲ್‌‌ನಿಂದ ಉಗುರುಗಳ ಮಸಾಜ್‌ ಮಾಡಿ. ಅಧಿಕ ಸಿಹಿ ತುಂಬಿದ ಸಾಫ್ಟ್ ಡ್ರಿಂಕ್ಸ್ ವರ್ಜಿಸಿ.

ಹಳದಿ ಉಗುರು

ಕೆಟ್ಟ ನೇಲ್ ಪಾಲಿಶ್‌ನ ಅತ್ಯಧಿಕ ಉಪಯೋಗದಿಂದ ಉಗುರು ಹಳದಿಯಾಗುತ್ತದೆ. ಆದ್ದರಿಂದ ಸದಾ ಬ್ರ್ಯಾಂಡೆಡ್‌ ನೇಲ್ ‌ಪಾಲಿಶ್‌ನ್ನೇ ಉಪಯೋಗಿಸಿ. ಕೆಲವು ದಿನ ಉಗುರಿಗೆ ಬಣ್ಣ ಹಚ್ಚದೇ ಹಾಗೇ ಬಿಡಿ. ಈ ಹಳದಿ ಉಗುರಿನಿಂದ ಮುಕ್ತರಾಗಲು, ಉಗುರು ಬೆಚ್ಚಗಿನ ನೀರಿಗೆ ಕತ್ತರಿಸಿದ ನಿಂಬೆ ಹೋಳು ಅದ್ದಿ ಉಗುರಿನ ಮಸಾಜ್‌ ಮಾಡಿ. ಲೈಟ್‌ ವಿನಿಗರ್‌ನಿಂದ ಉಗುರಿನ ಸ್ಕ್ರಬಿಂಗ್‌ ಮಾಡಿ. ಪ್ರತಿದಿನದ ಬಳಕೆಯಿಂದ ಉಗುರು ಹೊಳೆಯವ ತೊಡಗುತ್ತದೆ.

ಬ್ರ್ಯಾಂಡೆಡ್‌ ನೇಲ್ ‌ಪಾಲಿಶ್‌ರಿಮೂವರ್‌

ಮೊಬಿಲಿನ್‌ ಕಲರ್‌ರೂ.75/

ಮೊಬಿಲಿನ್‌ ಗ್ಲಿಟರ್‌ ಕಲರ್‌ರೂ.125/

ಯೆಲ್ ‌ನೇಲ್ ‌ಪಾಪನ್‌ರೂ.50/

ಲ್ಯಾಕ್ಮೆ ನೇಲ್ ‌ಕಲರ್‌ರೂ.100/

ಲೋಟಸ್‌ ಹರ್ಬ್‌ರೂ.110/

ಕಲರ್‌ ಬಾರ್‌ ನೇಲ್ ‌ಎನಾಮಲ್ ರೂ.110/

ನೇಲ್ ರಿಮೂವರ್

ಲ್ಯಾಕ್ಮೆ ನೇಲ್ ‌ರಿಮೂವರ್‌ರೂ.70/

ರೆವಲಾನ್‌ ಪ್ರೊಫೆಶನಲ್ ನೇಲ್ ರಿಮೂವರ್‌ರೂ.160/

ಕಲರ್‌ ಬಾರ್‌ ಅಲ್ಟಿಮೇಟ್‌ ರಿಮೂವರ್‌ರೂ.125/

ಕಂಡೀಶನಿಂಗ್‌ ರಿಮೂವರ್‌ರೂ.149/

ನೇಲ್ ಆರ್ಟ್‌ ಉಗುರಿನ ಸೌಂದರ್ಯ ಮತ್ತಷ್ಟು ಹೆಚ್ಚಿಸಲು ವಿಭಿನ್ನ ಬಗೆಯ ನೇಲ್‌ ಆರ್ಟ್‌ ಮಾಡಿಸಬಹುದು. ಉದಾ : ನೀಡಲ್ಸ್ ಡಿಸೈನ್‌, ಮಾರ್ಬಲ್ಸ್ ಆರ್ಟ್‌, 3ಡಿ ಆರ್ಟ್‌, ಸ್ಟ್ರೋಕ್‌ ಬ್ರಶ್‌ ಡಿಸೈನ್‌, ಸ್ವರೋಸ್ಕಿ ಸ್ಟೋನ್‌, ಗ್ಲಿಟರ್ಸ್‌ ಟ್ರೆಂಡ್‌, ನೇಲ್ ‌ಪಿಯರ್ಸಿಂಗ್‌, ಫ್ಲವರ್‌ ಆರ್ಟ್‌, ವರ್ಟಿಕಲ್ ಲೈನ್ಸ್, ನೇಲ್ ‌ಟ್ಯಾಟೂ, ಸ್ಟಾಂಪರ್ಸಿಂಗ್‌, ಜೆಲ್ ನೇಲ್ ಆರ್ಟ್‌, ನ್ಯೂಸ್‌ ಪೇಪರ್‌ಪ್ರಿಂಟ್‌, ಆ್ಯಕ್ರೆಲಿಕ್‌ ನೇಲ್ಸ್ ಎಕ್ಸ್ ಟೆನ್ಶನ್‌, ಪರ್ಮನೆಂಟ್‌ ಫ್ರೆಂಚ್‌ ನೇಲ್ಸ್, ಟಾಪ್‌ ಡಾಟ್‌, ಮ್ಯಾಗ್ನೆಟ್‌ ನೇಲ್ ಮ್ಯಾಜಿಕ್‌, ಡ್ರೀಪಿಂಗ್‌ ಡ್ರಾಪ್‌, ರೇನ್‌ ಬೋ ಆರ್ಟ್‌, ಜ್ವೆಲ್ ‌ನೇಲ್ ‌ಆರ್ಟ್‌….. ಇತ್ಯಾದಿ.

ಸ್ವರೋಸ್ಕಿ ಸ್ಟೋನ್‌ ನೇಲ್ಸ್ ಗೆ ಬೇಸ್‌ ಕಟ್‌ ಹಚ್ಚಿ ಅದರ ಮೇಲೆ ಸ್ಟೋನ್ಸ್ ಅಳವಡಿಸಿ, ಇದರ ಮೇಲೆ ಗ್ಲಾಸಿ ಟ್ರಾನ್ಸ್ ಪರಂಟ್‌ ನೇಲ್ ಪಾಲಿಶ್‌ನ ಟಾಪ್‌ ಕೋಟಿಂಗ್‌ ಮಾಡಬೇಕು.

ಮಾರ್ಬಲ್ ನೇಲ್ ‌ಈ ಡಿಸೈನ್‌ಗಾಗಿ ಒಂದು ಬಟ್ಟಲ ನೀರಿಗೆ 1-1 ಹನಿ ನೇಲ್ ‌ಪಾಲಿಶ್‌ ಉದುರಿಸಿ. ಗರಿಷ್ಠ 4 ಹನಿ ಸಾಕು. ನಂತರ ಈ ಮಿಶ್ರಣವನ್ನು ಸೂಜಿ/ಟೂಥ್‌ಪಿಕ್‌ನಿಂದ ಮಿಕ್ಸ್ ಮಾಡಿ. ಇದರಲ್ಲಿ ಕೃತಕ ಉಗುರನ್ನು ಅದ್ದಿ ತೆಗೆಯಿರಿ. ಚಿತ್ರದಲ್ಲಿರುವಂಥ ಮಾರ್ಬಲ್ ಡಿಸೈನ್‌ ಪಡೆಯುವಿರಿ.

ನೇಲ್ ಪಿಯರ್ಸಿಂಗ್‌ ಇದಕ್ಕಾಗಿ ಕೃತಕ ಉಗುರನ್ನೇ ಬಳಸಬೇಕು, ಆಗ ಒರಿಜಿನಲ್ ಹಾಳಾಗದು. ಕೃತಕ ಉಗುರಿನಲ್ಲಿ ರಂಧ್ರ ಮಾಡಿ ಚಿತ್ರದಲ್ಲಿರುವಂತೆ ಆ್ಯಕ್ಸೆಸರೀಸ್‌ ಅಳವಡಿಸಿ. ಒಂದು ಕೈನ ಒಂದೇ ಉಗುರಿಗೆ ಹೀಗೆ ಮಾಡಬೇಕು, ಹೆಚ್ಚಾದರೆ ಕೈಗಳ ಅಂದ ಕೆಟ್ಟೀತು!

ಫ್ಲವರ್ಆರ್ಟ್

ಎಲ್ಲಕ್ಕೂ ಮೊದಲು ಉಗುರಿಗೆ ನ್ಯೂಟ್ರಲ್ ಬೇಸ್‌ ಹಚ್ಚಿರಿ. ನಂತರ ಕೆಲವು ಹನಿ ಜೆಲ್ ನೇಲ್ ‌ಪಾಲಿಶ್‌ ಉದುರಿಸಿ. ಟೂಥ್‌ ಪಿಕ್ ನೆರವಿನಿಂದ ಮಧ್ಯದಲ್ಲಿ ಲೈನ್‌ ಮಾಡಿ. ಇದೀಗ ಫ್ಲವರ್‌ ಪ್ಯಾಟರ್ನ್‌ ರೆಡಿ! ಒಂದು ಉಗುರಿಗೆ 2 ಫ್ಲವರ್ಸ್‌ ಸಾಕು.

ನೀಡಲ್ಸ್ ಡಿಸೈನ್‌ ನೇಲ್ಸ್ ಮೇಲೆ ನೀಡಲ್ಸ್ ನಿಂದ ಸುಂದರ ಡಿಸೈನ್‌ ಮಾಡಬಹುದು. ಮಾರುಕಟ್ಟೆಯಲ್ಲಿ ಇದೀಗ ನೇಲ್ ‌ಪೆನ್ ಸಹ ಲಭ್ಯ. ಅದರ ನೆರವಿನಿಂದ ಬೇಸ್‌ ನ್ಯೂಟ್ರಲ್ ಶೇಡ್‌ ಮೇಲೆ ನಿಮ್ಮಿಷ್ಟದ ನೇಲ್ ಪೆನ್ನಿನಿಂದ ಡಿಸೈನ್‌ ಬಿಡಿಸಿ.

ನ್ಯೂಸ್‌ ಪೇಪರ್‌ ಪ್ರಿಂಟ್‌ ಆರ್ಟ್‌ ಉಗುರಿಗೆ ಬೇಜ್‌ ಅಥವಾ ಲೈಟ್‌ ಕೋಟ್‌ ಹಚ್ಚಿರಿ. ನ್ಯೂಸ್‌ ಪೇಪರ್‌ ಕಟಿಂಗ್‌ನ್ನು ನೀರಿನಲ್ಲಿ ಅದ್ದಿ, ಈ ಬೇಸ್‌ ಕೋಟ್‌ ಮೇಲೆ ಲಘವಾಗಿ ಒತ್ತಬೇಕು. ನ್ಯೂಸ್‌ ಪೇಪರ್‌ ಪ್ರಿಂಟ್‌ ಉಗುರಿನ ಮೇಲೆ ಟ್ರಾನ್ಸ್ ಫರ್‌ ಆದ ಮೇಲೆ, ಟ್ರಾನ್ಸ್ ಪರೆಂಟ್‌ ಟಾಪ್‌ ಕೋಟಿಂಗ್‌ ಹಚ್ಚಿರಿ. ಇದೀಗ ಡಿಸೈನ್‌ ರೆಡಿ!

ಡ್ರಿಪಿಂಗ್ಡ್ರಾಪ್ಆರ್ಟ್

ಮೊದಲು ಉಗುರಿಗೆ ಬೇಸ್‌ ಕೋಟ್‌ ಹಚ್ಚಿರಿ. ನಂತರ ಉಗುರಿನ ಟಿಪ್ಸ್ ಬಳಿ ಒಂದು ತೆಳು ಲೈನ್‌ ಎಳೆಯಿರಿ. ಈಗ ನೇಲ್ ‌ಪೇಂಟ್‌ನ ಕೆಲವು ಹನಿಗಳನ್ನು ಲೈನ್‌ ಮೇಲೆ ಹಾಕುತ್ತಾ ಲಘುವಾಗಿ ಹರಡಿರಿ. ಅದು ಒಣಗಿದ ನಂತರ ಟಾಪ್‌ ಕೋಟ್‌ ಹಚ್ಚಿರಿ. ಇದೀಗ ಡ್ರಿಪಿಂಗ್‌ ಡ್ರಾಪ್‌ ಎಫೆಕ್ಟ್ ರೆಡಿ!

ಟ್ರಿಪ್‌ ಲೀ ಆರ್ಟ್‌ ಇದಕ್ಕಾಗಿ ಉಗುರಿನ ಮೇಲೆ ಥಿಕ್‌ ಬೇಸ್‌ ಕೋಟ್‌ ಹಚ್ಚಿರಿ. ಅದಾದ ಮೇಲೆ ಕಲರ್‌ ಫ್ಯಾಮಿಲಿ (ಲೈಟ್‌, ಮೀಡಿಯಂ ಡಾರ್ಕ್‌) ಶೇಡ್‌ ಆರಿಸಿ ಹಾಗೂ ಅದನ್ನು ಚಿತ್ರದಲ್ಲಿರುವಂಥ ಎಫೆಕ್ಟ್ ಬರುವಂತೆ ತಿರುಗಿಸುತ್ತಾ ಮಿಕ್ಸ್ ಮಾಡಿ. ಇದಾದ ಮೇಲೆ ಟ್ರಾನ್ಸ್ ಪರೆಂಟ್‌ ಬೇಸ್‌ ಕೋಟ್‌ ಹಚ್ಚಿರಿ.

ನೇಲ್ ‌ಆರ್ಟ್‌ ಕಿಟ್‌ ಇದೀಗ ಮಾರುಕಟ್ಟೆಯಲ್ಲಿ ವಿಭಿನ್ನ ಬಗೆಯ ನೇಲ್ ‌ಆರ್ಟ್‌ ಕಿಟ್ಸ್ ಲಭ್ಯವಿವೆ. ಇದರಿಂದ ಸುಲಭವಾಗಿ ನೀವು ನಿಮ್ಮ ಉಗುರಿನ ಸೌಂದರ್ಯ ಹೆಚ್ಚಿಸಬಹುದು.

ಕೊನಾಡ್‌ ನೇಲ್ ‌ಡೆಕೋ ಗ್ಲಿಟರ್‌ ಸೆಟ್‌ರೂ.3745/

ಚೈನೀಸ್‌ ನೇಲ್ ಆರ್ಟ್‌ ಕಿಟ್‌ರೂ.350/

ಕೊನಾಡ್‌ ನೇಲ್ ‌ಆರ್ಟ್‌ ಕಿಟ್‌ರೂ.480/

ವಾರಿಯಲ್ ಪ್ಯಾರಿಸ್‌ ನೇಲ್ ಆರ್ಟ್‌ ಕಿಟ್‌ರೂ.300/

ಸೆಲೂನ್‌ ಎಕ್ಸ್ ಪ್ರೆಸ್‌ ಸ್ಟ್ಯಾಂಪ್‌ ಕಿಟ್‌ರೂ.949/ ಟ್ರೈ ಮಾಡಿ ನೋಡಿ!

ನೀವು ಎಕ್ಸ್ ಪೆರಿಮೆಂಟ್‌ ಎಕ್ಸ್ ಪರ್ಟ್‌ ಆಗಿದ್ದರೆ, ಇನ್ನು ಟ್ರೆ ಮಾಡಿ : ನೇಲ್ ಆರ್ಟ್‌ 3ಡಿ ಬ್ರೋ ಪೀಸ್‌, ನೇಲ್ ‌ಸ್ಟೆನ್ಸಿಲ್‌, ಡಾಟಿಂಗ್‌ ಪೆನ್‌, ನಿಯಾನ್‌ ಸ್ಟಡ್‌ ಕಿಟ್‌, ನೇಲ್ ‌ಪೇಂಟ್‌ ಪೆನ್‌, ನೇಲ್ ‌ಗ್ಲಿಟರ್‌ ಪೌಡರ್‌, ಮೆಟ್ಯಾಲಿಕ್‌ ನೇಲ್ ‌ಪೇಂಟ್‌, ಗ್ಲಿಟರ್‌ನೇಲ್ ಜೆಲ್‌, ಜೆಲ್ ‌ಪಾಲಿಶ್‌, ಮ್ಯಾಟ್‌ ಮೆಟ್ಯಾಲಿಕ್‌ ನೇಲ್ ‌ಪೇಂಟ್‌, ಕ್ಯುಟಿಕಲ್ ಆಯಿಲ್‌, ರೆವಲಾನ್‌ ಶೈನಿ ಮ್ಯಾಟ್‌ ಎನ್ಯಾಮೆಲ್‌…. ಇತ್ಯಾದಿ.

ಪ್ರೀತಿ ಜೈನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ