ಇಲ್ಲಿ ಕೊಟ್ಟಿರುವ ಕೆಲವು ಘಟನೆಗಳನ್ನು ಗಮನಿಸಿ. ಏಪ್ರಿಲ್ 24, 2018ರಂದು ವಿನೋದ್‌ ಎಂಬಾತ ತನ್ನ ಮಗುವಿನ ಸಮ್ಮುಖದಲ್ಲೇ ಹೆಂಡತಿ ಸವಿತಾಳನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ.

ಇಬ್ಬರ ಮದುವೆಯಾಗಿ 18 ವರ್ಷ ಆಗಿತ್ತು. ಇಬ್ಬರ ನಡುವೆ ಮೇಲಿಂದ ಮೇಲೆ ಜಗಳ ಆಗುತ್ತಿತ್ತು. ಈ ಕಾರಣದಿಂದ ಇಬ್ಬರೂ ಬೇರೆ ಬೇರೆ ಮಹಡಿಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಮಗ ಇದ್ದರು.

ದೆಹಲಿಯಲ್ಲಿ ಏಪ್ರಿಲ್ ‌, 2018ರಂದು ನಡೆದ ಘಟನೆ. ಗಂಡ 50,000 ರೂ. ಕೊಡಲಿಲ್ಲವೆಂದು ಹೇಳಿ ಹೆಂಡತಿ ಅವನನ್ನು ಗಾಯಗೊಳ್ಳುವಂತೆ ಹೊಡೆದಳು. ಅವರ ಮದುವೆಯಾಗಿ 27 ವರ್ಷಗಳಾಗಿತ್ತು. ಹೆಂಡತಿಯ ಕೆಲವು ರಹಸ್ಯ ವಿಷಯಗಳು ಗಂಡನಿಗೆ ಗೊತ್ತಾಗಿ ಸಾಕಷ್ಟು ಜಗಳ ಆಗಿತ್ತು. ಬಳಿಕ ಇಬ್ಬರೂ ಬೇರೆ ಬೇರೆ ವಾಸವಾಗಿದ್ದರು.

ಮತ್ತೊಂದು ಘಟನೆಯಲ್ಲಿ ಗಂಡ ಹೆಂಡತಿಯ ಬಗ್ಗೆ ಅದೆಷ್ಟು ಕ್ರೂರವಾಗಿ ನಡೆದುಕೊಂಡನೆಂದರೆ, ಹೆಂಡತಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ಅವಳಿಗೆ ಜೋರಾಗಿ ಒದ್ದ. ಇದರ ಪರಿಸ್ಥಿತಿ ಏನಾಯ್ತೆಂದರೆ, ಅವಳು ಬಳಿಕ ಹೊಟ್ಟೆಯ ಆಪರೇಶನ್ ಮಾಡಿಸಿಕೊಳ್ಳಬೇಕಾಯಿತು.

ಹರಿಯಾಣದ ಗುರುಗ್ರಾಮದಲ್ಲಿ ಗಂಡನೊಬ್ಬ 32 ವರ್ಷದ ಹೆಂಡತಿಯನ್ನು ಕೊಲೆಗೈದ ಆರೋಪದ ಮೇಲೆ ಬಂಧಿಸಲ್ಪಟ್ಟ. ಅವವನ್ನು ವಿಚಾರಣೆಗೊಳಪಡಿಸಿದಾಗ ಅವನು ಅಚ್ಚರಿದಾಯಕ ಹೇಳಿಕೆಯೊಂದನ್ನು ನೀಡಿದ. ಹೆಂಡತಿ ಫೇಸ್‌ಬುಕ್‌ ಹಾಗೂ ವಾಟ್ಸ್ಆ್ಯಪ್‌ನಲ್ಲಿ ಅದೆಷ್ಟು ಮಗ್ನಳಾಗಿರುತ್ತಿದ್ದಳೆಂದರೆ, ಅವಳು ಮನೆಯ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ಊಟ ಕೊಡದೇ ಇರುವುದು ಹಾಗೂ ಗಂಡನ ಬಗ್ಗೆ ಎಳ್ಳಷ್ಟೂ ಗಮನ ಕೊಡದಿರುವುದು ಅವಳನ್ನು ಕೊಲೆ ಮಾಡಲು ಕಾರಣವಾಯಿತು ಎಂದು ಅವನು ಹೇಳಿದ.

ಮನೋತಜ್ಞೆ ಡಾ. ದೀಪಾ ಹೀಗೆ ಹೇಳುತ್ತಾರೆ, “ಮದುವೆಯ ಸಮಯದಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರೂ ಖುಷಿಭರಿತ ಜೀವನವನ್ನು ಬಯಸುತ್ತಾರೆ. ಆದರೆ ದೈನಂದಿನ ಜೀವನದಲ್ಲಿ ಯಾವಾಗ ಇಬ್ಬರೂ ಪರಸ್ಪರರ ಬಗೆಗೆ ದೂರುಗಳನ್ನು ಹೇಳಲು ಶುರು ಮಾಡುತ್ತಾರೊ, ಆಗ ಇಬ್ಬರಲ್ಲಿ ಮನಸ್ತಾಪ ಶುರುವಾಗುತ್ತದೆ. ಪರಸ್ಪರರ ವಿಚಾರಗಳಲ್ಲಿ ಹೊಂದಾಣಿಕೆ ಇಲ್ಲದೇ ಇರುವುದು, ಪರಸ್ಪರರಿಗೆ ಸಮಯ ಕೊಡದೇ ಇರುವುದು, ಪರಸ್ಪರರ ಇಚ್ಛೆಗಳ ಬಗ್ಗೆ ಗಮನಿಸದೇ ಇರುವುದು ಇವೆಲ್ಲ ಕಾರಣಗಳಿಂದ ಅವರು ತಮ್ಮನ್ನು ತಾವು ಏಕಾಂಗಿ ಎಂದು ಭಾವಿಸತೊಡಗುತ್ತಾರೆ.

ಸಮೀಕ್ಷೆಗಳ ಪ್ರಕಾರ, 10ರಲ್ಲಿ 4 ವಿವಾಹಿತರು ತಮ್ಮ ಮದುವೆಯನ್ನು ಉಳಿಸಿಕೊಳ್ಳಲು ವಿಶೇಷಜ್ಞರ ನೆರವು ಪಡೆದುಕೊಳ್ಳುತ್ತಾರೆ. ದೆಹಲಿಯಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಅಲ್ಲಿ ಪ್ರತಿವರ್ಷ 1.3 ಲಕ್ಷ ಮದುವೆಗಳು ರಿಜಿಸ್ಟರ್‌ ಆಗುತ್ತವೆ. ಅವುಗಳಲ್ಲಿ 10,000 ಜೋಡಿ ಮದುವೆಯ ಬಗ್ಗೆ ಖುಷಿಯಿಂದಿರುವುದಿಲ್ಲ. ಒತ್ತಡದ ಕಾರಣಗಳಿಂದಾಗಿ ಪರಸ್ಪರರಿಂದ ದೂರಾಗುವ ವಿಚ್ಛೇದನದ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಾ ಹೊರಟಿದೆ. ಸಂಬಂಧಗಳಲ್ಲಿ ಕಹಿಯ ಕಾರಣದಿಂದಾಗಿ `ಮೆರೈಟ್‌ ಡಿಸ್‌ಪ್ಯೂಟ್‌ರಿಸಾಲ್ವಿಂಗ್‌ ಏಜೆನ್ಸಿ’ ನಡೆಸಿದ ಸಮೀಕ್ಷೆಯಲ್ಲಿ ವೈವಾಹಿಕ ಸಂಬಂಧದಿಂದ ಉಂಟಾದ ಒತ್ತಡದ ಕಾರಣಗಳನ್ನು ತಿಳಿದುಕೊಳ್ಳಲು 243 ಜೋಡಿಗಳನ್ನು ಪ್ರಶ್ನಿಸಲಾಯಿತು.

ಈ ಸಮೀಕ್ಷೆಯ ಕಾರಣಗಳನ್ನು ಬಹಿರಂಗಪಡಿಸಿದಾಗ 24% ವೈಯಕ್ತಿಕ ಸಮಸ್ಯೆಗಳು ಅಥವಾ ರೋಗ, ಶೇ.21ರಷ್ಟು ಪ್ರಕರಣಗಳಲ್ಲಿ ಪರಸ್ಪರ ಹೊಂದಾಣಿಕೆ ಇರದಿರುವ ಕಾರಣಗಳು ಪತ್ತೆಯಾದವು. ಇದರ ಹೊರತಾಗಿ ಕ್ರೌರ್ಯ, ಮೋಸ, ಗಂಡ ಅಪೇಕ್ಷಿಸಿದಂತೆ ನಡೆದುಕೊಳ್ಳದಿರುವುದು, ಸಂಪನ್ಮೂಲಗಳ ಕೊರತೆ ಮುಂತಾದ ಕಾರಣಗಳು ಕೂಡ ಪತ್ತೆಯಾದವು.

ಬದಲಾದ ಅಪೇಕ್ಷೆಗಳು

ಒಬ್ಬ ಯುವತಿ ಹೇಳುತ್ತಾಳೆ, “ಮದುವೆಗೂ ಮುನ್ನ ನನ್ನ ಹುಡುಗ ಬಹಳ ವಿಭಿನ್ನನಾಗಿದ್ದ. ನಮ್ಮಿಬ್ಬರ ನಡುವೆ ಸಾಕಷ್ಟು ಹೊಂದಾಣಿಕೆ ಇತ್ತು. ಆದರೆ ಮದುವೆಯ ಬಳಿಕ ಅವನು ಬಹಳ ಬದಲಾದ. ನೀನೀಗ ಬದಲಾಗಬೇಕು, ನನ್ನ ತಂದೆತಾಯಿ ಹೇಳುವ ರೀತಿಯಲ್ಲಿ ಇರಬೇಕು ಎನ್ನುತ್ತಾರೆ. ನನಗೂ ವೈಯಕ್ತಿಕ ಬದುಕಿದೆ ಎನ್ನುವುದು ಅವರಿಗೆ ಮರೆತೇ ಹೋಗುತ್ತದೆ.”

ಸಾಮಾನ್ಯವಾಗಿ ಮದುವೆಯಾದ ಬಳಿಕ ಹುಡುಗಿ ಆಧುನಿಕ ಪೋಷಾಕಿನಿಂದ ಪಾರಂಪರಿಕ ಪೋಷಾಕು ಧರಿಸಬೇಕು ಎಂದು ಒತ್ತಾಯಿಸಲಾಗುತ್ತದೆ.

rista-tute-n

ಹೆಚ್ಚುತ್ತಿರುವ ಜವಾಬ್ದಾರಿಗಳು

ಎಷ್ಟೋ ಮಹಿಳೆಯರು ಮದುವೆಯ ಬಳಿಕ ಕೆಲಸ ಮಾಡಬೇಕೆನ್ನುತ್ತಾರೆ. ಆದರೆ ಅದಕ್ಕೆ ಅವಕಾಶ ಸಿಗುವುದಿಲ್ಲ. ನೌಕರಿ ಮಾಡುವ ಮಹಿಳೆ ಸೊಸೆಯಾಗಿ ಬಂದರೆ ಆಕೆಯಿಂದ ಪೂರ್ತಿ ಮನೆಗೆಲಸ ಹಾಗೂ ಪೂರ್ತಿ ಸಂಬಳ ಕೊಟ್ಟುಬಿಡಬೇಕೆಂದು ಅಪೇಕ್ಷಿಸಲಾಗುತ್ತದೆ. ಹಣಕಾಸಿನ ವಿಷಯದಲ್ಲಿ ಮಹಿಳೆಯರ ಅಭಿಪ್ರಾಯ ತೆಗೆದುಕೊಳ್ಳಬೇಕೆನ್ನುವುದನ್ನು ಮುಖ್ಯ ಎಂದು ಭಾವಿಸಲಾಗುವುದಿಲ್ಲ.

ಇನ್ನೊಬ್ಬ ತಜ್ಞೆ ಮೋನಿಕಾ ಹೀಗೆ ಹೇಳುತ್ತಾರೆ, “ಕುಟುಂಬ ಬೆಳೆಸಲು ಮಹಿಳೆಯರು ತಮ್ಮ ಕೆರಿಯರ್‌ ತೊರೆಯಬೇಕಾಗಿ ಬರುತ್ತದೆ. ಆಕೆ ಕೇವಲ ಹಣಕ್ಕಾಗಿ ದುಡಿಯುವುದಿಲ್ಲ. ತನ್ನಲ್ಲಿರುವ ವಿಶೇಷತೆಯನ್ನು ಹೊರ ಹೊಮ್ಮಿಸಬೇಕೆಂದು ಬಯಸುತ್ತಾಳೆ. ಜಗಳಕ್ಕೆ ಮತ್ತೊಂದು ಕಾರಣವೆಂದರೆ, ಮಹಿಳೆಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮತ್ತು ನಿರ್ಣಯ ತೆಗೆದುಕೊಳ್ಳಲು ಸ್ವಾತಂತ್ರ್ಯ ಬಯಸುತ್ತಾರೆ. ಆದರೆ ಅದು ಅವರಿಗೆ ಸಿಗುವುದಿಲ್ಲ.”

ಸಾಕಷ್ಟು ಪ್ರಯತ್ನಗಳ ಬಳಿಕ ಏನೂ ಪ್ರಯೋಜನ ಆಗದಿದ್ದರೆ, ಪರಿಸ್ಥಿತಿ ಮತ್ತಷ್ಟು ಹದಗೆಡುತ್ತ ಸಾಗಿದ್ದರೆ ಹತಾಶರಾಗುವ ಅಗತ್ಯವಿಲ್ಲ. ಇಲ್ಲಿ ಕೊಟ್ಟ ಕೆಲವು ಉಪಾಯಗಳನ್ನು ಅನುಸರಿಸುತ್ತ ಹೋದರೆ ನಿಮ್ಮ ಸಂಬಂಧದಲ್ಲಿ ಮತ್ತೆ ಮೊದಲಿನ ಉತ್ಸಾಹ ಮರುಕಳಿಸುತ್ತದೆ.

ಮಾತುಕತೆ ನಡೆಸಿ : ಮಾತುಕತೆಯ ದಾರಿಯನ್ನು ಸದಾ ಮುಕ್ತವಾಗಿಟ್ಟುಕೊಳ್ಳಿ. ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಸಂಗಾತಿಗೆ ಹೇಳಿ. ಜೊತೆಗೆ ಅನನು ಹೇಳುವುದನ್ನು ಕೂಡ ಕೇಳಿಸಿಕೊಳ್ಳಿ. ನಾನು ಹೇಳಿದ್ದನ್ನು ಎಷ್ಟರಮಟ್ಟಿಗೆ ಕೇಳಿಸಿಕೊಳ್ಳುತ್ತಾನೆ ಎಂದು ಬಹಳಷ್ಟು ಜನರಿಗೆ ಸಂದೇಹ ಕಾಡುತ್ತಿರುತ್ತದೆ. ಆದರೆ ಕೆಲವೇ ಕೆಲವು ಜನರಿಗೆ ಮಾತ್ರ ಎದುರಿನ ವ್ಯಕ್ತಿಯ ಮಾತುಗಳನ್ನು ಆಲಿಸುವುದು ಹಾಗೂ ಅರ್ಥ ಮಾಡಿಕೊಳ್ಳುವುದು ಅತ್ಯವಶ್ಯ ಎಂದು ಭಾವಿಸುತ್ತಾರೆ.

ಪರಸ್ಪರರಿಗೆ ಕೊಡಿ `ಕ್ವಾಲಿಟಿ ಟೈಮ್‘ : ಸಂಗಾತಿ ನನಗೆ ಸಾಕಷ್ಟು ಕ್ವಾಲಿಟಿ ಸಮಯ ಕೊಡುತ್ತಿಲ್ಲ ಎಂದು ಅನೇಕರು ದೂರುತ್ತಾರೆ. ನೀವು ಅವರೊಂದಿಗೆ ಕೊಟ್ಟ ಸಮಯದಲ್ಲಿ ಬರೀ ವಾದವಿವಾದಕ್ಕೆ ಜಗಳವೇ ಆಗಿದ್ದರೆ ನಿಮಗೆ ಸರಿಯಾಗಿ ಮಾತನಾಡಲು ಆಗುವುದಿಲ್ಲ. ಯಾವುದಾದರೂ ಕೆಲಸ ಮಾಡುತ್ತ ಸಂಗಾತಿಯ ಜೊತೆ ಸಮಯ ಕಳೆಯುವುದರಿಂದಲೂ ಸಂಬಂಧ ಗಾಢಾಗುತ್ತದೆ.

ಸಂಬಂಧದಲ್ಲಿ ಸಕಾರಾತ್ಮಕತೆ : ನಮ್ಮ ಸಂಬಂಧದಲ್ಲಿ ಏನೋ ತಪ್ಪು ಘಟಿಸುತ್ತಿದೆ ಎಂದು ಒಮ್ಮೊಮ್ಮೆ ನಮಗೆ ಅನಿಸುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ನಿಮಗೆ ಸಕಾರಾತ್ಮಕ ಸಂಗತಿಗಳು ಕೂಡ ಸಕಾರಾತ್ಮಕವಾಗಿ ಗೋಚರಿಸುತ್ತವೆ. ಹೀಗಾಗಿ ಸಂಗಾತಿಯ ಜೊತೆ ಸಕಾರಾತ್ಮಕ ಅನುಭವಗಳ ಬಗ್ಗೆ ಯೋಚಿಸಿ.

ತಪ್ಪುಗಳನ್ನು ಹುಡುಕುತ್ತಾ ಇರಬೇಡಿ : ಯಾವಾಗಲೂ ನಿಮ್ಮ ಬಗ್ಗೆಯೇ ಟೀಕೆಗಳು ಕೇಳಿಬರುತ್ತಿದ್ದರೆ, ಇಂತಹ ಸ್ಥಿತಿಯಲ್ಲಿ ಎದುರಿಗಿನ ವ್ಯಕ್ತಿ ಮಾತನಾಡುವುದನ್ನು ಕೇಳಿಸಿಕೊಳ್ಳುವ ಆಸಕ್ತಿಯೇ ಉಳಿಯುವುದಿಲ್ಲ. ಮೊದಲು ನೀವು ಸಂಗಾತಿಯ ಬಗೆಗೆ ಟೀಕೆ ಮಾಡುವುದನ್ನು ನಿಲ್ಲಿಸಿ. ಸಂಗಾತಿ ಟೀಕೆ ಮಾಡುವುದನ್ನು ನಿಲ್ಲಿಸದೇ ಇದ್ದರೆ ಸ್ವಲ್ಪ ಸಹನೆಯಿಂದಿರಿ.

ಪ್ರೀತಿ ಮತ್ತು ಸಮಾಗಮ : ಆರೋಗ್ಯಕರ ಸಂಬಂಧಕ್ಕಾಗಿ ಸಮಾಗಮದ ಚಟುವಟಿಕೆ ಅತ್ಯವಶ್ಯ. ಸಾಮಾನ್ಯವಾಗಿ ಅಹಂ ನಮ್ಮ ಸಂಬಂಧಗಳ ನಡುವೆ ಅಡ್ಡಗೋಡೆಯಾಗುತ್ತದೆ. ದೈಹಿಕ ಸಂಬಂಧಕ್ಕೆ ನಾನು ಸಹಕಾರ ಕೊಡದೇ ಇದ್ದರೆ ಸಂಗಾತಿಗೆ ತನ್ನ ತಪ್ಪಿನ ಅರಿವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ಇದರಿಂದಾಗುವ ತದ್ವಿರುದ್ಧ ಪರಿಣಾಮವೇನೆಂದರೆ, ಇಬ್ಬರ ನಡುವಿನ ಅಂತರ ಇನ್ನಷ್ಟು ಹೆಚ್ಚುತ್ತಾ ಹೋಗುತ್ತದೆ.

ಭಾವನೆಗಳನ್ನು ವ್ಯಕ್ತಪಡಿಸಿ : ನಿಮಗೆ ಏನು ಅನ್ನಿಸುತ್ತದೆ, ನೀವು ಯಾವ ರೀತಿಯ ಸಂಬಂಧವನ್ನು ನಿರೀಕ್ಷೆ ಮಾಡುತ್ತಿರುವಿರಿ ಎಂಬುದರ ಬಗೆ ಸಂಗಾತಿಗೆ ಹೇಳಿ. ಹಿಂದಿನ ಒಳ್ಳೆಯ ಸ್ಮರಣಾರ್ಹ ನೆನಪುಗಳನ್ನು ಮೆಲಕುಹಾಕಿ ಹಳೆಯ ಫೋಟೋಗಳ ಮೇಲೆ ಕಣ್ಣುಹರಿಸಿ. ಆಗ ನಾನು ಮತ್ತು ನೀವು ಎಷ್ಟು ಖುಷಿಯಿಂದಿದ್ದೆವು ಎಂಬುದನ್ನು ನೆನಪಿಸಿಕೊಡಿ.

ರಿಲೇಶನ್ಶಿಪ್ಕೌನ್ಸೆಲಿಂಗ್‌ : ಎಷ್ಟೋ ಸಲ ಬಾಹ್ಯ ವಿಚಾರಗಳಿಂದ ನಾವೇನು ತಪ್ಪು ಮಾಡುತ್ತಿದ್ದೇವೆ. ಸಂಬಂಧ ಸುಧಾರಣೆಗೆ ಏನು ಮಾಡಬಹುದು ಎಂಬ ವಿಷಯವನ್ನು ನಮಗೆ ಮನದಟ್ಟು ಮಾಡುತ್ತಿರುತ್ತದೆ. ಕೌನ್ಸೆಲಿಂಗ್‌ನಿಂದ ಸಂಬಂಧಗಳಲ್ಲಿ ತಿಳಿವಳಿಕೆ ಮತ್ತು ಪರಸ್ಪರರ ಬಗ್ಗೆ ಸಂವೇದನಾಶೀಲತೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ದಂಪತಿಗಳ ನಡುವೆ ಸಮಸ್ಯೆ ಕಡಿಮೆ ಆಗಲು ನೆರವಾಗುತ್ತದೆ.

ಗಿರಿಜಾ

ಸಂಬಂಧವನ್ನು ಹೀಗೆ ಬಲಿಷ್ಠಗೊಳಿಸಿ

ಮನೋಚಿಕಿತ್ಸಕ ಡಾ. ರಾಯ್‌ ಅವರು ಸಂಬಂಧದಲ್ಲಿ ಏನು ಕೊರತೆಯಿದೆ, ಹೇಗೆ ಅದನ್ನು ಇನ್ನಷ್ಟು ಗಟ್ಟಿಗೊಳಿಸಬಹುದು ಎಂಬುದರ ಬಗ್ಗೆ ತಿಳಿವಳಿಕೆ ಕೊಡುತ್ತಾರೆ.

ನಾವು ಬೇರೆ ಬೇರೆ ಆಗುತ್ತಿದ್ದೇವೆ, ನಮ್ಮಿಬ್ಬರ ನಡುವೆ ಮೊದಲಿನ ಬಾಂಧವ್ಯ ಕಡಿಮೆಯಾಗುತ್ತಾ ಹೊರಟಿದೆ ಎಂದು ನಿಮಗೆ ಮೇಲಿಂದ ಮೇಲೆ ಅನ್ನಿಸುತ್ತಿದೆ.

ಒಮ್ಮೊಮ್ಮೆ ಸಾಮಾನ್ಯ ವಿಷಯದ ಬಗೆಗೆ ಮಾತುಕತೆ ನಡೆಸಲು ಕಷ್ಟ ಎನಿಸುತ್ತಿದೆ. ಅದೇ ಮನಸ್ತಾಪಕ್ಕೂ ಕಾರಣವಾಗುತ್ತಿದೆ.

ನೀವು ಪರಸ್ಪರ ಜೊತೆಗೂಡಿ ಇರುವುದು ಕಡಿಮೆಯಾಗುತ್ತದೆ. ಹೀಗೆ ಮಾಡಲು ಕಾರಣ ನೀವು ಪರಸ್ಪರ ಜಗಳ ಹಾಗೂ ವಿವಾದದಿಂದ ದೂರ ಇರಲು ಇಚ್ಛಿಸುತ್ತಿರುವಿರಿ.

ಇಬ್ಬರೂ ಒಂದು ಕೆಲಸವನ್ನು ಮಾತ್ರ ಜೊತೆಗೂಡಿ ಮಾಡುತ್ತಿರುವಿರಿ. ಅದೆಂದರೆ ಪರಸ್ಪರರ ತಪ್ಪುಗಳನ್ನು ಕಂಡುಹಿಡಿಯುವುದು.

ಪ್ರತಿಯೊಂದು ವಿಷಯಕ್ಕೂ ಪರಸ್ಪರರನ್ನೇ ಜವಾಬ್ದಾರರೆಂದು ಹೇಳುತ್ತೀರಿ.

ಸಂಗಾತಿಯ ಭಾವನೆಗಳ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತೀರಿ ಅವನು ನಿಮ್ಮ ಭಾವನೆಗಳ ಬಗ್ಗೆ ಹಾಗೆಯೇ ಮಾಡುತ್ತಾರೆಂದು ನೀವು ಭಾವಿಸುತ್ತೀರಾ?

ನೀವು ನಿಮ್ಮ ವೈವಾಹಿಕ ಜೀವನದಲ್ಲಿ ಬದಲಾವಣೆ ತಂದುಕೊಳ್ಳಲು, ಇಚ್ಛಿಸುತ್ತಿರವಿರಿ.

ಪರಸ್ಪರರ ಸಾಂಗತ್ಯ ನಿಮಗೆ ಅನುಕೂಲಕರ ಎನಿಸುವ ಬದಲು ಅಸಹಜತೆ ಎನಿಸುತ್ತದೆ.

ದೈಹಿಕ ಸಮಾಗಮ ಹೆಚ್ಚುಕಡಿಮೆ ನಿಂತೇಹೋಗಿದೆ.

ವೈವಾಹಿಕ ಜೀವನವನ್ನು ಖುಷಿಯಿಂದಿಡುವುದು ಹೇಗೆ?

ಮೋನಿಕಾ ಅವರ ಪ್ರಕಾರ, ಕೆಲವು ಉಪಾಯಗಳನ್ನು ಅನುಸರಿಸಿ ನೀವು ವೈವಾಹಿಕ ಜೀವನವನ್ನು ಖುಷಿಯಿಂದಿಡಬಹುದು.

ಮದುವೆಗೂ ಮುಂಚೆಯೇ ನಿಮ್ಮ ಕೆರಿಯರ್‌ ಹಾಗೂ ಆಕಾಂಕ್ಷೆಗಳ ಬಗ್ಗೆ ಹೇಳಿ, ಮದುವೆಯ ಬಳಿಕ ಅವೆರಡನ್ನೂ ಹೇಗೆ ಸಮತೋಲನದಿಂದಿಡುವಿರಿ ಎಂಬ ಬಗ್ಗೆ ಚರ್ಚೆ ಮಾಡಿ.

ನಿಮ್ಮ ಸಂಗಾತಿಯ ನೆರವಿನ ಬಗ್ಗೆ ಚರ್ಚಿಸಿ. ಅವನು ನಿಮ್ಮಿಂದ ಏನು ಅಪೇಕ್ಷಿಸುತ್ತಿದ್ದಾನೆ, ನೀವು ಅವನಿಂದ ಏನು ನಿರೀಕ್ಷಿಸುತ್ದಿದ್ದೀರಿ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಜೊತೆಗೆ ನೀವಿಬ್ಬರೂ ಜವಾಬ್ದಾರಿಗಳನ್ನು ಹೇಗೆ ಎದುರಿಸಲು ಸಿದ್ಧರಿದ್ದೀರಿ ಎಂಬುದನ್ನು ಹೇಳಿ.

ನೀವು ಹೂಡಿಕೆ, ಉಳಿತಾಯ ಹಾಗೂ ವಿಮೆಯಂತಹ ವಿಷಯಗಳ ಬಗ್ಗೆ ತಿಳಿದುಕೊಳ್ಳಿ. ಏಕೆಂದರೆ ಮದುವೆಯ ಬಳಿಕ ಹೆಚ್ಚಿನ ಜಗಳಗಳು ಹಣಕಾಸಿನ ಕುರಿತಂತೆಯೇ.

ಮದುವೆಯ ಬಳಿಕ ನಿಮ್ಮ ತಂದೆತಾಯಿಯ ಜವಾಬ್ದಾರಿ ತೆಗೆದುಕೊಳ್ಳಬೇಕೆಂದಿದ್ದರೆ ಅದರ ಬಗ್ಗೆ ಗಂಡನಿಗೆ ಮೊದಲೇ ಸ್ಪಷ್ಟಪಡಿಸಿಕೊಳ್ಳಿ.

ನಿಮ್ಮ ಕೆರಿಯರ್‌ನ ಯೋಜನೆ ರೂಪಿಸಿ. ನಿಮ್ಮ ಪ್ರಮೋಶನ್‌ ಬಾಕಿ ಇದ್ದರೆ, ಬಳಿಕ ತಕ್ಷಣವೇ ಮಗು ಬೇಕಿರದಿದ್ದರೆ ಆ ಬಗ್ಗೆ ಮನೆಯವರಿಗೆ ಮನವರಿಕೆ ಮಾಡಿಕೊಡಿ. ಮಗು ಯಾವಾಗ ಪಡೆದರೆ ಸೂಕ್ತ ಎನ್ನುವುದು ನಿಮ್ಮ ಚರ್ಚೆಯಿಂದ ಸ್ಪಷ್ಟವಾಗಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ