ಇದೀಗ ಹಿಂಜರಿಯುವ ಸಂದರ್ಭವಲ್ಲ : ಈಗ ಯೂರೋಪ್‌ ಕಾಂಟಿನೆಂಟ್‌ ಫ್ಯಾಷನ್‌ ಶೋ ಯಾವಾಗ ನಡೆಯುತ್ತದೋ ಏನೋ….. ಮತ್ತೆ ಹೈ ಫ್ಯಾಷನ್‌ ಯಾವಾಗ ಮರಳಲಿದೆಯೋ ಹೇಳಲಾಗದು. ಅದಕ್ಕೆ ಈಗಲೂ ಫ್ಯಾಷನ್‌ ಡಿಸೈನರ್ಸ್‌ ಜನರಿಗೆ ಪರ್ಫೆಕ್ಟ್ ಫ್ಯಾಷನ್‌ ತೋರಿಸಿಕೊಳ್ಳಲು ಟ್ರೇನಿಂಗ್‌ ನೀಡುತ್ತಿದ್ದಾರೆ. ಬ್ರಾಂಡ್‌ ಹೆಸರನ್ನು ನೋಡಿ ಡ್ರೆಸ್‌ ಎಷ್ಟು ಬಾಳಿಕೆ ಬಂದೀತು ನೋಡಿ, ಹಳೆಯ ಫ್ಯಾಷನೆಬಲ್ ಡ್ರೆಸೆಸ್‌ ಜೊತೆ ಬೆರೆಸಬಹುದೋ ಇಲ್ಲವೋ….. ಎಲ್ಲಾ ಪರೀಕ್ಷಿಸಿ ಎನ್ನುತ್ತಾರೆ. ಹೊಸ ಹೊಸ ಫ್ಯಾಷನ್‌ಗಳು ಹೀಗೆ ಡಿಸೈನ್‌ಗೊಳ್ಳುತ್ತಿವೆ, ಕೇವಲ ಕೆಲವೇ ದಿನಗಳಲ್ಲಿ ಚಾಲ್ತಿಗೆ ಬರಲಿವೆ. ಇದೀಗ ಖಂಡಿತಾ ಹೆದರುವ, ಹಿಮ್ಮೆಟ್ಟುವ ಸಂದರ್ಭವಲ್ಲ…. ಕೊರೋನಾ ಕೆಲವು ತಿಂಗಳಿಗೆ ಮುಗಿಯು ಮಾತಲ್ಲ! ಮುಂದೊಂದು ದಿನ ಕೊರೋನಾಮುಕ್ತ ವಾತಾವರಣ ಬರದೇ ಹೋಗದು, ಆಗ ಈ ಫ್ಯಾಷನ್‌ಗಳೆಲ್ಲ ಮತ್ತೆ ಮೆರವಣಿಗೆಗೆ ಬರಲಿವೆ.

pattaya

ಮಾಡುವುದಾದರೂ ಏನೀಗ? : ಥೈಲೆಂಡ್‌ನ ಪ್ರಸಿದ್ಧ ನಗರ ಪಟ್ಟಾಯಾ ಇದೀಗ ಅಂತಾರಾಷ್ಟ್ರೀಯ ಪ್ರವಾಸಿಗರಿಂದ ರಾಶಿ ರಾಶಿ ಡಾಲರ್‌, ಪೌಂಡ್‌, ಯೂರೋ ಕಕ್ಕಿಸುವುದು ಹೇಗೆಂದು ತಲೆ ಮೇಲೆ ಕೈಹೊತ್ತಿದೆ. ಈಗಿನ ಕೊರೋನಾ ಮಹಾಮಾರಿಯ ಕಾರಣದಿಂದಾಗಿ ಖಂಡಿತಾ ಪ್ರವಾಸ ದೂರದ ಕನಸು, ಮುಂದಿನ 6 ತಿಂಗಳಲ್ಲಿ ವಿಶ್ವದ ಯಾವ ನಗರ ತಂತಾನೇ ಮುಚ್ಚಿ ಹೋಗಲಿದೆಯೋ ಹೇಳಲಾಗದು. ಪ್ರವಾಸಕ್ಕೆಂದು 2 ದಿನಗಳಿಗಾಗಿ ಬಂದರು 2 ತಿಂಗಳು ಒಂದೇ ಕಡೆ ಬಂಧಿಗಳಾದರೆ ಮುಂದೆ ಮಾಡುವುದೇನು? ಈ ಕುರಿತಾಗಿ ಅಂತಾರಾಷ್ಟ್ರೀಯ ಮೀಟಿಂಗ್‌ ನಡೆಸಿ ಸ್ಟಾರ್‌ ಹೋಟೆಲ್‌ಗಳ ಮಾಲೀಕರು, ಪ್ರವಾಸಕ್ಕಾಗಿ ನಗರ ತೆರೆದುಕೊಂಡರೆ, ಸುರಕ್ಷತಾ ಕ್ರಮಗಳೇನಿರಬಹುದು ಎಂದು ಚಿಂತಿಸಿದರು. ಇದರಲ್ಲಿ ಮಹಿಳಾ ಮಾಲೀಕರನ್ನು ನೋಡಿ, ಪ್ರವಾಸಿಗರನ್ನು ಸೆಳೆಯಲು ಇವರುಗಳು ದೇಹದಂಧೆ ನಡೆಸಿ ಹೋಟೆಲ್ ವ್ಯಾಪಾರ ಮುನ್ನಡೆಸುವಂತಾಗಿದೆ.

ಮಕ್ಕಳು ಎಂದಿದ್ದರೂ ಮಕ್ಕಳೇ! : ಇಂದಿನ ಕೊರೋನಾ ಯುಗದಲ್ಲೂ ಮಕ್ಕಳನ್ನು ಶಾಲೆಗೆ ರೆಡಿ ಮಾಡಿಸುವುದಿದೆಯಲ್ಲ…. ಅದೂ ನಿಜಕ್ಕೂ ದೊಡ್ಡ ಸವಾಲು! ಮಕ್ಕಳಂತೂ ಮಕ್ಕಳೇ! ಕೊರೋನಾ ನಿಯಮವನ್ನು ಅವರು ಎಲ್ಲಿಂದ ಫಾಲೋ ಮಾಡಿಯಾರು? ಅಮ್ಮಂದಿರು ಮಕ್ಕಳಿಗೆ ಎಷ್ಟೇ ಪಾಠ, ಬುದ್ಧಿಮಾತು ಹೇಳಿರಲಿ, ಶಾಲೆ ತಲುಪಿದ ತಕ್ಷಣ ಇವರುಗಳ ಮಾಸ್ಕ್ ಎಲ್ಲೋ….. ವಾಟರ್ ಬಾಟಲ್ ಎಲ್ಲೋ! ಪರಸ್ಪರ ತಲೆ ಡಿಕ್ಕಿ ಕೊಟ್ಟುಕೊಂಡು ಮಾತುಕಥೆಯಲ್ಲಿ ಮೈ ಮರೆಯುತ್ತಾರೆ. ಆಟ, ಓಟ, ಜಗಳ ಎಲ್ಲಾ ಮಾಮೂಲಿಯಾಗುತ್ತದೆ. ಹೀಗಾಗಿಯೇ ವಿಶ್ವದೆಲ್ಲೆಡೆ ಶಾಲೆ ತೆರೆಯುವುದೇ ಬೇಡ ಎನ್ನುತ್ತಿದ್ದಾರೆ. ಯಾವ ಮನೆಗಳಲ್ಲಿ ಮೊಮ್ಮಕ್ಕಳನ್ನು ನಿಯಂತ್ರಿಸಲು ಅಜ್ಜಿಯರಿಲ್ಲವೋ ಅವರ ಗತಿ ಏನಪ್ಪ ಎಂದು ಉದ್ಯೋಗಸ್ಥ ವನಿತೆಯರು ಚಿಂತಿಸುತ್ತಿದ್ದಾರೆ.

ಬನ್ನಿ ಆನ್ಲೈನ್ಸುತ್ತಾಟಕ್ಕೆ : ಆಸ್ಟ್ರೇಲಿಯಾದ ಪೆರ್ಥ್‌ ನಗರದಲ್ಲಿ ಇಂದಿಗೂ ಅಲ್ಲಿನ ಮೇಯರ್‌ ನಾಗರಿಕರೆಲ್ಲರೂ ಪರಸ್ಪರ ಒಗ್ಗಟ್ಟಾಗಿರಬೇಕೆಂದು ನಾನಾ ಪ್ರಯತ್ನ ನಡೆಸುತ್ತಿದ್ದಾರೆ. ನೀವು ನಗರದಲ್ಲಿ ಸಂಚರಿಸದಿದ್ದರೆ ಏನಂತೆ, ಆನ್‌ಲೈನ್‌ ಸುತ್ತಾಡಿ ಅಂತಿದ್ದಾರೆ. ಲೈವ್ ‌ವಿಝಿಟ್‌, ಬ್ರಾಡ್‌ ಕಾಸ್ಟ್, 3 ಡೈಮೆನ್ಶನ್‌ ಶೋ, ಇಂಟರ್ವ್ಯೂ…. ಎಲ್ಲವೂ ನಿಮಗೆ ಮನೆಯಲ್ಲಿ ಕುಳಿತೆಡೆಯಲ್ಲೇ ಲಭ್ಯ, ಇಡೀ ನಗರದ ಮಜಾ ಪಡೆಯಬಹುದು. ನಮ್ಮಲ್ಲಿ ಪೊಲೀಸರ ಕಾಟದಂತೆ ಅಲ್ಲಿಲ್ಲ. ನಮ್ಮಲ್ಲಿ ಎಷ್ಟು ಲಾಠಿ ಚಾರ್ಜ್‌ ನಡೆದರೂ ಜನ ಹೆಂಡದಂಗಡಿ ಮುಂದೆ ಕ್ಯೂ ನಿಲ್ಲಿಸೋಲ್ಲ.

ಇಡೀ ವಿಶ್ವವೇ ಜೇಲ್ನಲ್ಲಿ : ಮಾಲ್ಟಾ ಎಂಬುದು ಪುಟ್ಟ ಮುದ್ದಾದ ದೇಶ ಇರಬಹುದು. ಆದರೆ ಕೊರೋನಾ ಮಹಾಮಾರಿಯ ಕಾಟ ಇಲ್ಲಿಯೂ ತಪ್ಪಲಿಲ್ಲ. ಮಾಲ್ಟಾದ ಫಿಲ್ ‌ಹಾರ್ಮೋನಿಕ್‌ ಆರ್ಕೆಸ್ಟ್ರಾದ ಪರ್ಫಾರ್ಮೆನ್ಸ್ ಅಂತೂ ಪೂರ್ತಿ ನಿಂತೇಹೋಗಿದೆ. ಅದರ ಬದಲು ವಿಡಿಯೋ ರಿಲೀಸ್‌ ಮಾಡಿ ದಂಧೆ ಮುಂದುವರಿಸುತ್ತಿದ್ದಾರೆ. ವೆಲೆಟಾದ ಕ್ಯಾಸೆಲ್ ‌ಸ್ಕ್ವೇರ್‌ನಲ್ಲಿ ನಡೆದ ಪ್ರೆಸ್‌ ಕಾನ್ಛರೆನ್ಸ್ ನಲ್ಲಿ ಎಲ್ಲರೂ ದೂರ ದೂರ ನಿಂತೇ ಮಾತು ಕೇಳಿಸಿಕೊಂಡರು. ಯಾರೋ ಯಾರಿಗೋ ಶಿಕ್ಷೆ ನೀಡಿದಂತಿತ್ತು. ನಿಜಕ್ಕೂ ಕೊರೋನಾ ಮಹಾಮಾರಿ ಇಡೀ ವಿಶ್ವವನ್ನೇ ಜೇಲಿಗೆ ತಳ್ಳಿದೆ!

ನಗರವೀಗ ಅಪರಿಚಿತಲ್ಲ : ಚೀನಾದ ಹಾನ್‌ ನಗರದ ಹೆಸರನ್ನು ವಿಶ್ವದಲ್ಲಿ ಈಗ ಅರಿಯದವರೇ ಇಲ್ಲ. ಇಲ್ಲಿಯೇ ಚಕ್ರವರ್ತಿ ರಾಜಾಧಿರಾಜ ಮಹಾಮಾಯಾವಿ ಕೊರೋನಾ ತನ್ನ ಮೊದಲ ಸಾಮ್ರಾಜ್ಯ ಸ್ಥಾಪಿಸಿದ್ದು ಹಾಗೂ ತನ್ನ ಯಜ್ಞಾಶ್ವವನ್ನು ವಿಮಾನ, ಹಡಗುಗಳ ಮುಖಾಂತರ ವಿಶ್ವವಿಡೀ ಆಕ್ರಮಿಸುವೆತೆ ಕಳಿಸಿದ್ದು. ಮೋದಿ, ಟ್ರಂಪ್‌, ಬೋರಿಸ್‌ ಜಾನ್‌ಸನ್‌, ಪುತೀನ್‌ ಇರಲಿ….. ಎಲ್ಲರೂ ತಂತಮ್ಮ ದೇಶಗಳ ವಾಣಿಜ್ಯ ವ್ಯಹಾರಗಳ ಕೀಲಿಕೈಯನ್ನು ಈ ಯಮಕಿಂಕರರಿಗೆ ಒಪ್ಪಿಸಿದ್ದಾಯ್ತು. ಈ ಹಾನ್‌ನಿಂದ ಕೊರೋನಾ ಮಹಾಮಾರಿ ವಿದಾಯ ಪಡೆದಾಯ್ತು. ಇಲ್ಲಿನ ಕೊರೋನಾ ರಾಕ್ಷಸೀ ಶಕ್ತಿಗಳೆಲ್ಲ ವಿಶ್ವಾದ್ಯಂತ ಹರಡಿವೆ. ಚೀನಾದ ಈ ಪ್ರಾಂತ್ಯದಲ್ಲಿ ಈಗ ಬಹುತೇಕ ಝೀರೋ ಕೇಸ್‌ ಇವೆಯಷ್ಟೆ.

ಆಡಂಬರದಿಂದ ಕೆಲಸವಾಗದು : ಫಿಕ್ಕೀ ಎಂಬುದು ಆ ದೊಡ್ಡ ಉದ್ಯಮದ ಜಗದ್ವಿಖ್ಯಾತ ಸಂಸ್ಥೆ. ಇಂಥ ಮಹಾನ್‌ ಸಂಸ್ಥೆಗಳು ತನ್ನ  ಸರ್ಕಾರಕ್ಕೆ ಹೇಳಿದ್ದೆಂದರೆ, ತಮ್ಮ ಅತೀ ಸಣ್ಣ ಉದ್ಯಮಗಳನ್ನು ಉಳಿಸಲು ಸರ್ಕಾರ ಆರ್ಥಿಕ ನೆರವು ನೀಡಬೇಕು ಅಂತ! ಈ ಕುರಿತಾಗಿ ಅಲ್ಲಿನ ಸರ್ಕಾರ ಕರುಣೆ ತೋರಿಸುತ್ತಿಲ್ಲ. ಆದರೂ ಫಿಕ್ಕೀಯ (ಭಾರತೀಯ ಮೂಲದ) ಅಧ್ಯಕ್ಷೆ ಸಂಗೀತಾ ರೆಡ್ಡಿ ಸರ್ಕಾರಕ್ಕೆ ಮತ್ತೆ ಮತ್ತೆ ಮೊರೆ ಹೋಗುತ್ತಿದ್ದಾರೆ. ಆದರೆ ನಮ್ಮಲ್ಲೂ ಚಪ್ಪಾಳೆ ತಟ್ಟಿ, ದೀಪ ಹಚ್ಚಿಡಿ ಎಂಬ ಉಪದೇಶ ನೀಡಲಾಗುತ್ತಿದೆ. ಹಣ ಎಲ್ಲಿಂದ ಕೊಟ್ಟಾರು? ಯಾವ ಮತದ ಮಂದಿರವೇ ಇರಲಿ, ಜನ ಅಲ್ಲಿಗೆ ಹೋಗಿ ಜ್ಯೋತಿ ಬೆಳಗಿ, ಗಂಟೆ ಬಾರಿಸಿ ಹಣ ಕೊಡುತ್ತಾರೆಯೇ ಹೊರತು ಪಡೆಯವ ಬಾಬತ್ತಿಲ್ಲ! ಹಾಗಿರುವಾಗ ಸರ್ಕಾರ ಈ ಪರಂಪರೆ ಏಕೆ ಬಿಟ್ಟೀತು?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ