ಬಾಥ್‌ ರೂಮ್ ಮನೆಯ ಒಂದು ಮುಖ್ಯ ಭಾಗ. ಇಲ್ಲಿಂದಲೇ ನಾವು ನಮ್ಮ ದಿನವನ್ನು ಆರಂಭಿಸುತ್ತೇವೆ. ಎಷ್ಟೋ ಜನ ತಮ್ಮ ಬೆಡ್‌ ರೂಮ್ ಹಾಗೂ ಲಿವಿಂಗ್‌ ರೂಮ್ ನ್ನು ಚೆನ್ನಾಗಿ ಹೊಳೆಯುವಂತೆ ಮಾಡುತ್ತಾರೆ. ಆದರೆ ಬಾಥ್‌ ರೂಮ್ ನ್ನು ಸ್ವಚ್ಛಗೊಳಿಸುವುದು ಅಗತ್ಯ ಎಂದು ಭಾವಿಸುವುದಿಲ್ಲ.

ತಜ್ಞರ ಪ್ರಕಾರ, ಮನೆಯ ಇತರೆ ಭಾಗಗಳ ಸ್ವಚ್ಛತೆ ಎಷ್ಟು ಮುಖ್ಯವೋ, ಬಾಥ್‌ರೂಮಿನ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯ. ಏಕೆಂದರೆ ಬಾಥ್‌ ರೂಮಿನ ಸ್ವಚ್ಛತೆ ನೇರವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಸ್ವಚ್ಛತೆ ಕಾಪಾಡದ ಟಾಯ್ಲೆಟ್

ಬಹಳಷ್ಟು ರೋಗಗಳಿಗೆ ಹಾಗೂ ಸೋಂಕುಗಳಿಗೆ ಆಹ್ವಾನ ನೀಡುತ್ತದೆ. ಒಂದು ಸಲ ಈ ಸೋಂಕು ದೇಹವನ್ನು ಪ್ರವೇಶಿಸಿಬಿಟ್ಟರೆ ಅದನ್ನು ಹೋಗಲಾಡಿಸಲು ಹಲವು ತಿಂಗಳುಗಳೇ ಬೇಕಾಗುತ್ತವೆ. ಇದರ ಗಾಢ ಪರಿಣಾಮ ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಉಂಟಾಗುತ್ತದೆ. ಏಕೆಂದರೆ ಕೊಳಕು ಟಾಯ್ಲೆಟ್‌ ಮೇಲೆ ಕುಳಿತ ರೋಗಾಣುಗಳು ನಮ್ಮ ದೇಹವನ್ನು ರೋಗದ ಕಪಿಮುಷ್ಟಿಗೆ ಸಿಲುಕಿಸುತ್ತವೆ.

ಈ ಕಾರಣದಿಂದ ಮೂತ್ರ ಸೋಂಕು, ತ್ವಚೆ ಸೋಂಕು ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಈ ರೋಗಗಳಿಂದ ದೂರವಿರಲು ಟಾಯ್ಲೆಟ್‌ ಸ್ವಚ್ಛಗೊಳಿಸುವುದನ್ನು ನಿಮ್ಮ ಪ್ರಾಥಮಿಕ ಆದ್ಯತೆಯಲ್ಲಿ ಸೇರಿಸಿಕೊಳ್ಳಿ.

ನಿಯಮಿತ ಸ್ವಚ್ಛತೆ

IMG_4247-copy (1)

ಬಾಥ್‌ ರೂಮ್ ನ ಪೈಪ್‌ಗಳಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಕ್ಲೆನ್ಸಿಂಗ್‌ ಸಲ್ಯೂಷನ್‌ ಹಾಕಿಡಿ. ಇದರಿಂದಾಗಿ ಪೈಪ್‌ಗಳಿಂದ ಕೆಟ್ಟ ವಾಸನೆ ಹೊರಹೊಮ್ಮದು.

ಟಾಯ್ಲೆಟ್‌ನ ಟ್ಯಾಂಕ್‌ನಲ್ಲಿ ಹಾರ್ಪಿಕ್‌ನ ಮಾತ್ರೆ ಅಥವಾ ಡೆಂಚರ್‌ ಕ್ಲೀನರ್‌ ಮಾತ್ರೆ ಹಾಕಿ ಫ್ಲಶ್‌ ಮಾಡಿದಾಗ ಟಾಯ್ಲೆಟ್‌ ಪಾಟ್‌ಸ್ವಚ್ಛಗೊಳ್ಳುತ್ತದೆ.

ವಾಶ್‌ ಬೇಸಿನ್‌ನ ನಲ್ಲಿಯಿಂದ ಕೊಳಕಾದ ಕೈಗಳನ್ನು ಸ್ವಚ್ಛಗೊಳಿಸಿದ ಬಳಿಕ, ಆ ನಲ್ಲಿಯ ಮೇಲೆ ಸ್ವಚ್ಛ ನೀರು ಹಾಕಿ ಅದನ್ನು ತೊಳೆಯಿರಿ. ಇದರಿಂದಾಗಿ ನಿಮ್ಮ ನಂತರ ಬೇರೆ ಸದಸ್ಯರು ಅದನ್ನು ಬಳಸಿದಾಗ ರೋಗಾಣುಗಳು ಅವರಿಗೆ ವರ್ಗಾಣೆಯಾಗಬಾರದು.

ಕೈ ತೊಳೆದುಕೊಂಡ ಬಳಿಕ ಲಿಕ್ವಿಡ್‌ ಆ್ಯಂಟಿ ಬ್ಯಾಕ್ಟೀರಿಯಾ ಸೋಪ್‌ನ್ನು ಬಳಸಿ.

ಟವೆಲ್ ‌ಮತ್ತು ಸ್ಪಾಂಜನ್ನು ದಿನ ಸ್ವಚ್ಛಗೊಳಿಸಿ. ಒದ್ದೆ ಟವೆಲ್ ನ್ನು ನಿಯಮಿತವಾಗಿ ಬಿಸಿಲಿನಲ್ಲಿ ಒಣಗಿಸಿ.

ಟಾಯ್ಲೆಟ್‌ನ ನೆಲ, ಸೀಟು, ಕನ್ನಡಿ, ಶವರ್‌ ಮ್ಯಾಟ್ಸ್ ಹಾಗೂ ಬಕೆಟ್‌ಗಳನ್ನು ಕೂಡ ದಿನ ಸ್ವಚ್ಛಗೊಳಿಸಿ.

ಕೆಲವು ಎಚ್ಚರಿಕೆಗಳು

ಬಾಥ್‌ ರೂಮ್ ಹೈಜೀನ್‌ಗಾಗಿ ಕೆಲವು ಎಚ್ಚರಿಕೆ ವಹಿಸುವುದು ಸೂಕ್ತ.

ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಫ್ಲಶ್‌ ಮಾಡುವ ಮುಂಚೆ ಕಮೋಡ್‌ನ ಮುಚ್ಚಳನ್ನು ಮುಚ್ಚಿ. ಏಕೆಂದರೆ ಫ್ಲಶ್‌ ಮುಖಾಂತರ ಬರುವ ನೀರಿನ ಹನಿಗಳಲ್ಲಿ ರೋಗಾಣುಗಳು ಇರುತ್ತವೆ.

ಶವರ್‌ ಹೆಡ್‌ನ್ನು ಯಾವಾಗಲೂ ಸ್ವಚ್ಛವಾಗಿಡಿ. ಏಕೆಂದರೆ ಯಾವ ಭಾಗದಲ್ಲಿ ಕ್ಷಾರಯುಕ್ತ ನೀರು ಬರುತ್ತೋ, ಅಲ್ಲಿ ಬಿಳಿ ಫಂಗಸ್ ತಗಲು ಸಾಧ್ಯತೆ ಇರುತ್ತದೆ. ಅದರಿಂದ ರೋಗಾಣುಗಳು ಪಸರಿಸುತ್ತವೆ.

ಒಂದು ವೇಳೆ ನಿಮ್ಮ ಬಾಥ್‌ ರೂಮಿನಲ್ಲಿ ಶವರ್‌ಗಾಗಿ ಪ್ರತ್ಯೇಕವಾಗಿ ಕ್ಯುಬಿಕ್‌, ಕ್ಯಾಬಿನೆಟ್‌ ಅಥವಾ ಪರದೆ ಅಳವಡಿಸಿದ್ದರೆ, ಅಲ್ಲಿ ಒದ್ದೆಯಾದಾಗ ಅದನ್ನು ಶುಷ್ಕಗೊಳಿಸಿ ಆ್ಯಂಟಿ ಬ್ಯಾಕ್ಟೀರಿಯಲ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ. ಇದರಿಂದಾಗಿ ಅಲ್ಲಿ ಬಿಳಿ ಫಂಗಸ್ ಉಂಟಾಗುವ ಸಾಧ್ಯತೆ ಕಡಿಮೆ.

ಆ್ಯಂಟಿ ಬ್ಯಾಕ್ಟೀರಿಯಲ್ ವೈಪ್‌ನ್ನು ಯಾವಾಗಲೂ ನಿಮ್ಮ ಬಾಥ್‌ ರೂಮಿನಲ್ಲಿಡಿ. ಇದರಿಂದ ಟಾಯ್ಲೆಟ್‌ನ ಹ್ಯಾಂಡಲ್, ಬಾಗಿಲಿನ ಹ್ಯಾಂಡಲ್, ನಲ್ಲಿ ಹಾಗೂ ಲೈಟ್‌ ಸ್ವಿಚ್‌ಗಳನ್ನು ದಿನ ಸ್ವಚ್ಛಗೊಳಿಸಿ.

ನಿಮ್ಮ ಟೂಥ್‌ ಬ್ರಶ್‌ಗಳನ್ನು ಪ್ರತಿ 3 ತಿಂಗಳಿಗೊಮ್ಮೆ  ಬದಲಿಸಿ ಮತ್ತು ಅವುಗಳನ್ನು ಬೇರೆಯವರು ಬಳಸದಂತೆ ನೋಡಿಕೊಳ್ಳಿ.

ನೀವು ಕೂಡ ಬೇರೆಯವರ ಬ್ರಶ್‌ನ್ನು ಬಳಸಬೇಡಿ.

ಮುಖ ಹಾಗೂ ಕೈ, ಕಾಲುಗಳನ್ನು ಒರೆಸಿಕೊಳ್ಳಲು ಬೇರೆ ಬೇರೆ ಟವೆಲ್ ‌ಉಪಯೋಗಿಸಿ. ಬೇರೆಯವರು ಬಳಸುವ ಟವೆಲ್ ಬಳಸಬೇಡಿ.

ನೀವು ಲಿಕ್ವಿಡ್‌ ಸೋಪ್‌ನಿಂದ ಕೈ ಸ್ವಚ್ಛಗೊಳಿಸಿಕೊಂಡಾಗ, ಕೈಯನ್ನು ಸಾಧಾರಣ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದರಿಂದಾಗಿ ರೋಗಾಣುಗಳು ಪರಿಪೂರ್ಣವಾಗಿ ಹೊರಟುಹೋಗುತ್ತವೆ.

ಬಾಥ್‌ ರೂಮಿಗೆಂದೇ ಒಂದು ಜೊತೆ ಚಪ್ಪಲಿ ಪ್ರತ್ಯೇಕವಾಗಿಡಿ. ಇದರಿಂದ ರೋಗಾಣುಗಳು ಹೊರಗೆ ಹೋಗುವುದಿಲ್ಲ.

ಟಾಯ್ಲೆಟ್‌ನ್ನು ಸ್ವಚ್ಛಗೊಳಿಸಲು ನಿಮ್ಮ ಕೈಗಳಿಗೆ ಗ್ಲೌಸ್‌ನ್ನು ಧರಿಸಿ. ಬಾಯಿ ಹಾಗೂ ತಲೆಯನ್ನು ಚೆನ್ನಾಗಿ ಕಟ್ಟಿಕೊಳ್ಳಿ. ಇದರಿಂದ ರೋಗಾಣುಗಳು ನಿಮ್ಮ ದೇಹದಲ್ಲಿ ಪ್ರವೇಶಿಸಲಾರವು. ನಂತರ ಆ್ಯಂಟಿ ಸೆಪ್ಟಿಕ್‌ ಲೋಶನ್‌ನ ಕೆಲವು ಹನಿಗಳನ್ನು ನೀರಿನಲ್ಲಿ ಹಾಕಿಕೊಂಡು ಸ್ನಾನ ಮಾಡಿ.

ಸ್ನಾನ ಮಾಡಿದ ಬಳಿಕ ನಿಮ್ಮ ಬಟ್ಟೆಗಳನ್ನು ಬಾಥ್‌ ರೂಮಿನ ನೆಲದ ಮೇಲೆ ಹಾಕಬೇಡಿ. ಇದರಿಂದ ಬಾಥ್‌ ರೂಮಿನ ರೋಗಾಣುಗಳು ಬಟ್ಟೆಗಳೊಳಗೆ ಪ್ರವೇಶಿಸಬಹುದು.

ಟೂಥ್‌ ಪೇಸ್ಟ್ ಹಾಗೂ ಶೇವಿಂಗ್‌ ಕಿಟ್‌ನ್ನು ಯಾವಾಗಲೂ ಪ್ರತ್ಯೇಕವಾಗಿಡಿ.

ಟಾಯ್ಲೆಟ್‌  ಸೀಟಿನ ಸ್ವಚ್ಛತೆ

vinegar5

ಟಾಯ್ಲೆಟ್‌ ಸೀಟ್‌ ಲೈಟ್‌ ಕಲರ್‌ನ್ನೇ ಉಪಯೋಗಿಸಿ. ಇದರಿಂದ ಕೊಳೆ ಬಹುಬೇಗ ಪತ್ತೆಯಾಗುತ್ತದೆ.

ಟಾಯ್ಲೆಟ್‌ ಸೀಟನ್ನು ಸ್ವಚ್ಛಗೊಳಿಸಲು ಹಾರ್ಡ್‌ ಬ್ರಶ್‌ನ್ನೇ ಬಳಸಿ. ಹೀಗೆ ಮಾಡಿದರೆ ಕಲೆಗಳು ಬೇಗ ನಿವಾರಣೆಯಾಗುತ್ತವೆ.

ಈಚೆಗೆ ಆಧುನಿಕ ತಂತ್ರಜ್ಞಾನ ಬಳಸಿ ತಯಾರಾದ ಟಾಯ್ಲೆಟ್‌ ಕ್ಲೀನರ್‌ಗಳು ಮಾರುಕಟ್ಟೆಯಲ್ಲಿವೆ. ಅವುಗಳಲ್ಲಿ ಯಾವುದಾದರೊಂದನ್ನು ಉಪಯೋಗಿಸಿ. ಅವು ನಿಮ್ಮ ಟಾಯ್ಲೆಟ್‌ಗೆ ಹೊಸ ಕಾಂತಿ ನೀಡುತ್ತವೆ.

ವಾರಕ್ಕೊಮ್ಮೆ ಸ್ವಚ್ಛತೆ

modern_bathroom_Design_1319634359

ಬಾಥ್‌ ರೂಮಿನ ಪೈಪ್‌ಗಳ ಸ್ವಚ್ಛತೆಗಾಗಿ ಅವುಗಳಲ್ಲಿ ಆ್ಯಸಿಡ್‌ ಹಾಗೂ 1 ಕಪ್‌ ಅಡುಗೆ ಸೋಡಾ ಹಾಕಿಡಿ. ಆ ಬಳಿಕ 1 ಕಪ್‌ ಬಿಳಿ ವಿನಿಗರ್‌ ಹಾಕಿ.

ಬಾಥ್‌ ರೂಮಿನ ಏರ್‌ ಫ್ರೆಶ್‌ನರ್‌ ಬಿಲ್ಲೆಯನ್ನು ಆಗಾಗ ಬದಲಿಸುತ್ತಾ ಇರಿ. ಮಕ್ಕಳಿಗೆ ಟಾಯ್ಲೆಟ್‌ ಶಿಷ್ಟಾಚಾರ ಕಲಿಸಿ ಬಾಥ್‌ ರೂಮಿನ ನೈರ್ಮಲ್ಯ ಕಾಪಾಡಿಕೊಂಡು ಹೋಗಲು ಮಕ್ಕಳಿಗೂ ಕೂಡ ಬಾಥ್‌ ರೂಮ್ ನ್ನು ಹೇಗೆ ಉಪಯೋಗಿಸಬೇಕು ಎಂದು ತಿಳಿಸಿಕೊಡಿ. ಏಕೆಂದರೆ ಮಕ್ಕಳು ಬಹುಬೇಗ ಸೋಂಕಿಗೆ ತುತ್ತಾಗುತ್ತಾರೆ. ಒಂದು ವೇಳೆ ಮಗು ಸಂಕೇತಗಳಿಂದಲೇ ತಿಳಿದುಕೊಳ್ಳಲು ಸಮರ್ಥವಾಗಿದ್ದರೆ, ಅದು ಟಾಯ್ಲೆಟ್‌ ಟ್ರೇನಿಂಗ್‌ಗೆ ಸಿದ್ಧ ಎಂದು ಭಾವಿಸಬೇಕು.

ಮೂಲಭೂತ ಶಿಕ್ಷಣ

ಮಗು ಕುಳಿತುಕೊಳ್ಳಲು ಕಲಿತುಕೊಂಡ ಬಳಿಕ ಅದಕ್ಕಾಗಿ ಪ್ಲಾಸ್ಟಿಕ್‌ನ ಪೋಟಿ ಚೇರ್‌ತೆಗೆದುಕೊಂಡು ಬಂದು ಅದರ ಮೇಲೆಯೇ ಕೂರಿಸಿ, ಅದಕ್ಕೆ ಕಕ್ಕಸು ಮಾಡಲು ಹೇಳಿ. ಹೀಗೆ 1-2 ಸಲ ಕುಳಿತುಕೊಂಡ ಬಳಿಕ ಅದಕ್ಕೆ ಅಭ್ಯಾಸವಾಗುತ್ತದೆ.

ಮನೆಯಲ್ಲಿ ಪೋಟಿ ಚೇರ್‌ನ ಬಳಿಯೇ ಮಕ್ಕಳ ಆಟಿಕೆಗಳ ಒಂದು ಬಾಕ್ಸ್ ಕೂಡ ಇಡಿ. ಏಕೆಂದರೆ ಅದು ಅದರ ಮೇಲಿಂದ ಎದ್ದೇಳು ಹಠ ಮಾಡದೆ ಅದರ ಮೇಲೆ ಕುಳಿತುಕೊಂಡೇ ಆಟ ಆಡುತ್ತಿರಬೇಕು.

ಪೋಟಿ ಚೇರ್‌ನ್ನು ಬಳಸುವ ಮುಂಚೆ ಸೀಟ್‌ನಲ್ಲಿ ನೀರು ಹಾಕಿ ಅಥವಾ ಟಿಶ್ಯೂ ಪೇಪರ್‌ ಇಡಿ. ಏಕೆಂದರೆ ಬಳಿಕ ಸೀಟನ್ನು ಸ್ವಚ್ಛಗೊಳಿಸಲು ಸುಲಭವಾಗುತ್ತದೆ.

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಟಾಯ್ಲೆಟ್‌ ಟ್ರೇನಿಂಗ್‌ ನೀಡುವ ಹಲವಾರು ಕಥೆ ಪುಸ್ತಕಗಳು ಲಭ್ಯವಿವೆ. ಉದಾಹರಣೆಗೆ ಕೊಕೊ ಬಿಯರ್‌, `ನ್ಯೂ ಪೋಟಿ.’ ಈ ಬಗೆಯ ಕಥೆಗಳನ್ನು ಓದಿ ಮಕ್ಕಳಿಗೆ ತಮ್ಮಿಂದ ಏನು ಅಪೇಕ್ಷಿಸಲಾಗುತ್ತಿದೆ, ತಾವು ಏನು ಮಾಡಬೇಕು ಎಂಬುದು ಗೊತ್ತಾಗುತ್ತದೆ.

ಕ್ರಮೇಣ ಪೋಟಿಯನ್ನು ಬಾಥ್‌ ರೂಮಿನಲ್ಲೇ ಇಡಿ ಹಾಗೂ ಬಾಥ್‌ ರೂಮಿನಲ್ಲಿಯೇ ಅದಕ್ಕೆ ಫ್ರೆಶ್‌ ಆಗಲು ರೂಢಿ ಮಾಡಿಸಿ.

ದೊಡ್ಡ ಪಾಟ್‌ ಸೀಟ್‌ನ ಬಳಕೆ

p_main02_L

 

ಯಾವ ಮಕ್ಕಳಿಗೆ ದೊಡ್ಡ ಟಾಯ್ಲೆಟ್‌ ಸೀಟ್‌ ಮೇಲೆ ಕುಳಿತುಕೊಳ್ಳಲು ಭಯವಾಗುತ್ತೊ, ಅವಕ್ಕೆ ಪ್ರೀತಿಯಿಂದ ತಿಳಿ ಹೇಳಿ ಕೈಯಿಂದ ಹಿಡಿದುಕೊಂಡು ಪಾಟ್‌ ಮೇಲೆ ಕೂರಿಸಿ.

2 ವರ್ಷದ ಮಕ್ಕಳನ್ನು ಯಾವಾಗಲಾದರೊಮ್ಮೆ ದೊಡ್ಡ ಸೀಟಿನ ಮೇಲೆ ಕೂರಿಸಿ.

ದೊಡ್ಡ ಸೀಟ್‌ ಮೇಲೆ ಕುಳಿತುಕೊಂಡಾಗ ನಲ್ಲಿಯ ನೀರು ಬಿಡಿ. ಏಕೆಂದರೆ ನೀರು ಫ್ಲಶ್‌ ಮಾಡಿದಾಗ ಅದು ಹೆದರದೆ ಇರಲಿ.

ದೊಡ್ಡ ಸೀಟಿನ ಬಳಿ ಒಂದು ಸ್ಟೂಲ್ ಇಡಿ. ಅದರಿಂದ ಮಗುವಿಗೆ ವಾಶ್‌ ಬೇಸಿನ್‌ನಲ್ಲಿ ಕೈ ತೊಳೆದುಕೊಳ್ಳಲು ಕಷ್ಟ ಎನಿಸಬಾರದು.

ಬಾಥ್‌ ರೂಮಿನಲ್ಲಿ ಮಕ್ಕಳಿಗೆ ಟಾಯ್ಲೆಟ್‌ ಪೇಪರ್‌ ಇಡುವುದಕ್ಕಿಂತ ವೈಪ್ಸ್ ಇಡುವುದು ಒಳ್ಳೆಯದು. ಅದರಿಂದ ಫ್ಲಶ್‌ನಲ್ಲಿ ಹರಿಯಲು ಸುಲಭವಾಗುತ್ತದೆ.

ಪೋಟಿ ಚೇರ್‌ನ ಸ್ವಚ್ಛತೆ

1057748_Enlarged_1

ಪೋಟಿ ಚೇರ್‌ನ್ನು ಸ್ವಚ್ಛಗೊಳಿಸಲು ಬ್ಲೀಚ್‌ನ್ನು ಬಳಸಬೇಡಿ. ಏಕೆಂದರೆ ಯೂರಿನ್‌ನಲ್ಲಿ ಅಮೋನಿಯಾ ಇರುತ್ತದೆ. ಬ್ಲೀಚ್‌ ಹಾಗೂ ಅಮೋನಿಯಾ ಸೇರಿಕೊಳ್ಳುವುದರಿಂದ ಅಪಾಯಕಾರಿ ರಾಸಾಯನಿಕ ಪ್ರಕ್ರಿಯೆ ಉಂಟಾಗಬಹುದು. ಹಾಗಾಗಿ ಸ್ವಲ್ಪ ಎಚ್ಚರವಹಿಸಿ.

ಪೋಟಿ ಸೀಟ್‌ನ್ನು ಫೀನೈಲ್ ‌ನೀರಿನಿಂದ ಸ್ವಚ್ಛಗೊಳಿಸಿ ನಂತರ ಶುಷ್ಕಗೊಳಿಸಬೇಕು.

– ಪ್ರಭಾ ಮಾಧವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ