ಸುರೇಖಾ ಹೊಸ ಮೊಬೈಲ್‌ನಿಂದ ಅಮ್ಮನಿಗೆ ಫೋನ್‌ ಮಾಡುತ್ತಿದ್ದಂತೆ ಅತ್ತ ಕಡೆಯಿಂದ ಗಾಬರಿ ಮಿಶ್ರಿತ ಧ್ವನಿ ಕೇಳಿಸಿತು, “ಹಲೋ, ಯಾರು….?”

“ಅವ್ವಾ… ನಾ ಸುರೇಖಾ.”

“ನಾ ನಾಕ್‌ ದಿನದಿಂದ ನಿನಗ ಮುಂಜಾನಿಂದ ಸಂಜಿತನಕ ಫೋನ್‌ ಮಾಡಾಕ್‌ ಹತ್ತೀನಿ, ಏನೂ ಉತ್ತರಾ ಇಲ್ಲ. ನೀ ನನಗ ಯಾಕ್‌ ಹೀಂಗ್‌ ತ್ರಾಸ್‌ ಕೊಡಾಕ್‌ ಹತ್ತಿದೀ?”

“ಅವ್ವಾ ನನ್ನ ಫೋನ್‌ ಕಳದಹೋತು. ಇತ್ತ ನಾ ಹೊಸಾ ಫೋನ್‌ ತಗೊಂಡು ನಿನಗ ಪೋನ್‌ ಮಾಡಾಕತ್ತೀನಿ,” ಎಂದು ಹೇಳುತ್ತಾ ಆಕೆ ತನ್ನ ನಂಬರ್‌ ಕೊಡುತ್ತಾ ಹೇಳಿದಳು, “ಅವ್ವಾ ನೀ ಸುಮ್ಮಸುಮ್ಮಕ ತೊಂದ್ರಿ ಮಾಡಿಕೋತಿ. ನಾ ಇಲ್ಲಿ ಆಶ್ರಮದಾಗ ಬ್ಹಾಳ ಖುಷಿಯಿಂದ ಇದೀನಿ. ಇಲ್ಲಿನ ವ್ಯವಸ್ಥಾನೂ ಬ್ಹಾಳ್‌ ಚಲೋ ಐತಿ. ನನಗೆ ಯಾವ ತೊಂದ್ರಿನೂ ಇಲ್ಲ.”

ಅವಳು ಅವ್ವನಿಗೆ ಧೈರ್ಯ ನೀಡಿದಳು. ಆದರೆ ಸ್ವಾಮಿ ಹೀರಾನಂದನ ಕುಟಿಲ ನಡತೆಯ ಬಗ್ಗೆ ಆಕೆಯ ಮನಸ್ಸು ಮೆದುಳಿನಲ್ಲಿ ಅಲ್ಲೋಲಕಲ್ಲೋಲ ನಡೆದಿತ್ತು. ಆದರೆ ಆಕೆ ಆ ಬಗ್ಗೆ ಅವ್ವನ ಮುಂದೆ ಪ್ರಸ್ತಾಪಿಸಲೇ ಇಲ್ಲ.

“ಅಂದ್ಹಂಗ ನವೀನ್‌ ಬ್ಹಾಳ ದುಃಖಿ ಆಗ್ಯಾನ. ಮೊದಲು ಅಂವ ನಿನ್ನ ಮಾತ ಕೇಳಿ ಹೆಂಗೊ ಸಹಿಸಿಕೋತಿದ್ದ. ಈಗ ಬ್ಹಾಳ ವ್ಯಥಿ ಪಡ್ತಾನ ಮತ್ತ ಸಪ್ಪಗಿರ್ತಾನ. ಹುಚ್ಚಿ, ಒಮ್ಮೊಮ್ಮೆ ಹರೇದಾಗ ಇಂಥ ತಪ್ಪ ನಡದ ನಡೀತಾ. ನವೀನ್‌ ನನ್ನ ಕಾಲ ಹಿಡಿದು ಮ್ಯಾಲಿಂದ ಮ್ಯಾಲ ತನ್ನ ತಪ್ಪಿನ ಬಗ್ಗೆ ಕ್ಷಮಾ ಕೂಡ ಕೇಳ್ಯಾನ. `ನಶೆದಾಗ ಅದರಲ್ಲೂ ಒಬ್ಬನ ಇದ್ದದ್ದರಿಂದ ಮೈಮ್ಯಾಲಿನ ಪ್ರಜ್ಞಾ ಕಳೆದುಕೊಂಡಿದ್ನಿ.’ ಎಂದು ಅ ಎಷ್ಟೋ ಸಲ ನನ್ನ ಮುಂದೆ ಹೇಳ್ಯಾನ.”

“ಸಾಕ ಸಾಕ ಅವ್ವಾ. ಸಧ್ಯ ಅವನ ಯಾವ ಕ್ಷಮಾಪಣಿ ಅಥವಾ ಸ್ಪಷ್ಟೀಕರಣದ ಮಾತ ಕೇಳಾಕ ನಾವು ತಯಾರಿಲ್ಲ.”

“ಮಗಳ, ನನ್ನ ಮಾತ ಸ್ಪಲ್ಪ ಕೇಳು. ಅಂವ ನಿನ್ನ ಭೆಟ್ಟಿ ಮಾಡಾಕಂತ ನೀ ಇದ್ದ ಆಶ್ರಮಕ್ಕ ಹೋಗಿದ್ದ. ಆದ್ರ ನೀ ಸ್ವಾಮೀಜಿ ಹುಟ್ಟುಹಬ್ಬ ಆಚರಿಸಾಕಂತ ಗಿರಿಜಾಪುರಕ ಹೋಗೀದಿ ಅಂತ ಗೊತ್ತಾತು. ನಿನ್ನೆ ಅಂ ನನ್ನ ಹತ್ರ ಬಂದು ನಾ ಅಲ್ಲಿಗೇ ಹೊಂಟೀನಿ ಎಂದು ಹೇಳಿ ಹೊರಟೋದ. ಒಂದ್ಯಾಳೆ ನೀ ಅವನ್ನ ತಪ್ಪ ಕ್ಷಮಿಸದ ಇದ್ರ ತಾನೂ ಆಶ್ರಮದಾಗ ಇದ್ದುಬಿಡ್ತೀನಿ ಎಂದು ಬ್ಯಾರೆ ಹೇಳಿ ಹೋಗ್ಯಾನ.

“ನೋಡ ಸುರೇಖಾ, ನಿನ್ನ ಜೀವನದಾಗ ನಡಿದ ಈ ಘಟನಾದ ಬಗ್ಗೆ ನಾ ಮೂವರ್ನ ಬಿಟ್ಟ ಬ್ಯಾರೆ ಯಾರಿಗೂ ಗೊತ್ತಿಲ್ಲ. ನಿಮ್ಮ ಅಪ್ಪನಿಗೂ ಇದರ ಖಬರಿಲ್ಲ. ನೀ ಆಶ್ರಮಕ್ಕೆ ಯಾಕ್‌ ಹೋದಿ ಅಂತಾ ಕೇಳಿದಾಗ, ಸ್ವಾಮೀಜಿ ಬಗ್ಗೆ ನಿನಗ ಬ್ಹಾಳ ಶ್ರದ್ಧಾ ಐತಿ, ಸ್ವಲ್ಪ ದಿನ ಆಶ್ರಮದಾಗ ಇದ್ದು ಸೇವಾ ಮಾಡಿ ಬರ್ತಾಳು ಎಂದಷ್ಟೇ ನಾ ಹೇಳೀನಿ. ಒಂದ್ಯಾಳೆ ನವೀನ್‌ ಅಲ್ಲಿಗೆ ಖರೇನ್‌ಬಂದುಬಿಟ್ರ ನೀ ಹಠಕ್ಕ ಬಿದ್ದ ಅವನ ಜೊತಿ ವೈರತ್ವ ಕಟಕೋಬ್ಯಾಡ. ಒಳ್ಳೆ ಗೆಳೆಯನಾಂಗ ಆದ್ರೂ ಅವನ ಜೊತಿ ಇರು.”

“ಅದನ್ನ ಸಮಯ ಬಂದಾಗ ನೋಡ್ಕೋತೀನಿ. ಸದ್ಯ ನಂಗ ಅದರ ಬಗ್ಗೆ ಮಾತಾಡಾಕ ಸ್ವಲ್ಪಾನೂ ಇಷ್ಟ ಇಲ್ಲ,” ಎಂದು ಹೇಳಿ ಸುರೇಖಾ ಕಾಲ್ ‌ಕಟ್‌ ಮಾಡಿದಳು.

ಆ ಘಟನೆ ನಡೆದ ಆರಂಭದ ದಿನಗಳಲ್ಲಿ ಸುರೇಖಾ ನವೀನನ ಹೆಸರು ಹೇಳಿದರೆ ಸಾಕು ಉರಿದೇಳುತ್ತಿದ್ದಳು. ಆದರೆ ಕಾಲ ಕಳೆದಂತೆ ಅವಳ ಮನಸ್ಸಿನ ಮೂಲೆಯಲ್ಲಿ ಈಗಲೂ ಅವನ ಬಗ್ಗೆ ಅಷ್ಟಿಷ್ಟು ಅಪೇಕ್ಷೆ ಹಾಗೂ ಪ್ರೀತಿಯ ಮಂದ ಬೆಳಕು ಗೋಚರಿಸುತ್ತಲಿತ್ತು. ಸ್ವಲ್ಪ ಹೊತ್ತಿನ ತನಕ ಅವಳೊಬ್ಬಳೇ ಸುಮ್ಮನೇ ಕುಳಿತಿದ್ದಳು. ಅಷ್ಟೊತ್ತಿಗೆ ಆಕೆಯ ಕೋಣೆಯಲ್ಲಿದ್ದ ಮಧ್ಯ ವಯಸ್ಸಿನ ಗೀತಾ ಆಂಟಿ ಊಟ ಮಾಡಿ ವಾಪಸ್‌ ಬಂದರು. ಸುರೇಖಾಳ ಉದಾಸಭರಿತ ಮುಖ ನೋಡಿ ಪ್ರೀತಿಯಿಂದಲೇ ಕೇಳಿದರು, “ಯಾಕ ಸುರೇಖಾ, ಸಪ್ಪಗಿದ್ದೀಯಲ್ಲ? ನಿನ್ನ ಆರೋಗ್ಯ ಸರಿ ಐತಿ ಹೌದಲ್ಲ? ಊಟಾ ಮಾಡಿದೆ ಇಲ್ಲಿ?”

“ಇಲ್ಲ, ನನಗ ಊಟಾ ಮಾಡೋ ಇಚ್ಚಾ ಇಲ್ಲ. ನೀವು ವಿಶ್ರಾಂತಿ ಮಾಡ್ರಿ….” ಎಂದು ಹೇಳಿ ಆಕೆ ಕಣ್ಣು ಮುಚ್ಚಿದಳು. ಆದರೆ ಅವಳ ಕಣ್ಣಿಂದ ನಿದ್ರೆ ಬಹುದೂರ ಸರಿದುಹೋಗಿತ್ತು.

ಅವ್ವನೊಂದಿಗೆ ನಡೆದ ಮಾತುಕತೆಯಲ್ಲಿ ನವೀನ್‌ನ ಬಗ್ಗೆ ಪ್ರಸ್ತಾಪಾದಾಗ ಸುರೇಖಾಳ ಮನಸ್ಸಿನಲ್ಲಿ ಸ್ವಲ್ಪ ಹೊತ್ತು ಸಿಟ್ಟು ಹಾಗೂ ಹೇಸಿಗೆ ಉಂಟಾಗಿತ್ತು. ಆದರೆ ಈಗ ಅದು ಕಡಿಮೆಯಾಗುತ್ತ ಹೊರಟಿತ್ತು. ಅವ್ವ ಹೇಳಿದ ಮಾತುಗಳೇ ಆಕೆಯ ಮನಸ್ಸಿನಲ್ಲಿ ಸುತ್ತುತ್ತಲಿದ್ದವು. ನವೀನ್‌ ಅದೆಷ್ಟೋ ಸಲ ಫೋನ್‌ನಲ್ಲಿ ಕ್ಷಮೆ ಕೇಳಿದ್ದ. ಅವಳು ಇಷ್ಟವಿಲ್ಲದಿದ್ದಾಗ್ಯೂ ಅನಿವಾರ್ಯವಾಗಿ ಅದೇ ಭಯಾನಕ ಕತ್ತಿಯ ಓಣಿಯಲ್ಲಿ ಹಾಯ್ದು ಹೋಗಲು ತಯಾರಾದಳು.

ನವೀನ್‌ ಆಕೆಗೆ ದೂರದ ಸಂಬಂಧಿ. ಚಿಕ್ಕಮ್ಮನ ಮೈದುನನ ಮಗ. ಅವನು ಸ್ಮಾರ್ಟ್‌ ಹಾಗೂ ಜಾಣ ಯುವಕ. ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದ. ಒಂದು ವಿವಾಹ ಕಾರ್ಯಕ್ರಮದಲ್ಲಿ ಇಬ್ಬರೂ ಮೊದಲ ಬಾರಿ ಭೇಟಿಯಾಗಿದ್ದರು. ಬಳಿಕ ಇಬ್ಬರಲ್ಲೂ ಆಕರ್ಷಣೆ ಹೆಚ್ಚಾಗಿ ಪರಸ್ಪರ ಹತ್ತಿರ ಬರಲಾರಂಭಿಸಿದರು.

ಕಾಲಕಳೆದಂತೆ ಅವರ ಅಪೇಕ್ಷೆಗಳು ಕಾಮನಬಿಲ್ಲಿನ ಕನಸು ಕಾಣಲಾರಂಭಿಸಿದ್ದ. ತಾವಿಬ್ಬರೂ ಪರಸ್ಪರಿಗಾಗಿಯೇ ಜನಿಸಿದ್ದೇವೆ ಎಂಬಂತೆ ಭಾವಿಸಿದ್ದರು. ಅವರು ಪಾರ್ಕ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಭೇಟಿಯಾಗತೊಡಗಿದರು.

ಒಂದು ದಿನ ನವೀನ್‌ ತನ್ನ ತಂದೆತಾಯಿ ಬೇರೆ ಊರಿಗೆ ಹೋದಾಗ ಸಂಜೆ ಸಮಯ ಸುರೇಖಾಳನ್ನು ತನ್ನ ಮನೆಗೆ ಬರಲು ಆಹ್ವಾನಿಸಿದ. ಆಕೆ ಆ ಆಮಂತ್ರಣವನ್ನು ಖುಷಿಯಿಂದಲೇ ಸ್ವೀಕರಿಸಿದಳು. ಆದರೆ ಆ ಕ್ಷಣದಲ್ಲಿ ಈ ಏಕಾಂತ ತಮ್ಮಿಬ್ಬರ ಜೀವನದಲ್ಲಿ ಇಂತಹ ಅಲ್ಲೋಲ ಕಲ್ಲೋಲ ಸ್ಥಿತಿ ಉಂಟು ಮಾಡಬಹುದೆಂದು ಆಕೆ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ.

ಸಂಜೆ 5 ಗಂಟೆ ಸುಮಾರಿಗೆ ಸುರೇಖಾ ನವೀನನ ಮನೆಗೆ ಬಂದಳು. ಅವನು ಮುಗುಳ್ನಗುತ್ತಲೇ ಒಳಗೆ ಬರಲು ಸನ್ನೆ ಮಾಡಿದ. ಒಳಗೆ ಬರುತ್ತಿದ್ದಂತೆ ಅವಳ ಕೈಹಿಡಿದುಕೊಂಡು ಬೆಡ್‌ ರೂಮ್ ಕಡೆಗೆ ಕರೆದೊಯ್ಯುತ್ತ, “ನಾವು ಇಂಥ ಏಕಾಂತದ ಕ್ಷಣಕ್ಕಾಗಿ ಅದೆಷ್ಟು ವರ್ಷದಿಂದ ಕಾಯ್ತಿದ್ನಿ.”

`ಇವನ ಮನಸ್ಸಿನ್ಯಾಗ ಕೆಟ್ಟ ಯೋಚನಿ ಏನಾದ್ರೂ….’ ಎಂದು ಯೋಚಿಸುತ್ತಾ, “ನಿಮ್ಮ ಮನ್ಯಾಗ ಇಬ್ರ ಕೆಲಸದವರ ಇದ್ರ ಅಂತಾ ಹೇಳಿದ್ದೆಲ್ಲ, ಅವರ ಎಲ್ಲಿ ಕಾಣಿಸ್ತಾನ ಇಲ್ಲ?”

“ಸುರೇಖಾ, ನಮ್ಮಿಬ್ಬರ ನಡುವಿನ ಇಂಥ ಮಧುರ ಕ್ಷಣದಾಗ ಅವರನ್ಯಾಕ ನೆನಪಿಸಿಕೊಳ್ತಿ?” ಎಂದು ಹೇಳುತ್ತಾ ಸುರೇಖಾಳನ್ನು ತನ್ನ ಬಾಹುಗಳಲ್ಲಿ ಬಂಧಿಸಲು ನೋಡಿದ. ಅವಳು ಅವನ ಬಾಹುಗಳಲ್ಲಿ ಸಿಲುಕಿಕೊಳ್ಳದೆ ದೂರ ಹೋಗಿ ನಿಂತು ಹೇಳಿದಳು,

“ಮಿಸ್ಟರ್‌ ನವೀನ್‌, ನನ್ನನ್ನ ಅಂತಿಂಥ ಹುಡುಗಿ ಅಂತಾ ತಿಳಿಬ್ಯಾಡ. ನಿಮ್ಮ ಬಾಯಿಂದ ಏನೋ ವಾಸನೆ ಬ್ಯಾರೆ ಬರಾಕ್ ಹತ್ತೇತಲ್ಲ?”

“ನೀವು ಸುಖಾ ಸುಮ್ಮನ ಬ್ಯಾಸರ ಮಾಡಿಕೊಳ್ತಿ. ಈಗ ನೀವು ಸ್ವಲ್ಪ ನೆಮ್ಮದಿಯಿಂದ ಕುಳಿತುಕೊ. ನಾವು ನಿನಗೆ ಕುಡ್ಯಾಕ ಕೂಲ್ ‌ಡ್ರಿಂಕ್ಸ್ ತಗೊಂಡ ಬರ್ತೀನಿ,” ಎಂದು ಹೇಳಿ ಅಡುಗೆಮನೆಗೆ ಹೋಗಿ ಎರಡು ಗ್ಲಾಸ್‌ಗಳಲ್ಲಿ ಕೂಲ್ ‌ಡ್ರಿಂಕ್‌ ಭರ್ತಿ ಮಾಡಿಕೊಂಡು ಬಂದ.

“ನೀವು ನನ್ನ ಮನಿಗಿ ಮೊದಲ ಸಲ ಬಂದಿದೀ. ನಿನಗ ಸ್ವಲ್ಪನಾರ ಉಪಚಾರ ಮಾಡಬೇಕಲ್ಲ,” ಎಂದು ಹೇಳುತ್ತಾ ಅವಳಿಗೆ ಒಂದು ಗ್ಲಾಸ್‌ ಕೊಟ್ಟು ಮತ್ತೊಂದನ್ನು ತನ್ನ ಕೈಯಲ್ಲಿಟ್ಟುಕೊಂಡು ಹೀರತೊಡಗಿದ.

ಸುರೇಖಾ ನಿಧಾನವಾಗಿ ಕೂಲ್ ‌ಡ್ರಿಂಕ್ಸ್ ಕುಡಿಯತೊಡಗಿದಳು. ಇಬ್ಬರೂ ಅಷ್ಟಿಷ್ಟು ಮಾತುಕತೆ, ತುಂಟಾಟದಲ್ಲಿ ಮೈಮರೆತು ಕೂಲ್ ‌ಡ್ರಿಂಕ್ಸ್ ಗ್ಲಾಸ್‌ ಖಾಲಿ ಮಾಡಿದರು. ನವೀನ್‌ ಆ ಎರಡೂ ಗ್ಲಾಸ್‌ ತೆಗೆದುಕೊಂಡು ಅಡುಗೆಮನೆಗೆ ಹೋದ. ಆಗ ಸುರೇಖಾ ಹೊರಗೆ ಬಾಗಿಲು ಬಂದಾಗಿರುವ ಸದ್ದು ಕೇಳಿಸಿಕೊಂಡಳು. ಆದರೆ ಆಕೆ ಅದರತ್ತ ಹೆಚ್ಚು ಗಮನಕೊಡಲಿಲ್ಲ. ನವೀನ್‌ ಒಳಗೆ ಬರುವ ಹೊತ್ತಿಗೆ ಅವಳಿಗೆ ಕಣ್ಣುಗಳಲ್ಲಿ ತೇಲುತ್ತಿರುವ ಅನುಭವನ್ನುಂಟು ಮಾಡಿತು.

ನವೀನ್‌, ಸುರೇಖಾ ಅಷ್ಟಿಷ್ಟು ತುಂಟಾಟದ ಮಾತುಗಳನ್ನು ಆಡಲಾರಂಭಿಸಿದರು. ಬಳಿಕ ನವೀನ್‌ ಅವಳನ್ನು ತನ್ನ ಬಾಹುಗಳಲ್ಲಿ ಬಂಧಿಸಿ ಅವಳೊಂದಿಗೆ ಚೆಲ್ಲಾಟ ಆಡಲು ನಿರ್ಧರಿಸಿಬಿಟ್ಟಿದ್ದ.

ಸುಮಾರು 1 ಗಂಟೆಯ ಬಳಿಕ ಇಬ್ಬರ ನಶೆಯೂ ಇಳಿಯಲಾರಂಭಿಸಿತು. ಆಗ ಸುರೇಖಾ ತನ್ನನ್ನು ಅರೆನಗ್ನಾವಸ್ಥೆಯಲ್ಲಿ ಕಂಡು ಕ್ರೋಧದಿಂದ ಚೀರಿದಳು. ನವೀನ್‌ನನ್ನು ಮನಬಂದಂತೆ ಬಯ್ದು ಬಾಥ್‌ ರೂಮಿಗೆ ಓಡಿಹೋಗಿ ತನ್ನ ಬಟ್ಟೆಗಳನ್ನು ಸರಿಪಡಿಸಿಕೊಂಡಳು. ಮುಖ ತೊಳೆದುಕೊಂಡು ಅಸ್ತವ್ಯಸ್ತಗೊಂಡಿದ್ದ ಕೂದಲನ್ನು ಬಾಚಿಕೊಂಡು ಲಗುಬಗೆಯಿಂದ ಆ ಮನೆಯಿಂದ ಹೊರಗೆ ಹೋದಳು.

ಅಷ್ಟರಲ್ಲಿಯೇ ನವೀನ್‌ ಹೊರಬಂದು ಅವಳ ಎರಡೂ ಕೈ ಹಿಡಿದು ಕ್ಷಮೆ ಕೇಳತೊಡಗಿದ, “ನಿನಗ ಖರೇ ಹೇಳ್ತೀನಿ, ನನಗ ಅಂಥಾ ಕೆಟ್ಟ ಯೋಚನಿ ಏನ ಇರ್ಲಿಲ್ಲ. ನೀವು ಬರೋ ಸ್ವಲ್ಪ ಹೊತ್ತಿಗೆ ಮುಂಚೆ ನನ್ನ ಗೆಳ್ಯಾ ಬಂದಿದ್ದ. ಅವನಿಗೆ ಕಂಪನಿ ಕೊಡಾಕ ನಾ ಕೂಡ 2 ಪೆಗ್‌ ಹಾಕಿದ್ನಿ. ನಿನ್ನನ್ನ ನೋಡಿದ ಮ್ಯಾಲಾ ನನ್ನಲ್ಲಿ ಕಾಮವಾಸನಿ ಏರ್ತಾ ಹೋತು. ನಾವು ಕೂಲ್ ‌ಡ್ರಿಂಕ್ಸ್ ಗ್ಲಾಸ್‌ನ್ಯಾಗೂ ಕೂಡ ವಿಸ್ಕಿ ಬೆರೆಸಿದ್ನಿ. ನನಗ ನನ್ನ ಈ ಪಾಪದ ಕೆಲಸದ ಬಗ್ಗೆ ಈಗ ಪಶ್ಚಾತ್ತಾಪ ಆಗಾಕ ಹತೆತಿ. ಆ ಬಗ್ಗೆ ನಾ ನಿನ್ನ ಕ್ಷಮಾ ಕೂಡ ಕೇಳ್ತೀನಿ. ಪ್ಲೀಸ್‌ ನನ್ನ ಬಗ್ಗೆ ತಪ್ಪು ತಿಳ್ಕೋಬ್ಯಾಡ. ಅದನ್ನ ಒಂದ ಆಕಸ್ಮಿಕ ಘಠನಾ ಅಂತಾ ತಿಳದು ಮರ್ತಬಿಡು. ಅಂದ್ಹಾಂಗ ನಾ ಮದುವಿ ಆಗೊ ನಿರ್ಧಾರ ಕೂಡ ಮಾಡೇ ಬಿಟ್ಟೇಲ್ಲ.”

“ಹೀಗ್‌ ಹೇಡಿತನದಿಂದ ಮಾತೋಡದನ್ನ ನಿಲ್ಲಿಸು. ನೀ ಹೀಂಗ್‌ ಮಾಡ್ತಿ ಅಂತ ನಾ ಕನಸ ಮನಸಿನ್ಯಾಗೂ ಅಂದ್ಕೊಂಡಿರಲಿಲ್ಲ. ಯಾವ ಹುಡುಗಿ ಜತಿ ಮದ್ವಿ ಆಗೋ ನಿರ್ಧಾರ ಮಾಡಿರ್ತೀರೋ ಆಕಿ ಜತಿ ಮದುವಿಗೆ ಮುಂಚೆಯೇ ಅವಳ ಮ್ಯಾಲಾ ಬಲಾತ್ಕಾರ ಮಾಡೋ ಪರಂಪರಿ ನಿಮ್ಮ ಮನೆತನ, ನಿಮ್ಮ ಸಮಾಜದಾಗ ಇರಬಹುದು. ವಕ್ರಬುದ್ಧಿಯವನೆ, ನನ್ನ ದಾರಿಗೆ ಯಾಕ್‌ ಅಡ್ಡ ಆಗೀದೀ ದೂರ ಸರಿ. ನಿನ್ನಂಥ್ನ ಮುಖಕ್ಕ ನಾ ಛೀ ಥೂ ಅಂತೀನಿ,” ಎನ್ನುತ್ತಾ ಕಣ್ಣೀರು ಒರೆಸಿಕೊಳ್ಳುತ್ತ ಸುರೇಖಾ ವೇಗವಾಗಿ ಹೆಜ್ಜೆ ಹಾಕುತ್ತ ಹೊರನಡೆದಳು. ರಸ್ತೆ ಬದಿಯಲ್ಲಿ ನಿಂತಿದ್ದ ಆಟೋದಲ್ಲಿ ಹತ್ತಿದಳು.

ಸುಮಾರು ಅರ್ಧಗಂಟೆಯ ಪ್ರಯಾಣದ ಅವಧಿಯಲ್ಲಿ ಅವಳು ಕಣ್ಣೀರು ಸುರಿಸುತ್ತ, ಒರೆಸಿಕೊಳ್ಳುತ್ತ ತನ್ನನ್ನು ತಾನು ಹಳಿದುಕೊಳ್ಳುತ್ತಿದ್ದಳು, `ನಾ ಯಾಕ್‌ ಅವನ ಮನಿಗಿ ಏಕಾಂತದಾಗ ಭೇಟಿ ಆಗಾಕ ಹೋದ್ನಿ?’ಸುರೇಖಾ ರಸ್ತೆಯ ತುದಿಯಲ್ಲಿಯೇ ಇಳಿದಳು. ಅಷ್ಟೊತ್ತಿಗಾಗಲೇ ಕತ್ತಲು ಆವರಿಸಿಕೊಂಡಿತ್ತು. ಅವಳು ನಿಧಾನವಾಗಿ ಎಚ್ಚರಿಕೆಯಿಂದ ಮನೆಯೊಳಗೆ ಕಾಲಿರಿಸಿದಳು. ಅಲ್ಲಿ ಕೇವಲ ಅವ್ವಾ ಇದ್ದುದನ್ನು ನೋಡಿ ಅವಳು ನೆಮ್ಮದಿಯ ನಿಟ್ಟುಸಿರುಬಿಟ್ಟಳು. ಅಪ್ಪ ಇನ್ನೂ ಕಾರ್ಖಾನೆಯಿಂದ ಮನೆಗೆ ವಾಪಸಾಗಿರಲಿಲ್ಲ. ಅಣ್ಣ ಕಂಪನಿ ಕೆಲಸದ ನಿಮಿತ್ತ ಟೂರ್‌ಗೆ ಹೋಗಿದ್ದ.

ಅಳು ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತ ಅಮ್ಮನ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ತನ್ನ ಕೋಣೆಯ ಕಡೆ ಹೆಜ್ಜೆ ಇಡುತ್ತಿರುವಾಗಲೇ  ಅಮ್ಮನ ಅನುಭವಿ ಕಣ್ಣುಗಳು ಆಕೆಯ ಮುಖಮಂಡಲವನ್ನು ನೋಡಿ ಚಿಂತಾಕ್ರಾಂತ ಸ್ವರದಲ್ಲಿ ಹೇಳಿದರು,?

“ಸುರೇಖಾ, ನಿನ್ನ ಆರೋಗ್ಯ ಚಲೋ ಐತಿ ಇಲ್ಲೋ? ಎಲ್ಲಿ ಬಿದ್ದಿಗಿದ್ದ ಬಂದೀ ಏನ ಮತ್ತ? ನಿನ್‌ ಹಣಿ ಮ್ಯಾಗ್‌ ಈ ಗುರ್ತ ಏನು? ನಿನ್ನೊಂದಿಗೆ ಯಾದಾದ್ರೂ ದುರ್ಘಟನಾ….?”

“ನೀ ಹೇಳೋದು ಖರೇ ಅವ್ವಾ. ನನ್ನ ಮ್ಯಾಲ ಇಂಥ ದೊಡ್ಡ ದುರ್ಘಟನಾ ನಡೀತು. ಒಬ್ಬ ವಿಶ್ವಾಸಘಾತಿ ಮನುಷ್ಯ ನನ್ನ ದೇಹದ ಮ್ಯಾಲ ಅಷ್ಟ ಅಲ್ಲ, ನನ್ನ ವ್ಯಕ್ತಿತ್ವದ ಮ್ಯಾಲನೂ ದೊಡ್ಡ ಗಾಯ ಮಾಡಿಬಿಟ್ಟಾನ,” ಎಂದು ಹೇಳುತ್ತಾ ಆಕೆ ಕಣ್ಣೀರು ಸುರಿಸತೊಡಗಿದಳು. ಬಳಿಕ ಅಪ್ಪ ಬರುವ ಮುನ್ಸೂಚನೆ ಕಂಡು ತನ್ನ ಜೊತೆ ನಡೆದ ಘಟನೆಯನ್ನು ಸವಿಸ್ತಾರವಾಗಿ ಹೇಳಿದಳು.

ಮಗಳ ಮೇಲೆ ನಡೆದ ಘಟನೆಯ ಬಗ್ಗೆ ಸುರೇಖಾಳ ಅವ್ವನ ಉಸಿರಾಟದ ಗತಿ ತೀವ್ರವಾದಂತೆ ಭಾಸವಾಯಿತು. ಕೆಲವು ನಿಮಿಷಗಳ ಮಟ್ಟಿಗೆ ಅವರ ದೇಹ ಭಾರವಾದಂತೆ ಅನಿಸಿತು. ಬಳಿಕ ಅವರು ತಮ್ಮ ಮೇಲೆ ತಾವು ನಿಯಂತ್ರಣ ತಂದುಕೊಳ್ಳುತ್ತ ಮಗಳ ತಲೆಯ ಮೇಲೆ ಕೈಯಿಟ್ಟು, “ಸುರೇಖಾ, ನಿನ್ನ ಜತಿ ಏನು ನಡೀತೊ ಅದು ನನ್ನ ಹೃದಯಾನ ಹಿಂಡಿಬಿಟ್ಟಿತು. ನೀ ಈಗ ಅಳೋದು ಕರೆಯೋದು ಬಂದ್‌ ಮಾಡು. ನಿನ್ನ ಈ ದುಃಖದ ಸುದ್ದಿ ಅಪ್ಪನ ಕಿವಿಗ ಬೀಳದಾಂಗ ನೋಡ್ಕೋ. ಅವರು ಎಂಥಾ ಕೋಪಿಷ್ಟರು ಅಂತಾ ನಿಂಗ ಗೊತೆತಲ್ಲ. ಅವರು ಬರೋ ಹೊತ್ತಾತು. ನೀ ಹೋಗಿ ರೂಮಿನ್ಯಾಗ ವಿಶ್ರಾಂತಿ ಮಾಡು.”

“ಹೌದ ಅವ್ವಾ, ನೀ ಹೇಳೋದು ಖರೆ,” ಎಂದು ಹೇಳಿ ತನ್ನ ರೂಮಿಗೆ ಹೋಗಿ ವಿಶ್ರಾಂತಿ ಪಡೆಯತೊಡಗಿದಳು.

“ನಿಂಗ ಜ್ವರ ಬಂದೈತಿ, ಗುಳಿಗಿ ತಗೊಂಡು ಮಲಗ್ಯಾಳ ಅಂತ ನಾ ನಿನ್‌ ಅಪ್ಪನಿಗೆ ಹೇಳ್ತೀನಿ,  ನೀ ಮಲಗು. ಇನ್ನೊಂದು ಮಾತು. ನೀ ಅಪ್ಪನ ಮುಂದ ಹೆಚ್ಚಿಗೆ ಏನೂ ಮಾತಾಡಬ್ಯಾಡ ತುಟಿ ಹೊಲ್ಕೊಂಡು ಇರ್ಬೇಕು. ಇದರಾಗನ ನಮ್ಮ ಕುಟುಂಬದ ಮರ್ಯಾದಿ ಐತಿ.”

“ಆಯ್ತವ್ವ,” ಎಂದು ಹೇಳಿ ಆಕೆ ಮಗ್ಗಲು ಬದಲಾಯಿಸಿದಳು.

ಈ ಘಟನೆಯ ಬಳಿಕ ಆಕೆಗೆ ತನ್ನ ಜೀವನ ಅಷ್ಟೇ ಅಲ್ಲ, ಇಡೀ ಸಂಸಾರವೇ ನಿರರ್ಥಕ ಎನಿಸತೊಡಗಿತ್ತು. ಎಂ.ಎ. ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದ ಬಳಿಕ ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಬೇಕೆಂಬ ಅವಳ ಇಚ್ಛೆ ಹೆಚ್ಚು ಕಡಿಮೆ ಸತ್ತೇ ಹೋಗಿತ್ತು.

ಸುಮಾರು 1 ವಾರದ ಬಳಿಕ ಅಪ್ಪ ಕಾರ್ಖಾನೆಗೆ ಹೋದ ಬಳಿಕ ಆಕೆ ತನ್ನ ಮನಸ್ಸಿನ ಮಾತನ್ನು ಅವ್ವನ ಮುಂದೆ ಹೇಳಿಕೊಂಡಳು, “ಅವ್ವಾ, ನಾ ಇಲ್ಲೇ ಇದ್ರ ಕೊರಗಿ ಕೊರಗಿ ಸತ್ತೇ ಹೋಗ್ತಿನಿ ಅಂತಾ ಅನಸಾಕ ಹತ್ತೇತಿ. ನನಗ ಈಗ ಕಣ್ಮುಂದೆ ಬರ್ತಿರೋದು ಸಿದ್ದಾಪುರ ಮಠದ ಸ್ವಾಮಿಗಳು ಮಾತ್ರ.

“ಅವ್ವಾ, ನೀ ಹಿಂದಿನ ಸಲ ನನ್ನ ಅಲ್ಲಿಗ ಕರ್ಕೊಂಡು ಹೋಗಿದ್ರ್ಯಲ್ಲ, ಅವರ ಪ್ರವಚನ ನಾ ಬರೀ ಒಂದ ಸಲ ಕೇಳಿದ್ರೂ ಅದು ನನ್ನ ಮ್ಯಾಲಾ ಬ್ಹಾಳ ಪ್ರಭಾವ ಬೀರಿತ್ತು. ನನ್ನ ಮನಸ್ಸಿಗೂ ಬ್ಹಾಳ ಸಮಾಧಾನ ಆಗಿತ್ತು. ಇನ್ನೊಂದ ಸಲ ನನ್ನನ್ನ ಅಲ್ಲಿಗೆ ಕರ್ಕೊಂಡ ಹೋಗು,” ಎಂದಳು.

ಮಗಳ ಮನಸ್ಥಿತಿ ಅರಿತಿದ್ದ ಅವ್ವ ಮರುದಿನವೇ ಆಕೆಯನ್ನು ಸಿದ್ದಾಪುರ ಮಠಕ್ಕೆ ಕರೆದುಕೊಂಡು ಹೋದರು. ಸ್ವಾಮಿಗಳು ಹಾಗೂ ಭಕ್ತ ಸಮುದಾಯದ ಮಧ್ಯೆ ಸುರೇಖಾ ವಾಸ್ತವ ಸ್ಥಿತಿಗೆ ಬರತೊಡಗಿದ್ದಳು. ಒಂದು ವಾರದ ಬಳಿಕ ಅವ್ವ ಊರಿಗೆ ವಾಪಸ್ಸಾದರು. ಊರಿಗೆ ಬರುವ ಮುನ್ನ ಅವರು ಸುರೇಖಾಳನ್ನು ತಮ್ಮ ಬಾಲ್ಯದ ಗೆಳತಿ ಗೀತಾಳ ಬಳಿ ಬಿಟ್ಟುಬಂದಿದ್ದರು. ಸುರೇಖಾ ಅವರ ರೂಮಿನಲ್ಲಿಯೇ ಇದ್ದುಕೊಂಡು ಆಶ್ರಮದ ಸೇವ ಮಾಡುತ್ತ ತನ್ನ ನೋವನ್ನು ಮರೆಯಲಾರಂಭಿಸಿದಳು.

ಅತ್ತ ನವೀನ್‌ ಕೂಡ ವಾರಕ್ಕೊಂದು ಸಲವಾದರೂ ಊರಿಗೆ ಬಂದು ಸುರೇಖಾಳ ತಾಯಿಯ ಬಳಿ ತನ್ನ ತಪ್ಪಿಗೆ  ಕ್ಷಮೆ ಯಾಚಿಸುತ್ತಿದ್ದ. ಅವನು ಸುರೇಖಾಳಿಗೂ ಅನೇಕ ಸಲ ಫೋನ್‌ ಮಾಡಿದ್ದ. ಆದರೆ ಅವನ ನಂಬರ್‌ ಕಾಣುತ್ತಿದ್ದಂತೆಯೇ ಆಕೆ ಫೋನ್‌ ಕಟ್‌ ಮಾಡುತ್ತಿದ್ದಳು, ತೊಂದರೆ ಅತಿಯಾದರೆ ಸ್ವಿಚ್‌ ಆಫ್‌ ಕೂಡ ಮಾಡುತ್ತಿದ್ದಳು. ಅವನು ಬೇರೆ ನಂಬರ್‌ನಿಂದ ಫೋನ್‌ ಮಾಡಿದಾಗ ಆಕೆ ಅವನಿಗೆ ಚೆನ್ನಾಗಿ ಬಯ್ದುಬಿಟ್ಟಿದ್ದಳು. ಸುಮಾರು 3 ತಿಂಗಳ ಕಾಲ ಆ ಆಶ್ರಮದಲ್ಲಿದ್ದ, ಬಳಿಕ ದೂರದ ಗಿರಿಜಾಪುರದ ಆಶ್ರಮಕ್ಕೆ ಹೋದಳು. ಅಲ್ಲಿ ಇದ್ದ 15 ದಿನಗಳಲ್ಲಿಯೇ ಆಕೆಗೆ ತಾನು ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವಾಯಿತು. ಆ ಆಶ್ರಮದ ಸೂತ್ರದಾರ 40-42 ವಯಸ್ಸಿನ ಹೀರಾನಂದ ಸ್ವಾಮೀಜಿ. ಅವನೊಬ್ಬ ವಿಲಾಸಿ ಪ್ರವೃತ್ತಿಯ ಕಾಮುಕ. ಕಳೆದ ಅನೇಕ ವರ್ಷಗಳಿಂದ ಬಡ ಹೆಣ್ಣುಮಕ್ಕಳನ್ನು ಶೋಷಿಸುತ್ತ ಬಂದಿದ್ದ. ಸುರೇಖಾಳನ್ನು ನೋಡುತ್ತಲೇ ಅವಳ ಸೌಂದರ್ಯ ಸೂರೆ ಹೊಡೆಯಬೇಕೆಂದು ಅವನು ಆಗಲೇ ನಿರ್ಧರಿಸಿಬಿಟ್ಟಿದ್ದ.

ಒಂದು ದಿನ ಹೀರಾನಂದ ಸ್ವಾಮಿ ಸುರೇಖಾಳನ್ನು ತನ್ನ ಪೀಠದ ಬಳಿ ಕರೆದು ಅವಳತ್ತ ತದೇಕ ಚಿತ್ತದಿಂದ ಕಾಮುಕ ದೃಷ್ಟಿಯಿಂದ ನೋಡುತ್ತಾ, “ನಿಮ್ಮಂಥ ಸುಶಿಕ್ಷಿತ, ಸುಂದರ, ಗುಣಸಂಪನ್ನ ಯುವತಿಯ ಕೊರತೆ ಆಶ್ರಮಕ್ಕಿತ್ತು. ವರ್ಷಾನುವರ್ಷಗಳಿಂದ ನಾನು ನಿಮ್ಮದೇ ನಿರೀಕ್ಷೆಯಲ್ಲಿದ್ದೆ ಅನಿಸುತ್ತೆ. ನಮ್ಮ ಹಿರಿಯ ಸ್ವಾಮೀಜಿಗಳಿಗೆ ಸಾಕಷ್ಟು ವಯಸ್ಸಾಗಿದೆ. ಹಲವು ರೋಗಗಳು ಅವರನ್ನು ಆವರಿಸಿಕೊಂಡಿವೆ. ಅವರು ಈ ಜಗತ್ತಿನಿಂದ ಯಾವಾಗ ದೂರವಾಗುತ್ತಾರೋ ಗೊತ್ತಿಲ್ಲ. ಅವರ ಬಳಿಕ ನಾನೇ ಈ ಪೀಠವನ್ನು ಅಲಂಕರಿಸುತ್ತೇನೆ. ಒಂದು ವೇಳೆ ನೀವು ನನ್ನ ಪ್ರತಿಯೊಂದು ಮಾತನ್ನು ಒಪ್ಪಿಕೊಂಡು ಮುನ್ನಡೆದರೆ ಎರಡೂ ಆಶ್ರಮಗಳಲ್ಲಿ ನೀ ಮಹಾರಾಣಿಯ ಹಾಗೆ ಜೀವನ ಸಾಗಿಸಬಹುದು.” ಎಂದ.

“ಸ್ವಾಮೀಜಿ ನಾ ಖಾಯಂ ಆಗಿ ಇಲ್ಲೇ ಇರ್ಬೇಕಂತ ಇನ್ನೂ ಯಾವ ನಿರ್ಧಾರ ತಗೊಂಡಿಲ್ಲ. ನಾ ವಿಚಾರ ಮಾಡಿ ನಿಮಗ ಅದರ ಉತ್ತರಾ ತಿಳಿಸ್ತೀನಿ,” ಎಂದು ಹೇಳುತ್ತ ಆಕೆ ಕೋಣೆಯಿಂದ ಹೊರಬಂದಳು.

ಸುರೇಖಾ ತನ್ನ ಕೋಣೆಗೆ ಬಂದು ವಿಚಾರ ಮಾಡಲಾರಂಭಿಸಿದಳು, `ಯಾವ ವ್ಯಕ್ತಿ ತನ್ನ ಗುರುವಿನ ಸಾವನ್ನು ಬಯಸುತ್ತಾನೊ, ಅವನು ಕೇವಲ ಕಾಮುಕನಷ್ಟೇ ಅಲ್ಲ, ಸ್ವಾರ್ಥಿ, ಅಹಂಕಾರಿ ಮತ್ತು ವ್ಯಭಿಚಾರಿ ಕೂಡ’. ಹೀಗಾಗಿ ಆಕೆ ಆ ಕ್ಷಣವೇ ಸಿದ್ದಾಪುರ ಆಶ್ರಮಕ್ಕೆ ಇಲ್ಲಿ ತನ್ನೂರಿಗೆ ಹೋಗುವ ಬಗ್ಗೆ ನಿರ್ಧಾರ ಮಾಡಿದಳು.

ಅಷ್ಟರಲ್ಲಿಯೇ ಅವಳಿಗೆ ಮೊಬೈಲ್‌ನ ರಿಂಗ್‌ ಟೋನ್‌ ಕೇಳಿಸಿ ಅವಳ ಧ್ಯಾನ ಭಂಗವಾಯಿತು. ಅವಳು ಅಚ್ಚರಿಯಿಂದಲೇ `ಹಲೋ,” ಎಂದಳು, ಅತ್ತ ಕಡೆಯಿಂದ ಅವ್ವನ ಧ್ವನಿ ಕೇಳಿಸಿತು, “ಸುರೇಖಾ, ನಾಳೆ ನವೀನ್‌ ಗಿರಿಜಾಪುರದ ಆಶ್ರಮಕ್ಕ ಬರ್ತಾನ. ಅವ್ನ ಜತಿ ಒರಟಾಗಿ ನಡ್ಕೋಬ್ಯಾಡ. ಅವ್ನ ತಪ್ಪನ್ನ ನೀ ಮನಸ್ಸಿಂದ ಕ್ಷಮಿಸಿ ಅವನ್ನ ಮದುವಿ ಪ್ರಸ್ತಾಪನೂ ಒಪ್ಕೊ.”

“ಅವ್ವಾ, ನೀ ಏನೂ ಚಿಂತಿ ಮಾಡಬ್ಯಾಡ. ಆ ಪ್ರಸಂಗ ನಡದ ಬ್ಹಾಳ ದಿನ ಆತು. ಈಗ ನನ್ನ ನಡವಳಿಕೆದಾಗೂ ಬ್ಹಾಳ ಸುಧಾರಣಿ ಆಗೇತಿ. ನಾ ಈಗ ಸ್ವಲ್ಪ ಎಚ್ಚರಿಕಿಯಿಂದ ಹೆಜ್ಜೆ ಇಡಾಕಹತ್ತೀನಿ. ನವೀನ್‌ ಇಲ್ಲಿಗೆ ಬಂದ ಮ್ಯಾಲ ನಿನಗ ಫೋನ್‌ಮಾಡ್ತೀನಿ,” ಎಂದು ಹೇಳಿ ಫೋನ್‌ ಕಟ್‌ ಮಾಡಿದಳು.

ನವೀನನ ಆಗಮನದ ಸುದ್ದಿ ಅವಳಿಗೆ ಈಗ `ಮುಳುಗುತ್ತಿದ್ದವಳಿಗೆ ಹುಲ್ಲಿನ ಕಡ್ಡಿಯ ಆಸರೆ ದೊರೆತಂತೆ,’ ಭಾಸವಾಗುತ್ತಲಿತ್ತು.

kanta-nikal-gaya-story-2

ಅಷ್ಟರಲ್ಲಿಯೇ ಅತ್ತಕಡೆಯಿಂದ ಗೀತಾ ಆಂಟಿ ಕೆಮ್ಮಿದ ಶಬ್ದ ಕೇಳಿ ತಿರುಗಿ ನೋಡಿದಳು. ಕೈ ಸನ್ನೆ ಮಾಡಿ ಅವರು ಆಕೆಯನ್ನು  ತಮ್ಮ ಹತ್ತಿರ ಕರೆಸಿಕೊಂಡು, “ಸುರೇಖಾ ಯಾರ ಫೋನ್‌.”

“ಅವ್ವ ಮಾಡಿದ್ರು.”

“ಏನ್‌ ಹೇಳಿದ್ರು?”

“ಅಂಥಾ ವಿಶೇಷ ಏನಿಲ್ರಿ ಆಂಟಿ, ಮನಿ ಸಮಾಚಾರ ಅಷ್ಟ…..”

“ನೋಡ ಸುರೇಖಾ, ನೀ ನನ್ನಿಂದ ಏನೂ ಮುಚ್ಚಿಡಬ್ಯಾಡ. ನಿನ್ನ ಅವ್ವ ನನ್ನ ಬಾಲ್ಯದ ಗೆಳತಿ. ಸಿದ್ದಾಪುರ ಮಠಕ್ಕ ನಿನ್ನ ಕರ್ಕೊಂಡು ಬಂದ ದಿಸಾನೇ ನನಗ ಎಲ್ಲಾ ವಿಷಯಾದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ರು. ನಿನ್ನ ಪ್ರೀತಿಸ್ತಿದ್ದ ಹುಡುಗಾ ನಿನಗ ಮೋಸಾ ಮಾಡ್ಯಾನು ಅಂತಾನೂ ಹೇಳಿದ್ರು. ಆದ್ರ ಆ ಹುಡುಗ ತನ್ನ ತಪ್ಪಿಗೆ ಕ್ಷಮಾ ಕೂಡ ಕೇಳ್ಯಾನಂತ. ಅಂವ ನಿನ್ನ ಬ್ಹಾಳ ಇಷ್ಟಪಡ್ತಾನ ಆದಷ್ಟು ಬೇಗ ನಿನ್ನ ಜತಿ ಮದುವಿ ಆಗಾಕೂ ಸಿದ್ಧ ಆಗ್ಯಾನ. ಸಿದ್ದಾಪುರ ಆಶ್ರಮದಾಗ ಇದ್ದಾಗನ ನಾ ನಿನಗ ಹೇಳಿದ್ನಿ, ಈ ಹೀರಾನಂದ ಸ್ವಾಮೀಜಿ ದೊಡ್ಡ ಸ್ವಾಮೇರ ಹಂಗ ಒಳ್ಳೆಯವನಲ್ಲ. ಇನೊಬ್ಬ ಕಾಮಿ ಸ್ವಾಮಿ. ಬಡ ಹುಡುಗಿರಿಗೆ ರೊಕ್ಕದ ಆಸಿ ತೋರಿಸಿ ಅವರನ್ನ ಉಪಯೋಗಿಸಿಕೊಳ್ತಾನ. ಅವನ ಕೆಲವು ಜನ ಪುಂಡ ಶಿಷ್ಯರು ಸಹಿತ ಹೀಂಗ ಮಾಡಿ ಜನರ ಕಡಿ ಛೀ ಥೂ ಅನಿಸಿಕೊಂಡಿದ್ದಾರೆ.

“ಇಂದ ಮುಂಜಾನಿನ ನಿನ್ನ ಅವ್ವಂದ ಫೋನ್‌ ಬಂದಿತ್ತು. ನಾಳಿ ಮುಂಜಾನಿ ನವೀನ್‌ ಇಲ್ಲಿಗೆ ಬರ್ತಾನಂತ. ಅಂವ ಮದುವಿಗೆ ಮುಂಚೇನ ನಿನ್ನ ಮತ್ತು ಅವ್ನ ಸಂಬಂಧಕ್ಕೆ ಕಳಂಕ ತಂದಾನ ಅನ್ನೊಂದು ಖರೆ. ಆದ್ರ ಅಂವ ನಿನ್ನ ಬ್ಹಾಳ ಇಷ್ಟಪಡ್ತಾನ. ನಿನ್ನ ಇಲ್ಲಿಂದ ಕರ್ಕೊಂಡು ಹೋಗ್ಬೇಕು ಅಂತಾನ ಅಂವ ಇಲ್ಲಿಗೆ ಬರ್ತಿದ್ದಾನಂತ. ಅವ್ನ ಜತಿ ನೀ ಊರಿಗೆ ಹೋಗಾಕ ಒಪ್ಪಲಿಲ್ಲಾಂದ್ರ ಅವನೂ ಇಲ್ಲೇ ಠಿಕಾಣಿ ಹೂಡ್ತಾನಂತ. ನೀ ಇವತ್ತಿನ ಬಗ್ಗೆ ಸ್ವಲ್ಪ ಯೋಚನಿ ಮಾಡಿ ನಿರ್ಧಾರ ತಗೊ.

“ಈ ಸಾಧು ಸಂತರ ಪ್ರವಚನ ಅಂದ್ರ ವಯಸ್ಸಾದವರಿಗೆ ಕೇಳಾಕ ಬ್ಹಾಳ ಛಂದ ಅನಿಸ್ತಾ. ಅವ್ರ ಸ್ವರ್ಗ ನರಕದ ಬಗ್ಗೆ ಚಮತ್ಕಾರಿ ಶಬ್ದ ಬಳಸಿ ಮನಸ್ಸನ್ನ ತಮ್ಮ ಕಡಿ ಏಳ್ಯಾಕ್‌ ನೋಡ್ತಾರು. ಈ ಹೀರಾನಂದ ಸ್ವಾಮೀಜಿ ಬಗ್ಗೆ ನಾ ನಿನಗ ಹೆಚ್ಚಿಗೆ ಏನೂ ಹೇಳ್ಬೇಕಾಗಿಲ್ಲ. ಅದ ನಿನಗ ಎಲ್ಲಾ ಗೊತ್ತ ಐತಿ. ಒಂದ ಒಳ್ಳೆ ಅವಕಾಶನ ಸ್ವಾಗತಿಸೋ ನಿರ್ಧಾರ ಮಾಡು. ಒಂದ ವ್ಯಾಳೆ ನೀ ಅದನ್ನ ತಿರಸ್ಕಾರ ಮಾಡಿದ್ರ ನಿನ್‌ ಮುಂದಿನ ಬಾಳೇ ಅತಂತ್ರ ಆಗೆತಿ. ಏನ್‌ ಮಾಡ್ತಿ ನೀನ ನಿರ್ಧಾರ ಮಾಡು,” ಎಂದರು.

“ಆಂಟಿ, ನವೀನ್‌ ನನಗ ಮೊದಲಿಗೆ ಕೆಟ್ಟ ಹುಡುಗನಂಗ ಕಾಣಿಸ್ತಿದ್ದ. ಈಗ ನನಗ ಅವ್ನ ಬಗ್ಗೆ ಅಂಥಾ ಯಾವ ಕೆಟ್ಟ ಯೋಚನೀ ಏನೂ ಇಲ್ಲ,” ಎಂದಳು. ಮರುದಿನ ಸಂಜೆ 5 ಗಂಟೆಗೆ ನವೀನ್‌ ಆಶ್ರಮ ತಲುಪುತ್ತಿದ್ದಂತೆಯೇ ಗೀತಾ ಆಂಟಿಯನ್ನು ಭೇಟಿಯಾದ. ಆಗ ಸುರೇಖಾ ದೇವಸ್ಥಾನದಲ್ಲಿ ಕುಳಿತಿದ್ದಳು. ಗೀತಾ ಆಂಟಿ ಕರೆಯುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ಆಕೆ ರೂಮಿಗೆ ವಾಪಸ್ಸಾದಳು.

ಸುರೇಖಾಳನ್ನು ನೋಡುತ್ತಿದ್ದಂತೆಯೇ ನವೀನ್‌ ಮುಗುಳ್ನಕ್ಕು ವಂದಿಸಿದ. ಅದಕ್ಕೆ ಪ್ರತಿಯಾಗಿ ಸುರೇಖಾ ಸಹ ತಲೆತಗ್ಗಿಸಿ ಅವನಿಗೆ ವಂದನೆ ಸಲ್ಲಿಸಿದಳು.

ಆಗ ಗೀತಾ ಆಂಟಿ ನಗುತ್ತಾ, “ನೀವಿಬ್ರೂ ಮೊದಲಿನ ಹಂಗ ಎರಡ ದೇಹ ಒಂದ ಜೀವದಂಗನ ಇರ್ಬೇಕು. ನವೀನ್‌ ನೀ ಇನ್ನುಂದ ನಮ್ಮ ಹುಡಿಗಿಗ ಈಗ ಕೊಟ್ಟಿದ್ಯೆಲ್ಲ ಹಾಂಗ ತೊಂದರಿ ಕೊಡಬ್ಯಾಡ. ಕೊಟ್ರ ಹೆಣ್ಣು ಹುಲಿಯಂಗ ನಿನ್ನ ಮ್ಯಾಲ ಹ್ಯಾಂಗ ಸೇಡ ತೀರಿಸಿಕೊಳ್ತಾಳೊ ಹೇಳಾಕ ಬರೂದಿಲ್ಲ. ನಿಮ್ಮ ದಾರ್ಯಾಗ ಅಡ್ಡ ಇದ್ದ ಮುಳ್ಳ ಎಲ್ಲ ಈಗ ನಿರ್ಣಾಮ ಆಗ್ಯಾದೆ. ಒಳ್ಳೆ ದಾರ್ಯಾಗ ನಡಿಯೋ ಅವಕಾಶ ಸಿಕ್ಕಾಗ ಅದನ್ನ ಬಿಟ್ಟುಕೊಡಬ್ಯಾಡಿ,” ಎಂದು ಇಬ್ಬರಿಗೂ ಬುದ್ಧಿವಾದ ಹೇಳಿದಳು. ಮರುದಿನ ಮುಂಜಾನೆ 7 ಗಂಟೆಗೆ ಆಶ್ರಮದ ಗೇಟಿನ ಮುಂದೆ ಒಂದು ಟ್ಯಾಕ್ಸಿ ಬಂದು ನಿಂತಿತ್ತು. ನವೀನ್‌ ಮತ್ತು ಸುರೇಖಾರನ್ನು ಬೀಳ್ಕೊಡಲು ಅಲ್ಲಿಗೆ ಸ್ವತಃ ಗೀತಾ ಆಂಟಿ ಕೂಡ ಹಾಜರಿದ್ದರು. ಕಾರಿನ ಹಿಂದಿನ ಸೀಟಿನ ಮೇಲೆ ಕುಳಿತ ಸುರೇಖಾ ಹಾಗೂ ನವೀನ್‌ ಮಧ್ಯೆ ಸ್ವಲ್ಪ ಅಂತರವೇನೊ ಇತ್ತು. ಆದರೆ, ಅವರ ಮನಸ್ಸಿನಲ್ಲಿ ಜಮೆಗೊಂಡಿದ್ದ ಧೂಳು ಸಾಕಷ್ಟು ಮಟ್ಟಿಗೆ ಸ್ವಚ್ಛಗೊಂಡಿತ್ತು. ಕಿಟಕಿಯಿಂದ ಹೊರಗೆ ಇಣುಕಿ ಹಾಕುತ್ತಿದ್ದ ಸುರೇಖಾಳ ಹೆಗಲಿನ ಮೇಲೆ ನವೀನ್‌ ಕೈ ಇಡುತ್ತಿದ್ದಂತೆ ಅವಳು ಚಕಿತಳಾಗಿ ತನ್ನ ಕತ್ತು ತಿರುಗಿಸಿ ಮುಗುಳ್ನಗುತ್ತಲೇ ಹೇಳಿದಳು, “ಕೈ ತೆಗಿಯೊ ದುಷ್ಟ ಹುಡುಗಾ. ನಾ ಏನು ನಿನ್ನ ಮದುವಿ ಆದ ಹೇಣ್ತಿ ಅಲ್ಲ, ವಿಶ್ವಾಸಘಾತುಕ, ನಿರ್ಲಜ್ಜ….”

“ಖರೇ ಹೇಳು, ನನ್ನನ್ನ ನೀ ಈಗ್ಲೂ ವಿಶ್ವಾಸಘಾತಿ ಅಂತೀಯಾ,” ನವೀನ್‌ ಅವಳ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ.

“ಹೌದು,” ಸುರೇಖಾ ದೀರ್ಘ ನಿಟ್ಟುಸಿರು ಬಿಡುತ್ತಿರುವಂತೆ ಅಭಿನಯಿಸಿ ಹೇಳಿದಳು, “ಸ್ವಲ್ಪ ದಿವಸ ನೀ ನನಗ ವಿಶ್ವಾಸಘಾತಿ ಮನುಷ್ಯನಂಗ ಕಾಣಿಸಿದಿ. ಆದರ ಈಗ ಮಾತ್ರ ಹಾಂಗಿಲ್ಲ. ನೀ ಅದಕ್ಕ ಬ್ಹಾಳ ಶಿಕ್ಷಾನೂ ಅನುಭವಿಸಿದಿ ಪಶ್ಚಾತ್ತಾಪನೂ ಪಟ್ಟೀದಿ ಅನ್ನೋದು ನನಗ ಗೊತ್ತು. ಈಗ ನಾ ನಿನ್ನ ಮನಸ್ಸಪೂರ್ತಿ ಕ್ಷಮಿಸ್ತೀನಿ. ಅಷ್ಟ ಅಲ್ಲ, ನನ್ನ ಮದ್ವಿ ಮಾಡಿಕೊಳ್ಳಾಕ ನಿನಗ ಪರ್ಮಿಶನ್ನು ಕೊಡ್ತೀನಿ,” ಎಂದು ಹೇಳುತ್ತಾ ಆಕೆ ಅವನ ಹೆಗಲ ಮೇಲೆ ತನ್ನ ತಲೆ ಆನಿಸಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ