ಬ್ರೌನಿ ಶೇಕ್
ಸಾಮಗ್ರಿ : 1 ದೊಡ್ಡ ಬಾರ್ ನಟ್ಸ್ ತುಂಬಿದ ಬ್ರೌನ್ ಚಾಕಲೇಟ್, 1 ಸಣ್ಣ ಚಮಚ ಸಕ್ಕರೆ, 1 ಸ್ಕೂಪ್ ವೆನಿಲಾ ಐಸ್ ಕ್ರೀಂ, ಅಗತ್ಯವಿದ್ದಷ್ಟು ಕೋಲ್ಡ್ ಮಿಲ್ಕ್.
ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಮಿಕ್ಸರ್‌ಗೆ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ನಂತರ ಇದನ್ನು 2-3 ಗ್ಲಾಸುಗಳಿಗೆ ತುಂಬಿಸಿ, ಐಸ್ ಹಾಗೂ ಚಾಕಲೇಟ್ ಬಾರ್ ತೇಲಿಬಿಟ್ಟು ಸವಿಯಲು ಕೊಡಿ.
ಜೆಲ್ಲಿ ಡ್ರಿಂಕ್
ಸಾಮಗ್ರಿ : 2-3 ಕ್ಯೂಬ್ಸ್ ಆರೆಂಜ್ ಜೆಲ್ಲಿ, ಅರ್ಧ ಬಾಟಲ್ ಸೋಡ, 4-5 ಚಮಚ ಬ್ಲೂ ಸಿರಪ್ (ರೆಡಿಮೇಡ್ ಲಭ್ಯ).
ವಿಧಾನ : 2-3 ಗ್ಲಾಸುಗಳಿಗೆ ಸಮನವಾಗಿ ಬ್ಲೂ ಸಿರಪ್ ಸುರಿದು, ಅದರ ಮೇಲೆ ಸೋಡ ಬೆರೆಸಿರಿ. ಕೊನೆಯಲ್ಲಿ ಜೆಲ್ಲಿ ಕ್ಯೂಬ್ಸ್ ತೇಲಿಬಿಟ್ಟು ತಕ್ಷಣ ಸವಿಯಲು ಕೊಡಿ.
ಫ್ರೂಟ್ ಮ್ಯಾಜಿಕ್
ಸಾಮಗ್ರಿ : 4 ಚಮಚ ಆರೆಂಜ್ ಸ್ಕ್ವಾಶ್, 1-2 ಸ್ಕೂಪ್ ವೆನಿಲಾ ಐಸ್ ಕ್ರೀಂ, ಅರ್ಧ ಬಾಟಲ್ ಸೋಡ, ಒಂದಿಷ್ಟು ಪುಡಿ ಐಸ್. ವಿಧಾನ : ಎಲ್ಲಾ ಸಾಮಗ್ರಿಗಳನ್ನೂ ಚೆನ್ನಾಗಿ ಬೆರೆಸಿಕೊಂಡು, 2-3 ಗ್ಲಾಸುಗಳಿಗೆ ತುಂಬಿಸಿಕೊಂಡು, ಮೇಲೆ ಪುಡಿ ಐಸ್ ಹಾಕಿ ಸವಿಯಲು ಕೊಡಿ.
ಪೈನ್ ಆ್ಯಪಲ್ ಸೋಡ
ಸಾಮಗ್ರಿ : 2 ಕಪ್ ನೀರು, 1 ಕಪ್ ಸಕ್ಕರೆ, 2-3 ಸಣ್ಣ ಚಮಚ ಪೈನ್ ಆ್ಯಪಲ್ ಎಸೆನ್ಸ್, 2-3 ಹನಿ ಹಳದಿ ಬಣ್ಣ, 2-3 ಚಮಚ ನಿಂಬೆರಸ, 1 ಸ್ಕೂಪ್ ವೆನಿಲಾ ಐಸ್ ಕ್ರೀಂ, ಅಗತ್ಯಕ್ಕೆ ತಕ್ಕಷ್ಟು ಸೋಡ.
ವಿಧಾನ : ಶರಬತ್ತು ತಯಾರಿಸಲು ಎಲ್ಲಕ್ಕೂ ಮೊದಲು ಪ್ಯಾನಿನಲ್ಲಿ ನೀರು ಕುದಿಸಿರಿ. ನಂತರ ಇದಕ್ಕೆ ಸಕ್ಕರೆ ಹಾಕಿ ಕದಡಿಕೊಳ್ಳಿ. ಸಕ್ಕರೆ ಚೆನ್ನಾಗಿ ಕರಗಿದ ನಂತರ ಪೈನ್ ಆ್ಯಪಲ್ ಎಸೆನ್ಸ್ ಬೆರೆಸಿಕೊಳ್ಳಿ. ಆಮೇಲೆ ಹಳದಿ ಬಣ್ಣ, ನಿಂಬೆ ರಸ ಬೆರೆಸಬೇಕು. 2 ಕುದಿ ಬಂದಾಗ ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ನಂತರ 2-3 ಗ್ಲಾಸುಗಳಿಗೆ 2-2 ಚಮಚ ಶರಬತ್ತು ಹಾಕಿಟ್ಟು, 1-1 ಸ್ಕೂಪ್‌ವೆನಿಲಾ ಐಸ್ ಕ್ರೀಂ ಹಾಕಬೇಕು. ಇದರ ಮೇಲೆ ಸೋಡ ಬೆರೆಸಿ ಸವಿಯಲು ಕೊಡಿ.
ಕ್ಯಾರಮೆಲ್ ಮ್ಯಾಜಿಕ್
ಸಾಮಗ್ರಿ : 1 ಕಪ್ ಸಕ್ಕರೆ, 100 ಗ್ರಾಂ ಕ್ರೀಂ, 50 ಗ್ರಾಂ ಬೆಣ್ಣೆ, ಒಂದಿಷ್ಟು ಬಟರ್ ಸ್ಕಾಚ್‌ಚಿಪ್ಸ್.
ವಿಧಾನ : ನೀರು ಬಿಸಿ ಮಾಡಿ, ಅದರಲ್ಲಿ ಸಕ್ಕರೆ ಹಾಕಿ ಚೆನ್ನಾಗಿ ಕದಡಿಕೊಳ್ಳಿ. ನೀರು ಕುದ್ದು ಸಕ್ಕರೆ ಕರಗಿದಾಗ, ಅದಕ್ಕೆ ಕ್ರೀಂ ಮತ್ತು ಬೆಣ್ಣೆ ಬೆರೆಸಿ, ಮತ್ತೆ 2-3 ನಿಮಿಷ ಕೆದಕಬೇಕು. ಇದಾದ ನಂತರ ಈ ಶರಬತ್ತನ್ನು ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ಆಮೇಲೆ ಬೇರೆ ಬೇರೆ ಗ್ಲಾಸುಗಳಿಗೆ 2-2 ಚಮಚ ಶರಬತ್ತು ಹಾಕಿ, ಮೇಲೆ 100 ಗ್ರಾಂ ಕ್ರೀಂ ಬೆರೆಸಿ. ಗಾರ್ನಿಶ್‌ಗಾಗಿ ಬಟರ್ ಸ್ಕಾಚ್ ಚಿಪ್ಸ ಹಾಕಿ, ಅರ್ಧ ಗಂಟೆ ಫ್ರಿಜ್‌ನಲ್ಲಿರಿಸಿ ಸವಿಯಲು ಕೊಡಿ.
ಕೋಕೋನಟ್ ಕ್ರೀಂ
ಸಾಮಗ್ರಿ : 1 ಗ್ಲಾಸ್ ತೆಂಗಿನ ಹಾಲು (ತೆಂಗಿನ ತುರಿ ತಿರುವಿ ಗಟ್ಟಿಯಾಗಿ ಹಿಂಡಿಕೊಳ್ಳಿ), 4 ಚಮಚ ಪುಡಿ ಸಕ್ಕರೆ, 100 ಗ್ರಾಂ ತಾಜಾ ಕ್ರೀಂ, ಒಂದಿಷ್ಟು ಹೆಚ್ಚಿದ ಹಣ್ಣು, ಗುಲಾಬಿ ದಳಗಳು.
ವಿಧಾನ : ಎಲ್ಲಕ್ಕೂ ಮೊದಲು ತೆಂಗಿನ ಹಾಲಿಗೆ ಸಕ್ಕರೆ ಕ್ರೀಂ ಬೆರೆಸಿ ಬ್ಲೆಂಡ್ ಮಾಡಿಕೊಳ್ಳಿ. ಈ ಮಿಶ್ರಣವನ್ನು 1-2 ಗ್ಲಾಸಿಗೆ ಸುರಿದು, ಹಣ್ಣಿನ ಹೋಳು ಹಾಕಿ, ಗುಲಾಬಿ ದಳ ತೇಲಿಬಿಟ್ಟು, ಅರ್ಧ ಗಂಟೆ ಫ್ರಿಜ್‌ನಲ್ಲಿರಿಸಿ ಸವಿಯಲು ಕೊಡಿ.
ದಾಲ್ಚಿನ್ನಿ ಸೇಬಿನ ಸಂಜೀವಿನಿ
ಸಾಮಗ್ರಿ : ಅರ್ಧ ಸಣ್ಣ ಚಮಚ ದಾಲ್ಚಿನ್ನಿಪುಡಿ, 2 ಮಾಗಿದ ಸೇಬು, 2 ಕಪ್ ನೀರು, ಅರ್ಧ ಕಪ್ ಸಕ್ಕರೆ, 100 ಗ್ರಾಂ ಕ್ರೀಂ.
ವಿಧಾನ : ಪ್ರೆಶರ್ ಕುಕ್ಕರ್‌ಗೆ ನೀರು ತುಂಬಿಸಿ, ಸಿಪ್ಪೆ ಹೆರೆದು ಹೋಳಾಗಿಸಿದ ಸೇಬು, ಜೊತೆಗೆ ದಾಲ್ಚಿನ್ನಿ, ಸಕ್ಕರೆ ಸೇರಿಸಿ ಬೇಯಿಸಿ. 4-5 ಸೀಟಿ ಬಂದ ನಂತರ ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ನಂತರ ಮಿಕ್ಸರ್‌ಗೆ ಹಾಕಿ ಬ್ಲೆಂಡ್ ಮಾಡಿ. ನಂತರ ಈ ಶರಬತ್ತನ್ನು 2-3 ಗ್ಲಾಸುಗಳಿಗೆ ಬಗ್ಗಿಸಿ, ಮೇಲೆ ಕ್ರೀಂ ತೇಲಿಬಿಟ್ಟು ಸವಿಯಲು ಕೊಡಿ.
ಬನಾನಾ ಅನಾನಸ್ ಕ್ರೀಂ
ಸಾಮಗ್ರಿ : 3-4 ಮಾಗಿದ ಬಾಳೆಹಣ್ಣು, 5-6 ಅನಾನಸ್ ಬಿಲ್ಲೆಗಳು, 2-3 ಸ್ಕೂಪ್‌ವೆನಿಲಾ ಐಸ್ ಕ್ರೀಂ, ಅಗತ್ಯವಿದ್ದಷ್ಟು ಸಕ್ಕರೆ ಕೋಲ್ಡ್ ಮಿಲ್ಕ್ ಕ್ರಶ್ಡ್ ಐಸ್, ಅರ್ಧ ಕಪ್ ಅನಾನಸ್ ಶರಬತ್ತು, 1-2 ಹನಿ ಹಳದಿ ಬಣ್ಣ.
ವಿಧಾನ : ಮಿಕ್ಸರ್‌ಗೆ ಬಾಳೆಹಣ್ಣು ಕಿವುಚಿ ಹಾಕಿ, ಅನಾನಸ್ ತುಂಡರಿಸಿ ಸೇರಿಸಿ. ಉಳಿದ ಸಾಮಗ್ರಿ ಬೆರೆಸಿ ನೀಟಾಗಿ ಬ್ಲೆಂಡ್ ಮಾಡಿಕೊಂಡು 2-3 ಗ್ಲಾಸುಗಳಿಗೆ ತುಂಬಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಚಾಕಲೇಟ್ ಕುಕೀಸ್ ಶೇಕ್
ಸಾಮಗ್ರಿ : 5-6 ಚಾಕಲೇಟ್ ಕ್ರೀಂ ಕುಕೀಸ್, 2-3 ಸ್ಕೂಪ್ ವೆನಿಲಾ ಐಸ್ ಕ್ರೀಂ, 1 ಚಮಚ ಸಕ್ಕರೆ, ಅಗತ್ಯವಿದ್ದಷ್ಟು ಕೋಲ್ಡ್ ಮಿಲ್ಕ್.
ವಿಧಾನ : ಮಿಕ್ಸರ್‌ಗೆ ಕುಕೀಸ್ ತುಂಡರಿಸಿ ಹಾಕಿ, ಉಳಿದ ಸಾಮಗ್ರಿ ಜೊತೆ ಹದನಾಗಿ ಬ್ಲೆಂಡ್ ಮಾಡಿ. ಈ ಮಿಶ್ರಣವನ್ನು ಗ್ಲಾಸುಗಳಿಗೆ ಸುರಿದು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.