ಶ್ರಾವಣ ಮಾಸ ಬಂತೆಂದರೆ ಅಲ್ಲಿಂದ ಸಾಲು ಸಾಲು ಹಬ್ಬಗಳ ಸರಮಾಲೆ ಶುರು. ಈ ಹಬ್ಬಗಳು ಹಲವಾರು ಬಗೆಯ ಸಂತಸ, ಉತ್ಸಾಹಗಳ ಗೂಡಾಗಿರುತ್ತವೆ, ನಮ್ಮ ಜೀವನವಿಡೀ ಹೀಗೆ ಸಡಗರ ಸಂಭ್ರಮ ಹೆಚ್ಚುತ್ತಲೇ ಹೋಗುತ್ತದೆ. ನಾವು ಅವನ್ನು ಸರಿಯಾಗಿ ಗುರುತಿಸಿ ಆಚರಣೆಗೆ ತರಬೇಕಷ್ಟೆ.
ಪ್ರತಿ ಹಬ್ಬ ಬಂದಾಗಲೂ ಪ್ರತಿಯೊಬ್ಬರಿಗೂ ಏನಾದರೊಂದು ಆಸೆ ಆಕಾಂಕ್ಷೆಗಳಿರುತ್ತವೆ, ಹೆಣ್ಣುಮಕ್ಕಳಿಗಂತೂ ತಾವು ಎಲ್ಲರಿಗಿಂತ ಬ್ಯೂಟಿ ಎನಿಸಿಕೊಳ್ಳಬೇಕೆಂಬ ಅದಮ್ಯ ಹಂಬಲವಿರುತ್ತದೆ. ಫ್ಯಾಷನ್ನಿನ ರಂಗಿನಿಂದ ಯಾವ ಹಬ್ಬ ಬೇರಾಗಲು ಸಾಧ್ಯವಿಲ್ಲ. ಹೀಗಿರುವಾಗ ನೀವು ಏಕೆ ಹೊಸ ಲುಕ್ಸ್ ನಿಮ್ಮದಾಗಿಸಿಕೊಳ್ಳಬಾರದು? ನಿಮ್ಮನ್ನು ನೀವು ಟ್ರೆಡಿಷನಲ್ ಹಾಗೂ ಮಾಡರ್ನ್ ಲುಕ್ಸ್ ನಿಂದ ಹೀಗೆ ಸಿಂಗರಿಸಿಕೊಳ್ಳಿ.
ಸಾಂಪ್ರದಾಯಿಕ ಗರ್ಬಾ ಡ್ರೆಸ್ : ಗುಜರಾತ್‌ನ ಗರ್ಬಾ ನೃತ್ಯ ದಕ್ಷಿಣಕ್ಕೂ ದಾಂಗುಡಿಯಿಟ್ಟು, ಎಲ್ಲೆಲ್ಲೂ ಗರ್ಬಾ ನೃತ್ಯಗಳ ಕಾರ್ಯಕ್ರಮ ನಡೆಯುತ್ತಿರುತ್ತದೆ. ನವರಾತ್ರಿಯ ಸಂದರ್ಭಕ್ಕಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ಈ ಕೋಲಾಟದ ನೃತ್ಯ, ವಿಜಯದಶಮಿವರೆಗೂ ವಿಜೃಂಭಣೆಯಿಂದ ಎಲ್ಲೆಡೆ ಕಂಡುಬರುತ್ತದೆ. ಇದರಲ್ಲಿ ಗುಜರಾತ್ ರಾಜ್ಯದ ಸಾಂಪ್ರದಾಯಿಕ ಉಡುಗೆಗಳಾದ ಘಾಘ್ರಾ ಚೋಲಿ, ಚನಿಯಾ ಚೋಲಿ ಧರಿಸಿ ದಾಂಡಿಯಾ ಮತ್ತು ಗರ್ಬಾ ಡ್ಯಾನ್ಸ್ ಮಾಡುತ್ತಾರೆ. ಈ ಸಂದರ್ಭಕ್ಕಾಗಿ ಲೆಹಂಗಾ ಚೋಲಿ, ಚನಿಯಾ ಚೋಲಿಗಳಿಗಿಂತ ಬೇರೆ ಉತ್ತಮ ಆಪ್ಶನ್‌ಗಳಿಲ್ಲ. ಇವು ಸಾಂಪ್ರದಾಯಿಕವಾಗಿರುವುದರ ಜೊತೆಯಲ್ಲೇ ಆರಾಮದಾಯಕ ಕೂಡ. ಇವುಗಳಲ್ಲಿ ಹೆವಿ ವರ್ಕ್ ಇದ್ದರೂ, ಇನ್ನು ಬೇಕಾದೆಡೆಗೆ ಕೊಂಡೊಯ್ಯಲು ಭಾರಿ ಎನಿಸದು. ಇದರಲ್ಲಿ ಕನ್ನಡಿ ಕೆಲಸದ ಚಮತ್ಕಾರ ನೋಡಿಯೇ ತಣಿಯಬೇಕು. ಮಿರರ್ ವರ್ಕ್‌ನ ವೈಶಿಷ್ಟ್ಯವೆಂದರೆ, ಇದರಲ್ಲಿ ಗಾಜನ್ನು ಬಟ್ಟೆ ಮೇಲೆ ಅಂಟಿಸಿರುವುದಿಲ್ಲ, ಬದಲಿಗೆ ಬಣ್ಣಬಣ್ಣದ ದಾರಗಳಿಂದ ಹೊಲಿಗೆ ಹಾಕಿರುತ್ತಾರೆ.
ಗರ್ಬಾ ಉಡುಗೆ ಗುಂಪಿನಲ್ಲಿದ್ದರೂ ಉತ್ತಮ ಐಡೆಂಟಿಟಿ ತಂದುಕೊಡುತ್ತದೆ. ಹೆಂಗಸರೊಂದಿಗೆ ಗಂಡಸರೂ ಸಹ ದಸರಾ ಹಬ್ಬದ ಈ ಸಂದರ್ಭದಲ್ಲಿ ವಿವಿಧ ಪೆಂಡಾಲ್‌ಗಳಲ್ಲಿ ದಾಂಡಿಯಾ, ಗರ್ಬಾ ನೃತ್ಯವಾಡಲು ಉತ್ಸಾಹದಿಂದ ಸಿದ್ಧರಾಗಿರುತ್ತಾರೆ. ಅವರ ಪೋಷಾಕುಗಳೂ ಸ್ಪೆಷಲ್ ಆಗಿರುತ್ತವೆ.
ಗಂಡಸರ ಗರ್ಬಾ ಡ್ರೆಸ್ : ಗಂಡಸರ ಗರ್ಬಾ ಉಡುಗೆಯನ್ನು ಗುಜರಾತಿಯಲ್ಲಿ ಕೇಡೀಯಾ ಎನ್ನುತ್ತಾರೆ. ಇದರಲ್ಲಿ ಸಣ್ಣ ಗೆರೆಗಳ ರೌಂಡೆಡ್ ಕುರ್ತಾ, ಧೋತಿ ಮತ್ತು ಬಣ್ಣ ಬಣ್ಣದ ಮುಂಡಾಸುಗಳಿರುತ್ತವೆ, ಅದರ ಮೇಲೆ ಕಶೀದಾಕಾರಿ ಕಸೂತಿ ಇರುತ್ತದೆ. ಅದರಲ್ಲಿ ಬಣ್ಣ ಬಣ್ಣದ ಉಣ್ಣೆಯಿಂದ ವಸ್ತ್ರದ ಮೇಲೆ ಸುಂದರ ಡಿಸೈನ್ಸ್ ಮಾಡಿರಲಾಗುತ್ತದೆ. ಇದರಲ್ಲಿ ನವಿಲು, ಕಲಶ, ನೃತ್ಯವಾಡುವ ಸ್ತ್ರೀ ಪುರುಷರ ಚಿತ್ರಗಳಿರುತ್ತವೆ.
ಲೇಟೆಸ್ಟ್ ಗರ್ಬಾ ಫ್ಯಾಬ್ರಿಕ್ಸ್ : ಅಹಮದಾಬಾದಿನ ಖ್ಯಾತ ಫ್ಯಾಷನ್ ಡಿಸೈನರ್‌ರ ಅಭಿಪ್ರಾಯದಲ್ಲಿ, ಈ ಸೀಸನ್‌ನಲ್ಲಿ ಚನಿಯಾಚೋಲಿಯ ಸ್ಮಾರ್ಟ್‌ಎಲಿಗೆಂಟ್ ಲುಕ್ಸ್ನ್ನು ಸಿಲ್ಕ್, ಜಾರ್ಜೆಟ್, ಶಿಫಾನ್, ಚಂದೇರಿ, ಪ್ಯೂರ್ ಕಾಟನ್, ಕಾಟನ್ ಜಕಾರ್ಟ್ ಇತ್ಯಾದಿ ಫ್ಯಾಬ್ರಿಕ್ಸ್ ಗಳಲ್ಲಿ ಕಾಣಬಹುದು.
ಲೇಟೆಸ್ಟ್ ಕಲರ್ : ಕಳೆದ ವರ್ಷ ನಿಯಾನ್ ಬಹಳ ಬೇಡಿಕೆಯಲ್ಲಿತ್ತು. ಆದರೆ ಈ ವರ್ಷ ಬ್ರೈಟ್ ರೆಡ್, ಯೆಲ್ಲೋ, ಗ್ರೀನ್ ಕಲರ್ಸ್ ಡಿಮ್ಯಾಂಡ್‌ನಲ್ಲಿವೆ. ಇದರಲ್ಲಿ ಕಸೂತಿ, ಬ್ಲಾಕ್ ಪ್ರಿಂಟಿಂಗ್, ಫ್ಯಾಬ್ರಿಕ್ ಪೇಂಟಿಂಗ್, ಹ್ಯಾಂಡ್ ವರ್ಕ್ ಇತ್ಯಾದಿ ಗಮನಿಸಬಹುದು.
ಲೇಟೆಸ್ಟ್ ಡಿಸೈನ್ಸ್ : ಈ ವರ್ಷ ಚನಿಯಾಚೋಲಿಯಲ್ಲಿ ಟ್ರೆಡಿಶನಲ್ ಮತ್ತು ಇಂಡೋವೆಸ್ಟರ್ನ್ ಕಸ್ಟಮ್ಸ್ ಎರಡೂ ಇವೆ. `ರಾಮ್ ಲೀಲಾ’ ಚಿತ್ರ ಹಾಗೂ ಇನ್ನಿತರ ಜನಪ್ರಿಯ ಧಾರಾವಾಹಿಗಳಿಂದ ಪ್ರಭಾವಿತರಾಗಿ, ಈಗ ಪ್ಲೇನ್ ಬ್ಲೌಸ್ ಮೇಲೆ ಫ್ರಂಟ್‌ನಲ್ಲಿ ಸಣ್ಣಪುಟ್ಟ ಬುಟ್ಟಾಗಳು, ನೆಕ್ ಲೈನ್‌ನಲ್ಲಿ ಲೈಟ್ ವರ್ಕ್ ಇವೆ. ಹಾಫ್ ಬದಲಿಗೆ ಫುಲ್ ಸ್ಲೀವ್ಸ್ ಬ್ಲೌಸ್ ಈ ಸಲದ ಫ್ಯಾಷನ್. ಚನಿಯಾಚೋಲಿಯ ಬೆಲೆ : ಆಧುನಿಕ ಯುವತಿಯರ ಆಯ್ಕೆ ಮತ್ತು ರೇಂಜ್‌ನ್ನು ಗಮನದಲ್ಲಿರಿಸಿಕೊಂಡು ಟ್ರೆಡಿಷನಲ್ ಇಂಡೋವೆಸ್ಟರ್ನ್ ಕಟ್‌ನ ಚನಿಯಾಚೋಲಿಯ ಬೆಲೆ ರೂ.275, 500ವರೆಗೂ ಇವೆ. ನಿಮ್ಮದು ತುಸು ಹೆವಿ ಬಜೆಟ್ ಆಗಿದ್ದರೆ, ನೀವು ಎಕ್ಸ್ ಕ್ಲೂಸಿವ್ ವೆರೈಟಿ ಖರೀದಿಸಬಹುದು. ಇದರ ಬೆಲೆ 815 ಸಾವಿರ. ಇದರಲ್ಲಿ ಅನೇಕ ಬಗೆಗಳಿವೆ, ಒಂದಕ್ಕಿಂತ ಒಂದು ಉತ್ತಮ ಎನಿಸುತ್ತವೆ. ಇದರ ಹೊರತಾಗಿ ನವಯುವತಿಯರಿಗಾಗಿ ರೇ ರೆಸ್ಟ್ ಆಫ್ ದಿ ರೇರ್ ಕಲೆಕ್ಷನ್‌ನಲ್ಲಿ 10-15 ಸಾವಿರದವರೆಗಿನ ಚನಿಯಾಚೋಲಿಗಳ 3-4 ಸೆಟ್ ಕೊಳ್ಳಬಹುದು. ಇದರ ಕಲೆಕ್ಷನ್‌ನಲ್ಲಿ 9 ಟ್ರೆಡಿಷನಲ್ ಕಲರ್‌ಗಳುಂಟು, ಅದು ಎಲ್ಲ ವಯೋಮಾನದವರಿಗೂ ಹೊಂದುತ್ತದೆ.
ಮೇಕಪ್ ಕ್ಲಾಸಿಕ್ ಆಗಿರಲಿ : ಸತತ ಹಬ್ಬಗಳ ಈ ಸೀಸನ್‌ನಲ್ಲಿ ಡ್ರೆಸ್ ಇಷ್ಟು ಸ್ಪೆಷಲ್ ಆಗಿರುವಾಗ, ಮೇಕಪ್ ಸಹ ಕ್ಲಾಸಿಕ್ ಆಗಿರಬೇಕು. ಈ ನೃತ್ಯಗಳ ಕಾರಣ ಸತತ ಬೆವರು ಹರಿಯುತ್ತಿರುತ್ತದೆ. ಹಾಗಿರುವಾಗ ಮೇಕಪ್ ವಾಟರ್ ಪ್ರೂಫ್ ಆಗಿರಬೇಕು, ಆಗ ಅದು ಬೆವರಿನಿಂದ ಕರಗದು.
ಫೇಸ್ ಮೇಕಪ್ : ಚರ್ಮಕ್ಕೆ ಅನುಸಾರವಾಗಿ ಬೇಸ್ ಬಳಸಿ, ನೀವು ಗ್ಲಾಸಿ ಅಥವಾ ನ್ಯೂಡ್ ಮೇಕಪ್ ಮಾಡಿಕೊಳ್ಳಬಹುದು. ಇದರಲ್ಲಿ ಗುಲಾಬಿ, ಪೀಚ್, ಬ್ರೌನ್ ಬ್ಲಶರ್ ಹೆಚ್ಚು ನಡೆಯುತ್ತದೆ. ಇದನ್ನು ಚೀಕ್ಸ್ ಬೋನ್ ಮೇಲೆ ಬ್ರಶ್‌ನಿಂದ ಹಚ್ಚಿರಿ. ಕೆನ್ನೆಗಳಿಂದ ಗಲ್ಲದವರೆಗೂ ಬ್ಲಶರ್ ನಿಮ್ಮ ಸ್ಕಿನ್ ಟೋನ್‌ಗೆ ತಕ್ಕಂತಿರಬೇಕು.
ಲಿಪ್ ಮೇಕಪ್ : ಇದಕ್ಕಾಗಿ ನೀವು ಲಿಪ್‌ಸ್ಟಿಕ್‌ಗೆ ಬದಲಾಗಿ ಲಿಪ್ ಪೆನ್ಸಿಲ್‌ನಿಂದ ಔಟ್ ಲೈನ್ ರಚಿಸಿ, ಕೇವಲ ಲಿಪ್ ಗ್ಯಾಸ್‌ನ್ನು ಬಳಸಿದರೆ ನಿಮ್ಮ ಲುಕ್ಸ್ ಅತ್ಯಧಿಕ ಬ್ರೈಟ್ ಎನಿಸುತ್ತದೆ. ಟ್ರೆಡಿಶನಲ್ ಟಚ್‌ಗಾಗಿ ಸ್ವರೋಸ್ಕಿಯುಕ್ತ ಸಣ್ಣ ಬಿಂದಿ ಇಟ್ಟುಕೊಳ್ಳಿ.
ಕಂಗಳ ಮೇಕಪ್ : ದಾಂಡಿಯಾ ನೈಟ್ಸ್ ನಲ್ಲಿ ಸ್ಪೆಷಲ್ ಲುಕ್ಸ್ ಗಾಗಿ ನೀವು ಕಂಗಳಿಗೆ ಪರ್ಪಲ್, ಪಿಂಕ್, ಗ್ರೀನ್, ಬ್ಲೂ, ಕಾಪರ್ ಶೇಡ್‌ಗಳ ಶ್ಯಾಡೋ ಬಳಸಬಹುದು. ಇದು ಪಾರ್ಟಿ ಲುಕ್ಸ್ಗೆ ಪರ್ಫೆಕ್ಟ್ ಆಗಿದೆ. ಆದರೆ ಐ ಶ್ಯಾಡೋದ ಶೇಡ್ಸ್ ನಿಮ್ಮ ಡ್ರೆಸ್‌ಗೆ ಮ್ಯಾಚ್ ಆಗುವಂತಿರಬೇಕೆಂಬುದನ್ನು ಮರೆಯದಿರಿ. ಕಂಗಳ ಕೆಳಗೆ ನೀವು ಸ್ಪಾರ್ಕ್ಸ್ ಸಹ ಹಾಕಿಕೊಳ್ಳಬಹುದು. ಇದು ಸಂಜೆ ಹೊತ್ತು ಹೆಚ್ಚು ಬ್ರೈಟ್ ಎನಿಸುತ್ತದೆ. ಇದರ ಹೊರತಾಗಿ ಕಂಗಳ ಕೆಳಗೆ ಕಲರ್ ಲೈನರ್ ಬಳಸಿ ಅದನ್ನು ಸ್ಮಜ್ ಮಾಡಿ. ಲೈನರ್ ಅಥವಾ ಕಾಜಲ್‌ನ್ನು ಹೊರಗಿನ ಕಡೆಗೆಳೆದುಕೊಳ್ಳುವುದರಿಂದ ನಿಮ್ಮ ಲುಕ್ಸ್ ಇನ್ನಷ್ಟು ಉತ್ತಮವಾಗುತ್ತದೆ.
ಫ್ಯಾಂಟಸಿ ಮೇಕಪ್ ಹೀಗಿರಲಿ : ಇತ್ತೀಚೆಗೆ ಬ್ಯಾಕ್ ಲೆಸ್, ಕ್ರಾಸ್ ಲೆಸ್ ಅಥವಾ ಹಾಲ್ಟರ್ ಲುಕ್ಸ್ ವುಳ್ಳ ಚೋಲಿಗಳು ಹೆಚ್ಚು ಪ್ರಚಲಿತ. ಇದರಲ್ಲಿ ಬೆನ್ನು, ಕುತ್ತಿಗೆ ಇತ್ಯಾದಿಗಳು ಎಕ್ಸ್ ಪೋಸ್ ಗೊಳ್ಳುತ್ತವೆ. ತುಸು ಡಿಫರೆಂಟ್ ಆಗಿರಬೇಕೆಂಬ ಹಂಬಲದಲ್ಲಿ ನೀವು ನಿಮ್ಮ ಬ್ಲ್ಯಾಕ್‌ನ ತೆರೆದ ಭಾಗದಲ್ಲಿ ಫ್ಯಾಂಟಸಿ ಮೇಕಪ್‌ಗಾಗಿ ಟ್ಯಾಟೂ ಅಥವಾ ಸ್ಟಿಕರ್ ಹಾಕಿಸಿಕೊಳ್ಳಬಹುದು ಅಥವಾ ಇದರಲ್ಲಿ ಮೆಹಂದಿ ಸ್ಪಾರ್ಕ್ಸ್ ಮತ್ತು ಹಲವು ಬಣ್ಣಗಳನ್ನು ಬಳಸಿ ವಿವಿಧ ಕಲಾಕೃತಿ ಬಿಡಿಸಬಹುದು. ಗಾಜಿನ ಬಳೆಗಳ ಮೇಲೆ ಇದೇ ತರಹ ಪ್ರಯೋಗ ಮಾಡಬಹುದು.
ಉತ್ಕೃಷ್ಟ ಹೇರ್ ಸ್ಟೆಲ್‌ಗಾಗಿ : ಡ್ಯಾನ್ಸ್ ಮಾಡುವಾಗ ತೆರೆದ ಕೂದಲು ಒಂದೆಡೆ ಸಿಕ್ಕಿಕೊಂಡು ಅನ್ ಟೈಡಿ ಎನಿಸಬಹುದು. ಹೀಗಿರುವಾಗ ನಿಮ್ಮ ಕೂದಲಿನ ಮುಂಭಾಗದಲ್ಲಿ ಹಲವು ಜೊಂಪೆಗಳನ್ನು ಮಾಡಿ, ಹಿಂದಿನಿಂದ ಪ್ಲೇನ್ ಜಡೆ ಅಥವಾ ಕೊಂಡೆ ಹಾಕಿಕೊಳ್ಳಿ ಅಥವಾ ಮುಂಭಾಗದ ಕೂದಲನ್ನು ಕಲ್ಸ್ ಮಾಡಿಕೊಳ್ಳಿ, ಹಿಂಭಾಗದಲ್ಲಿ ಜಡೆ ಇರಲಿ. ಉದ್ದನೆ ಜಡೆಗೆ ಮುತ್ತಿನ ಅಥವಾ ಸ್ವರೋಸ್ಕಿಯ ಪಿನ್ ಸಿಗಿಸಿ. ಗರ್ಬಾ, ದಾಂಡಿಯಾಗಾಗಿನ ನಿಮ್ಮ ಈ ಲುಕ್ಸ್ ವೆರಿ ಪರ್ಫೆಕ್ಟ್ ಎನಿಸುತ್ತದೆ.
ಗರ್ಬಾದಲ್ಲಿ ಇತ್ತೀಚೆಗೆ ಮೆಸಿ ಜಡೆ ಅಥವಾ ಬನ್ ಹೆಚ್ಚು ಜನಪ್ರಿಯ, ಇದು 90ರ ದಶಕದ ಕೊಡುಗೆ. ಇದಲ್ಲದೆ ಖರ್ಜೂರದ ಜಡೆ ಸಹ ಉಂಟು. ಇದಕ್ಕಾಗಿ ಮುಂಭಾಗದಿಂದ ಜಡೆ ಹೆಣೆಯುತ್ತಾ, ಎಲ್ಲವನ್ನೂ ಸೈಡ್‌ಗೆ ತೆಗೆದುಕೊಂಡು ಸೈಡ್ ಜಡೆ ಮಾಡಿಕೊಳ್ಳಿ.
ಆ್ಯಕ್ಸೆಸರೀಸ್ : ಡ್ರೆಸ್‌ಮೇಕಪ್ ನಂತರ ಈ ಸಂದರ್ಭದಲ್ಲಿ ಅತ್ಯುತ್ತಮ ಟ್ರೆಡಿಷನಲ್ ಆ್ಯಕ್ಸೆಸರೀಸ್ ಸಹ ಬೇಕು. ಅಂದರೆ ಓಲೆ, ಜುಮಕಿ, ಬೈತಲೆ ಬೊಟ್ಟು, ತೋಳುಬಂದಿ ಇತ್ಯಾದಿ. ಇಲ್ಲಿ ಗಾಜಿನ ಬಳೆಗಳು ಕಡಿಮೆ ಇರಲಿ, ಆಗ ಡ್ಯಾನ್ಸ್ ಮಧ್ಯೆ ಕಷ್ಟ ಇರದು.
ಸಾಂಪ್ರದಾಯಿಕ ಸೀರೆ : ಭಾರತೀಯ ಉಡುಗೆಗಳಲ್ಲಿ ಸೀರೆಯ ಫ್ಯಾಷನ್ ಸದಾ ಸರ್ವದಾ ಹಸಿರಾಗಿರುತ್ತದೆ. ಅದರಲ್ಲೂ ಯಾವುದಾದರೂ ವಿಶೇಷ ಹಬ್ಬ ಅಥವಾ ಸಮಾರಂಭ ಎಂದಾಗ, ಗ್ರಾಂಡ್ ಸೀರೆಗಿಂತ ಬೆಸ್ಟ್ ಆಯ್ಕೆ ಮತ್ತೊಂದಿಲ್ಲ. ಫ್ಯಾಷನ್‌ಗೆ ತಕ್ಕಂತೆ ಈಗ ಇದನ್ನು ಆಧುನಿಕ ರೀತಿಯಲ್ಲಿ ಉಡುವ ಟ್ರೆಂಡ್ ಚಾಲ್ತಿಯಲ್ಲಿದೆ. ಇದು ಸೀರೆಯನ್ನು ಇನ್ನಷ್ಟು ಸ್ಟೈಲಿಶ್‌ಸೆಕ್ಸಿ ಮಾಡುತ್ತದೆ.
ಸೀರೆಗೆ ನೀಡಿ ಗ್ಲಾಮರಸ್ ಟಚ್ : ಸೀರೆಯನ್ನು ವಿಶೇಷ ಸಂದರ್ಭಕ್ಕಾಗಿ ಉಡಲೆಂದೇ ಡಿಸೈನರ್ಸ್ ಗ್ಲಾಮರಸ್ ಟಚ್ ನೀಡುತ್ತಿದ್ದಾರೆ. ಅವರು ಕೇವಲ ಸೀರೆ ಮೇಲೆ ಮಾತ್ರವಲ್ಲದೆ ಬ್ಲೌಸ್, ಲಂಗಗಳ ಮೇಲೂ ವಿವಿಧ ರೀತಿಯ ಪ್ರಯೋಗ ಮಾಡುತ್ತಿದ್ದಾರೆ. ಗ್ಲಾಮರಸ್ ಶೈಲಿಯ ಸೀರೆಯ ಹೊಸ ಲುಕ್ಸ್ ನಿಜಕ್ಕೂ ಹಾಟ್ ಎನಿಸುತ್ತದೆ. ಈ ಸ್ಟೈಲ್‌ನ ಸೀರೆಯನ್ನು ಯಾವುದೇ ಮಹಿಳೆ ಉಟ್ಟರೂ, ಆ ಅಪೀಲ್ ದುಪ್ಪಟ್ಟು ಆಗುವುದರಲ್ಲಿ ಸಂದೇಹವಿಲ್ಲ.
ಫ್ಯಾಬ್ರಿಕ್ ಹೇಗಿರಬೇಕು? : ಸೀರೆಗಳ ಫ್ಯಾಬ್ರಿಕ್ಸ್ ಕುರಿತು ಹೇಳುವುದಾದರೆ ವಿಶೇಷ ಸಂದರ್ಭಕ್ಕಾಗಿ ನೆಟ್, ಶಿಫಾನ್, ಸಿಲ್ಕ್, ಜಾರ್ಜೆಟ್, ಚಂದೇರಿ, ಕ್ರೇಪ್ ಇತ್ಯಾದಿ ಸೀರೆಗಳನ್ನು ಡಿಸೈನರ್ ಬ್ಯಾಕ್ ಲೆಸ್ ಬ್ಲೌಸ್ ಜೊತೆ ಧರಿಸಲು ಸಲಹೆ ನೀಡುತ್ತಾರೆ.
ಹೊಚ್ಚ ಹೊಸ ಸ್ಟೈಲ್ : ಹೊಸ ಲುಕ್ಸ್ ಗಾಗಿ ಸೆರಗನ್ನು ಹೆಗಲಿನ ಬಳಿ ಕ್ರೆಶ್‌ಗೊಳಿಸಿ ಅದನ್ನು ಪ್ಲೇಗೊಳಿಸಲು ಇಳಿಬಿಡಲಾಗುತ್ತದೆ. ಅದೇ ತರಹ ಮುಂಭಾಗದ ಫ್ಲೀಟ್ಸ್ ಮತ್ತು ಮೊಗ್ಗಿನ ಡಿಸೈನ್‌ಗಳಲ್ಲಿ ವೈವಿಧ್ಯಮಯ ಬಣ್ಣ, ಫ್ಯಾಬ್ರಿಕ್ಸ್ ನ ಡಿಸೈನಿಂಗ್ ಮಾಡಲಾಗುತ್ತದೆ.
ಡಿಸೈನರ್ ಬ್ಲೌಸ್‌ನ ಕಮಾಲ್ : ವಿಶೇಷ ಹಬ್ಬಗಳಿಗಾಗಿ ನೀವು ನಿಮ್ಮ ಸೀರೆಯನ್ನು ಮತ್ತಷ್ಟು ಸ್ಟೈಲಿಶ್‌ಗ್ಲಾಮರಸ್ ಆಗಿಸಲು, ಅದನ್ನು ಡಿಸೈನರ್ ಬ್ಲೌಸ್ ಜೊತೆ ಧರಿಸಬೇಕಾಗುತ್ತದೆ.
ಇತ್ತೀಚೆಗೆ ಡಿಸೈನರ್ಸ್ ವಿವಿಧ ಬಗೆಯ ಫ್ಯಾಬ್ರಿಕ್ಸ್ ಅಂದರೆ ನೆಟ್, ಬ್ರೋಕೆಡ್, ಟಿಶ್ಯು, ವೆಲ್ವೆಟ್ ಬ್ಲೌಸ್‌ಗಳಾಗಿ ಪ್ರಸ್ತುತಪಡಿಸುತ್ತಿದ್ದಾರೆ. ಇವು ಎಂಥ ಸೀರೆಯನ್ನಾದರೂ ಉತ್ಕೃಷ್ಟಗೊಳಿಸಬಲ್ಲದು. ಆದರೆ ಇಂದಿನ ಫ್ಯಾಷನ್ ಪ್ರಕಾರ ಬ್ಲೌಸ್‌ನ ಫ್ಯಾಬ್ರಿಕ್ ಕಾಂಟ್ರಾಸ್ಟ್ ಇರಿಸಲಾಗಿದೆ. ಹೀಗಾಗಿ ಬ್ಲೌಸ್‌ನ ಸ್ಲೀಲ್ಸ್ ನ್ನು ಫುಲ್ ಆಗಿ ಇರಿಸುತ್ತಾರೆ, ಇದು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇದು ಸೀರೆಯ ಇಡೀ ಲುಕ್‌ನ್ನೇ ಬದಲಾಯಿಸಿಬಿಡುತ್ತದೆ. ನೆಟೆಡ್ ಸೀರೆಯ ಜೊತೆ ಹಾಫ್ ಸ್ಲೀಲ್ಸ್ ಫ್ಯಾಷನ್ ಆಗಿದೆ. ಡೀಪ್ ನೆಕ್, ಬ್ಯಾಕ್ ಲೆಸ್, ಚೋಲಿ ಕಟ್ ಬ್ಲೌಸ್ ಧರಿಸಿಯೂ ಹಬ್ಬದ ಸಡಗರ ಹೆಚ್ಚಿಸಬಹುದು.
ಹೀಗೆ ಸೀರೆ ಕ್ಯಾರಿ ಮಾಡಿ : ಬ್ಯಾಕ್ ಲೆಸ್, ನ್ಯೂಡ್ ಸ್ಟ್ರಿಪ್ಸ್, ಬ್ಲೌಸ್ ಮತ್ತು ಟ್ರಾನ್ಸ್ ಪರೆಂಟ್ ಸೀರೆ ಉಡುವಾಗ ನಿಮ್ಮ ಲುಕ್ಸ್ ಖಂಡಿತಾ ಬದಲಾಗುತ್ತದೆ, ನೀವು ಬಿಲ್‌ಕುಲ್ ಹಾಟ್ ಆಗಿ ಕಾಣಿಸುವಿರಿ. ಸೀರೆಗೆ ಗ್ಲಾಮರಸ್ ಟಚ್ ನೀಡಲು ಸದಾ ಉಲ್ಟಾ ಸೆರಗಿನ ಸೀರೆ ಉಡಬೇಕು. ಸೆರಗನ್ನು ಬಟರ್ ಫ್ಲೈ ಶೇಪ್ ಮಾಡಿಕೊಳ್ಳಿ. ನೆಟೆಡ್ ಸೀರೆಯ ಜೊತೆ ಸದಾ ಬ್ಯಾಕ್ ಹುಕ್ ಅಥವಾ ಸೈಡ್ ಹುಕ್ಸ್ ನ ಬ್ಲೌಸ್ ಹೊಲಿಸಬೇಕು.
ಟ್ರೆಡಿಷನಲ್ ವಿಧಾನದಲ್ಲಿ ಉಟ್ಟ ಸೀರೆ ಸಹ ಖಂಡಿತಾ ಬ್ಯೂಟಿಫುಲ್ ಲುಕ್ಸ್ ನೀಡುತ್ತದೆ. ಫ್ಯಾಷನ್, ವಯಸ್ಸು, ಬಾಡಿ ಶೇಪ್‌ಗೆ ತಕ್ಕಂತೆ ಸೀರೆಯನ್ನು ಆರಿಸಿ, ಹಬ್ಬದ ಸಂಭ್ರಮ ಹೆಚ್ಚುವುದನ್ನು ನೋಡಿ.
ಭಾರತೀಯ ಉಡುಗೆಗಳಲ್ಲಿ ಸ್ಮಾರ್ಟ್ ಲುಕ್ಸ್ : ನೀವು ಭಾರತೀಯ ಉಡುಗೆಗಗಳಲ್ಲೇ ಹೆಚ್ಚು ಸ್ಮಾರ್ಟ್ ಲುಕ್ಸ್ ಗಳಿಸ ಬಯಸಿದರೆ, ನಿಮಗೆ ಅನಾರ್ಕಲಿ ಸೂಟ್ ಹೆಚ್ಚು ಸೂಕ್ತ ಹಾಗೂ ಫ್ಯಾಷನೆಬಲ್ ಆಯ್ಕೆಯಾಗಿದೆ. ಇತ್ತೀಚೆಗಂತೂ ಅನಾರ್ಕಲಿ ಸೂಟ್ ಹೆಚ್ಚು ಫ್ಯಾಷನ್‌ನಲ್ಲಿದೆ, ಇದರಲ್ಲಿ ಎಂಥ ಮಹಿಳೆಯೇ ಆದರೂ ಅಂದವಾಗಿ ಕಾಣಿಸುತ್ತಾಳೆ. ನೀವು ಇದನ್ನು ಟ್ರೆಡಿಷನಲ್ ಟೆಂಡ್ರಿಯ ಮಿಕ್ಸ್ ಮ್ಯಾಚ್ ಎಂದೂ ಹೇಳಬಹುದು.
ಸ್ಪೆಷಲ್ ವೆರೈಟಿಗೆ ಆದ್ಯತೆ : ಅನಾರ್ಕಲಿ ಸೂಟ್ ಕಾಟನ್‌ನಿಂದ ಹಿಡಿದು ಜಾರ್ಜೆಟ್, ಶಿಫಾನ್, ನೆಟ್, ಸಿಲ್ಕ್ ವರೆಗೂ ಹರಡಿದೆ. ಇದರಲ್ಲಿ ಬುಟ್ಟಾ, ಸೆಮಿ ಪ್ರೆಶಿಯಸ್ ಸ್ಟೋನ್, ಪ್ಯಾಚ್, ಜರ್ದೋಜಿ, ಜರಿ ಮತ್ತು ಥ್ರೆಡ್ ವರ್ಕ್‌ನ ಕಸೂತಿಯಿಂದ ಸಿಂಗರಿಸಬಹುದು.
ಲೇಟೆಸ್ಟ್ ಟ್ರೆಂಡ್ : ಫ್ಯಾಷನ್‌ಗೆ ತಕ್ಕಂತೆ ಈಗ ಅನಾರ್ಕಲಿ ಸೂಟ್‌ನಲ್ಲಿ ಫ್ಲೋರ್ ಲೆಂಥ್ ಸೂಟ್ ಹೆಚ್ಚು ಜನಪ್ರಿಯ. ಆದರೆ ಫ್ಯಾಷನ್ ಡಿಸೈನರ್ಸ್, ತುಸು ಕುಳ್ಳಗಿನ ಯುವತಿಯರಿಗೆ ಇದನ್ನು ಸಲಹೆ ನೀಡುವುದಿಲ್ಲ. ಹಬ್ಬದ ಸೀಸನ್ ಗಮನದಲ್ಲಿರಿಸಿಕೊಂಡು ಅನಾರ್ಕಲಿ ಸೂಟ್‌ನಲ್ಲಿ ಹೆವಿ ವರ್ಕ್ ಮಾಡಲಾಗುತ್ತಿದೆ. ಇದನ್ನು ಜರ್ದೋಜಿ, ಸ್ಟೋನ್, ಥ್ರೆಡ್ ಪ್ಯಾಚ್ ಮತ್ತು ಪೈಪಿನ್ ವರ್ಕ್‌ಗಳಿಂದ ಕ್ಲಾಸಿಕ್ ಲುಕ್ಸ್ ನೀಡಲಾಗುತ್ತಿದೆ. ಕುರ್ತಾದಲ್ಲಿ ಬಾರ್ಡರ್, ಕಾಲರ್ ಮತ್ತು ಸ್ಲೀವ್ಸ್ನಲ್ಲಿ ಹೆವಿ ವರ್ಕ್ ಜನಪ್ರಿಯ ಎನಿಸಿದೆ. ಸ್ಲೀವ್ಸ್ ನಲ್ಲಿ ಫುಲ್ ಕ್ವಾರ್ಟರ್ ಸ್ಲೀವ್ಸ್ ನ ಟ್ರೆಂಡ್ ಇದೆ. ಅಂಗ್ ರಖಾ ಸ್ಟೈಲ್‌ನ ಅನಾರ್ಕಲಿ ಕುರ್ತಾಗೂ ಸಾಕಷ್ಟು ಡಿಮ್ಯಾಂಡ್ ಇದೆ.
ಪಾರ್ಟಿವೇರ್ ಅನಾರ್ಕಲಿ ಸೂಟ್ : ನಿಮಗೆ ಪಾರ್ಟಿವೇರ್ ಡ್ರೆಸ್ ಬೇಕಿದ್ದರೆ ಭಾರಿ ಜರಿಯ ಬಾರ್ಡರ್‌ವುಳ್ಳ ಅನಾರ್ಕಲಿ ಕುರ್ತಾ ಕೊಳ್ಳಬಹುದು. ಇತ್ತೀಚೆಗೆ ಹೆವಿವರ್ಕ್‌ನ ಚೋಲಿ ಪ್ಯಾಟರ್ನ್‌ವುಳ್ಳ ಕುರ್ತಾ ಹೆಚ್ಚು ಫ್ಯಾಷನ್‌ನಲ್ಲಿದೆ. ಇವು ಶಿಫಾನ್, ಜಾರ್ಜೆಟ್, ಚೈನಾ ಸಿಲ್ಕ್ ನಂಥ ಪ್ಯೂರ್ ಮೆಟೀರಿಟಲ್ಸ್ ನಲ್ಲಿ ಲಭ್ಯ.
ಸ್ಟೈಲ್ ಡ್ಯಾಶಿಂಗ್ : ಅನಾರ್ಕಲಿ ಸ್ಟೈಲ್‌ನ ಕುರ್ತಾ ಹಾಗೂ ಚೂಡೀದಾರ್ ಬಹಳ ಕಾಲದಿಂದ ಫ್ಯಾಷನ್‌ನಲ್ಲಿದೆ, ಆದರೆ ಇದರ ಡಿಸೈನ್ಸ್ನಲ್ಲಿ ದಿನೇದಿನೇ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಇದರಲ್ಲಿ ಬುಟ್ಟಾ, ಉದ್ದಗೆರೆಗಳಿಂದ ಹಿಡಿದು ಥ್ರೆಡ್ ಎಂಬ್ರಾಯಿಡರಿ ಮತ್ತು ಚಂದೇರಿ ವರ್ಕ್ ಸಹ ಕಂಡುಬರುತ್ತವೆ.
ಫುಲ್ ಸ್ಲೀವ್ಸ್ ಮತ್ತು ಲಾಂಗ್ ಡಿಸೈನರ್ ದುಪಟ್ಟಾ ಇದನ್ನು ಮತ್ತಷ್ಟು ಅಟ್ರಾಕ್ಟಿವ್ ಮಾಡುತ್ತದೆ. ಇದರಲ್ಲಿ ಹಾರಿರಂಟ್ ಕಟ್ಸ್ ಒದಗಿಸುವುದರಿಂದ ಉಡುಗೆಗೆ ಡಿಫರೆಂಟ್ ಲುಕ್ಸ್ ಸಿಗುತ್ತದೆ. ಇತ್ತೀಚೆಗೆ ಡಿಸೈನರ್ ಕುರ್ತಾದ ನೆಕ್‌ಬಾರ್ಡರ್ ಮೇಲೆ ಟ್ರೆಡಿಷನಲ್ ವರ್ಕ್ ಸಹ ಮಾಮೂಲಿಯಾಗಿದೆ. ಇದರಲ್ಲಿ ಚಂದೇರಿ, ಬುಟ್ಟಾ ವಿನ್ಯಾಸಗಳೊಂದಿಗೆ ಥ್ರೆಡೆಡ್ ಲೇಸ್ ವರ್ಕ್ ಸಹ ಇರುತ್ತದೆ. ಟ್ರೆಡಿಷನಲ್ ವರ್ಕ್‌ನ್ನು ಕಾಟನ್‌ಸಿಲ್ಕ್ ಫ್ಯಾಬ್ರಿಕ್‌ನಲ್ಲಿ ಹೆಚ್ಚು ಇಷ್ಟಪಡುತ್ತಾರೆ.
ಸೂಕ್ತ ಆ್ಯಕ್ಸೆಸರೀಸ್ : ಅನಾರ್ಕಲಿ ಸೂಟ್ ಜೊತೆ ಕನಿಷ್ಠ ಜ್ಯೂವೆಲರಿ ಬಳಸುವುದು ಲೇಸು. ನೀವು ಕುತ್ತಿಗೆ ಬಳಿ ಯಾವುದಾದರೂ ಲೈಟ್ ನೆಕ್ ಪೀಸ್ ಸಹ ಬಳಸಬಹುದು. ಇಯರ್ ರಿಂಗ್ಸ್, ದೊಡ್ಡ ಜುಮಕಿ, ವಿಂಟೇಜ್‌ಡಾಂಗ್ ಇಯರ್ ರಿಂಗ್ಸ್ ಸಹ ಬಳಸಬಹುದು.
ಫುಟ್‌ವೇರ್ : ಅನಾರ್ಕಲಿ ಸೂಟ್ ಜೊತೆ ಉದ್ದನೆ ಯುವತಿಯರು ಸ್ಟೈಲಿಶ್ ಸ್ಯಾಂಡಲ್ಸ್ ಧರಿಸಬೇಕು. ಇದರಲ್ಲಿ ಲುಕ್ಸ್ ಹೆಚ್ಚು ಪಾರಂಪರಿಕವಾಗಿ ಕಂಡುಬರುತ್ತದೆ. ತುಸು ಗಿಡ್ಡನೆಯ ಯುವತಿಯರು ಸ್ಟಾಂಡರ್ಡ್ ಹೈ ಹೀಲ್ಸ್ ಧರಿಸಬೇಕು. ಇದು ಸೂಟ್‌ಗೆ ಮ್ಯಾಚ್ ಆಗುವಂತಿರಬೇಕು.
– ಪ್ರಭಾವತಿ