ಸುಪ್ರೀಂ ಕೋರ್ಟ್ ನಲ್ಲಿ ಪ್ರಸ್ತುತಪಡಿಸಿದ ಅಂಕಿಅಂಶಗಳ ಪ್ರಕಾರ, ದೆಹಲಿಯಲ್ಲಿ ಮಹಿಳೆಯರ ವಿರುದ್ಧ ನಡೆದ ಅಪರಾಧಗಳ ಸಂಖ್ಯೆ ಈ ವರ್ಷ ಅನೇಕ ಪಟ್ಟು ಹೆಚ್ಚಾಗಿದೆ. ಈ ಹೆಚ್ಚಳ 16ನೇ ಡಿಸೆಂಬರ್ 2012ರಂದು ಬಸ್ ನಲ್ಲಿ ನಡೆದ ರೇಪ್ ಕಾಂಡದ ನಂತರ ಉಂಟಾದ ಜನಾಕ್ರೋಶದ ಕಾರಣದಿಂದಾಗಿ ಹೂಡಿದ ಎಲ್ಲ ಮೊಕದ್ದಮೆಗಳ ಬಗ್ಗೆ ಪೊಲೀಸರು ಪ್ರಥಮ ಮಾಹಿತಿ ವರದಿ ಸಲ್ಲಿಸಿದ್ದರಿಂದ ಉಂಟಾಗಿರಬಹುದು. ಆದರೆ ಇಂದಿನ ಮಹಿಳೆಯರು ಸುಶಿಕ್ಷಿತ ಹಾಗೂ ನಿರೀಕ್ಷೆಗಿಂತ ಹೆಚ್ಚು ಅಭಿವೃದ್ಧಿ ಹೊಂದಿದ ಯಾವ ಮಹಾನಗರದಲ್ಲೂ ಸುರಕ್ಷಿತರಲ್ಲ ಎಂಬುದರಲ್ಲಿ ಸಂದೇಹವಿಲ್ಲ.
ಅಕ್ಟೋಬರ್ 13ರವರೆಗೆ ದಾಖಲಾದ 1300 ಬಲಾತ್ಕಾರದ ಮೊಕದ್ದಮೆಗಳು (2012ರಲ್ಲಿ 590), ಮಾಲೆಸ್ಟೇಶನ್‌ನ 2,844 (2012ರಲ್ಲಿ 526), ಚುಡಾಯಿಸುವಿಕೆ ಬಗ್ಗೆ 793 (2012ರಲ್ಲಿ 154), ಅಪಹರಣ 2,906 (2012ರಲ್ಲಿ 1,750) ಮತ್ತು ಕೌಟುಂಬಿಕ ಹಿಂಸೆ ಬಗ್ಗೆ 2,487 (2012ರಲ್ಲಿ 1,605) ಮೊಕದ್ದಮೆಗಳು ದಾಖಲಾದವು. ಸುಪ್ರೀಂ ಕೋರ್ಟ್ ಈ ಮಾಹಿತಿ ಪಡೆದಿದ್ದೇಕೆಂದರೆ, ಪೊಲೀಸರು ಮೊಕದ್ದಮೆಗಳನ್ನು ಕ್ಲೋಸ್ ಮಾಡಿಬಿಡುತ್ತಾರೆಂದು ಒಂದು ಎನ್‌ಜಿಓ ದೂರಿತ್ತು.
ಡಿಸೆಂಬರ್ 16ರ ಘಟನೆಯ ನಂತರ ಜನಾಕ್ರೋಶ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದುದರಲ್ಲಿ ಆಶ್ಚರ್ಯವಿರಲಿಲ್ಲ. ಆದರೆ ಅದರಿಂದ ದುರಾಚಾರಿಗಳೂ, ಲಂಪಟರು ಗಾಬರಿಗೊಳ್ಳುತ್ತಾರೆಂದು ಯೋಚಿಸುವುದು ತಪ್ಪು. ಪೊಲೀಸರು ಈ ಕೇಸ್ ಗಳಲ್ಲಿ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಏಕೆಂದರೆ ಅವುಗಳಲ್ಲಿ ಅವರಿಗೆ ಹೆಚ್ಚಿನ ಹಣ ಸಿಗುವುದಿಲ್ಲ ಮತ್ತು ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ ನಂತರ ಯಾರೂ ಅವರ ಬೆನ್ನು ತಟ್ಟುವುದಿಲ್ಲ.
ಮಹಿಳೆಯರ ವಿರುದ್ಧದ ಹೆಚ್ಚಿನ ಕೇಸ್ ಗಳಲ್ಲಿ ಅಪರಾಧಿಗಳು ಪತ್ತೆಯಾಗುತ್ತಾರೆ. ಇಂತಹ ಕೇಸ್ ಗಳಲ್ಲಿ ಕಾನೂನಿನ ಪೇಪರ್ ವರ್ಕ್ ಹೆಚ್ಚಾಗಿರುತ್ತದೆ. ಕೊಲೆ, ಡಕಾಯಿತಿ, ಕನ್ನ ಹಾಕುವಿಕೆ ಇತ್ಯಾದಿಗಳಲ್ಲಿ ಅಪರಾಧಿ ಯಾವುದೇ ಸುಳಿ ಬಿಡದಿದ್ದಾಗ ಪೊಲೀಸರು ಏನಾದರೂ ಮಾಡಬಹುದಾಗಿದೆ. ಮಹಿಳೆಯರ ಕೇಸ್ ಗಳಲ್ಲಿ ಮಹಿಳೆಯರು ತಮ್ಮ ಪರಿಚಯದ ವ್ಯಕ್ತಿಯನ್ನು ಹಿಡಿದು ತರುತ್ತಾರೆ ಮತ್ತು ಕೋರ್ಟ್ ನಲ್ಲಿ ಮೊಕದ್ದಮೆ ಹೂಡುತ್ತಾರೆ. ಇದರಲ್ಲಿ ಪೊಲೀಸರಿಗೆ ಸಾಹಸ ಪ್ರದರ್ಶಿಸುವ ಅವಕಾಶ ಕಡಿಮೆ.
ಮಹಿಳೆಯರ ಬಗ್ಗೆ ಪೊಲೀಸರ ದೃಷ್ಟಿಕೋನ ಸಮಾಜಕ್ಕೆ ಇರುವಂತೆಯೇ ಇದೆ. ಗಂಡ ಬಿಟ್ಟವರು ಅಥವಾ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಪ್ರಾರಂಭದಿಂದಲೇ ದೋಷಿ ಎನ್ನುತ್ತಾರೆ ಮತ್ತು ಅದನ್ನು ಸಾಬೀತುಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ.
ಬಹಳಷ್ಟು ಸಂದರ್ಭಗಳಲ್ಲಿ ಮಹಿಳೆಯರು ಕೇವಲ ಸೇಡು ತೀರಿಸಿಕೊಳ್ಳಲು ಪೊಲೀಸರ ಬಳಿ ಹೋಗುತ್ತಾರೆ. ಇದು ಬ್ಲ್ಯಾಕ್ ಮೇಲ್‌ಮಾಡಲು ಒಳ್ಳೆಯ ಮಾರ್ಗವಾಗಿದೆ. ವರದಕ್ಷಿಣೆ ಕಾನೂನಿನಲ್ಲಿ ಹುಡುಗಿಯ ಕಡೆಯವರು ಗಂಡನ ಮನೆಯಿಂದ ಇಲ್ಲಸಲ್ಲದ್ದನ್ನು ಕೇಳಿ ವಿಚ್ಛೇದನ ಕೇಳಲು ಸಿದ್ಧರಾಗುತ್ತಾರೆ. ಮಹಿಳೆಯರ ಮೇಲಿನ ಅಪರಾಧದ ಕೇಸ್ ಗಳಲ್ಲಿ ಬ್ಲ್ಯಾಕ್ ಮೇಲ್ ಮಾಡುವುದು ಬಹಳ ಸುಲಭ. ಏಕೆಂದರೆ ಕಾನೂನಿನ ಗಾಲಿಯಂತೂ ಮಹಿಳೆಯರ ಸಾಕ್ಷಿಯಿಂದಲೇ ಚಲಿಸುತ್ತದೆ. ಆರೋಪಿ ಎಷ್ಟೇ ಕೂಗಿ ಕಿರುಚಾಡಿದರೂ ಅವನು ಜೈಲಿಗೆ ಹೋಗಲೇಬೇಕು.
ಮಹಿಳೆಯರ ಮೇಲಿನ ಅಪರಾಧಗಳನ್ನು ಕಡಿಮೆಗೊಳಿಸಲು ಮನೆಗಳಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡುವ ಅಗತ್ಯವಿದೆ. ಕಳೆದ ಕೆಲವು ವರ್ಷಗಳಲ್ಲಿ ಸೋನಿಯಾ ಗಾಂಧಿ ಕೆಲವು ಕಾನೂನುಗಳನ್ನು ಮಾಡಿಸಿದ್ದಾರೆ. ಆದರೆ ಅವು ಒಂದು ಕಡೆ ತಿಳಿಯದೆ ಮಾಡಿದುದಾಗಿದೆ. ಇನ್ನೊಂದು ಕಡೆ ಸಂಪತ್ತಿಗೆ ಸಂಬಂಧಿಸಿದ್ದಾಗಿದೆ. ಕಾನೂನಿಗೆ ಎಂದಿಗೂ ವ್ಯವಹಾರ ಕಲಿಸಲಾಗುವುದಿಲ್ಲ, ಅದು ಕೇವಲ ಶಿಕ್ಷೆ ವಿಧಿಸಬಹುದಷ್ಟೆ. ಆದರೆ ಇಂತಹ ಕೇಸ್ ಗಳಲ್ಲಿ ದೂರು ನೀಡುವ ಮಹಿಳೆಯರು ಕೋರ್ಟುಗಳಲ್ಲಿ ವಿಚಾರಣೆ ಎದುರಿಸಿ ಪಾಟೀ ಸವಾಲುಗಳಿಗೆ ಉತ್ತರಿಸುವ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಅಪಘಾತಗಳ ಹಿಂದಿನ ನಿರ್ಲಕ್ಷ್ಯತೆ
ವೋಲ್ವೋದ ಭಾರಿ ಬಸ್ ಗಳು ಬಾಹ್ಯವಾಗಿ ಸುರಕ್ಷಿತ ಎನಿಸುತ್ತವೆ. ಅದರಲ್ಲಿ ಪ್ರಯಾಣ ಮಾಡುವುದು ಸುಖಕರ ಎನಿಸುತ್ತದೆ. ತಮ್ಮ ವಾಹನಗಳ ಸಂಭಾವ್ಯ ಅಪಘಾತದ ಭೀತಿಯ ಕಾರಣದಿಂದ ಜನರಿಗೆ ಇವು ವರದಾನವೇ ಹೌದು. ಆದರೆ ಆಂಧ್ರಪ್ರದೇಶದ ಒಂದು ಪ್ರಕರಣದಲ್ಲಿ ಇದು ಬೆಂಕಿಯ `ತಂದೂರ್’ ಆಗಿ 45 ಜನರನ್ನು ಆಹುತಿ ತೆಗೆದುಕೊಂಡಿತು.
ಬೆಂಗಳೂರಿನಿಂದ ಹೈದರಾಬಾದಿಗೆ ಹೊರಟಿದ್ದ ಈ ಬಸ್ ಬೇರೊಂದು ವಾಹನವನ್ನು ಬಚಾವ್ ಮಾಡಲು ಹೋಗಿ ರಸ್ತೆ ಪಕ್ಕದ ಸೇತುವೆಗೆ ಉಜ್ಜಿಕೊಂಡು ಹೋಯಿತು. ನಂತರ ಡೀಸೆಲ್ ಟ್ಯಾಂಕ್ ಒಡೆದು ಬೆಂಕಿ ತಗುಲಿತು. ಕ್ಷಣಾರ್ಧದಲ್ಲಿಯೇ ಬೆಂಕಿ ಏರ್ ಕಂಡೀಶನ್ ನಿಂದಾಗಿ ಇಡೀ ಬಸ್ಸನ್ನು ವ್ಯಾಪಿಸಿಕೊಂಡಿತು.
ಆಧುನಿಕ ಬಸ್ ನ ಬಾಗಿಲುಗಳು ಎಲೆಕ್ಟ್ರಾನಿಕ್ ಆಪರೇಟೆಡ್ ಆಗಿರುತ್ತವೆ. ಸರ್ಕ್ಯೂಟ್ ವೈಫಲ್ಯದಿಂದಾಗಿ ಅದು ತೆರೆದುಕೊಳ್ಳಲಿಲ್ಲ. ಕಿಟಕಿಗೆ ಗಾಜುಗಳಿರುತ್ತವೆ. ಆದರೆ ಅವನ್ನು ಒಡೆಯಲು ಆಗುವುದಿಲ್ಲ. ಈ ಕಾರಣದಿಂದಾಗಿ ಕೇವಲ 7 ಜನರನ್ನು ರಕ್ಷಿಸಲು ಸಾಧ್ಯವಾಯಿತು. ಪ್ರಯಾಣಿಕರನ್ನು ರಕ್ಷಿಸುವ ಹೊಣೆ ಡ್ರೈವರ್ ಹಾಗೂ ಕಂಡಕ್ಟರ್ ಗಳ ಮೇಲಿರುತ್ತದೆ. ಆದರೆ ಅವರು ಡ್ರೈವರ್ ಕಡೆಯ ಬಾಗಿಲಿನಿಂದ ಜಿಗಿದುಹೋದರು. ಅವರಿಬ್ಬರನ್ನು ಬಂಧಿಸಲಾಯಿತು. ಈ ಹೊಣೆಗಾರಿಕೆಯಿಲ್ಲದ ವರ್ತನೆ ನಮ್ಮ ನೌಕರರ ನಿಷ್ಠೆಯಿಲ್ಲದ ಚಟುವಟಿಕೆಗೆ ಸಾಕ್ಷಿ.
ಅಂದಹಾಗೆ ದೇಶದ ರಸ್ತೆಗಳು ಅಪಾಯಕಾರಿ ಎಂದು ಕುಖ್ಯಾತಿ ಗಳಿಸಿವೆ. ಎಲ್ಲರೂ ಅವನ್ನು ಮನಸೋ ಇಚ್ಛೆ ಉಪಯೋಗಿಸುವವರೇ. ಆದರೆ ಯಾರೊಬ್ಬರೂ ಅವುಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಜನಸೇವೆ ಹಾಗೂ ಕರ್ತವ್ಯ ಪ್ರಜ್ಞೆಯನ್ನು ಮರೆತುಬಿಟ್ಟಿದೆ. ಹೆಚ್ಚಿನ ಅಪಘಾತಗಳಿಗೆ ಚಾಲಕರ ನಿರ್ಲಕ್ಷ್ಯತನ ಹಾಗೂ ರಸ್ತೆಗಳ ಕೆಟ್ಟ ನಿರ್ವಹಣೆಯೇ ಕಾರಣ.
ರಸ್ತೆ ಹಾಳುಗೆಡಹುದರಲ್ಲಿ ಪ್ರಯಾಣಿಕರ ಪಾತ್ರವೇನೂ ಕಡಿಮೆ ಇಲ್ಲ. ಅವರು ಅಲ್ಲಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿ ಬಸ್, ಆಟೋ, ಟೆಂಪೋಗಳ ನಿರೀಕ್ಷೆ ಮಾಡುತ್ತಾ ನಿಂತಿರುವುದನ್ನು ಕಾಣಬಹುದಾಗಿದೆ. ಮೊದಲೇ ಕಿರಿದಾದ ರಸ್ತೆಗಳನ್ನು ಇವರು ಮತ್ತಷ್ಟು ಕಿರಿದುಗೊಳಿಸುತ್ತಾರೆ. ಈ ಪ್ರಯಾಣಿಕರು ದಾರಿಯಲ್ಲಿ ನಿಂತಿರುವಾಗ ರಸ್ತೆಯನ್ನು ಆಕ್ರಮಿಸಿಕೊಂಡಿರುವ ಅಂಗಡಿಯವರಿಗೂ ಪ್ರೋತ್ಸಾಹ ನೀಡುತ್ತಾರೆ. ಅಂದರೆ ಅವರಿಂದ ತಿಂಡಿ ಮತ್ತಿತರ ವಸ್ತುಗಳನ್ನು ಖರೀದಿಸಿ ರಸ್ತೆಯನ್ನು ಮತ್ತಷ್ಟು ಕಿರಿದುಗೊಳಿಸುತ್ತಾರೆ. ದಾರಿ ಮಧ್ಯದಲ್ಲಿಯೇ ಬಸ್ ನಿಲ್ಲಿಸಿ ಹತ್ತುವುದನ್ನು ಅವರು ಹೆಮ್ಮೆಯೆಂದುಕೊಳ್ಳುತ್ತಾರೆ.
ಇವೆಲ್ಲ ಸಂಗತಿಗಳು ದುಬಾರಿಯಾಗಿ ಪರಿಣಮಿಸುತ್ತವೆ. ಸಾವಿರಾರು ಜನರು ರಸ್ತೆಗಳಲ್ಲಿಯೇ ಅಸುನೀಗುತ್ತಾರಲ್ಲದೆ, ಟ್ರಾಫಿಕ್ ಜಾಮ್ ಹಾಗೂ ನಿಧಾನಗತಿಯ ಸಂಚಾರದಿಂದಾಗಿ ಲಕ್ಷಾಂತರ ಗಂಟೆ ವ್ಯರ್ಥವಾಗಿರುತ್ತವೆ. ಇಂತಹದರಲ್ಲಿ ಡೀಸೆಲ್, ಪೆಟ್ರೋಲ್ ಕೂಡ ವ್ಯರ್ಥವಾಗಿ ಹೋಗುತ್ತದೆ ಎಂಬುದು ಬೇರೆ ಮಾತು. ನಿಜ ಹೇಳಬೇಕೆಂದರೆ, ನಾವು ನಮ್ಮ ಪ್ರಾಣ, ಹಣ ಹಾಗೂ ಸಮಯ ಕಳೆದುಕೊಳ್ಳಲು ಸಾಕಷ್ಟು ಕಷ್ಟಪಡುತ್ತೇವೆ. ಅಬ್ಪಾ! ಎಂತಹ ದೇಶ ನಮ್ಮದು!!
ರಸ್ತೆಗಳ ನಿಜವಾದ ಅಪರಾಧಿಗಳು
ದೇಶದ ರಸ್ತೆಗಳೆಂದರೆ, ಬಡವನ ಹೆಂಡತಿ ಊರಿಗೆಲ್ಲ ಅತ್ತಿಗೆ ಎಂಬಂತೆ ಆಗಿದೆ. ಇದನ್ನೇ ಸ್ವಲ್ಪ ಕಟು ಶಬ್ದಗಳಲ್ಲಿ ಹೇಳಬೇಕೆಂದರೆ, ಅವು ಉಚಿತವಾಗಿ ದೊರೆಯುವ ಕಾಲ್ ಗರ್ಲ್ ಗಳ ಹಾಗೆ, ಬೇಕೆಂದಾಗ ತಮಗೆ ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳುತ್ತಾರೆ. ಆದರೆ ಒಂದಿಷ್ಟು ಜವಾಬ್ದಾರಿ ತೆಗೆದುಕೊಳ್ಳುವುದನ್ನು ತಮ್ಮ ಕರ್ತವ್ಯ ಎಂದು ಭಾವಿಸುವುದಿಲ್ಲ. ಸರ್ಕಾರಗಳು, ನಗರ ಪಾಲಿಕೆಗಳು ಅದೆಷ್ಟೇ ಪ್ರಯತ್ನಪಟ್ಟರೂ ಒಂದೇ ಒಂದು ದುರಸ್ತಿ ರಹಿತ ರಸ್ತೆ ದೊರೆಯಲಾರದು.ಎಲ್ಲರೂ ಈ ರಸ್ತೆಗಳಿಂದ ಲಾಭ ಪಡೆಯುತ್ತಿದ್ದಾರೆಂದರೆ, ಯಾರಿಗೂ ಹಾನಿಯಾಗುತ್ತಿಲ್ಲ ಎಂದು ಭಾವಿಸಬೇಡಿ. ಅಂದರೆ ಎಷ್ಟು ಹಾನಿಯಾಗುತ್ತದೋ ಅಷ್ಚು ಲಾಭ ಮಾತ್ರ ಆಗುತ್ತಿಲ್ಲ. ಬಹಳಷ್ಟು ಜನರಿಗೆ ರಸ್ತೆಗಳ ಬಗ್ಗೆ ಏನೇನೂ ಗೊತ್ತಿಲ್ಲ, ಆದರೂ ಕಣ್ಮುಚ್ಚಿ ಖರ್ಚು ಮಾಡುತ್ತಿದ್ದಾರೆ.
ದೇಶದ ರಸ್ತೆಗಳ ಪ್ರಥಮ ಅಪರಾಧಿಗಳೆಂದರೆ ಅಲ್ಲಿನ ಅಂಗಡಿಯವರು. ಅವರು ರಸ್ತೆಯನ್ನು ತಮ್ಮ ಖಾಸಗಿ ಸೊತ್ತು ಎಂದು ಭಾವಿಸುತ್ತಾರೆ. ರಸ್ತೆ ಬದಿಯ ಅಂಗಡಿಯವರು ಕ್ರಮೇಣ ಅಂಗಡಿಗಳನ್ನು ವಿಸ್ತರಿಸುತ್ತ ರಸ್ತೆಯನ್ನು ಸಾಕಷ್ಟು ಕಿರಿದುಗೊಳಿಸುತ್ತಾರೆ. ಇಂತಹ ಅಂಗಡಿಗಳಲ್ಲಿ ಖರೀದಿಸುವುದರ ಮೂಲಕ ಗ್ರಾಹಕರು ಕೂಡ ಅವರಿಗೆ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ.
ಗ್ರಾಹಕರು ಕೇವಲ ತಮಗಷ್ಟೇ ತೊಂದರೆ ತಂದುಕೊಳ್ಳುವುದಿಲ್ಲ. ಇತರರಿಗೂ ತಾಪತ್ರಯವನ್ನುಂಟು ಮಾಡುತ್ತಾರೆ. ಏಕೆಂದರೆ ಈ ಅಂಗಡಿಯವರು ಗ್ರಾಹಕರ ಪುಸಲಾಯಿಸುವಿಕೆಯಿಂದಾಗಿ ರಸ್ತೆ ಬದಿ ಅಂಗಡಿ ತೆರೆಯುತ್ತಾರೆ.
ಎರಡನೇ ಅಪರಾಧಿ ಕೂಡ ಅಂಗಡಿಯವನೇ. ರಸ್ತೆಯನ್ನು ಆಕ್ರಮಿಸಿಕೊಂಡು ತನ್ನ ವ್ಯಾಪಾರ ಆರಂಭಿಸುತ್ತಾನೆ. ಇಲ್ಲೂ ಕೂಡ ಸಾಮಾನ್ಯ ನಾಗರಿಕರೇ ಖರೀದಿಸಿ ಅವರಿಗೆ ಬೆಂಬಲ ನೀಡುತ್ತಿರುತ್ತಾರೆ. ರಸ್ತೆಗಳು ಇಕ್ಕಟ್ಟಾಗಿವೆಯೆಂದು ಸರ್ಕಾರದ ಮೇಲೆ ಆರೋಪ ಹೊರಿಸಿ ಬೊಬ್ಬೆ ಹೊಡೆಯುವವರು ಕೂಡ ಅವರೇ.
ರಸ್ತೆ ಬದಿ ನಿರ್ಮಾಣವಾದ ಅಂಗಡಿಗಳಲ್ಲಿ ತರಕಾರಿ ಹಣ್ಣು ಹಂಪಲು ಖರೀದಿಸುವ ಮಹಿಳೆಯರು ನಿಜ ಅರ್ಥದಲ್ಲಿ ಸಮಾಜದ ವೈರಿಗಳು. ರಸ್ತೆ ಬದಿ ಅಂಗಡಿ ಹಾಕಿಕೊಂಡರವನ್ನು ಬಡವರೆಂದು ತಿಳಿಯುವುದು ತಪ್ಪು. ಸಾರ್ವಜನಿಕರ ಸಂಚಾರದ ಮೂಲವಾಗಿರುವ ರಸ್ತೆಯನ್ನು ಆಕ್ರಮಿಸಿಕೊಳ್ಳಲು ಬಡತನ ಎಂದೂ ಕಾರಣವಾಗುವುದಿಲ್ಲ.
ಸರ್ಕಾರಿ ಇಲಾಖೆಗಳು ಕೂಡ ರಸ್ತೆಯ ವೈರಿಗಳೇ ಹೌದು. ದೇಶದ ಯಾವುದೇ ಮೂಲೆಗಾದರೂ ಹೋಗಿ, ರಸ್ತೆ ಬದಿಯಲ್ಲಿ ಕಸದ ಗುಡ್ಡೆಗಳು ನಿಮ್ಮ ಕಣ್ಣಿಗೆ ರಾಚದೇ ಇರುವುದಿಲ್ಲ. ವಿದ್ಯುತ್ ಇಲಾಖೆ, ದೂರವಾಣಿ ಇಲಾಖೆ, ಒಳಚರಂಡಿ ಇಲಾಖೆ ಹೀಗೆ ಅನೇಕ ಇಲಾಖೆಗಳು ತಮ್ಮ ಕೆಲಸ ಪೂರ್ಣಗೊಳಿಸಲೆಂದು ಗುಂಡಿ ತೋಡುತ್ತವೆ. ಆದರೆ ಕೆಲಸ ಮುಗಿದ ಬಳಿಕ ಅವನ್ನು ಹಾಗೆಯೇ ಬಿಟ್ಟುಹೋಗುತ್ತವೆ. ಆ ಹೊಂಡಗಳಲ್ಲಿ ನೀರು ತುಂಬಿ ಅನೇಕರು ಕೈ ಕಾಲು ಮುರಿದುಕೊಳ್ಳುತ್ತಾರೆ. ಜೊತೆಗೆ ಅವು ಅನೇಕ ರೋಗಗಳಿಗೂ ಕಾರಣವಾಗುತ್ತವೆ.
ಸರ್ಕಾರ ಬೇರೆ ಯಾವ ಯಾವುದೋ ಕಾರಣಗಳಿಗೆ ದಂಡ ಹೇರುತ್ತದೆ. ಆದರೆ ತನ್ನದೇ ಇಲಾಖೆಯ ಅಧಿಕಾರಿಗಳು, ನೌಕರರ ಮೇಲೆ ಮಾತ್ರ ಕ್ರಮ ಜರುಗಿಸುವುದಿಲ್ಲ.
ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದು ಈಗ ಫ್ಯಾಷನ್ ಆಗಿಬಿಟ್ಟಿದೆ. ಅದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೊರಟಿದೆ. ರಸ್ತೆ ಮಗ್ಗುಲಿನ ದಾರಿ ಪಾದಚಾರಿಗಳಿಗೆ ಸುಲಭವಾಗಿ ನಡೆದುಕೊಂಡು ಹೋಗಲೆಂದು ನಿರ್ಮಾಣ ಮಾಡಲಾಗಿದೆ ಹೊರತಾಗಿ ಗಾಡಿಗಳನ್ನು ನಿಲ್ಲಿಸಲು ಅಲ್ಲ.
ನ್ಯೂಯಾರ್ಕ್ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಟ್ಟಡಗಳ ನೆಲಮಹಡಿಯಲ್ಲಿರುತ್ತದೆ. ಶುಲ್ಕ ಕೇವಲ 9.99 ಡಾಲರ್ ಪ್ರತಿ ಅರ್ಧ ಗಂಟೆಗೆ. ಇದನ್ನು ಕೇಳಿದ ನಮ್ಮವರ ಪ್ರಜ್ಞೆತಪ್ಪಿ ಬಿಡುತ್ತದೆ.
ಮಹಾನಗರಗಳಲ್ಲಿ ಪಾರ್ಕಿಂಗ್ ಶುಲ್ಕ ಸ್ವಲ್ಪ ಏರಿಸುತ್ತಾರೆಂದರೆ ಗೊಂದಲ ಗಲಾಟೆಗಳು ಶುರುವಾಗಿಬಿಡುತ್ತವೆ. ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರೆ ಅವರಿಗೆ ಬಾಡಿಗೆ ಕೊಡುವಂತೆ, ವಾಹನಗಳನ್ನು ನಿಲ್ಲಿಸಲು ಬಾಡಿಗೆ ಏಕೆ ಕೊಡಬಾರದು? ವಾಹನ ಶುಲ್ಕವನ್ನು ಸರ್ಕಾರದ ಬದಲಿಗೆ ಗೂಂಡಾಗಳು ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆಂದರೆ ಆ ಮಾತು ಬೇರೆ.
ರಸ್ತೆಗಳನ್ನು ಉಚಿತವಾಗಿ ದೊರೆಯುವ ವೇಶ್ಯೆಯೆಂದು ಭಾವಿಸಬೇಡಿ. ಹಾಗೆ ಮಾಡಿಕೊಂಡರೆ ಅದು ಇಡೀ ಸಮಾಜಕ್ಕೆ ಹಾನಿಯನ್ನುಂಟು ಮಾಡುತ್ತದೆ. ಪ್ರತಿಯೊಬ್ಬರೂ ಶುಲ್ಕ ತೆರಲೇಬೇಕಾಗುತ್ತದೆ. ಅದರಿಂದ ಯಾರೊಬ್ಬರಿಗೂ ವಿನಾಯ್ತಿ ಇಲ್ಲ.