ಸೀಕ್ವೆನ್ಸ್ ವರ್ಕ್ ನಿಂದ ಅಲಂಕೃತ ಡ್ರೆಸ್ : ಎಲ್ಲಾ ಕಾಲಕ್ಕೂ ನಕ್ಷತ್ರ (ಸೀಕ್ವೆನ್ಸ್)ಗಳುಳ್ಳ ಹೊಳೆ ಹೊಳೆಯುವ ಡ್ರೆಸ್ ಗಳು ಅಧಿಕ ಬೇಡಿಕೆಯಲ್ಲಿರುತ್ತವೆ. ಒಂದು ಪರ್ಫೆಕ್ಟ್ ದಿನದ ಆರಂಭಕ್ಕಾಗಿ ಸೀಕ್ವೆನ್ಸ್ ವರ್ಕ್ ವುಳ್ಳ ಟಾಪ್‌ಲೈನಿಂಗ್ ಧರಿಸಿ ಅಥವಾ ಲೈನ್ ಸ್ಕರ್ಟ್ ಧರಿಸಿರಿ, ಈ ಎರಡು ಡ್ರೆಸ್ ಗಳೂ ನಿಮಗೆ ಗ್ಲಾಮರಸ್ ಸ್ಟೈಲಿಶ್ ಲುಕ್ಸ್ ನೀಡುತ್ತವೆ. ಗೋಲ್ಡನ್, ಸಿಲ್ವರ್ ನಂಥ ಹೊಳೆಯುವ ಬಣ್ಣಗಳ ಜೊತೆ ನೀಲಿ, ಕಪ್ಪು, ಕೆಂಪು, ಆರೆಂಜ್, ಮೆಜೆಂತಾದಂಥ ಬೋಲ್ಡ್ ಬಣ್ಣಗಳನ್ನು ಮಿಕ್ಸ್ ಮ್ಯಾಚ್ ಮಾಡಿ. ಇದರ ಜೊತೆಗೆ ಲೈಟ್ ಕಲರ್ ನ ಸ್ಕಾರ್ಫ್ ಯಾ ಜ್ಯಾಕೆಟ್ ಧರಿಸಿರಿ, ಮ್ಯಾಚಿಂಗ್ ಮಾಸ್ಕ್ ಸಹ ಬೇಕಾಗುತ್ತದೆ.
ಪೇಸ್ಟಲ್ ಕಲರ್ ಡ್ರೆಸೆಸ್ : ಯಾವುದೇ ಋತು ಇರಲಿ, ಪೇಸ್ಟಲ್ ಅಂದ್ರೆ ಕೈಗೆಟುಕುವ ಡ್ರೆಸೆಸ್ ನಿಮ್ಮ ವಾರ್ಡ್ ರೋಬ್ ನಲ್ಲಿ ಸದಾ ಇರಲಿ. ಹಳದಿ, ಬದನೆ, ಹಸಿರು, ಗುಲಾಬಿ, ಕಿತ್ತಳೆಯಂಥ ಬಣ್ಣಗಳ ಡ್ರೆಸೆಸ್ ಆರಿಸಿ. ಇವು ಬ್ರೈಟ್ ಮಾತ್ರವಲ್ಲ, ಆಕರ್ಷಕ ಕೂಡ.
ವಿಂಟೇಜ್ ಪ್ಲೇವರ್ಸ್ : ಈ ತರಹದ ಉಡುಗೆಗಳು 40-50ರ ದಶಕದಿಂದಲೇ ಚಾಲ್ತಿಯಲ್ಲಿವೆ. ಇದೀಗ 2025ರಲ್ಲೂ ಈ ಫ್ಯಾಷನ್ ಮರಳಿ ಬಂದಿದೆ. ಪ್ಲೇವರ್ ಡಿಸೈನ್ ವುಳ್ಳ ಮ್ಯಾಕ್ಸಿ/ಮಿಡಿ ಡ್ರೆಸ್ ಧರಿಸಿ ಅಥವಾ ಪ್ಲೇವರ್ ಟಾಪ್ ಜೊತೆ ಡೆನಿಂ ಜ್ಯಾಕೆಟ್ ಧರಿಸಿರಿ. ಇಷ್ಟು ಮಾತ್ರವಲ್ಲದೆ, ಪ್ಲೇವರ್ ಪ್ರಿಂಟಿನ ಸ್ಕಾರ್ಫ್, ಮೊಬೈಲ್ ಕವರ್, ಬ್ಯಾಗ್ ಯಾ ಹ್ಯಾಂಡ್ ಗ್ಲವ್ಸ್ ಸಹ ಬಳಸಿಕೊಳ್ಳಿ.
ಹೆರಿಟೇಜ್ ಚೆಕ್ಸ್ : ಫಾರ್ಮಲ್ ಡ್ರೆಸೆಸ್ ಜೊತೆ ಇವು ಬೆಟರ್ ಚಾಟ್ಸ್. ಹೆರಿಟೇಜ್ ಚೆಕ್ಸ್ ಪ್ಯಾಟರ್ನಿನ ಫ್ಲಾಟಿ ಫೆಮಿನಿನ್ ಬಿಸ್ ನೆಸ್ ಸೂಟ್ ಬಳಸಿಕೊಳ್ಳಿ. ಇದು ಯಾವುದೇ ಅಫಿಶಿಯಲ್ ಮೀಟಿಂಗ್ ಗೆ ಪರ್ಫೆಕ್ಟ್ ಆಯ್ಕೆ. ಫ್ಲೀರ್ಡ್ ಪೆನ್ಸಿಲ್ ಸ್ಕರ್ಟ್ ಯಾ ಟ್ರೌಸರ್ಸ್ ಜೊತೆ ಲಿನೆನ್ ಶರ್ಟ್‌ಸಹ ಧರಿಸಬಹುದು. ಚೆಕ್ಸ್ ಶರ್ಟ್ ನ್ನು ನೀವು ದಿನನಿತ್ಯದ ಆಯ್ಕೆಯಾಗಿ ಇರಿಸಿಕೊಳ್ಳಿ. ಇದನ್ನು ಹೆಚ್ಚು ಆಕರ್ಷಕಗೊಳಿಸಲು, ಇದರ ಜೊತೆ ಸ್ಕಾರ್ಫ್ ಧರಿಸಿರಿ.
ಫ್ರಿಂಜಿ (ನೆಟೆಡ್) ಡ್ರೆಸ್ : ಸಂಜೆಯ ಪಾರ್ಟಿ ಅಥವಾ ಸಂಗಾತಿ ಜೊತೆ ಕ್ಯಾಂಡಲ್ ಲೈಟ್ ಡಿನ್ನರ್ ಗೆ ಹೊರಟಾಗ ಫ್ರಿಂಜಿ ಸ್ಕರ್ಟ್ ಧರಿಸಿರಿ. ಇದರ ಜೊತೆ ಎತ್ತರದ ಹಿಮ್ಮಡಿಯ ಅಥವಾ ದಪ್ಪ ಹಿಮ್ಮಡಿಯ ಸ್ಯಾಂಡಲ್ಸ್ ಧರಿಸಿರಿ. ಕಾಕ್ ಟೇಲ್ ರಿಂಗ್ ಯಾ ಬ್ಯೂಟಿಫುಲ್ ರೌಂಡ್ ಇಯರ್ ರಿಂಗ್ಸ್ ಧರಿಸಿ ನಿಮ್ಮ ಸ್ಟೈಲ್ ಹೆಚ್ಚಿಸಿಕೊಳ್ಳಿ.
ಲೈಲಾಕ್ ಕಲರ್ (ವೈಟ್ ಪರ್ಪಲ್) : ಈ ಬಣ್ಣ ಎಲ್ಲಾ ಋತುವಿಗೂ ಒಪ್ಪುತ್ತದೆ. ಲ್ಯಾವೆಂಡರ್ ಶೇಡ್ ನ್ನು ಹಲವು ವಿಧಾನಗಳಲ್ಲಿ ಧರಿಸಬಹುದಾಗಿದೆ. ಲೈಲಾಕ್ ಟಾಪ್‌ಬ್ಲೌಸ್ ನಿಂದ ಹಿಡಿದು ಟ್ರೌಸರ್ ಸ್ಕರ್ಟ್ ವರೆಗೂ ಬಳಸಿಕೊಳ್ಳಿ. ಈ ಬಣ್ಣವನ್ನು ಲೈಟ್ ಡಾರ್ಕ್ ಎರಡೂ ತರಹದ ಬಣ್ಣಗಳ ಡ್ರೆಸ್ ನೊಂದಿಗೆ ಹೊಂದಿಸಬಹುದು.
ಪೆನ್ಸಿಲ್ ಸ್ಕರ್ಟ್ : ಇದು ಎಂಥ ಆಯ್ಕೆ ಎಂದರೆ ಎಲ್ಲಾ ಋತುಗಳ ಹೊರಗಿನ ಓಡಾಟಕ್ಕೆ ಯಾವುದೇ ಸಮಾರಂಭಕ್ಕೂ ಹೊಂದುತ್ತದೆ. ಇದು ಎಂದೂ ಔಟ್ ಆಫ್ ಫ್ಯಾಷನ್ ಎನಿಸದು. ಪೆನ್ಸಿಲ್ ಸ್ಕರ್ಟ್ ನ್ನು ಪೆಪ್ಲಮ್ ಟಾಪ್, ರಫ್ಡ್ ಸ್ಲೀವ್ ಬ್ಲೌಸ್ ಯಾ ಶರ್ಟ್ ಜೊತೆ ಬಳಸಿಕೊಳ್ಳಿ. ಇದು ಅತ್ಯಾಕರ್ಷಕ ಲುಕ್ಸ್ ಒದಗಿಸುತ್ತದೆ.
ಸ್ಟೈಲಿಶ್ ಕೋಲ್ಡ್ ಶೋಲ್ಡರ್ಸ್ : ಇವು ಹಲವು ವಿಧದ ಸ್ಟೈಲಿಂಗ್ ಆಪ್ಶನ್ಸ್ ನೀಡುತ್ತವೆ. ಇವನ್ನು ಎಲ್ಲಾ ತರಹದ ಉಡುಗೆಗಳ ಜೊತೆಯೂ ಧರಿಸಬಹುದು. ಆಫೀಸಿನಲ್ಲಿ ಶರ್ಟ್, ಪಾರ್ಟಿಗಳಲ್ಲಿ ಟಾಪ್, ಈವ್ನಿಂಗ್ ಪಾರ್ಟಿಗಳಿಗೆ ಗೌನ್ ಆಗಿ ಬಳಸಬಹುದು.
ಆಫ್ ಶೋಲ್ಡರ್ ಡ್ರೆಸ್ : ಆಫ್‌ಶೋಲ್ಡರ್ಡ್ ಮಾಡರ್ನ್ ಫ್ಯಾಷನ್ನಿನ ಒಂದು ಮುಖ್ಯ ಟ್ರೆಂಡ್ ಆಗಿದ್ದು, ಸದಾ ಚಾಲ್ತಿಯಲ್ಲಿರುತ್ತದೆ. ಈ ವರ್ಷ ಇಂಥ ಉಡುಗೆಗೆ ಹೆಚ್ಚಿನ ಬೇಡಿಕೆ ಇದೆ. ಇದನ್ನು ನೀವು ಯಾವುದೇ ಬಗೆಯ ಉದ್ದನೇ ನಿಕ್ಕರ್, ಬರ್ಮುಡಾ, ಶಾರ್ಟ್ ಡ್ರೆಸ್ ಟಾಪ್ ಜೊತೆ ಧರಿಸಬಹುದು.
ಬೆಲ್ ಬಾಟಂ : ಇದು 80ರ ದಶಕದ ಪಾಪ್ಯುಲರ್ ಡ್ರೆಸ್, ಆದರೆ ಇತಿಹಾಸ ಮರುಕಳಿಸುವಂತೆ ಫ್ಯಾಷನ್ ರಿಪೀಟ್ ಆಗುತ್ತಿದ್ದು, ಇದೀಗ ಮತ್ತೆ ಚಾಲ್ತಿಗೆ ಬಂದಿದೆ. ಇದೊಂದು ಸ್ಟೈಲಿಶ್ ರೆಟ್ರೋ ಆಪ್ಶನ್ ಎನ್ನಬಹುದು.
ವೈಡ್ ಲೆಗ್ ಟ್ರೌಸರ್ : ಇಂಥ ಆರಾಮದಾಯಕವಾಗಿದ್ದು ಹೆಚ್ಚು ಸ್ಟೈಲಿಶ್, ಗ್ಲಾಮರಸ್ ಎನಿಸುತ್ತವೆ. ಇದನ್ನು ಯಾವುದೇ ಸಿಲ್ಕ್ ಶಿಮರ್ ನ ಟಾಪ್ ಮತ್ತು ಫುಲ್ ಸ್ಲೀವ್ ಶರ್ಟ್ ಜೊತೆ ಧರಿಸಬಹುದು.
ನೆನಪಿಡಬೇಕಾದ ಒಂದು ಮುಖ್ಯ ವಿಷಯವೆಂದರೆ, ಕೋವಿಡ್ ಮಹಾಮಾರಿಯ ಕಾಟ ಇನ್ನೂ 100% ನಿವಾರಣೆಗೊಂಡಿಲ್ಲ. ಹೀಗಾಗಿ ಸುಲಭವಾಗಿ ಎಲ್ಲರೊಂದಿಗೆ ಕೈ ಕುಲುಕಬೇಡಿ, ಅಪ್ಪಿಕೊಳ್ಳಬೇಡಿ. ದೂರದಿಂದಲೇ ನಮಸ್ತೆ ಹೇಳಿ, ಪ್ರತಿ ಸಲ ಡ್ರೆಸ್ ಗೆ ಮ್ಯಾಚಿಂಗ್ ಮಾಸ್ಕ್ ಧರಿಸಿ, ಆಗಾಗ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರಿ.
– ಆಶಾ ಶರ್ಮು