ಬೇಸಿಗೆಯಲ್ಲಿ ಸಾಮಾನ್ಯವಾಗಿ ಜನ ಸೋಂಕು ಅಥವಾ ಫಂಗಲ್ ಇನ್‌ ಫೆಕ್ಷನ್‌ ಗೆ ಒಳಗಾಗಿ ಬಹಳ ಕಿರಿಕಿರಿ ಅನುಭವಿಸುತ್ತಾರೆ. ಇದು ಒಂದು ಬಗೆಯ ಚರ್ಮಕ್ಕೆ ಸಂಬಂಧಿಸಿದ ಸಾಂಕ್ರಾಮಿಕ ಸೋಂಕಾಗಿದೆ. ಯಾವಾಗ ಫಂಗಸ್‌ ಸೂಕ್ಷ್ಮಾಣು (ಮೈಕ್ರೋಬ್ಸ್) ನಮ್ಮ ದೇಹದ ಮೇಲೆ ಆಕ್ರಮಣ ನಡೆಸುತ್ತದೋ, ನಮ್ಮ ಇಮ್ಯುನಿಟಿ ಸಿಸ್ಟಂ ಇದರ ವಿರುದ್ಧ ಹೋರಾಡಲು ಆಗದಿದ್ದಾಗ, ಈ ಸೋಂಕಿನ ಪ್ರಭಾವಕ್ಕೆ ಒಳಗಾದ ಚರ್ಮ ಕೆಂಪು ಗುಳ್ಳೆ, ದದ್ದು, ನವೆ, ಉರಿ, ನೋವು, ಕಡಿತ, ಊತಗಳಿಗೆ ಗುರಿಯಾಗಿ ಹಿಂಸೆ ತರುತ್ತದೆ. ಸಾಮಾನ್ಯವಾಗಿ ಚರ್ಮದ ಅಧಿಕಾಂಶ ಸೋಂಕು ಸಮಸ್ಯೆಗಳು ಸಕಾಲಕ್ಕೆ ಸೂಕ್ತ ಚಿಕಿತ್ಸೆ ಒದಗಿಸುವುದರಿಂದ ಗುಣವಾಗುತ್ತದೆ.

IB125527_125527160642537_SM404204 (1)

ಇಂಥ ಸೋಂಕಿಗೆ ಕಾರಣವೇನು?

ಫಂಗಲ್ ಇನ್‌ ಫೆಕ್ಷನ್‌ ಉಂಟಾಗಲು ಅಥವಾ ಹೆಚ್ಚಲು ಅನೇಕ ಕಾರಣಗಳಿವೆ. ಆದರೆ ಇಮ್ಯುನಿಟಿ ಕುಂದುವಿಕೆ, ಅತಿಯಾದ ತಾಪ, ಬಿಸಿ ಗಾಳಿಯ ವಾತಾವರಣ ಇತ್ಯಾದಿ ಈ ಸೋಂಕು ಹೆಚ್ಚಲು ಕಾರಣ. ಇಷ್ಟು ಮಾತ್ರವಲ್ಲದೆ, ಏಡ್ಸ್, HIV ಸೋಂಕು, ಕ್ಯಾನ್ಸರ್‌, ಮಧುಮೇಹ ಇತ್ಯಾದಿ ಸಹ ಈ ಸೋಂಕು ಹೆಚ್ಚಾಗಲು ಕಾರಣಗಳಾಗಿವೆ. ಯಾವ ಜನ ಈ ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕಕ್ಕೆ ಬರುತ್ತಾರೋ ಅವರಿಗೂ ಸೋಂಕಿನ ಭೀತಿ ತಪ್ಪಿದ್ದಲ್ಲ.

ಸ್ಥೂಲಕಾಯ, ಅಧಿಕ ದೇಹ ತೂಕದ ಸಮಸ್ಯೆಯೂ ಇದರ ಮತ್ತೊಂದು ಕಾರಣ. ಇದರ ದೆಸೆಯಿಂದಾಗಿ ನಿತಂಬ ಹಾಗೂ ಅಧಿಕ ಮಾಂಸಲ ಭಾಗಗಳಲ್ಲಿ ಹೆಚ್ಚಿನ ಕೊಬ್ಬಿನ ಶೇಖರಣೆಯ ಕಾರಣ, ವ್ಯಾಯಾಮ, ಸೈಕ್ಲಿಂಗ್‌, ಜಾಗಿಂಗ್‌, ರನ್ನಿಂಗ್‌ ಇತ್ಯಾದಿಗಳಿಂದಾಗಿ ಸಂಧಿನ ಭಾಗಗಳಲ್ಲಿ ಅಧಿಕ ಬೆವರುವಿಕೆಯಿಂದ ಪರಸ್ಪರ ಹೆಚ್ಚಾಗಿ ತಿಕ್ಕಾಡುವ ಚರ್ಮದ ಕಾರಣ ರಾಶೆಸ್‌ಹೆಚ್ಚುತ್ತದೆ. ಇದರಿಂದ ಸೋಂಕು ತಪ್ಪಿದ್ದಲ್ಲ.

ಇದಕ್ಕೆ ಆನುವಂಶಿಕತೆಯೂ ಮತ್ತೊಂದು ಕಾರಣ ಆಗಬಹುದು. ಹೆಂಗಸರಿಗೆ ಸ್ಯಾನಿಟರಿ ಪ್ಯಾಡ್‌ ಗಳಿಂದಲೂ ನಿತಂಬಗಳ ಅಕ್ಕಪಕ್ಕ ಸೋಂಕು ತಗುಲು, ಸಾಧ್ಯತೆಗಳಿವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಫಂಗಸ್‌ ಉಂಟು ಮಾಡುವ ಕೀಟಾಣು ಎಷ್ಟೋ  ಪಾಲು ಹೆಚ್ಚುತ್ತದೆ. ಮಳೆಹನಿಗಳಲ್ಲಿ ನೆನೆದು ಬಂದ ಜನ, ಅದನ್ನು ನಿರ್ಲಕ್ಷಿಸಿ ಒರೆಸಿ ಒಣಗಿಸುವುದಿಲ್ಲ. ಈ ಸಣ್ಣ ನಿರ್ಲಕ್ಷ್ಯ ಮುಂದೆ ಸೋಂಕಿಗೆ ದಾರಿಯಾಗುತ್ತದೆ. ಶುಭ್ರತೆ ಶುಚಿತ್ವಗಳತ್ತ, ನಿರ್ಲಕ್ಷ್ಯ, ತಮ್ಮ ಕೊಳಕು ಸಾಕ್ಸ್, ಅಂಡರ್‌ ಗಾರ್ಮೆಂಟ್ಸ್ ಒಗೆಯದೆ ಮತ್ತೆ ಧರಿಸುವವರು ಇಂಥ ಸಮಸ್ಯೆಗೆ ಬೇಗ ಸಿಲುಕುತ್ತಾರೆ.

ಇದರಿಂದ ಪಾರಾಗುವ ಬಗೆ

ಜೀವನಶೈಲಿ ಹಾಗೂ ನಿಮ್ಮ ಆಹಾರದಲ್ಲಿ ಬದಲಾವಣೆ ತಂದುಕೊಂಡು, ಸಾಕಷ್ಟು ಸೀಸನ್‌ ಸೋಂಕು, ರೋಗಗಳನ್ನು ದೂರ ಇರಿಸಬಹುದಾಗಿದೆ. ಏಕೆಂದರೆ `ಊಟ ಬಲ್ಲವನಿಗೆ ರೋಗವಿಲ್ಲ’ ಎಂಬಂತೆ, ನಿಮ್ಮ ಆಹಾರದಲ್ಲಿನ ಪೌಷ್ಟಿಕಾಂಶಗಳಿಂದ ನಿಮ್ಮ ಇಮ್ಯುನಿಟಿ ಸುಧಾರಿಸುತ್ತದೆ. ಅದರಲ್ಲೂ ಮಾನ್‌ ಸೂನ್‌, ಬೇಸಿಗೆ ಕಾಲದ ಹ್ಯೂಮಿಡಿಟಿಗಳಿಂದಾಗಿ ಈ ಫಂಗಲ್ ಇನ್‌ ಫೆಕ್ಷನ್ ಹೆಚ್ಚಾಗುತ್ತದೆ. ಹೀಗಾಗಿ ಆದಷ್ಟೂ ನಿಮ್ಮ ಚರ್ಮವನ್ನು ಡ್ರೈ ಹೈಜಿನಿಕ್‌ ಆಗಿ ಇರಿಸಿಕೊಳ್ಳಿ. ಸಾಧ್ಯವಾದಷ್ಟೂ ಕಾಟನ್‌ ಡ್ರೆಸೆಸ್‌ ಗೆ ಆದ್ಯತೆ ನೀಡಿ. ಅದರಲ್ಲೂ ಇನ್ನರ್‌ ವೇರ್‌ ಗಳಿಗೆ ಕಾಟನ್‌ ಕಡ್ಡಾಯ. ಇದರಿಂದ ನೀವು ಫಂಗಲ್ ಇನ್‌ ಫೆಕ್ಷನ್‌ ನಿಂದ ಎಷ್ಟೋ ಪಾರಾಗಬಹುದು. ಜೊತೆಗೆ ದಿನವಿಡೀ ಧಾರಾಳ ನೀರು, ಪಾನಕ, ಎಳನೀರು, ನೀರುಮಜ್ಜಿಗೆ ಇತ್ಯಾದಿ ಕುಡಿಯುತ್ತಲೇ ಇರಿ. ಇದರಿಂದ ಡೀಪೈಡ್ರೇಶನ್‌ ತೊಂದರೆ ತಪ್ಪುತ್ತದೆ, ಚರ್ಮ ಡ್ರೈ ಆಗದು.

ಫಂಗಲ್ ಇನ್‌ ಫೆಕ್ಷನ್‌ ನ್ನು ಸರಿಸಪಡಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿ ಲಭ್ಯವಿವೆ, ಬಹಳ ಗುಣಕಾರಿಯೂ ಹೌದು. ಇದಕ್ಕಾಗಿ ಈ ರೀತಿ ಮನೆಮದ್ದು ಸಹ ಮಾಡಬಹುದು :

Haldi

ಅರಿಶಿನ

ಇದರಲ್ಲಿ ಆ್ಯಂಟಿ ಫಂಗಲ್ ಅಂಶಗಳು ಅಡಗಿದ್ದು ಇದರ ಲೇಪನದಿಂದ ಫಂಗಲ್ ಇನ್‌ ಫೆಕ್ಷನ್‌ ಎಷ್ಟೋ ಬೇಗ ಗುಣವಾಗುತ್ತದೆ. ಇದಕ್ಕಾಗಿ ಎಲ್ಲೆಲ್ಲಿ ಸೋಂಕು ಆಗಿದೆಯೋ ಆ ಭಾಗಕ್ಕೆ ಹಸಿ ಅರಿಶಿನದ ಕೊಂಬನ್ನು ತುಸು ಮೊಸರಿನೊಂದಿಗೆ ತೇದು, ಲೇಪಿಸುವುದು ಒಳ್ಳೆಯದು. ಹಸಿ ಕೊಂಬು ಸಿಗದಿದ್ದಾಗ, ಅರಿಶಿನದ ಪುಡಿಗೆ ತುಸು ಮೊಸರು ಬೆರೆಸಿ, ಆ ಪೇಸ್ಟನ್ನು ಸವರಿಕೊಳ್ಳಿ. ಇದರ ನೆರವಿನಿಂದ ಸೋಂಕಿನಿಂದ ಆಗುವ ಕಲೆಗುರುತು ಸಹ ಮಾಯವಾಗುತ್ತದೆ.

Pudina

ತಾಜಾ ಬೇವು

ಬೇವಿನ ಎಲೆಗಳಂತೂ, ಚರ್ಮದ ಯಾವುದೇ ಬಗೆಯ ಸೋಂಕನ್ನು ಓಡಿಸಲು ಖಂಡಿತ ಬೇಕು. ಇದರ ತಾಜಾ ಹಸಿರು ಎಲೆಗಳನ್ನು ಚಿಟಕಿ ಅರಿಶಿನ, ತುಸು ಮೊಸರು ಬೆರೆಸಿ ಅರೆದು, ಸೋಂಕಾದ ಭಾಗಕ್ಕೆ ಲೇಪನ ಹಚ್ಚಿರಿ. 2 ಗಂಟೆಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಅರಳಿ ಎಲೆ

ಅದೇ ತರಹ ಅರಳಿ ಎಲೆಗಳನ್ನು ಮುಳುಗುವಷ್ಟು ನೀರಿನಲ್ಲಿ ಕುದಿಸಿರಿ. ಇದು ಚೆನ್ನಾಗಿ ಆರಿದ ನಂತರ, ಈ ನೀರನ್ನು ಸೋಂಕಿನ ಭಾಗಕ್ಕೆ ಸರಿ ತೊಳೆಯಿರಿ. ಅದನ್ನು ಒರೆಸದೆ ಹಾಗೇ ಗಾಳಿಯಲ್ಲಿ ಒಣಗಿಸಿ. ದಿನಕ್ಕೆ 4-5 ಸಲ ಹೀಗೆ ಮಾಡುವುದರಿಂದ ಚರ್ಮದ ಸೋಂಕು ಬೇಗ ಗುಣವಾಗುತ್ತದೆ.

ಕರ್ಪೂರ

ಸೀಮೆಎಣ್ಣೆಗೆ 2 ಚಿಟಕಿ ಕರ್ಪೂರ ಹಾಗೂ 1 ಚಿಟಕಿ ನುಸಿಗುಳಿಗೆ (ನ್ಯಾಪ್ಥಲೀನ್‌ ಬಾಲ್ಸ್) ಬೆರೆಸಿಕೊಳ್ಳಿ. ಇದನ್ನು ಸೋಂಕು ಆಗಿರುವ ಭಾಗಕ್ಕೆ ನೀಟಾಗಿ ಸವರಿ, ಹಾಗೇ ಗಾಳಿಯಲ್ಲಿ ಒಣಗಲು ಬಿಡಿ. ಈ ರೀತಿ ದಿನಕ್ಕೆ 2-3 ಸಲ ಮಾಡಿ.

ಪುದೀನಾ ಇದರ ತಾಜಾ ಹಸಿರೆಲೆಗೆ, ಸೋಂಕಿನ ದುಷ್ಟ್ರಭಾವ ತಗ್ಗಿಸುವ ಸಾಮರ್ಥ್ಯವಿದೆ. ಇದರ ತಾಜಾ ಎಲೆಗಳನ್ನು ಅರೆದು, ಸೋಂಕು ಆಗಿರುವ ಭಾಗಕ್ಕೆ ಸವರಿ, 1 ಗಂಟೆ ಕಾಲ ಬಿಟ್ಟು, ತಣ್ಣೀರಿನಿಂದ ತೊಳೆಯಿರಿ, ಹಾಗೇ ಗಾಳಿಗೆ ಒಣಗಲು ಬಿಡಿ.

ಬೆಳ್ಳುಳ್ಳಿ

ಇದರಲ್ಲಿ ಆ್ಯಂಟಿ ಫಂಗಲ್ ಅಂಶ ಸಮೃದ್ಧವಾಗಿದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಸಾಧ್ಯವಿರುವ ಕಡೆ ಎಲ್ಲಾ ಬೆಳ್ಳುಳ್ಳಿ ಬಳಸಿಕೊಳ್ಳಿ. ಇದರಿಂದ ಆಂತರಿಕವಾಗಿಯೂ ಫಂಗಲ್ ಇನ್‌ ಫೆಕ್ಷನ್‌ ಆಗದಂತೆ, ಆಗಿದ್ದರೆ ಬೇಗ ಗುಣವಾಗುವಂತೆ ಮಾಡಬಹುದು. ಬಹಳ ದಿನ ಇದನ್ನು ಆಹಾರದಲ್ಲಿ ಬಳಸದೇ ಇದ್ದರು, 5-6 ಹಸಿ ಬೆಳ್ಳುಳ್ಳಿ ಹರಳನ್ನು ಅರೆದು, ಸೋಂಕಿನ ಭಾಗಕ್ಕೆ ಲೇಪಿಸಿ, 1 ಗಂಟೆ ಕಾಲ ಬಿಟ್ಟು, ಬಿಸಿ ನೀರಿನಿಂದ ತೊಳೆಯಿರಿ.

ಜೇನುತುಪ್ಪ

ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ನಿಯಮಿತವಾಗಿ ಸೇವಿಸಿ. ಆ್ಯಂಟಿಸೆಪ್ಟಿಕ್‌ ಗುಣಗಳು ತುಂಬಿರುವ ಜೇನು, ಫಂಗಸ್ ನಿವಾರಣೆಗೆ ರಾಮಬಾಣ. ಸೋಂಕು ತಗಲಿರುವ ಭಾಗಕ್ಕೆ 1 ಚಮಚ  ಶುದ್ಧ, ತಾಜಾ ಜೇನುತುಪ್ಪ ಸವರಿ, ಅರ್ಧ ಗಂಟೆ ಕಾಲ ಹಾಗೇ ಬಿಡಿ, ನಂತರ ಬಿಸಿ ನೀರಿನಿಂದ ತೊಳೆಯಿರಿ. ಹೀಗೆ ದಿನಕ್ಕೆ 2-3 ಸಲ ಮಾಡಿ.ಆ್ಯಲೋವೆರಾ ಜೆಲ್ ಫಂಗಲ್ ಇನ್‌ ಫೆಕ್ಷನ್ ಆದವರಿಗೆ ಆ್ಯಲೋವೆರಾ ಜೆಲ್ ‌ಬಲು ಗುಣಕಾರಿ ಎನಿಸಿದೆ. ಇದರಿಂದ ಸೋಂಕಿನ ಬಾಧೆಯಿಂದ ಉಂಟಾದ ನವೆ, ಕಡಿತ, ಕೆರೆತ, ಉರಿ ಇತ್ಯಾದಿ ಸಮಸ್ಯೆ ದೂರವಾಗುತ್ತದೆ. ಈ ಜೆಲ್ ‌ನ್ನು ದಿನಕ್ಕೆ 7-8 ಸಲ ಸೋಂಕಾದ ಭಾಗಕ್ಕೆ ಸವರಿ, 1 ಗಂಟೆ ಕಾಲ ಬಿಟ್ಟು, ನಂತರ ಬಿಸಿ ನೀರಿನಿಂದ ತೊಳೆಯಿರಿ. ಇದರಿಂದ ಸೋಂಕು ಬೇಗ ನಿವಾರಣೆ ಆಗುತ್ತದೆ. ಇದಕ್ಕಾಗಿ ತಾಜಾ ಲೋಳೆಸರದಿಂದ (ಆ್ಯಲೋವೆರಾ) ಜೆಲ್ ‌ಹೊರತೆಗೆದು, ಸೋಂಕಿನ ಭಾಗಕ್ಕೆ ಸವರಬೇಕು. ಇದಕ್ಕಾಗಿ, ಅದರ ಉದ್ದದ ಎಲೆಯನ್ನು ಮಧ್ಯ ಭಾಗದಲ್ಲಿ ಸೀಳಿಕೊಂಡು, ನೇರವಾಗಿ ಅದರ ಜೆಲ್ ‌ಸೋಂಕಿನ ಭಾಗಕ್ಕೆ ತಗಲುವಂತೆ ಮಾಡಿ. 1 ಗಂಟೆ ಕಾಲ ನಂತರ ಬಿಸಿ ನೀರಿನಿಂದ  ತೊಳೆದರೆ ಸಾಕು.

ಮೊಸರು

ತಾಜಾ ಮೊಸರಿನಲ್ಲಿ ಲ್ಯಾಕ್ಟೋಬೇಸಿಲಸ್‌ ಎಂಬ ಬ್ಯಾಕ್ಟೀರಿಯಾ ಅಡಗಿದ್ದು, ಅದು ಹೈಡ್ರೋಜನ್‌ ಪೆರಾಕ್ಸೈಡ್‌ ಒದಗಿಸುತ್ತದೆ. ಇದು ಫಂಗಸ್‌ ಭಾಗಕ್ಕೆ ತಗುಲಿದರೆ ಅದು ಬೇಗ ಸಾಯುತ್ತದೆ. ಹೆಪ್ಪು ಹಾಕಿದ ತುಸು ತಾಜಾ ಮೊಸರನ್ನು (ಫ್ರಿಜ್‌ ನಲ್ಲಿರಿಸಿದ್ದು ಬೇಡ) ಸೋಂಕಿನ ಭಾಗಕ್ಕೆ ನೇರ ಸವರಬೇಕು. ಇದನ್ನು ಅರ್ಧ ಗಂಟೆ ಹಾಗೇ ಬಿಟ್ಟು, ನಂತರ ಬಿಸಿ ನೀರಿನಿಂದ ತೊಳೆಯಿರಿ. ಸೋಂಕು ಆಗಿರುವ ಭಾಗವನ್ನು ನೀವು ನೇರ ನಿಮ್ಮ  ಕೈ ಬೆರಳಿನಿಂದ ಮುಟ್ಟಬಾರದು, ಹತ್ತಿಯಲ್ಲಿ ಅದ್ದಿಕೊಂಡೇ ಮೇಲಿನ ಎಲ್ಲಾ ಲೇಪಗಳನ್ನು ಆ ಭಾಗಕ್ಕೆ ತೀಡಬೇಕು.

ಆ್ಯಪಲ್ ಸೈಡರ್ ವಿನಿಗರ್

ಇದೇ ಹೆಸರಲ್ಲಿ ಇದು ಮೆಡಿಕಲ್ ಸ್ಟೋರ್‌ ನಲ್ಲಿ ರೆಡಿಮೇಡ್‌ ಲಭ್ಯ. ಇದು ಅಸಿಡಿಕ್‌ ಆಗಿರುವುದರಿಂದ ಆ್ಯಂಟಿಬಯೋಟಿಕ್‌ ಆ್ಯಂಟಿ ಫಂಗಲ್ ಅಂಶಗಳನ್ನು ಹೊಂದಿರುತ್ತದೆ. ಹೀಗಾಗಿ ಇದು ಫಂಗಸ್‌ ಮುಂದೆ ಬೆಳೆಯದಂತೆ ತಡೆಯಬಲ್ಲದು. ಇದಕ್ಕಾಗಿ ನೀವು ಆ್ಯಪಲ್ ಸೈಡರ್‌ ವಿನಿಗರ್‌ ನ್ನು ತುಸು ಹತ್ತಿಗೆ ಹಾಕಿಕೊಂಡು, ಸೋಂಕಿನ ಭಾಗಕ್ಕೆ ಸವರಬೇಕು. ಪ್ರತಿದಿನ ಹೀಗೆ 3-4 ಸಲ ಮಾಡಿ. ನಂತರ ಬಿಸಿ ನೀರಿನಿಂದ ತೊಳೆಯಿರಿ.

ಕೊಬ್ಬರಿ ಎಣ್ಣೆ

ಸೋಂಕು ಆಗಿರುವ ಭಾಗಕ್ಕೆ ಹತ್ತಿಯಲ್ಲಿ ಅದ್ದಿದ ಕೊಬ್ಬರಿ ಎಣ್ಣೆಯನ್ನು ನೀಟಾಗಿ ಸವರಬೇಕು. ಹಾಗೇ ಇದನ್ನು ಗಾಳಿಯಲ್ಲಿ ಆರಲು ಬಿಡಿ, ತೊಳೆಯುವ ಅಗತ್ಯ ಇಲ್ಲ. ಹೀಗೆ ದಿನಕ್ಕೆ 4-5 ಸಲ ಮಾಡಿ.

ಅದೇ ತರಹ ದಾಲ್ಚಿನ್ನಿ (ಚಕ್ಕೆ)ಯನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ, ನುಣ್ಣಗೆ ಅರೆದು, ಆ ಲೇಪನವನ್ನು ಸೋಂಕಿನ ಭಾಗಕ್ಕೆ ಹಚ್ಚುವುದರಿಂದಲೂ ಬಹಳ ಲಾಭವಿದೆ.

ಹಿಪ್ಪೆ ಎಣ್ಣೆ (ಆಲಿವ್ ಆಯಿಲ್‌)

ತಾಜಾ ಆಲಿವ್ ‌ಎಲೆಗಳನ್ನು ತುಸು ಮೊಸರಿನೊಂದಿಗೆ ಅರೆದು ಸೋಂಕಾದ ಭಾಗಕ್ಕೆ ಲೇಪನ ಸವರಬೇಕು. ತಾಜಾ ಎಲೆ ಸಿಗದಿದ್ದರೆ, ಹಿಪ್ಪೆ ಎಣ್ಣೆಯನ್ನು ನೇರವಾಗಿ ಬಳಸಿಕೊಳ್ಳಿ. ಇದಕ್ಕೆ ತುಸು ನೀಲಗಿರಿ ಎಣ್ಣೆ ಬೆರೆಸಿ ಹಚ್ಚಿಕೊಂಡರೆ ಹೆಚ್ಚಿನ ಲಾಭವಿದೆ. ಇದರಲ್ಲಿ ಧಾರಾಳ ಆ್ಯಂಟಿ ಫಂಗಲ್ ಆ್ಯಂಟಿಮೈಕ್ರೋಬಿಯಲ್ ಗುಣಗಳಿದ್ದು ಬೇಗ ಸೋಂಕು ನಿವಾರಣೆಗೆ ನೆರವಾಗುತ್ತದೆ. ಈ ಎಣ್ಣೆ ಹಚ್ಚಿ, ಹಾಗೇ ಆ ಭಾಗವನ್ನು ಗಾಳಿಗೊಡ್ಡಿರಿ. ಇದನ್ನು ತೊಳೆಯುವ ಗೋಜಿಲ್ಲ. ಹೀಗೆ ದಿನಕ್ಕೆ 2-3 ಸಲ ಮಾಡಿ.

ಪ್ರತಿನಿಧಿ

ಸೋಂಕಿನಿಂದ ಬಚಾವಾಗುವ ಉಪಾಯಗಳು

ನಿಮ್ಮ ಬಟ್ಟೆ, ಟವೆಲ್‌, ಸೋಪು, ಇಂಥ ಇನ್ನಿತರ ಪರ್ಸನಲ್ ಐಟಮ್ಸ್ ನ್ನು ಬೇರೆಯವರ ಜೊತೆ ಎಂದೂ ಶೇರ್‌ ಮಾಡಬೇಡಿ. ಈ ಬೇಸಿಗೆಯಲ್ಲಿ ಆದಷ್ಟೂ ಸಡಿಲ ಉಡುಗೆ, ಟೈಟ್‌ ಅಲ್ಲದ ಸ್ಯಾಂಡಲ್ಸ್, ಶೂ ಧರಿಸಿರಿ. ಇದರಿಂದ ಬೆವರು ಹೆಚ್ಚುತ್ತದೆ. ಆರ್ದ್ರತೆಯಿಂದಾಗಿ ಇನ್‌ ಫೆಕ್ಷನ್‌ ಹೆಚ್ಚುತ್ತದೆ. ಮುಖ್ಯವಾಗಿ ಈ ಬೇಸಿಗೆಯಲ್ಲಿ ನಿಮ್ಮ ಒಳವಸ್ತ್ರಗಳನ್ನು ಒಗೆದ ನಂತರ, ತುಸು ಡೆಟಾಲ್ ಬೆರೆತ ಬಕೆಟ್‌ ನೀರಲ್ಲಿ ಜಾಲಿಸಿ, ಹಿಂಡಿ ಒಣಗಿಸಿ, ಸಾಕ್ಸ್ ಗೂ ಸಹ ಹೀಗೇ ಮಾಡಿ. ಒಗೆಯದ ಯಾವ ಬಟ್ಟೆಯನ್ನು ಮತ್ತೆ ಮತ್ತೆ ಧರಿಸಲೇಬೇಡಿ.

ಸ್ವಚ್ಛತೆ ಶುಭ್ರತೆ ಕಾಪಾಡಿಕೊಳ್ಳಲು ದಿನಕ್ಕೆ ಕನಿಷ್ಠ 1 ಸಲವಾದರೂ ಸ್ನಾನ ಮಾಡಲೇಬೇಕು. ನೀರಿನ ಬಕೆಟ್‌ ಗೆ ಅಗತ್ಯವಾಗಿ 4-5 ಹನಿ ಯೂಡಿಕೊಲೋನ್‌ ಬೆರೆಸಿಕೊಳ್ಳಿ. ಜಿಮ್ ಮುಗಿಸಿ ಬಂದಾಗಲೂ ಹೀಗೇ ಮಾಡಿ. ಸ್ನಾನದ ನಂತರ ನಿಮ್ಮ ನಿತಂಬ, ಸೊಂಟ, ಕಂಕುಳು, ಪಾದದ ಎಲ್ಲಾ ಭಾಗ (ಮುಖ್ಯವಾಗಿ ಸಂದುಗಳಿರುವಂಥ)ಗಳನ್ನೂ ಶುಭ್ರ ಒಗೆದ ಟವೆಲ್ ‌ನಿಂದ ಒರೆಸಿಕೊಳ್ಳಿ. ಇಂಥ ಭಾಗಗಳಲ್ಲಿ ಬೆವರುವಿಕೆ ಹೆಚ್ಚು, ಹೀಗಾಗಿ ಸೋಂಕು ತಗುಲು ಸಾಧ್ಯತೆಗಳು ಹೆಚ್ಚು. ಬರಿಗಾಲಲ್ಲಿ ಹೊರಗೆಲ್ಲೂ ಓಡಾಡಬೇಡಿ. ಸದಾ ಚಪ್ಪಲಿ, ಸ್ಯಾಂಡಲ್ಸ್ ಜೊತೆಗೆ ಇರಲಿ. ಜಿಮ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಮರೆತೂ ಬರಿಗಾಲಲ್ಲಿ ಹೋಗಬಾರದು. ಪ್ಲಾಸ್ಟಿಕ್‌ ಚಪ್ಪಲಿಗಳನ್ನು ಎಂದೂ ಧರಿಸದಿರಿ. ಇದು ಪಾದದ ಭಾಗದ ಚರ್ಮ ಉಸಿರಾಡಲು ನೆರವಾಗದು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ