ಇಎಂಐ ರೂಪದಲ್ಲಿ ಮಾಡಿದ ಸಾಲದ ಹೊರೆಯನ್ನು ಕಡಿಮೆ ಮಾಡಲು ವಿಷಯಗಳಿಗೆ ಗಮನಕೊಡಿ……!

ನಿಶಾಳ ತಂದೆ ಅನಳ ಹುಟ್ಟುಹಬ್ಬದಂದು 80 ಸಾವಿರ ರೂ. ಮೌಲ್ಯದ ಐಫೋನ್‌ 14 ಪ್ರೊಪ್ಲಸ್‌ ನ್ನು ಉಡುಗೊರೆಯಾಗಿ ನೀಡಿದರು. ಮರುದಿನ ನಿಶಾ ತನ್ನ ಹೊಸ ಬ್ರಾಂಡ್‌ ಗೆ ಫೋನ್‌ ನೊಂದಿಗೆ ಕಾಲೇಜಿಗೆ ಹೋದಾಗ, ಅವಳ ಫೋನ್‌ ನೋಡಿ ಅವಳ ಸ್ನೇಹಿತರೆಲ್ಲರೂ ಆಶ್ಚರ್ಯಚಕಿತರಾದರು. ಸುಮನಾಗಂತೂ ಇದನ್ನು ನೋಡಿ ಬಹಳ ಅಚ್ಚರಿಯಾಯಿತು.

ಸುಮನಾ ನಿಶಾಳ ಸಹಪಾಠಿ. ಅವಳ ಹುಟ್ಟುಹಬ್ಬದ ದಿನ ಹತ್ತಿರ ಬರುತ್ತಿತ್ತು. ತಾನೂ ಕೂಡ ಇಂತಹದೇ ಫೋನ್‌ ತೆಗೆದುಕೊಳ್ಳಬೇಕು ಎಂದುಕೊಂಡಳು ಸುಮನಾ. ಆದರೆ, ಅವಳ ತಂದೆ ಆಟೋರಿಕ್ಷಾ ಚಾಲಕ. ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಅಷ್ಟು ಆದಾಯವಿಲ್ಲದ ಕಾರಣ ಅವರಿಗೆ ಐಫೋನ್‌ 14 ಪ್ರೊಪ್ಲಸ್‌ ನಂಥ ಫೋನ್‌ ಕೊಡಿಸುವುದು ದೂರದ ಮಾತಾಗಿತ್ತು.

ಈಗ ಸಮಸ್ಯೆ ಏನೆಂದರೆ ಸುಮನಾ ಬಳಿ ಈ ಫೋನ್‌ ಖರೀದಿಸಲು ಸಾಕಷ್ಟು ಹಣವಿರಲಿಲ್ಲ. ಏಕೆಂದರೆ ಸುಮನಾ ಪಾರ್ಟ್‌ ಟೈಮ್ ಧ್ವನಿ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಳು. ಹಾಗಾಗಿ ಅವಳು ಇಎಂಐನಲ್ಲಿ ಈ ಫೋನ್‌ ಖರೀದಿಸಲು ಯೋಚಿಸಿದಳು. ಇಎಂಐ ಮೂಲಕ ಪಾತಿಸುವುದು ಹೆಚ್ಚಿನ ಹೊರೆಯಾಗುವುದಿಲ್ಲ ಎಂದು ಯೋಚಿಸಿ, ಐಫೋನ್‌ 14 ಪ್ರೊಪ್ಲಸ್‌ ನ್ನು ಕೊಂಡುಕೊಂಡಳು. ಮೂರು ಇಎಂಐಗಳನ್ನು ಪಾವತಿಸಿದ ನಂತರ ಸುಮನಾಳ ಆರೋಗ್ಯ ಹದಗೆಟ್ಟಿತು. ವೈದ್ಯರು ಬೆಡ್‌ ರೆಸ್ಟ್ ಪಡೆಯುವಂತೆ ಅವಳಿಗೆ ಸಲಹೆ ನೀಡಿದರು. ಅಂದಿನಿಂದ ಸುಮನಾ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರಬೇಕಾಯಿತು. ಕೆಲಸ ಮಾಡದ ಕಾರಣ, ಫೋನ್‌ ನ ಇಎಂಐ ಪಾವತಿಸಲು ಅವಳಿಗೆ ಸಾಧ್ಯವಾಗಲಿಲ್ಲ. ಇತ್ತ ಸಾಲ ಕೊಟ್ಟ ಬ್ಯಾಂಕ್‌ ಸಿಬ್ಬಂದಿ, ಅವಳಿಗೆ ಪದೇ ಪದೇ ಕರೆ ಮಾಡಿ ಇಎಂಐ ಪಾವತಿಸುವಂತೆ ಒತ್ತಡ ಹೇರಲು ಆರಂಭಿಸಿದರು.

ಕೆಲವು ದಿನಗಳ ನಂತರ ಬ್ಯಾಂಕ್‌ ಸಿಬ್ಬಂದಿಗಳು ಅವಳಿಗೆ ಬೆದರಿಕೆ ಕರೆ ಮಾಡಲು ಪ್ರಾರಂಭಿಸಿದರು. ಬ್ಯಾಂಕ್‌ ನಿಂದ ಸ್ನೇಹಿತರಿಗೆ, ಕುಟುಂಬದವರಿಗೆ ಮತ್ತು ಸಂಬಂಧಿಕರಿಗೆ ಕರೆಗಳು ಹೋಗಲು ಆರಂಭವಾದ. ಇದೆಲ್ಲದರಿಂದ ಸುಮನಾ ಬೇಸರಗೊಂಡಳು. ಅಂತಿಮವಾಗಿ ಅವಳ ತಂದೆ ಹಾಗೂ ಹೀಗೂ ಬೇರೆ ಕಡೆ ಚಕ್ರಬಡ್ಡಿ ಸಾಲ ಮಾಡಿ ಉಳಿದ ಹಣವನ್ನು ಹೊಂದಿಸಿ ಇಎಂಐ ಕಟ್ಟುವಂತಾಯಿತು.

ಇಎಂಐ ಮೂಲಕ ಸಾಲ

ಸುಮನಾಳ ಹಾಗೆ ಸಮಸ್ಯೆಯಲ್ಲಿ ಸಿಲುಕಿಕೊಳ್ಳಬಾರದು ಎಂದು ನೀವು ಬಯಸಿದರೆ, ಸಾಲವನ್ನು ಇಎಂಐ ಭಾಗಗಳಲ್ಲಿ ನೀಡಲಾಗಿದೆ ಎಂದು ತಿಳಿಯಿರಿ. ನೀವು ಎಷ್ಟು ಭಾಗಗಳಲ್ಲಿ ಇಎಂಐ ಪಾವತಿಸಬೇಕು ಎಂಬುದನ್ನು ನಿಮ್ಮ ಮತ್ತು ಬ್ಯಾಂಕ್‌ ನ್ನು  ಅವಲಂಬಿಸಿರುತ್ತದೆ. ನೀವು 2 ತಿಂಗಳಿನಿಂದ 2 ವರ್ಷಗಳವರೆಗೆ ಯಾವುದೇ ಅವಧಿಗೆ ಇಎಂಐ ಕಂತುಗಳನ್ನು ಪಾವತಿಸಬಹುದು ಅಥವಾ ಅದು ಇನ್ನು ಹೆಚ್ಚೂ ಆಗಬಹುದು. ಆದ್ದರಿಂದ ನೀವು ಇಎಂಐ ಮೂಲಕ ಸಾಲವನ್ನು ಮರುಪಾವತಿಸಲು ಯೋಚಿಸುತ್ತಿದ್ದರೆ, ಅದನ್ನು ಲೋನ್‌ ಎಂದು ಪರಿಗಣಿಸಿ.

ನಾವು ಬಹಳಷ್ಟು ವಸ್ತುಗಳನ್ನು ಖರೀದಿಸುತ್ತೇವೆ, ಕ್ರಮೇಣ ಇಎಂಐ ಪಾತಿಸುತ್ತೇವೆ ಎಂದುಕೊಳ್ಳಿ, ಇಎಂಐನ ಆಮಿಷದಿಂದ ಒಂದೇ ಬಾರಿಗೆ ಹಲವಾರು ವಸ್ತುಗಳನ್ನು ಖರೀದಿಸಬೇಡಿ. ನೀವು ಇಎಂಐ ಸಾಲದ ಬವಣೆಯಲ್ಲಿ ಸಿಲುಕದಂತೆ, ನಿಮಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಿ.

ಇಎಂಐ ಎಂದರೆ ನಿಮ್ಮ ಸಾಲವನ್ನು ನೀವು ಮಾಸಿಕ ಕಂತುಗಳಲ್ಲಿ ಕ್ರಮೇಣ ಮರುಪಾವತಿ ಮಾಡಬಹುದು. ಇದು ನಿಮ್ಮ ಮಾಸಿಕ ಕಂತುಗಳನ್ನು ಹಗುರಗೊಳಿಸುತ್ತದೆ. ಆದರೆ ಮಾರುಕಟ್ಟೆಯಿಂದಾಗಿ, ನೀವು ಇಎಂಐ ಸಾಲದ ಮೇಲೆ ಹೆಚ್ಚಿನ ಬಡ್ಡಿಯನ್ನು ಎದುರಿಸಬೇಕಾಗಬಹುದು. ನಿಮ್ಮ ಆರ್ಥಿಕ ಸ್ಥಿರತೆ ಮತ್ತು ಹಣಕಾಸಿನ ಗುರಿಗಳನ್ನು ಗಮನದಲ್ಲಿ ಇಟ್ಟುಕೊಂಡು ಸಾಲವನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಇದು ಸಂವೇದನಾಶೀಲ ವ್ಯಕ್ತಿಯ ಗುಣವಾಗಿರುತ್ತದೆ.

ಅವಶ್ಯಕತೆಗೆ ಅನುಗುಣವಾಗಿ ಸಾಲ

ಆ್ಯಕ್ಸಿಸ್‌ ಬ್ಯಾಂಕ್‌ ನಲ್ಲಿ ಕೆಲಸ ಮಾಡುತ್ತಿರುವ ಜ್ಞಾನ್‌ ಯಾದವ್ ಹೇಳುವಂತೆ, ಯಾವುದೇ ಇಎಂಐ ಸಾಲವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಮಾಸಿಕ ಆದಾಯವನ್ನು ಲೆಕ್ಕ ಹಾಕಲು ಖಚಿತಪಡಿಸಿಕೊಳ್ಳಿ. ಏಕೆಂದರೆ, ಇಎಂಐ ಪ್ರತಿ ತಿಂಗಳು ಹೋಗುತ್ತದೆ. ಆದ್ದರಿಂದ ಇಎಂಐ ಮೊತ್ತವನ್ನು ಮುಂಚಿತವಾಗಿ ತೆಗೆದುಕೊಂಡು ಅದನ್ನು ಪಕ್ಕಕ್ಕೆ ಇರಿಸಿ. ನಂತರ, ನಿಮ್ಮ ದೈನಂದಿನ ವೆಚ್ಚಗಳು ಮತ್ತು ಇತರ ವೆಚ್ಚಗಳಿಗೆ ನೀವು ಸಾಕಷ್ಟು ಸಮತೋಲನವನ್ನು ಹೊಂದಿದ್ದೀರಿ ತಾನೇ ಎಂಬುದನ್ನು ನೋಡಿಕೊಳ್ಳಿ. ನೀವು ಸಾಲವನ್ನು ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಿ. ನೀವು ಇಎಂಐ ಆಧಾರದ ಮೇಲೆ ಸಾಲವನ್ನು ತೆಗೆದುಕೊಂಡರೆ, ಅದನ್ನು ಮರುಪಾತಿಸಲು ಸಾಧ್ಯವಾಗುವುದಿಲ್ಲ.

ಇಂತಹ ಪರಿಸ್ಥಿತಿಯಲ್ಲಿ, ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರಲ್ಲಿ ಬ್ಯಾಂಕ್‌ ಗಳು ನೀಡುವ ಬೆದರಿಕೆಗಳೂ ಸೇರಿವೆ. ಆದ್ದರಿಂದ ಎಚ್ಚರಿಕೆಯಿಂದ ಯೋಚಿಸಿ ಹಾಗೂ ನಿಮ್ಮ ಆದಾಯ ಮತ್ತು ವೆಚ್ಚಗಳಿಗೆ ಅನುಗುಣವಾಗಿ ಸಾಲವನ್ನು ತೆಗೆದುಕೊಳ್ಳಿ.

ಇಎಂಐ ರೂಪದಲ್ಲಿ ಮಾಡಿದ ಸಾಲದ ಹೊರೆಯನ್ನು ಕಡಿಮೆ ಮಾಡಲು ಕೆಲವು ಸಲಹೆಗಳು ಈ ಕೆಳಗಿನಂತಿವೆ :

ಬಜೆಟ್ತಯಾರಿಸಿ : ನಿಮ್ಮ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ನಿಮ್ಮ ಆದಾಯ ಮತ್ತು ವೆಚ್ಚಗಳ ಬಗ್ಗೆ ನೀವೊಂದು ಪಟ್ಟಿಯನ್ನು ಮಾಡಿಕೊಂಡು ಅದರಂತೆ ಬಜೆಟ್‌ ತಯಾರಿಸಿಕೊಳ್ಳುವುದು ಒಳ್ಳೆಯದು.

ಇಎಂಐ ಆದ್ಯತೆ ನೀಡಿ : ಇಎಂಐ ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ. ಇದರಿಂದ ಬಡ್ಡಿ ಹೆಚ್ಚಳವನ್ನು ತಪ್ಪಿಸಬಹುದು ಮತ್ತು ಭವಿಷ್ಯದಲ್ಲಿ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕೂಡಾ ಹದಗೆಡುವುದಿಲ್ಲ.

ತುರ್ತು ಯೋಜನೆ ಮಾಡಿ : ನೀವು ಹಠಾತ್‌ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾದ ಸಂದರ್ಭಗಳು ಬಂದರೆ ಅಥವಾ ಸಾಲದಿಂದ ಹೊರಬರಲು ಎಮರ್ಜೆನ್ಸಿ ಯೋಜನೆಯನ್ನು ತಯಾರಿ ಮಾಡಿಕೊಳ್ಳುವುದು ಬಹಳ ಮುಖ್ಯ.

ಹಣಕಾಸು ಶಿಕ್ಷಣ : ಹಣಕಾಸಿನ ಶಿಕ್ಷಣ ಪಡೆಯುವ ಮೂಲಕ ಹೂಡಿಕೆ ಮಾಡಲು ಸರಿಯಾದ ಮಾರ್ಗವನ್ನು ಆರಿಸಿಕೊಳ್ಳಬಹುದು. ಇದರಿಂದ ನೀವು ನಿಮ್ಮ ನಿಷ್ಕ್ರಿಯ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.

ಹೆಚ್ಚುವರಿ ಆದಾಯದ ಮೂಲಗಳನ್ನು ಹುಡುಕಿ : ಒಂದು ವೇಳೆ ಅವಕಾಶಗಳು ದೊರೆತರೆ, ಸ್ವತಂತ್ರ ಆದಾಯ ಅಥವಾ ವ್ಯಾಪಾರದಂಥ ಹೆಚ್ಚುವರಿ ಆದಾಯದ ಮೂಲಗಳನ್ನು ಕಂಡುಕೊಳ್ಳಿ.

ಅತಿಯಾದ ಖರ್ಚುನ್ನು + ತಪ್ಪಿಸಿ : ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಿ, ಉಳಿತಾಯವನ್ನು ಹೆಚ್ಚಿಸಿಕೊಳ್ಳಿ. ಇದರಿಂದ ನೀವು ನಿಮ್ಮ ಭವಿಷ್ಯದಲ್ಲಿ ಸಾಲದಂತಹ ಸಂದರ್ಭಗಳನ್ನು ಎದುರಿಸಬಹುದು.

ಕ್ರೆಡಿಟ್ಸ್ಕೋರ್ಮಾನಿಟರಿಂಗ್‌ : ನಿಮ್ಮ ಕ್ರೆಡಿಟ್‌ ಸ್ಕೋರ್‌ ನ್ನು ನಿರಂತರ ಮೇಲ್ವಿಚಾರಣೆಯಲ್ಲಿ ಇರಿಸಿ ಮತ್ತು ಅದನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಕ್ರೆಡಿಟ್‌ ಸ್ಕೋರ್‌ ನಿಮ್ಮ ಆರ್ಥಿಕ ಆರೋಗ್ಯವನ್ನು ಅಳೆಯಲು ಸಹಾಯ ಮಾಡುವ ಪ್ರಮುಖ ಆರ್ಥಿಕ ನಿಯತಾಂಕವಾಗಿದೆ. ಇದು ವ್ಯಕ್ತಿಯ ಹಣಕಾಸಿನ ಇತಿಹಾಸದ ಬಗ್ಗೆ ಮಾಹಿತಿಯನ್ನು ನೀಡುವ ಮತ್ತು ಹಣಕಾಸಿನ ವಹಿವಾಟಿನ ಸ್ಥಿತಿಯನ್ನು ತೋರಿಸುವ ನಿರ್ದಿಷ್ಟ ಸಂಖ್ಯೆಯಾಗಿದೆ.

ಈ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಸಾಲದ ಹೊರೆಯನ್ನು ನೀವು ಕಡಿಮೆ ಮಾಡಬಹುದು ಮತ್ತು ನಿಮ್ಮ ಆರ್ಥಿಕ ಆರೋಗ್ಯವನ್ನು ಸುಧಾರಿಸಬಹುದು.

ವಿಳಂಬ ಪಾವತಿ ಶುಲ್ಕ ಮತ್ತು ಡೀಫಾಲ್ಟರ್‌ ಆಗುವುದನ್ನು ತಪ್ಪಿಸಲು, ನಾವು ನಿಮಗೆ ಕೆಲವು ಮಾರ್ಗಗಳನ್ನು ತಿಳಿಸುತ್ತೇವೆ. ಅದರ ಮೂಲಕ ಸಾಲವನ್ನು ಪಡೆಯುವುದು ಸುಲಭವಾಗುತ್ತದೆ ಮತ್ತು ನೀವು ಇಎಂಐ ಪಾತಿಸುವಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಬನ್ನಿ, ಈ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

ಇಎಂಐ ಮರುಪಾತಿಸಲು ಮಾರ್ಗ

ಮುಂಗಡ ಮತ್ತು ಬಾಕಿ : ಹೆಚ್ಚಿನ ಜನರು ಮುಂಗಡ ಇಎಂಐನ್ನು ಠೇವಣಿ ಇಡುತ್ತಾರೆ. ಆದರೆ ಅಗತ್ಯವಿದ್ದರೆ, ನೀವು ಬಾಕಿ ಇಎಂಐನ್ನು ಸಹ ಪಾವತಿಸಬಹುದು. ಸಾಲದ ಬಡ್ಡಿ ದಿನಾಂಕ ಸಾಮಾನ್ಯವಾಗಿ ತಿಂಗಳ ಆರಂಭದಲ್ಲಿ ಬರುತ್ತದೆ. ಇದನ್ನು ಮುಂಗಡ ಇಎಂಐ ಎಂದು ಕರೆಯಲಾಗುತ್ತದೆ. ಆದರೆ ನೀವು ತಿಂಗಳ ಕೊನೆಯಲ್ಲಿ ಬಡ್ಡಿಯನ್ನು ಪಾವತಿಸಿದರೆ, ಅದನ್ನು ಇಎಂಐ ಎಂದು ಕರೆಯಾಲಾಗುತ್ತದೆ.

ಸಾಲದ ಅವಧಿ ವಿಸ್ತರಿಸಿಕೊಳ್ಳಿ : ನೀವು ಇಎಂಐನ್ನು ನಿಗದಿತ ಸಮಯಕ್ಕೆ ಪಾವತಿಸಲು ಸಾಧ್ಯವಾಗದ್ದಿದರೆ ಮತ್ತು ಈ ಕಾರಣದಿಂದಾಗಿ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಂತರ ನೀವು ನಿಮ್ಮ ಅಸ್ತಿತ್ವದಲ್ಲಿರುವ ಸಾಲ ನೀಡುವ ಬ್ಯಾಂಕ್‌ ಗೆ ಸಾಲದ ಅವಧಿಯನ್ನು ವಿಸ್ತರಿಸಲು ಮನವಿ ಮಾಡಬಹುದು. ಹೀಗೆ ಮಾಡುವುದರಿಂದ ಪಾವತಿಯನ್ನು ಹಿಂತಿರುಗಿಸಲು ನೀವು ಹೆಚ್ಚಿನ ಸಮಯವನ್ನು ಪಡೆಯುತ್ತೀರಿ. ಪಾವತಿ ರಿಟರ್ನ್ಸ್ ಹೆಚ್ಚಿನ ಸಮಯವನ್ನು ಪಡೆಯುವ ಮೂಲಕ ಡೀಫಾಲ್ಟ್ ಆಗುವ ಸಾಧ್ಯತೆಯಿಂದ ನಿಮ್ಮನ್ನು ಉಳಿಸಲಾಗುತ್ತದೆ.

ತುರ್ತು ನಿಧಿಯನ್ನು ಇರಿಸಿಕೊಳ್ಳಿ : ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸಲು, ನೀವು ತುರ್ತು ನಿಧಿಯಾಗಿ ಸ್ವಲ್ಪ ಮೊತ್ತವನ್ನು ಉಳಿಸಬೇಕು ಮತ್ತು ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಈ ನಿಧಿ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಜೀವನದಲ್ಲಿ ಏನಾದರೂ ಕೆಟ್ಟ ಘಟನೆಗಳು ಸಂಭವಿಸಿದ್ದಲ್ಲಿ, ನೀವು ನಿಮ್ಮ ಕೆಲಸನ್ನು ಕಳೆದುಕೊಂಡರೆ ಅಥವಾ ನೀವು ಅನಾರೋಗ್ಯಕ್ಕೆ ಒಳಗಾದರೆ, ಈ ನಿಧಿಯು ನಿಮಗೆ ಉಪಯುಕ್ತವಾಗಬಹುದು. ಇದು ಸಾಲವನ್ನು ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದಿಲ್ಲ.

ಸಿಬಿಲ್ ಸ್ಕೋರ್ಸರಿಪಡಿಸಿ : ಸಾಲ ನೀಡುವ ಮೊದಲು ಬ್ಯಾಂಕ್‌ ನಿಮ್ಮ ಸಿಬಿಲ್ ‌ಸ್ಕೋರ್‌ ನ್ನು ಪರಿಶೀಲಿಸುತ್ತವೆ. ಇದು ನಿಮ್ಮ ಹಣಕಾಸಿನ ಸಾಮರ್ಥ್ಯದ ಕಲ್ಪನೆಯನ್ನು ನೀಡುತ್ತದೆ. ನೀವು ಸುಲಭವಾಗಿ ಸಾಲವನ್ನು ಪಡೆಯಬಹುದು. ಆದ್ದರಿಂದ ನೀವು ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಸಿಬಿಲ್ ‌ಸ್ಕೋರ್‌ ನ್ನು ಸರಿಪಡಿಸಬೇಕು. ಇಎಂಐ ಪಾವತಿಸಲು ವಿಳಂಬವಾದರೆ, ನಿಮ್ಮ ಕ್ರೆಡಿಟ್‌ ಸ್ಕೋರ್‌ ಕೂಡಾ ಕಡಿಮೆಯಾಗುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಸಾಲ ಪಡೆಯುವುದು ಕಷ್ಟವಾಗುತ್ತದೆ.

ಈ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಸಾಧ್ಯವಾದಷ್ಟು ಬೇಗ ನಿಮ್ಮ ಸಾಲವನ್ನು ಮರುಪಾತಿಸಲು ಸಾಧ್ಯವಾಗುತ್ತದೆ.

ಪ್ರಿಯಾಂಕ ಯಾದವ್

ಕ್ರೆಡಿಟ್ಸ್ಕೋರ್ನಿಮ್ಮ ಆರ್ಥಿಕ ಅರ್ಹತೆ

ಕ್ರೆಡಿಟ್‌ ಸ್ಕೋರ್‌ ನಿಮ್ಮ ಕ್ರೆಡಿಟ್‌ ಅರ್ಹತೆಯಾಗಿದೆ. ಇದನ್ನು 300-900ರ ನಡುವಿನ ಸಂಖ್ಯೆಯಾಗಿ ವ್ಯಕ್ತಪಡಿಸಲಾಗುತ್ತದೆ. ಎಕ್ಸ್ ಪೀರಿಯನ್ಸ್ ಮತ್ತು ಸಿಬಿಲ್ ‌ನಂತಹ ಕ್ರೆಡಿಟ್‌ ಬ್ಯೂರೋಗಳಿಂದ ಈ ಸಂಖ್ಯೆಯನ್ನು ವರದಿ ಮಾಡಲಾಗುತ್ತದೆ. ಈ ಸಂಸ್ಥೆಗಳು ನಿಮ್ಮ ಲೋನ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಕೆಯನ್ನು ಸಾಲ ನೀಡುವ ಬ್ಯಾಂಕ್‌ ಅಥವಾ ಹಣಕಾಸು ಕಂಪನಿ ಒದಗಿಸಿದ ಮಾಹಿತಿಯ ಆಧಾರದ ಮೇಲೆ ವಿಶ್ಲೇಷಿಸುತ್ತವೆ. ಇವು ಕೆಲವು ಮಾನದಂಡಗಳ ಆಧಾರದ ಮೇಲೆ ನಿಮ್ಮ ಸ್ಕೋರ್‌ ನ್ನು ಲೆಕ್ಕ ಹಾಕುತ್ತವೆ.

ಹೆಚ್ಚಿನ ಕ್ರೆಡಿಟ್‌ ಸ್ಕೋರ್‌ ವ್ಯಕ್ತಿಯ ಸಾಲವನ್ನು ತೆಗೆದುಕೊಳ್ಳಲು ಸುಲಭಗೊಳಿಸುತ್ತದೆ. ಆದರೆ ಕಡಿಮೆ ಸ್ಕೋರ್‌ ಅವನ ಆರ್ಥಿಕ ದುರ್ಬಲತೆಯನ್ನು ಸಾಬೀತುಪಡಿಸುತ್ತದೆ. ನಿಮ್ಮ ಕ್ರೆಡಿಟ್‌ ಸ್ಕೋರ್‌ ನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವೆಂದರೆ ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾತಿಸುವುದು ಮತ್ತು ಕ್ರೆಡಿಟ್‌ ಕಾರ್ಡ್‌ ಗಳನ್ನು ಸರಿಯಾಗಿ ಬಳಸುವುದು. ಏಕೆಂದರೆ ಕ್ರೆಡಿಟ್‌ ಕಾರ್ಡ್‌ ಗಳ ಅತಿಯಾದ ಬಳಕೆಯು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.

ಮನೆ ಖರೀದಿಸಲು ಅಗತ್ಯವಿರುವ ಕನಿಷ್ಠ ಕ್ರೆಡಿಟ್‌ ಸ್ಕೋರ್‌ 500-700ರವರೆಗೆ ಇರುತ್ತದೆ. ಆದರೆ ನೀವು ಅರ್ಜಿ ಸಲ್ಲಿಸುತ್ತಿರುವ ಅಡಮಾನ ಸಾಲದ ಪ್ರಕಾರ ಮತ್ತು ನೀವು ಅರ್ಜಿ ಸಲ್ಲಿಸುತ್ತಿರುವ ಸಾಲದಾತನ ಮೇಲೆ ಅವಲಂಬಿತವಾಗಿರುತ್ತದೆ. ಸಾಂಪ್ರದಾಯಿಕ ಅಡಮಾನದೊಂದಿಗೆ ಮನೆಯನ್ನು ಖರೀದಿಸಲು ಹೆಚ್ಚಿನ ಸಾಲದಾತರಿಗೆ ಕನಿಷ್ಠ ಕ್ರೆಡಿಟ್‌ ಸ್ಕೋರ್‌ 620ರ ಅಗತ್ಯವಿರುತ್ತದೆ. ಅದೇ ರೀತಿ ಕಾರು ಖರೀದಿಸಲು ಯಾವುದೇ ಕನಿಷ್ಠ ಕ್ರೆಡಿಟ್‌ ಸ್ಕೋರ್‌ ನ್ನು ನಿಗದಿಪಡಿಸಲಾಗಿಲ್ಲ. ನೀವು 670 ಅಥವಾ ಹೆಚ್ಚಿನ ಸ್ಕೋರ್‌ ಹೊಂದಲು ಗುರಿಯನ್ನು ಹೊಂದಿರಬೇಕು. ಅದು ನಿಮ್ಮನ್ನು ಉತ್ತಮ ಕ್ರೆಡಿಟ್‌ ಶ್ರೇಣಿಯಲ್ಲಿ ಇರಿಸುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ