ಕೊರೋನಾ ಮಹಾಮಾರಿಯ ನಿಯಂತ್ರಣಕ್ಕಾಗಿ ದೃಢವಾಗಿ ಹೋರಾಡಿದವರು ಟೈಮ್ಸ್ ಐಕಾನ್ಅವಾರ್ಡ್

ಕೆ.ಕೆ. ಶೈಲಜಾ ಕೇರಳದ ಆರೋಗ್ಯ ಮಂತ್ರಿ ಆಗಿದ್ದವರು. ಕೊರೋನಾ ಮಹಾಮಾರಿಯ ಅಟ್ಟಹಾಸದ ಕಾಲದಲ್ಲಿ, ಜನರು ಅದರ ಕಬಂಧ ಬಾಹುವಿನ ಸೋಂಕಿಗೆ ಸಿಲುಕದಂತೆ ರಕ್ಷಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು, ಅದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಈಕೆಗೆ ಒಂದು ಮಹತ್ತರ ಐಡೆಂಟಿಟಿ ತಂದುಕೊಟ್ಟಿತು. ಶೈಲಜಾ ಪ್ರಸ್ತುತ 15ನೇ ಕೇರಳ ವಿಧಾನಸಭೆಯಲ್ಲಿ ಮಟ್ಟನೂರು ಕ್ಷೇತ್ರದ ಪ್ರತಿನಿಧಿ ಎನಿಸಿದ್ದಾರೆ.

ಕೊರೋನಾ ಮಹಾಮಾರಿಯ ನಿಯಂತ್ರಣಕ್ಕಾಗಿ, ಯಾವ ರೀತಿ ತತ್ಪರರಾಗಿ ಸದೃಢತೆಯಿಂದ ತಮ್ಮ ಸಿಬ್ಬಂದಿಯೊಂದಿಗೆ ಕಟಿಬದ್ಧರಾಗಿ ನಿಂತರು ಎಂದರೆ, ಇಡೀ ವಿಶ್ವವೇ ಅದನ್ನು ಕಂಡು ನಿಬ್ಬೆರಗಾಯಿತು!

ದಿ. ಗಾರ್ಜಿಯನ್‌ ಪತ್ರಿಕೆ ಇವರನ್ನು `ಕೊರೋನಾ ವೈರಸ್‌ ಕಿಲ್ಲರ್‌, ರಾಕ್‌ ಸ್ಟಾರ್‌ ಆರೋಗ್ಯ ಮಂತ್ರಿ’ ಎಂದೆಲ್ಲ ಹಾಡಿ ಹೊಗಳಿ ವರ್ಣಿಸಿತು. ‌ಈಕೆಯನ್ನು ಏಷ್ಯಾದ ಮಹಿಳಾ ಕೊರೋನಾ ಸೇನಾನಿಗಳ ಪಟ್ಟಿಯಲ್ಲಿ ಅಗ್ರ ಶ್ರೇಣಿಯಲ್ಲಿ ನಿಲ್ಲಿಸಿದೆ! ಬ್ರಿಟಿಷ್‌ ಪತ್ರಿಕೆ ಪ್ರಾಸ್ಪೆಕ್ಟ್ ಈಕೆಯನ್ನು 2020ರ ವಿಶ್ವದ `ಅಗ್ರಗಣ್ಯ ವಿಚಾರಶೀಲರು’ ಎಂದು ಸ್ಥಾಪಿಸಿತು. ಇವರನ್ನು ಆಮಂತ್ರಿಸಿ ಸನ್ಮಾನಿಸಿತು. ಬ್ರಿಟಿಷ್‌ ಪತ್ರಿಕೆ ಫೈನಾನ್ಶಿಯಲ್ ಟೈಮ್ಸ್ ಇವರನ್ನು 2020ರ `ಅತಿ ಪ್ರಭಾಶಾಲಿ ಮಹಿಳೆ’ ಎಂದು ಹಣೆಪಟ್ಟಿ ನೀಡಿತು.

ರಾಜಕೀಯದ ಹಾದಿ

ಕಣ್ಣೂರು ಜಿಲ್ಲೆಯ ಮಟ್ಟನೂರಿನಲ್ಲಿ ಹುಟ್ಟಿ ಬೆಳೆದ ಶೈಲಜಾ, ಪದವೀಧರೆ. ಈಕೆ ರಾಜಕೀಯಕ್ಕೆ ಎಂಟ್ರಿ ಪಡೆದದ್ದು, `ಸ್ಟೂಡೆಂಟ್‌ಫೆಡರೇಶನ್‌ ಆಫ್‌ ಇಂಡಿಯಾ’ದ ಮೂಲಕ. ಈಕೆ ಮೊದಲ ಸಲ 1996ರಲ್ಲಿ ಕುತುಪರಂಬಾ ಸೀಟ್‌ ನಿಂದ ಶಾಸಕರಾಗಿ ಆರಿಸಿ ಬಂದರು. ಇದಾದ ನಂತರ 2006, 2016ರಲ್ಲಿ ಮತ್ತೆ ಶಾಸಕರಾಗಿ ಆರಿಸಿ ಬಂದರು.

2018ರಲ್ಲಿ ಆರೋಗ್ಯ ಮಂತ್ರಿಯಾಗಿ ಉನ್ನತ ಹುದ್ದೆಗೇರಿದರು. ಆಗ ಕೇರಳದಲ್ಲಿ ನಿಪಾ ವೈರಸ್‌ ಅಟ್ಟಹಾಸದಿಂದ ಮೆರೆಯತೊಡಗಿತು. ಇದಂತೂ ಕೊರೋನಾಗಿಂತಲೂ ಅತಿ ಭಯಂಕರ. ಇದರಲ್ಲಿ ಸಾವಿನ ಸಂಖ್ಯೆ 70% ಗಡಿ ದಾಟಿತು. ಅದೇ ಕೊರೋನಾದಲ್ಲಿ ಸಾವಿನ ಸಂಖ್ಯೆ 2%ನಷ್ಟೇ ಇತ್ತು. ಇದನ್ನು ಎದುರಿಸಲು ಈಕೆ ಉತ್ತಮ ರಣನೀತಿ ಹೂಡಿದರು. ತಾವೇ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗೂ ಅಚಾನಕ್‌ ಆಗಿ ಭೇಟಿ ನೀಡುತ್ತಿದ್ದರು. ಆಗಾಗ ಪತ್ರಿಕಾಗೋಷ್ಠಿಗೆ ಕರೆ ನೀಡುತ್ತಾ ಜನತೆಗೆ ಸ್ಪಷ್ಟ ಮಾಹಿತಿ ನೀಡುತ್ತಿದ್ದರು. ಇದಕ್ಕೆ ಮೊದಲು ಕೇರಳ ಇಬೋಲಾ ವೈರಸ್‌ ಗೂ ತುತ್ತಾಗಿತ್ತು.

ಎಂದೂ ಹಾಗೆ ಚಿಂತಿಸಿದವರಲ್ಲ

ಒಂದು ಚಿಕ್ಕ ಊರಿನಲ್ಲಿ ಹುಟ್ಟಿ ಬೆಳೆದ ಶೈಲಜಾ, ತಮ್ಮ ತಾಯಿ, ಅಜ್ಜಿಯಿಂದ ಅತ್ಯಧಿಕ ಪ್ರೇರಣೆ ಪಡೆದು ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಂಡರು. ಮನೆ ಮಂದಿ ಕಮ್ಯುನಿಸ್ಟ್ ಕಂದಾಚಾರಿಗಳು. ಅವರುಗಳು ಕೇರಳದಲ್ಲಿ ಹರಡಿದ್ದ ಸಾಂಕ್ರಾಮಿಕ ರೋಗ ತಡೆಯಲ್ಲಿ ಮುಂದಾಗಿದ್ದರು. ನನ್ನ ತಾಯಿ ಮುಖಾಂತರ ಈಕೆ, ಯಾವ ರೀತಿ ಕಮ್ಯುನಿಸ್ಟ್ ಪಕ್ಷ ಭಯಭೀತಿ, ತಪ್ಪು ಕಲ್ಪನೆ ಹರಡುತ್ತಿದೆ ಎಂದು ಗುರುತಿಸಿದರು. ರೋಗ ತಡೆಗೆ ಅದರ ಕ್ರಮಗಳು ಇವರಿಗೆ ಒಪ್ಪಿಗೆ ಆಗುತ್ತಿರಲಿಲ್ಲ. ಆದರೆ ಮುಂದೆ ತಾವೇ ಈ ರೀತಿ ಹೋರಾಡಬೇಕಾಗುತ್ತದೆ ಎಂದು ಅವರು ಎಂದೂ ಚಿಂತಿಸಿರಲಿಲ್ಲ.

kk-shelja_MG_2996

ಇಬೋಲಾ ಹಾಗೂ ನಿಪಾ ವೈರಸ್‌ ನ್ನು ಮ್ಯಾನೇಜ್‌ ಮಾಡಿದ ರಣನೀತಿಯನ್ನೇ ಕೊರೋನಾ ಕಂಟ್ರೋಲ್ ‌ಗೂ ಬಳಸಿಕೊಂಡರು. ಕೇರಳದಲ್ಲೇ ನಮ್ಮ ದೇಶದ ಮೊದಲ ಕೊರೋನಾ ರೋಗಿ ಪತ್ತೆಯಾಗಿದ್ದು ಎಂಬುದಿಲ್ಲಿ ಗಮನಾರ್ಹ.

ಈಕೆಯ ಪ್ರಕಾರ ಯಾವುದೇ ರೋಗ ಇರಲಿ, ಒಂದು ಉತ್ತಮ ಯೋಜನೆ ರೂಪಿಸಿ, ಅದನ್ನು ಲಾಗ್ ಮಾಡಿ, ಅದನ್ನು ಸಂಪೂರ್ಣ ಹತೋಟಿಗೆ ತಂದರು. ಶೈಲಜಾರ ನೇತೃತ್ವದಲ್ಲಿ 2020ರ ಜನವರಿಯಿಂದಲೇ ಎಲ್ಲಾ ಏರ್‌ ಪೋರ್ಟ್‌, ರೈಲ್ವೆ ಸ್ಟೇಷನ್‌ ಗಳಲ್ಲೂ ಸ್ಟ್ರಿಕ್ಟ್ ಸ್ಕ್ರೀನಿಂಗ್‌ ಆರಂಭಿಸಿದರು. ಯಾರಲ್ಲಿ ಕೊರೋನಾದ ಲಕ್ಷಣ ಕಂಡುಬಂದರೂ ಅವರನ್ನು ನೇರ ಆಸ್ಪತ್ರೆಗೆ ದಾಖಲಿಸುತ್ತಿದ್ದರು. ಈ ರೀತಿ ಕೇರಳದಲ್ಲಿ ಕೊರೋನಾ ಕಂಟ್ರೋಲಿಗೆ ಬಂತು.

ಮಹಿಳಾ ಲೀಡರ್ಶಿಪ್ ದರ್ಶನ

ಸಮರ್ಪಕ ಪ್ಲಾನಿಂಗ್‌ಲೀಡರ್‌ ಶಿಪ್‌ ಯಾವ ರೀತಿ ದೊಡ್ಡ ಸಂಕಷ್ಟಗಳಿಂದ ಪ್ರಜೆಗಳನ್ನು ಹೊರತರಬಲ್ಲದು ಎಂಬುದಕ್ಕೆ ಶೈಲಜಾರ ಕಾರ್ಯವೈಖರಿಯೇ ಸಾಕ್ಷಿ. ಇಂಥ ಘನಘೋರ ಮಹಾಮಾರಿಯ ಸಂದರ್ಭದಲ್ಲಿ, ಜನ ಮನೆಗಳಿಂದಲೇ ಹೊರಬರದಿದ್ದಾಗ, ಶೈಲಜಾ ಜನತೆಯನ್ನು ಈ ಸಂಕಟದಿಂದ ಹೊರತರಲು ಕಟಿಬದ್ಧರಾಗಿ, ಅಮೋಘವಾಗಿ ಹೋರಾಡಿದರು. ಹೆಣ್ಣು ಎಂದರೆ ಕೇವಲ ಮನೆವಾರ್ತೆ ಸಂಭಾಳಿಸಲು ಮಾತ್ರ ಎಂದು ಮೂಗು ಮುರಿಯುವವರಿಗೆ ಶೈಲಜಾ ಚಾಟಿ ಏಟಿನ ಉತ್ತರ ನೀಡಿದ್ದಾರೆ. ತಮ್ಮ ಸ್ವಪ್ರಯತ್ನದಿಂದ ಈಕೆ ಲಕ್ಷಾಂತರ ಜನರ ಪ್ರಾಣ ಕಾಪಾಡಿದ್ದಲ್ಲದೆ, ವಿಶ್ವದಲ್ಲಿ ತಮ್ಮದೇ ಆದ ವಿಭಿನ್ನ ಐಡೆಂಟಿಟಿ ಸ್ಥಾಪಿಸಿಕೊಂಡರು.

ನಸೀಂ ಅನ್ಸಾರಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ