ತ್ವಚೆಯ ಸೌಂದರ್ಯ ಒಳಗಿನಿಂದಲೇ ಹೊಮ್ಮಿ ಬರುತ್ತದೆ. ಇದಕ್ಕಾಗಿ ಸಮರ್ಪಕ ಆಹಾರ ಸೇವನೆ ಹಾಗೂ ನಿಯಮಿತ ವರ್ಕ್‌ಔಟ್‌ ಅತ್ಯಗತ್ಯ. ಇಂದಿನ ಮಹಿಳೆಯರು ಈ ಕುರಿತು ವಿಶೇಷವಾಗಿ ಗಮನಹರಿಸುತ್ತಿದ್ದಾರೆ, ಏಕೆಂದರೆ ಪ್ರತಿ ವಯಸ್ಸಿನಲ್ಲೂ ತ್ವಚೆಯ ಸಂರಕ್ಷಣೆ ಅತ್ಯಗತ್ಯ ಎಂದು ಅವರು ಅರಿತಿದ್ದಾರೆ. ಇದರಿಂದ ನಿಮ್ಮ ಮುಖದಲ್ಲಿ ಯಾವುದೇ ವಿಧದ ಕಲೆ, ಗುರುತು, ಸುಕ್ಕುಗಳು ಇರುವುದಿಲ್ಲ. ಗ್ಲಾಮರ್‌ ರೌಂಡ್‌ನಲ್ಲಂತೂ ಸುಂದರ ಮುಖದ ಅಗತ್ಯ ಇನ್ನೂ ಹೆಚ್ಚಿರುತ್ತದೆ. ಹಾಗಿರುವಾಗ ಈ ಸಿನಿತಾರೆಯರು ಅದನ್ನು ಹೇಗೆ ಸಂರಕ್ಷಿಸುತ್ತಾರೆ? ಬನ್ನಿ, ಅವರಿಂದಲೇ ತಿಳಿಯೋಣ :

ಆಲಿಯಾ ಭಟ್

ಬೇಸಿಗೆಯ ದಿನಗಳಲ್ಲಿ ತ್ವಚೆಯಲ್ಲಿ ಆರ್ದ್ರತೆಯ ಕೊರತೆ ಕಾಡುತ್ತದೆ. ಹೀಗಾಗಿ ಧಾರಾಳವಾಗಿ ನೀರು ಕುಡಿಯುತ್ತಲೇ ಇರಬೇಕು. ಆಲಿಯಾ ಬೇಸಿಗೆಯಲ್ಲಿ ಡೀಟಾಕ್ಸ್ ವಾಟರನ್ನೇ ಹೆಚ್ಚು ಬಳಸುತ್ತಾಳೆ. ಇದು ಸ್ಪೆಷಲ್ ನಿಂಬೆ ನೀರಾಗಿದೆ. ಆಕೆಯ ಪ್ರಕಾರ, ಇದರಿಂದ ದೇಹದ ತೂಕ ಕಂಟ್ರೋಲ್ನಲ್ಲಿ ಇರುತ್ತದೆ. ಡೀಟಾಕ್ಸ್ ವಾಟರ್‌ನಿಂದ ಜೀರ್ಣಶಕ್ತಿ ಹೆಚ್ಚುತ್ತದೆ, ಜೊತೆಗೆ ದೇಹದಲ್ಲಿ ಸದಾ ಶಕ್ತಿ ಸಂಗ್ರಹಗೊಳ್ಳುತ್ತದೆ. ಇದರ ಜೊತೆಯಲ್ಲಿ ಆಕೆ ಎಂದೂ ಡಯೆಟ್‌ ಫಾಲೋ ಮಾಡುವುದಿಲ್ಲ. 2 ಘಂಟೆಗಳ ಅಂತರದಲ್ಲಿ ಒಂದಿಷ್ಟು ಪೌಷ್ಟಿಕ ಆಹಾರ ಸೇವಿಸುತ್ತಿರುತ್ತಾಳೆ. ಶುಗರ್‌, ಫ್ಯಾಟ್‌, ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಸೇವಿಸುತ್ತಾಳೆ. ಬೇಸಿಗೆಯಲ್ಲಿ ಸಿಗುವಂಥ ಫ್ರೆಶ್‌ ಫ್ರೂಟ್ಸ್, ತರಕಾರಿ ಅಧಿಕ ಸೇವಿಸುತ್ತಾಳೆ. ದಿನವಿಡೀ 8-10 ದೊಡ್ಡ ಗ್ಲಾಸ್‌ ನೀರು ಕುಡಿಯುತ್ತಾಳೆ. ವರ್ಕ್‌ಔಟ್‌ಗಾಗಿ ವಾರಕ್ಕೆ 4-5 ದಿನ ಅಗತ್ಯ ಜಿಮ್ಗೆ ಹೋಗುತ್ತಾಳೆ. ಜೊತೆಗೆ ಮೆಡಿಟೇಷನ್‌ ವಿಶೇಷ ಅನಿಸುತ್ತದೆ. ಸುದೀರ್ಘ ಘಂಟೆಗಳ ಶೂಟಿಂಗ್‌ ಮನಸ್ಸನ್ನು ಸದಾ ಶಾಂತವಾಗಿಡುತ್ತದಂತೆ.

ಆಲಿಯಾ ತನ್ನ ತ್ವಚೆಗಾಗಿ ಸದಾ ಅತ್ಯುತ್ತಮ ಬ್ರಾಂಡ್‌ನ ಟಾಯ್ಲೆಟ್ರೀಸ್‌, ಕಾಸ್ಮೆಟಿಕ್ಸ್ ಬಳಸುತ್ತಾಳೆ. ಬೇಸಿಗೆಯಲ್ಲಿ ತ್ವಚೆ ಸದಾ ಆರ್ದ್ರತೆಯಿಂದ ಕೂಡಿರಲು ಮಾಯಿಶ್ಚರೈಸರ್‌ನ್ನು ದಿನಕ್ಕೆ 2 ಸಲ ಹಚ್ಚುತ್ತಾಳೆ.

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆಯ ಸ್ಕಿನ್‌ ಹುಟ್ಟಿನಿಂದಲೇ ಉನ್ನತ ಮಟ್ಟದ್ದಾಗಿದೆ. ಆದರೆ ಇಡೀ ದಿನ ಮೇಕಪ್‌ ಮಾಡಿಕೊಳ್ಳುವ ಮುನ್ನ, ಸನ್‌ಸ್ಕ್ರೀನ್‌ ಹಚ್ಚಲು ಮರೆಯುವುದಿಲ್ಲ. ಆಕೆ ಸಾಮಾನ್ಯವಾಗಿ ಮಾಯಿಶ್ಚರೈಸರ್‌ನ್ನೆ ಬಳಸುತ್ತಾಳೆ, ಆಗ ತ್ವಚೆಯ ಆರ್ದ್ರತೆ ಎಂದೂ ಕಡಿಮೆ ಆಗದು. ಇದರ ಜೊತೆ ಆಕೆ ಸನ್‌ಗ್ಲಾಸಸ್‌ ತೊಡುವುದನ್ನು ಬಿಡುವುದಿಲ್ಲ. ಇದರಿಂದ ಸೂರ್ಯನ ಕಿರಣಗಳು ಆಕೆಯ ಕಂಗಳ ಅಕ್ಕಪಕ್ಕದ ಟಿಶ್ಯುಗಳಿಗೆ ಎಂದೂ ಹಾನಿ ಮಾಡಲಾರವು. ರಾತ್ರಿ ಮಲಗುವ ಮುನ್ನ ಆಕೆ ಫೇಸ್‌ವಾಶ್‌ ಬಳಸಿ ತನ್ನ ಮೇಕಪ್‌ ಕಳಚುತ್ತಾಳೆ. ಕ್ರೀಂ ಅಥವಾ ಮಾಯಿಶ್ಚರೈಸರ್‌ ಹಚ್ಚುತ್ತಾಳೆ. ಇದರಿಂದ ಮಾರನೇ ಬೆಳಗ್ಗೆ ತಾಜಾತನ ತುಂಬಿಕೊಳ್ಳುತ್ತದೆ. ಎಷ್ಟೋ ಸಲ ತಾನು ಘಂಟೆಗಟ್ಟಲೇ ಹೊರಗಿನ ಬಿಸಿಲಲ್ಲಿ ಶೂಟಿಂಗ್‌ ಮಾಡಬೇಕಾಗುತ್ತದೆ, ಅದಕ್ಕಾಗಿ ತಾನು ಮೊದಲೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ ಎನ್ನುತ್ತಾಳೆ. ಬೇಸಿಗೆಯಲ್ಲಿ ನೀರು ಮತ್ತು ಲಿಕ್ವಿಡ್‌ ಡಯೆಟ್‌ ಹೆಚ್ಚು ಫಾಲೋ ಮಾಡುತ್ತಾಳೆ. ನೀವು ಎಷ್ಟು ಆಹಾರ ಸೇವಿಸುತ್ತೀರಿ ಎನ್ನುವುದು ಮುಖ್ಯವಲ್ಲ, ಬೇಸಿಗೆಯಲ್ಲಿ ನೀವು ಏನನ್ನು ಸೇವಿಸುತ್ತೀರಿ ಎನ್ನುವುದೇ ಮುಖ್ಯ. ಹೆಲ್ದಿ ಮತ್ತು ಬ್ಯಾಲೆನ್ಸ್ ಡಯೆಟ್‌ ಸದಾ ನಿಮ್ಮ ತ್ವಚೆಯನ್ನು ನಳನಳಿಸುವಂತೆ ಮಾಡುತ್ತದೆ. ಬಾಡಿವಾಶ್‌ಗಾಗಿ ಆಕೆ ಲಿಕ್ವಿಡ್‌ ಸೋಪ್‌ನ್ನೇ ಬಳಸುತ್ತಾಳೆ.

ಅದಾ ಶರ್ಮ

`ಕಮಾಂಡೋ-2′ ಚಿತ್ರದಿಂದ ಡೆಬ್ಯು ಪಡೆದ ನಟಿ ಅದಾ ಶರ್ಮ, ಬೇಸಿಗೆಯಲ್ಲಿ ತನ್ನ ಚರ್ಮದ ಸಂರಕ್ಷಣೆ ಬಗ್ಗೆ ಹೆಚ್ಚು ನಿಗಾ ವಹಿಸುತ್ತಾಳೆ. ಆಕೆ ಪ್ರಕಾರ, ಬೇಸಿಗೆಯಲ್ಲಿ ಅವಳು ಹೆಚ್ಚು ಬೆವರುತ್ತಾಳಂತೆ. ಹೀಗಾಗಿ ಹೆಚ್ಚಿಗೆ ನೀರು ಕುಡಿಯುತ್ತಾಳೆ. ಈ ಋತುವಿನಲ್ಲಿ ಚರ್ಮ ಮತ್ತು ಕೂದಲನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳಬೇಕು ಎನ್ನುತ್ತಾಳೆ. ತನ್ನ ತಲೆಯ ನೆತ್ತಿ ಮತ್ತು ಮುಖದ ಚರ್ಮ ಸದಾ ಫ್ರೆಶ್‌ ಆಗಿರುವಂತೆ ಎಚ್ಚರ ವಹಿಸುತ್ತಾಳೆ. ತ್ವಚೆ ಟ್ಯಾನ್‌ ಆಗದಂತಿರಲು ತಾನು ವೀಟ್‌ ಗ್ರಾಸ್‌ ಜೂಸ್‌ ಸೇವಿಸುತ್ತೇನೆ ಎನ್ನುತ್ತಾಳೆ. ಸ್ಕಿನ್‌ ಹೆಚ್ಚು ಟ್ಯಾನ್‌ ಆದರೆ ಅದನ್ನು ನಿವಾರಿಸಲು ಆಲೋವೇರಾ ಜೆಲ್‌ ಬಳಸುತ್ತಾಳೆ.

ತಾನು ಇಡೀ ವರ್ಷ ಆ್ಯಂಟಿ ಬಯೋಟಿಕ್‌ ಸೋಪ್‌ ಬಳಸಿ ತ್ವಚೆ ಕಾಪಾಡಿಕೊಳ್ಳುತ್ತೇನೆ ಎನ್ನುತ್ತಾಳೆ. ಆಗ ತ್ವಚೆಯಲ್ಲಿ ಯಾವುದೇ ಬಗೆಯ ಹಾರ್ಶನೆಸ್‌ ಆಗುವುದಿಲ್ಲ.

ಕತ್ರೀನಾ ಕೈಫ್

ಮೂಲತಃ ಈಕೆಯ ಸ್ಕಿನ್‌ ಬಲು ಸಾಫ್ಟ್. ಹೀಗಾಗಿ ಸಮ್ಮರ್‌ನ ಹಾರ್ಶ್‌ ಎಪೆಕ್ಟ್ಸ್ ಅವಳನ್ನು ಕಿರಿಕಿರಿಗೆ ಒಡ್ಡುತ್ತದೆ. ಆದರೆ ಕತ್ರೀನಾ ಬೇಸಿಗೆಯನ್ನು ಬಹಳ ಎಂಜಾಯ್‌ ಮಾಡುತ್ತಾಳೆ ಕೂಡ. ಅಕಸ್ಮಾತ್‌ ಶೂಟಿಂಗ್‌ ಇಲ್ಲದಿದ್ದಾಗ, ಆ ದಿನವಿಡೀ ಆಕೆ ಕಾಟನ್‌ ಡ್ರೆಸೆಸ್‌ ಧರಿಸುತ್ತಾಳೆ, ಆಗ ತ್ವಚೆಗೆ ಬಹಳ ಆರಾಮ ದೊರಕುತ್ತದಂತೆ. ಈ ಋತುವಿನಲ್ಲಿ ಆಕೆ ಅಧಿಕ ಮೇಕಪ್‌ ಮಾಡುವುದಿಲ್ಲ. ಈ ಋತುವಿನಲ್ಲಿ ತಾನು ಲೈಟ್‌ ಮಾಯಿಶ್ಚರೈಸರ್‌ನ್ನೇ ಬಳಸುತ್ತೇನೆ ಎನ್ನುತ್ತಾಳೆ. ಸನ್‌ಸ್ಕ್ರೀನ್‌ ಹಚ್ಚಿಕೊಳ್ಳದೆ ಹೊರಗೆ ಹೊರಡುವುದೇ ಇಲ್ಲವಂತೆ. ಊಟತಿಂಡಿ ಬಲು ಸಾದಾಸೀದಾ. ಅದರಲ್ಲಿ ಎಣ್ಣೆ, ಉಪ್ಪು, ಖಾರ ಅತಿ ಕಡಿಮೆ ಇರಬೇಕು. ಸಾಮಾನ್ಯವಾಗಿ ಬೆಂದ ತರಕಾರಿಯನ್ನು ಲಘು ಬಾಡಿಸಿ ಸೇವಿಸುತ್ತಾಳೆ. ಆಯಾ ಋತುವಿನ ಹಣ್ಣುಗಳು, ಅವುಗಳ ಜೂಸ್‌ ಹೆಚ್ಚು ಪ್ರಿಯವಂತೆ. ಆಕೆಗೆ ಮಾವು ಬಲು ಇಷ್ಟ. ಕತ್ರೀನಾ ಬೇಸಿಗೆಯಲ್ಲಿ ತನ್ನ ತ್ವಚೆ ಹೆಚ್ಚು ಶುಭ್ರವಾಗಿರಬೇಕೆಂದು ಎಚ್ಚರಹಿಸುತ್ತಾಳೆ. ಹೀಗಾಗಿ ಪ್ರತಿದಿನ 2 ಸಲ ಫೇಸ್‌ವಾಶ್‌ನಿಂದ ಮುಖ ತೊಳೆದು, ಲೈಟ್‌ ಮಾಯಿಶ್ಚರೈಸರ್‌ ಹಚ್ಚುತ್ತಾಳೆ. ಶೂಟಿಂಗ್‌ನಿಂದ ಮರಳಿದ ಮೇಲೆ ರಾತ್ರಿ ಹೊತ್ತು ಕ್ಲೆನ್ಸಿಂಗ್‌, ಟೋನಿಂಗ್, ಮಾಯಿಶ್ಚರೈಸಿಂಗ್‌ ಇತ್ಯಾದಿ ನಿಯಮಿತವಾಗಿ ಮಾಡುತ್ತಾಳೆ. ತನ್ನ ಸೌಂದರ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಆಕೆ ಮಿನರಲ್ ಫುಡ್‌ ಮಾಸ್ಕ್ ಹೆಚ್ಚು ಬಳಸುತ್ತಾಳೆ. ಇದರಿಂದ ತ್ವಚೆಯ ಕೊಳೆ ಬೇಗ ನಿವಾರಣೆ ಆಗುತ್ತದೆ. ಮೇಕಪ್‌ ಇಲ್ಲದಿದ್ದರೂ ಸುಂದರವಾಗಿ ಕಂಡುಬರುವ ಕೆಲವೇ ನಟಿಯರಲ್ಲಿ ಕತ್ರೀನಾ ಸಹ ಒಬ್ಬಳು. ಆದರೂ ಆಕೆ ಬೇಸಿಗೆಯಲ್ಲಿ ತನ್ನ ಪರ್ಸ್‌ನಲ್ಲಿ ಸದಾ ಲಿಪ್‌ಬಾಮ್, ಮಾಯಿಶ್ಚರೈಸಿಂಗ್‌ ಸನ್‌ಬ್ಲಾಕ್‌ ಇಟ್ಟುಕೊಳ್ಳುತ್ತಾಳೆ. ಆಕೆ ಪ್ರಕಾರ ಸೌಂದರ್ಯ ಒಳಗಿನಿಂದ ಹೊರಹೊಮ್ಮಬೇಕು. ಇದಕ್ಕಾಗಿ ಸದಾ ಖುಷಿ ಖುಷಿಯಾಗಿರಬೇಕು ಎನ್ನುತ್ತಾಳೆ. ನಿಯಮಿತ ವರ್ಕ್‌ಔಟ್ಸ್ ನಲ್ಲಿ ಬ್ರೇಕ್‌ ಆದಾಗ ತಾನು ಮೆಡಿಟೇಶನ್‌, ಸ್ವಿಮ್ಮಿಂಗ್‌, ಜಾಗಿಂಗ್‌, ವೆಯ್ಟ್ ಟ್ರೇನಿಂಗ್‌, ಡ್ಯಾನ್ಸಿಂಗ್‌ ಮಾಡುತ್ತೇನೆ ಎನ್ನುತ್ತಾಳೆ. ಆಕೆ ಪ್ರಕಾರ, ಮಲಗುವ ಮುನ್ನ ದೇಹ ಹಗುರ ಆಗಿರಬೇಕು. ಹೀಗಾಗಿ ರಾತ್ರಿ ಹೊತ್ತು ಮಲಗುವ 2-3 ಗಂಟೆಗಳ ಮೊದಲೇ ಲೈಟ್‌ ಫುಡ್‌ ಸೇವಿಸುತ್ತಾಳೆ. ಕೇವಲ ಮೆಡಿಕೇಟೆಡ್‌ ಸೋಪ್‌ ಮಾತ್ರ ಬಳಸುತ್ತಾಳೆ.

ಶ್ರದ್ಧಾ ಕಪೂರ್

ಇತ್ತೀಚೆಗೆ ಈಕೆ ತನ್ನ ಶೂಟಿಂಗ್‌ನಲ್ಲಿ ಸದಾ ಬಿಝಿ. ಹೀಗಾಗಿ ಅವಳಿಗೆ ತನ್ನ ತ್ವಚೆಯ ಬಗ್ಗೆ ಸಂಪೂರ್ಣ ಎಚ್ಚರ ವಹಿಸಬೇಕಾಗುತ್ತದೆ. ಆಕೆ ನಸುನಗುತ್ತಾ ಹೇಳುತ್ತಾಳೆ, ನನ್ನ ಹೊಳೆಹೊಳೆಯುವ ಚರ್ಮದ ರಹಸ್ಯ ಎಂದರೆ ನನ್ನ ತಾಯಿತಂದೆ! ಅವರಿಂದ ತನಗೆ ಈ ವರ ಸಿಕ್ಕಿದೆ ಎನ್ನುತ್ತಾಳೆ. ಆದರೆ ಅದರ ಸಂರಕ್ಷಣೆ ನಿಜಕ್ಕೂ ಚಾಲೆಂಜಿಂಗ್‌ ಎನ್ನುತ್ತಾಳೆ. ತಾನು ಕಳೆದುಕೊಂಡ ಗ್ಲೋ ಮರಳಿ ಪಡೆಯಲು ಸ್ಟ್ರಾಬೆರಿ, ಪೀಚ್‌ ಹಣ್ಣುಗಳನ್ನು ದಿನ ಸೇವಿಸುತ್ತೇನೆ ಎನ್ನುತ್ತಾಳೆ. ಹೆಚ್ಚು ಹೊತ್ತು ಬಿರು ಬಿಸಿಲಲ್ಲಿ ಶೂಟಿಂಗ್‌ ಇರುವುದರಿಂದ, ತನ್ನ ಚರ್ಮ ಶುಷ್ಕ ಮತ್ತು ನಿರ್ಜೀವ ಆಗುತ್ತದೆ. ಹಾಗಾಗದಿರಲು ಸರಿಯಾದ ಆಹಾರ ಸೇವನೆ ಬಲು ಮುಖ್ಯ ಎನ್ನುತ್ತಾಳೆ. ಅದರಲ್ಲಿ ದ್ರವ ಪದಾರ್ಥ, ಹಸಿ ತರಕಾರಿ, ಹಣ್ಣು, ಧಾರಾಳ ನೀರು ಸೇರಿರುತ್ತದೆ. ತಾನು ಮೇಕಪ್‌ಗಿಂತ ಅಧಿಕ ಡಯೆಟ್‌ ಬಗ್ಗೆ ಎಚ್ಚರ ವಹಿಸುವುದಾಗಿ ಹೇಳುತ್ತಾಳೆ. ಮುಂಬೈ ಸಮುದ್ರ ತೀರದ ನಗರ. ಹಾಗಾಗಿ ಅಲ್ಲಿ ಬೇಸಿಗೆಯಲ್ಲಿ ಚರ್ಮ ಬೇಗ ಅಂಟಂಟಾಗುತ್ತದೆ. ಹೀಗಾಗಿ ನಿಯಮಿತವಾಗಿ ಕ್ಲೆನ್ಸರ್‌ನಿಂದ ಮುಖ ಶುಚಿಗೊಳಿಸಬೇಕು ಮತ್ತು ನೈಟ್‌ ಮಾಯಿಶ್ಚರೈಸರ್‌ನಿಂದ ಕಳೆದುಕೊಂಡ ಆರ್ದ್ರತೆಯನ್ನು ಮರಳಿ ಪಡೆಯುವುದಾಗಿ ಹೇಳುತ್ತಾಳೆ. ಬೇಸಿಗೆಯಲ್ಲಿ ತನ್ನ ನೆತ್ತಿಗೆ ಕೊಬ್ಬರಿ ಎಣ್ಣೆ ಒತ್ತಿ ಮಸಾಜ್‌ ಮಾಡುವುದಾಗಿ ಹೇಳುತ್ತಾಳೆ. ಜೊತೆಗೆ ಕೆಮಿಕಲ್ಸ್ ರಹಿತ ಶ್ಯಾಂಪೂ ಬಳಸುತ್ತಾಳೆ. ಹೊರಗೆ ಹೊರಡುವಾಗ ಮರೆಯದೆ ಸನ್‌ಸ್ಕ್ರೀನ್‌ ಹಚ್ಚುತ್ತಾಳೆ.

ಕರೀನಾ ಕಪೂರ್

ಗಾರ್ಜಿಯಸ್‌ ಕರೀನಾ, ತನ್ನ ತ್ವಚೆ ಶುಷ್ಕವಾಗದೆ ಇರಲು ಸದಾ ಉತ್ತಮ ಬ್ರಾಂಡ್‌ನ ಮಾಯಿಶ್ಚರೈಸರ್‌ನ್ನೇ ಬಳಸುವುದಾಗಿ ಹೇಳುತ್ತಾಳೆ. ಆಕೆ ಹೆಚ್ಚಾಗಿ ನ್ಯಾಚುರಲ್ ಬ್ಯೂಟಿ ಪ್ರಾಡಕ್ಟ್ ನ್ನೇ ಬಳಸುತ್ತಾಳಂತೆ. ಹಿರಿಯರು ಹೇಳಿದ ಮನೆಮದ್ದನ್ನು ತಪ್ಪದೇ ಪಾಲಿಸುತ್ತಾಳೆ. ಮುಖ್ಯವಾಗಿ ಜೇನುತುಪ್ಪದಲ್ಲಿ ಚರ್ಮವನ್ನು ಮಸಾಜ್‌ ಮಾಡಿ, ಒಣಗಿಸಿ, ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವಿಕೆ ತಪ್ಪಿಸುವುದಿಲ್ಲವಂತೆ. ಇದರಿಂದ ತ್ವಚೆ ಬಹಳ ಮೃದುವಾಗುತ್ತದೆ. ಸದಾ ಹೋಮ್ ಮೇಡ್‌ ಫೇಸ್‌ಮಾಸ್ಕ್ ಧರಿಸುತ್ತಾಳೆ. ಆಕೆ ಬೇಸಿಗೆಯಲ್ಲಿ ಫೇಸ್‌ವಾಶ್‌ ಹಚ್ಚಿ, ಲ್ಯೂಕ್‌ವಾರ್ಮ್ ವಾಟರ್‌ನಿಂದ ಮುಖ ತೊಳೆಯುತ್ತಾಳೆ. ಸೌಂದರ್ಯ ಒಳಗಿನಿಂದ ಹೊರಹೊಮ್ಮಬೇಕು, ಅದಕ್ಕಾಗಿ ಸದಾ ಖುಷಿಯಾಗಿರುತ್ತೇನೆ ಎನ್ನುತ್ತಾಳೆ.

– ಜಿ. ಸುಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ