ಇತ್ತೀಚೆಗಂತೂ ಐಸ್‌ಕ್ರೀಂ ಕುಲ್ಛಿ ಎರಡೂ ಕೇವಲ ಬೇಸಿಗೆಯಲ್ಲಿ ಮಾತ್ರವಲ್ಲದೆ ವರ್ಷವಿಡೀ ಸವಿಯಬಹುದಾದ ಡೆಸರ್ಟ್‌ ಎನಿಸಿದೆ. ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರ ಅಚ್ಚುಮೆಚ್ಚು ಈ ಐಸ್‌ಕ್ರೀಂ. ಹಿಂದೆಲ್ಲ ಕೇವಲ ಕೆಲವೇ ಪ್ಲೇವರ್‌ಗಳಲ್ಲಿ ಐಸ್‌ಕ್ರೀಂ ಕುಲ್ಛಿ ಲಭಿಸುತ್ತಿತ್ತು, ಆದರೆ ಈಗ ಬಗೆ ಬಗೆಯ ಫ್ಲೇವರ್ಸ್‌, ಹಣ್ಣುಗಳ ರುಚಿಯಲ್ಲಿ ಇವು ಲಭ್ಯ. ಮಾರುಕಟ್ಟೆಯಿಂದ ಮತ್ತೆ ಮತ್ತೆ ಕೊಳ್ಳುವುದರಿಂದ ಇವು ತುಂಬಾ ದುಬಾರಿ ಆಗುತ್ತವೆ. ಬದಲಿಗೆ ನಾವು ಮನೆಯಲ್ಲಿ ಇದನ್ನು ಪ್ರೀತಿಯಿಂದ ತಯಾರಿಸಿದರೆ ಖಂಡಿತಾ ದುಬಾರಿ ಆಗೋಲ್ಲ, ಜೊತೆಗೆ ಆರೋಗ್ಯಕ್ಕೆ ಪೂರಕ ಸಹ. ಬನ್ನಿ, ಮಾರ್ಕೆಟ್‌ನಲ್ಲಿ ಲಭ್ಯವಿರುವಂಥ ಅದೇ ಗುಣಮಟ್ಟದ ಐಸ್‌ಕ್ರೀಂ, ಕುಲ್ಛಿ ಹೇಗೆ ಮನೆಯಲ್ಲೇ ತಯಾರಿಸಬಹುದೆಂದು ನೋಡೋಣ :

ಬೇಸಿಕ್‌ ಐಸ್‌ಕ್ರೀಂ

ಯಾವುದೇ ಫ್ಲೇವರ್ಡ್‌ ಐಸ್‌ಕ್ರೀಂ ಸೆಟ್‌ ಮಾಡುವ ಮೊದಲು ಬೇಸಿಕ್‌ ಐಸ್‌ಕ್ರೀಂ ತಯಾರಿಸಿಕೊಳ್ಳಬೇಕು. ಇದನ್ನು ತಯಾರಿಸಲು ಅರ್ಧ ಲೀ. ಗಟ್ಟಿ ಫುಲ್ ಕ್ರೀಂ ಹಾಲಿಗೆ, 4 ಚಮಚ ಬೇಕಿಂಗ ಪೌಡರ್‌, 4 ಚಮಚ ಕಾರ್ನ್‌ಫ್ಲೋರ್‌, ಅರ್ಧ ಸಣ್ಣ ಚಮಚ ಕಸ್ಟಡ್ ಪೌಡರ್‌, 10-12 ಚಮಚ (ರುಚಿಗೆ ತಕ್ಕಂತೆ) ಪುಡಿಸಕ್ಕರೆ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಇದನ್ನು ಚೆನ್ನಾಗಿ ಕುದಿಸಿ, ಕೆಳಗಿಳಿಸಿ ಆರಲು ಬಿಡಿ. ಮಧ್ಯೆ ಮಧ್ಯೆ ಕದಡುತ್ತಾ, ಕೆನೆ ಕಟ್ಟದಂತೆ ಜಾಗ್ರತೆ ವಹಿಸಿ.

ಚಾಕಲೇಟ್‌ ಐಸ್‌ಕ್ರೀಂಗಾಗಿ ಮೇಲಿನ  ಬೇಸಿಕ್‌ ಐಸ್‌ಕ್ರೀಂ ಮಿಶ್ರಣದೊಂದಿಗೆ 4 ಚಮಚ ಕೋಕೋ ಪುಡಿ, 2 ಚಮಚ ಡ್ರಿಂಕಿಂಗ್‌ಚಾಕಲೇಟ್‌, 50 ಗ್ರಾಂ ಡಾರ್ಕ್‌ ಚಾಕಲೇಟ್‌ ಸೇರಿಸಿ, ಇವೆಲ್ಲ ಚೆನ್ನಾಗಿ ಕರಗುವವರೆಗೂ ಮಂದ ಉರಿಯಲ್ಲಿ ಒಲೆ ಮೇಲಿರಿಸಿ ಕುದಿಸಬೇಕು, ನಂತರ ಕೆಳಗಿಳಿಸಿ ಆರಲು ಬಿಡಿ. ಈ ಮಿಶ್ರಣ ಸಂಪೂರ್ಣ ತಣ್ಣಗಾದಾಗ, ಇದನ್ನು ಫ್ರೀಝರ್‌ನಲ್ಲಿ ಗರಿಷ್ಠ ಕೂಲಿಂಗ್‌ಪಾಯಿಂಟ್‌ನಲ್ಲಿಟ್ಟು 8-10 ಗಂಟೆಗಳ ಕಾಲ ಸೆಟ್‌ ಆಗಲು ಬಿಡಿ. ನಂತರ ಇದನ್ನು ಫ್ರಿಜ್‌ನಿಂದ ಹೊರ ತೆಗೆಯಿರಿ. 50 ಗ್ರಾಂ ವಿಪ್ಡ್ ಕ್ರೀಂ ಹಾಕಿ ಐಸ್‌ಕ್ರೀಂ ಬೀಟರ್‌ನಿಂದ 15-20 ನಿಮಿಷ ಬೀಟ್‌ ಮಾಡಿ. ಹೀಗೆ ಮಾಡುವುದರಿಂದ ಅದು 3 ಪಟ್ಟು ಹಿಗ್ಗುತ್ತದೆ.

ಇದೀಗ ನಿಮ್ಮ ಬೇಸಿಕ್‌ ಐಸ್‌ಕ್ರೀಂ ರೆಡಿ ಆಯ್ತು. ಇದಕ್ಕೆ ಎಡಿಬಲ್ ಕಲರ್ಸ್‌, ಎಸೆನ್ಸ್ ಹಾಕಿ ನಂತರ ಬಯಸಿದ ಫ್ಲೇವರ್‌ನ ಐಸ್‌ಕ್ರೀಂನ್ನು ನೀವು ತಯಾರಿಸಬಹುದು. ಬಣ್ಣ ಎಸೆನ್ಸ್ ಬದಲಿಗೆ ನೀವು ರೆಡಿಮೇಡ್‌ ಲಭ್ಯವಿರುವ ಫ್ಲೇವರ್‌ನ ಕ್ರಶ್‌ ಯಾ ಸಿರಪ್‌ ಸಹ ಬಳಸಬಹುದು.

ಫ್ಲೇವರ್‌ ಹೀಗೆ ತಯಾರಿಸಿ

ನೀವು ಯಾ ಫ್ಲೇವರ್‌ನ ಐಸ್‌ಕ್ರೀಂ ತಯಾರಿಸ ಬಯಸುವಿರೋ, ಅದರ ಬಣ್ಣ ಮತ್ತು ಎಸೆನ್ ನ್ನು ರೆಡಿಮೇಡ್‌ ಖರೀದಿಸಿ. ಆದಷ್ಟೂ ದ್ರವ ರೂಪದ ಬಣ್ಣವನ್ನೇ ಆರಿಸಿ, ಅದು ಸುಲಭವಾಗಿ ಬೇಸ್‌ನಲ್ಲಿ ವಿಲೀನಗೊಳ್ಳುತ್ತದೆ.

ನೀವು ಬಯಸಿದ ಬಣ್ಣ ಎಸೆನ್ಸ್ ಬೆರೆಸಿ 5-10 ನಿಮಿಷ ಚೆನ್ನಾಗಿ ಬೀಟ್‌ ಮಾಡಿ. ಆಗ ಅದು ಬೇಸ್‌ ಮಿಶ್ರಣದಲ್ಲಿ ಸುಲಭವಾಗಿ ವಿಲೀನಗೊಳ್ಳುತ್ತದೆ. ಚಮಚದಿಂದ ಕದಡುವುದರಿಂದ ಬಣ್ಣ ಎಸೆನ್ಸ್ ಸುಲಭವಾಗಿ ವಿಲೀನವಾಗದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ