ತಾವರೆ ಬೀಜದ ಲಡ್ಡು

ಸಾಮಗ್ರಿ : 100 ಗ್ರಾಂ ತಾವರೆ ಬೀಜ (ರೆಡಿಮೇಡ್‌ ಲಭ್ಯ), ಅಗತ್ಯವಿದ್ದಷ್ಟು ಖೋವಾ, ಕೆಸ್ಟರ್‌ ಶುಗರ್‌, ತುಪ್ಪ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ, ಪಚ್ಚ ಕರ್ಪೂರ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ತಾವರೆ ಬೀಜ ಹುರಿದು, ಆರಿಸಿ, ಮಿಕ್ಸಿಯಲ್ಲಿ ಪುಡಿ ಮಾಡಿಡಿ. ಅದೇ ಬಾಣಲೆಯಲ್ಲಿ ಇನ್ನಷ್ಟು ತುಪ್ಪ ಬಿಸಿ ಮಾಡಿ ಮಸೆದ ಖೋವಾ, ಸಕ್ಕರೆ, ದ್ರಾಕ್ಷಿ, ಗೋಡಂಬಿ ಹಾಕಿ ಹುರಿಯಿರಿ. ಖೋವಾ ಸೀಯದಂತೆ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದನ್ನು ಕೆಳಗಿಳಿಸಿ ಆರಲು ಬಿಡಿ. ಆಮೇಲೆ ಇದಕ್ಕೆ ತಾವರೆ ಬೀಜದ ಪುಡಿ, ಉಳಿದ ಸಾಮಗ್ರಿ ಬೆರೆಸಿಡಿ. ಕೈಗೆ ತುಪ್ಪ ಸವರಿಕೊಂಡು ಇದರಿಂದ ಉಂಡೆ  ಹಿಡಿದು ಲಡ್ಡು ಮಾಡಿ, ತಾವರೆ ಬೀಜದ ಪುಡಿಯಲ್ಲಿ ಹೊರಳಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಸ್ಪೆಷಲ್ ಕ್ಯಾರೆಟ್‌ ಹಲ್ವಾ

Preet-Lite

ಸಾಮಗ್ರಿ :  8-10 ಕೆಂಪು ಕ್ಯಾರೆಟ್‌ನ ತುರಿ, 1 ಲೀ. ಫುಲ್ಕ್ರೀಂ ಹಾಲು, 1 ಕಪ್‌ ಸಕ್ಕರೆ, ಅಗತ್ಯವಿದ್ದಷ್ಟು ತುಪ್ಪ, ಏಲಕ್ಕಿ ಪುಡಿ, ಖೋವಾ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, ಕಿತ್ತಳೆ ರಸ, ಕಿತ್ತಳೆ ಕುಸುಮೆಗಳು.

ವಿಧಾನ : ಮೊದಲು ತುಸು ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿಗಳನ್ನು ಹುರಿದು ತೆಗೆಯಿರಿ. ಇನ್ನಷ್ಟು ತುಪ್ಪ ಹಾಕಿ, ಕ್ಯಾರೆಟ್ ಸೇರಿಸಿ ಮಂದ ಉರಿಯಲ್ಲಿ ಹದನಾಗಿ ಬಾಡಿಸಿ. ನಂತರ ಇದಕ್ಕೆ ಮಸೆದ ಖೋವಾ ಹಾಕಿ, ತುಪ್ಪ ಬೆರೆಸುತ್ತಾ ಕೆದಕಬೇಕು. ಆಮೇಲೆ ಹಾಲು ಬೆರೆಸಿ ಕುದಿ ಬರಿಸಿ. ನಂತರ ಸಕ್ಕರೆ, ಕಿತ್ತಳೆ ರಸ ಆಮೇಲೆ ಏಲಕ್ಕಿ ಹಾಗೂ ಗೋಡಂಬಿ, ದ್ರಾಕ್ಷಿಗಳನ್ನೂ ಸೇರಿಸಿ. ಕೆಳಗೆ ಇಳಿಸಿದ ಮೇಲೆ ಕಿತ್ತಳೆ ಕುಸುಮೆ ಹಾಕಿ ಬೆರೆತುಕೊಳ್ಳುವಂತೆ ಮಾಡಿ. ಇದನ್ನು ತಟ್ಟೆಗೆ ಹಾಕಿ, 2 ಮಿಳ್ಳೆ ತುಪ್ಪ ಸೇರಿಸಿ ಸವಿಯಲು ಕೊಡಿ.

ಕ್ಯಾರೆಟ್‌ ಕಲಾಕಂದ್‌

Preet-Lite

ಸಾಮಗ್ರಿ :  100 ಗ್ರಾಂ ತುರಿದ ಕ್ಯಾರೆಟ್‌, 200 ಗ್ರಾಂ ಮಸೆದ ಪನೀರ್‌, 60 ಗ್ರಾಂ ಹಾಲಿನ ಪುಡಿ, 70 ಗ್ರಾಂ ಕಂಡೆನ್ಸ್ಡ್ ಮಿಲ್ಕ್, ಅಗತ್ಯವಿದ್ದಷ್ಟು ತುಪ್ಪ, ಸಕ್ಕರೆ, ಏಲಕ್ಕಿಪುಡಿ, ಬಾದಾಮಿ, ಪಿಸ್ತಾ ಚೂರು.

ವಿಧಾನ : ಒಂದು ಬಟ್ಟಲಿಗೆ ಕ್ಯಾರೆಟ್‌ ತುರಿ, ಮಸೆದ ಪನೀರ್‌, ಹಾಲಿನ ಪುಡಿ, ಕಂಡೆನ್ಸ್ಡ್ ಮಿಲ್ಕ್ ಬೆರೆಸಿಕೊಂಡು, ತುಪ್ಪದಿಂದ ಇದನ್ನು ಲೈಟ್‌ ಆಗಿ ಕಲಸಿರಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಈ ಮಿಶ್ರಣ ಬೆರೆಸಿ 1-2 ಕುದಿ ಬರುವಂತೆ ಮಾಡಿ. ನಂತರ ಸಕ್ಕರೆ, ಏಲಕ್ಕಿ ಪುಡಿ ಬೆರೆಸಿ, ಇನ್ನಷ್ಟು ತುಪ್ಪದೊಂದಿಗೆ ಹಲ್ವಾ ಹದಕ್ಕೆ ಕೆದಕಿರಿ. ನಂತರ ತುಪ್ಪ ಸವರಿದ ಟ್ರೇಗೆ ಇವನ್ನು ಹರಡಿ. ಇದರ ಮೇಲೆ ತುಪ್ಪದಲ್ಲಿ ಹುರಿದ ಪಿಸ್ತಾ, ಬಾದಾಮಿ ಚೂರು ಉದುರಿಸಿ, ನೀಟಾಗಿ ಚೌಕಾಕಾರವಾಗಿ ಕತ್ತರಿಸಿ, ಅತಿಥಿಗಳಿಗೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ