ಟೋಫು ವೆಜಿಟೆಬಲ್ ಸ್ಟರ್‌ ಫ್ರೈ

ಮ್ಯಾರಿನೇಟ್‌ ಸಾಮಗ್ರಿ :  2-2 ಚಮಚ ಎಳ್ಳೆಣ್ಣೆ, ರೈಸ್‌ ವಿನಿಗರ್‌, ವೈಟ್‌ ಸೋಯಾ ಸಾಸ್‌, ತುಸು ತುರಿದ ಶುಂಠಿ, ನಿಂಬೆಸಿಪ್ಪೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಬ್ರೌನ್‌ ಶುಗರ್‌, ರೆಡ್‌ ಚಿಲೀ ಸಾಸ್‌, 200 ಗ್ರಾಂ ಟೋಫು (ರೆಡಿಮೇಡ್‌), ದೊಡ್ಡ ತುಂಡುಗಳಾಗಿಸಿದ್ದು.

ಸ್ಟರ್‌ ಫ್ರೈ ಸಾಮಗ್ರಿ : 2 ಚಮಚ ಎಳ್ಳೆಣ್ಣೆ, 8-10 ಎಸಳು ಬೆಳ್ಳುಳ್ಳಿ (ತುರಿ), ಅರ್ಧ ಕಪ್‌ ಹುರಿದು ತರಿ ಮಾಡಿದ ಕಡಲೆಬೀಜ, 1 ಕಪ್ ವೆಜಿಟೆಬ್‌ ಸ್ಟಾಕ್‌ (ಮಿಶ್ರ ತರಕಾರಿ ಬೇಯಿಸಿ ಬಸಿದ ನೀರು), ಅರ್ಧರ್ಧ ಕಪ್‌ ಹೆಚ್ಚಿದ ಕೆಂಪು, ಹಳದಿ, ಹಸಿರು ಕ್ಯಾಪ್ಸಿಕಂ, ಆಯಿಸ್ಟರ್‌ ಅಣಬೆ, ಕ್ಯಾನ್ಡ್ ಬ್ಯಾಂಬೂ (ರೆಡಿಮೇಡ್‌), ಬೆಂದ ವಾಟರ್‌ ಚೆಸ್ಟ್ ನಟ್ಸ್ (ಒಣಗಿಸಿ 2 ಭಾಗ ಆಗಿಸಿ), 1 ಸಣ್ಣ ಕ್ಲಸ್ಟರ್ ಬಾಕ್‌ ಚಾಯ್‌ (ರೆಡಿಮೇಡ್‌).

ವಿಧಾನ : ಟೋಫು ಬಿಟ್ಟು ಉಳಿದೆಲ್ಲ ಮ್ಯಾರಿನೇಟ್‌ ಸಾಮಗ್ರಿ ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. 15 ನಿಮಿಷ ಇದನ್ನು ಒಂದು ಬದಿಗಿಡಿ. ಆಮೇಲೆ ಇದಕ್ಕೆ ಟೋಫು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ, ಮತ್ತೆ 15 ನಿಮಿಷ ಮ್ಯಾರಿನೇಟ್‌ ಆಗಲು ಬಿಡಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಬೆಳ್ಳುಳ್ಳಿ ಹಾಕಿ ಬಾಡಿಸಿ. ಆಮೇಲೆ ಕಡಲೆಬೀಜ ಹಾಕಿ ಕೆದಕಿ, ನಂತರ ವೆಜ್‌ ಸ್ಟಾಕ್‌ ಬೆರೆಸಿಕೊಳ್ಳಿ. 2 ನಿಮಿಷ  ಬಿಟ್ಟು ಇದಕ್ಕೆ ಬಾಕ್‌ ಚಾಯ್‌ ಹೊರತುಪಡಿಸಿ ಉಳಿದೆಲ್ಲ ಸ್ಟರ್‌ ಫ್ರೈ ಸಾಮಗ್ರಿ ಹಾಕಿ ಕೈಯಾಡಿಸಿ, 10 ನಿಮಿಷ ಮಂದ ಉರಿಯಲ್ಲಿ ಚಲಾಯಿಸಿ ಆಮೇಲೆ ಇದಕ್ಕೆ ಮ್ಯಾರಿನೇಟೆಡ್‌ ಟೋಫು ಮಿಶ್ರಣ, ಬಾಕ್‌ ಚಾಯ್‌ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಬಿಸಿ ಇರುವಾಗಲೇ ಇದನ್ನು ತಕ್ಷಣ ಸರ್ವ್ ‌ಮಾಡಿ.

ಟೊಮೇಟೊ ಸೂಪ್‌ ವಿತ್‌ ರೋಸ್ಟೆಡ್‌ ಆಲ್ಮಂಡ್‌

Roasted-almonds-tomato-soup

ಸಾಮಗ್ರಿ : 4 ಚಮಚ ಆಲಿವ್ ‌ಆಯಿಲ್‌, 1-2 ಲವಂಗದೆಲೆ, 2-3 ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, 7-8 ಹೆಚ್ಚಿದ ದೊಡ್ಡ ಹುಳಿ ಟೊಮೇಟೊ, 4 ಕಪ್‌ ವೆಜ್‌ ಸ್ಟಾಕ್‌, 2 ಕಪ್‌ ಫುಲ್ ಕ್ರೀಂ ಹಾಲು, ತುಪ್ಪದಲ್ಲಿ ಹುರಿದ ಅರ್ಧ ಕಪ್‌ ಬಾದಾಮಿ ಚೂರು (ಉದ್ದ ಇರಲಿ), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆ ರಸ, ಹೆಚ್ಚಿದ ಪಾರ್ಸ್ಲೆ.

ವಿಧಾನ : ಒಂದು ದೊಡ್ಡ ಪ್ಯಾನಿನಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಲವಂಗದೆಲೆ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಬೇಕು. ನಂತರ ಸ್ಟಾಕ್‌ ಬೆರೆಸಿ 1-2 ಕುದಿ ಬರಿಸಿ. ಕುದಿ ಬಂದ ಮೇಲೆ ಸಂಪೂರ್ಣ ಮಂದ ಉರಿ ಮಾಡಿ, ಈ ಸೂಪ್‌ ಗಟ್ಟಿ ಆಗುವವರೆಗೂ ಕುದಿಸಬೇಕು. ನಂತರ ಕೆಳಗಿಳಿಸಿ ಆರಲು ಬಿಡಿ. ಆಮೇಲೆ ಇದರಿಂದ ಲವಂಗದೆಲೆ ಬೇರ್ಪಡಿಸಿ, ಇದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಮಾಡಿ. ಅದನ್ನು ಮತ್ತೆ ಬಾಣಲೆಗೆ ಹಾಕಿ ಮಂದ ಉರಿಯಲ್ಲಿ ಕುದಿಸಬೇಕು. ಜೊತೆಗೆ ಗಟ್ಟಿ ಹಾಲು, ಉಪ್ಪು, ಮೆಣಸು ಹಾಕಿ ಕುದಿಸಿರಿ. ನಂತರ ಇದನ್ನು ಬಟ್ಟಲುಗಳಿಗೆ ತುಂಬಿಸಿ ಮೇಲೆ ಬಾದಾಮಿ, ಪಾರ್ಸ್ಲೆ ಉದುರಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ