ಇಂದಿನ ಧಾವಂತದ ಜೀವನದಲ್ಲಿ ಜನರಿಗೆ ತಮ್ಮ ಬಗ್ಗೆ ಹೆಚ್ಚಿನ ಗಮನ ಕೊಡಲು ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಅವರಿಗೆ ಮಸಾಜ್‌ ಉಪಯುಕ್ತವಾಗಿ ಪರಿಣಮಿಸುತ್ತದೆ. ಏಕೆಂದರೆ ಮಸಾಜ್‌ನಿಂದ ಕೇವಲ ರಕ್ತ ಪರಿಚಲನೆಯಷ್ಟೇ ಸುಧಾರಣೆಯಾಗುವುದಿಲ್ಲ. ನಿಮ್ಮ ದಣಿವು ಒತ್ತಡವನ್ನು ಕೂಡ ಕಡಿಮೆ ಮಾಡಲು ಸಹಾಯಕವಾಗಿದೆ. ಇತ್ತೀಚಿನ ದಿನಗಳಲ್ಲಿ `ಮೀ ಟೈಮ್' ಬಹಳಷ್ಟು ಮಹತ್ವದ್ದಾಗಿ ಪರಿಣಮಿಸುತ್ತಿದೆ. ಜನರಿಗೆ ಅದರ ಬಗ್ಗೆ ಅರಿವು ಮೂಡುತ್ತಿದೆ.

ಈ ಕುರಿತಂತೆ ಬೆಂಗಳೂರಿನ ಬ್ಯೂಟಿ ಪಾರ್ಲರ್‌ ಹಾಗೂ ಮಸಾಜ್‌ ಸೆಂಟರಿನ ಎಕ್ಸ್ ಪರ್ಟ್‌ ಗೀತಾ ಹೀಗೆ ಹೇಳುತ್ತಾರೆ, ``ತೈಲ ಮಸಾಜ್‌ನ ಪದ್ಧತಿ ಶತಶತಮಾನಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ ಈಗ ಜನರು ಹೆಡ್‌ಬಾಡಿ ಮಸಾಜ್ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ. ಏಕೆಂದರೆ ಇದರಿಂದ ರಕ್ತ ಪರಿಚಲನೆಯಂತೂ ಹೆಚ್ಚುತ್ತದೆ. ಜೊತೆಗೆ ತಲೆನೋವು ಒತ್ತಡ ಮತ್ತು ದಣಿವಿನಿಂದ ಮುಕ್ತಿ ದೊರಕುತ್ತದೆ.

ಅಂದಹಾಗೆ ಮಸಾಜ್‌ ಒಂದು ರೀತಿಯ ಪಾಲಿಶ್‌ ಆಗಿದ್ದು, ಅದನ್ನು ತೈಲದ ಮುಖಾಂತರ ಮಾಡಲಾಗುತ್ತದೆ. ಮಸಾಜ್‌ನಿಂದ ದೇಹದಲ್ಲಿ ಸ್ಛೂರ್ತಿ ಬರುತ್ತದೆ ಹಾಗೂ ಚರ್ಮದಲ್ಲಿ ಬಿಗುವು ಉಂಟಾಗುತ್ತದೆ.

ಮಸಾಜ್‌ ಹಲವು ರೀತಿಯಲ್ಲಿ ಕೈಗೊಳ್ಳಲಾಗುತ್ತದೆ. ಅವುಗಳೆಂದರೆ :

ಮಸಾಜ್‌ನ ಅತ್ಯಂತ ಹಳೆಯ ವಿಧಾನವೆಂದರೆ, ಅದು ಹೆಡ್‌ ಮಸಾಜ್‌. ಇದನ್ನು ಉತ್ತರ ಭಾರತದಲ್ಲಿ `ಚಂಪಿ ಮಸಾಜ್‌' ಎಂದು ಹೇಳಲಾಗುತ್ತದೆ. ಅದನ್ನು ತಲೆನೋವಿನಿಂದ ಮುಕ್ತಿ ದೊರಕಿಸಿಕೊಡಲು ಹಾಗೂ ನೆತ್ತಿಗೆ ಪೋಷಣೆ ದೊರಕಿಸಿಕೊಡಲು ಮಾಡಲಾಗುತ್ತದೆ. ಇದರಿಂದ ಕೂದಲಿಗೆ ಪೋಷಣೆ ದೊರಕಿಸಿಕೊಡುತ್ತದೆ. ಇದರಲ್ಲಿ ಹೆಡ್‌ ಮಸಾಜ್‌ಗಾಗಿ ಬಾದಾಮಿ ಎಣ್ಣೆ, ಆಲಿವ್ ಎಣ್ಣೆ, ತೆಂಗಿನೆಣ್ಣೆ ಮುಂತಾದವನ್ನು ಬಳಸಲಾಗುತ್ತದೆ.

ಎಣ್ಣೆಯನ್ನು ತುಸು ಬಿಸಿ ಮಾಡಿಕೊಂಡು, ಕೂದಲನ್ನು ಇಬ್ಭಾಗ ಮಾಡಿಕೊಂಡು, ಹತ್ತಿಯ ತುಂಡಿನಿಂದ ನೆತ್ತಿಯ ಭಾಗಕ್ಕೆ ಲೇಪಿಸಲಾಗುತ್ತದೆ. ನಂತರ ಬೆರಳಿನ ತುದಿ ಭಾಗದಿಂದ ವೃತ್ತಾಕಾರದಲ್ಲಿ ನಿಧಾನವಾಗಿ ಮಸಾಜ್‌ ಮಾಡಬೇಕು. ಏಕೆಂದರೆ ಕೂದಲು ಗಂಟುಗಂಟಾಗದಿರಲಿ ಹಾಗೂ ಉದುರದಿರಲಿ ಎಂದು.

ಆಯುರ್ವೇದಿಕ್‌ ಮಸಾಜ್‌ಗೆ ಈಗ ಸಾಕಷ್ಟು ಬೇಡಿಕೆಯಿದೆ. ಅದಕ್ಕಾಗಿ ಅಕ್ಕಿ ಹಾಗೂ ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿಕೊಂಡು, ತೈಲದ ಜೊತೆ ಸೇರಿಸಿ ಹಬೆಯ ಮೇಲೆ ಬೇಯಿಸಲಾಗುತ್ತದೆ. ಬಳಿಕ ಅದನ್ನು ಮಕ್ಮಲ್ ಬಟ್ಟೆಯಲ್ಲಿ ಹಾಕಿಕೊಂಡು ದೇಹದ ಮೇಲೆ ಉಜ್ಜಲಾಗುತ್ತದೆ. ಇದರಿಂದ ಹಲವು ಬಗೆಯ ನೋವಿನಿಂದ ನಿರಾಳತೆ ದೊರಕುತ್ತದೆ.

ಆ್ಯರೊಮ್ಯಾಟಿಕ್‌ ಮಸಾಜ್‌ನ್ನು ಸಾಮಾನ್ಯವಾಗಿ ಒತ್ತಡದ ಸ್ಥಿತಿಯಲ್ಲಿ ಮಾಡಲಾಗುತ್ತದೆ. ಇದರಲ್ಲಿ ಸುಗಂಧ ತೈಲವನ್ನು ಬಳಸಲಾಗುತ್ತದೆ. ಅದರಿಂದ ಮೆದುಳು ಶಾಂತವಾಗುತ್ತದೆ. ಚಿಂತೆಗಳು ದೂರವಾಗುತ್ತವೆ.

ಕಲರಿ ಮಸಾಜ್

ಸಾಮಾನ್ಯವಾಗಿ ಕೇರಳದಲ್ಲಿ ಗಿಡಮೂಲಿಕೆ ತೈಲಗಳಿಂದ ಮಾಡಲಾಗುತ್ತದೆ. ದೇಹವನ್ನು ಲವಲವಿಕೆಯಿಂದಿಡಲು ಬಳಸುವ ಕಲರಿ ಮಸಾಜ್‌ ಕೇರಳದಲ್ಲಿ ಕುಸ್ತಿ ಅಭ್ಯಾಸಕ್ಕೆ ಸಂಬಂಧಪಟ್ಟಂತೆ ಅತ್ಯಂತ ಪ್ರಾಚೀನ ಕಲೆಯಾಗಿದೆ.

ಥಾಯ್ಮಸಾಜ್

ಥಾಯಿ ವ್ಯವಸ್ಥೆಗೆ ಸಂಬಂಧಪಟ್ಟ ಮಸಾಜ್‌ ಆಗಿದೆ. ಇದರಲ್ಲಿ ದೇಹದ ಶಕ್ತಿಯನ್ನು ಒಂದು ಕೇಂದ್ರದಲ್ಲಿ ತರಬೇಕಾಗುತ್ತದೆ. ಈ ಮಸಾಜ್‌ನಿಂದ ವ್ಯಕ್ತಿ ಒತ್ತಡದಿಂದ ನಿರಾಳತೆ ಪಡೆದುಕೊಳ್ಳುತ್ತಾನೆ.

ಈ ಕುರಿತಂತೆ ಗೀತಾ ಅವರು ಹೀಗೆ ಹೇಳುತ್ತಾರೆ, ಹೆಡ್‌ ಮಸಾಜ್‌ನ್ನು 8 ದಿನಕ್ಕೊಮ್ಮೆ ಮಾಡುವುದು ಅತ್ಯವಶ್ಯಕ. ಅದೇ ಬಾಡಿ ಮಸಾಜ್‌ನ್ನು ತಿಂಗಳಿಗೊಮ್ಮೆ ಮಾಡಿಸುವುದು ಅತ್ಯವಶ್ಯ. ಏಕೆಂದರೆ ನೀವು ಪರಿಪೂರ್ಣವಾಗಿ ಸ್ಛೂರ್ತಿಯ ಅನುಭೂತಿ ಮಾಡಿಕೊಳ್ಳಬೇಕು. ಮಸಾಜ್‌ ಸಂದರ್ಭದಲ್ಲಿ ದೇಹದ ಅತ್ಯವಶ್ಯಕ ಕೇಂದ್ರ ಬಿಂದುವಿನ ಮೇಲೆ ಒತ್ತಡ ಕೊಡುವುದು ಮುಖ್ಯ. ಇದರಿಂದ ಯಾವಾಗಲೂ ಎಕ್ಸ್ ಪರ್ಟ್‌ಗಳಿಂದ ಮಸಾಜ್‌ ಮಾಡಿಸಿಕೊಳ್ಳುವುದು ಮುಖ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ