ಇಡೀ ದಿನ ಆಫೀಸಿನಲ್ಲಿ ದುಡಿದು ದಣಿದು ಸಾಕಾಗಿ ಮನೆಗೆ ಬಂದಾಗ ಸಾಕಪ್ಪ ಎಂದು ಸುಸ್ತಾಗಿ ಕಾಲು ಚಾಚಿ ಕೂರೋಣ ಎನಿಸುತ್ತದೆ. ಆದರೆ ಕಂಪನಿಯಲ್ಲಿ ಕೆಲಸ ಮಾಡುವ ಸ್ಮಿತಾ ಸುಸ್ತಾಗಿ ಮನೆಗೆ ಬಂದಾಗ ಎಲ್ಲೆಲ್ಲೂ ಸಾಮಾನು ಹರಡಿರುವ ಮನೆ,  ಅವ್ಯವಸ್ಥಿತ ಫರ್ನೀಚರ್‌, ಮಂದ ಬೆಳಕು, ಗೋಡೆಗಳಿಗೆ ಬಳಿದ ಗಾಢ ಬಣ್ಣ.... ಅವಳಿಗೆ ಸಾಕಪ್ಪ ಸಾಕು ಎನಿಸಿಬಿಡುತ್ತದೆ. ಇದೇ ತರಹ ಮೋನಿಕಾಳಿಗೂ ತನ್ನ ಬೆಡ್‌ರೂಮಿನಲ್ಲಿ ಹರಡಿದ ಸಾಮಗ್ರಿ, ಬಟ್ಟೆಬರೆ, ಗೋಡೆಗೆ ಒತ್ತರಿಸಿದ ಭಾರಿ ಫರ್ನೀಚರ್‌

ಕಂಡಾಗ ಅನಿಸುತ್ತದೆ. ಸ್ಮಿತಾ ಹಾಗೂ ಮೋನಿಕಾರಂತೆಯೇ ಅನೇಕ ಮಹಿಳೆಯರು ತಮ್ಮ ಮನೆಯಲ್ಲಿ ಬೇಕಾದ ನೆಮ್ಮದಿ ಸಿಗದಿದ್ದಾಗ, ದೈಹಿಕ ಹಾಗೂ ಮಾನಸಿಕವಾಗಿ ಅಸ್ತವ್ಯಸ್ತಗೊಳ್ಳುತ್ತಾರೆ. ನರತಜ್ಞರ ಪ್ರಕಾರ ಮನೆಯ ಗೃಹಾಲಂಕಾರ ಆ ಕುಟುಂಬದ ಸದಸ್ಯರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮನೆಯ ಒಳಾಲಂಕಾರ ಸಮರ್ಪಕವಾಗಿ ಇಲ್ಲದಿದ್ದರೆ ಟೆನ್ಶನ್‌, ಉದ್ವಿಗ್ನತೆ, ಚಡಪಡಿಕೆ ಹೆಚ್ಚಿ ಅನಾರೋಗ್ಯಕ್ಕೆ ದಾರಿಯಾಗುತ್ತದೆ.

ಪ್ರತಿ ಬಣ್ಣ ವಿಭಿನ್ನ

ಗೋಡೆಗಳಿಗೆ ಹಚ್ಚಿರುವ ಬಣ್ಣ ಹೆಚ್ಚಿನ ಮಹತ್ವ ಹೊಂದಿವೆ. ಒಳಾಲಂಕರಣ ತಜ್ಞರ ಪ್ರಕಾರ, ಯಾವ ರೀತಿ ಮಾನವರ ಮುಖ ಅವರ ವ್ಯಕ್ತಿತ್ವದ ಪರಿಚಯ ನೀಡುತ್ತದೋ, ಅದೇ ತರಹ ಗೋಡೆಗಳಿಗೆ ಬಳಿಯಲಾದ ಬಣ್ಣ ಮನೆಯ ಸೌಂದರ್ಯದ ಹೆಗ್ಗುರುತಾಗಿದೆ.

ಬಣ್ಣಗಳಿಗಂತೂ ತಮ್ಮದೇ ಆದ ವಿಭಿನ್ನ ಗುಣವಿದೆ. ಅದು ವ್ಯಕ್ತಿಯ ಮನದ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ತಜ್ಞರ ಪ್ರಕಾರ, ಬಣ್ಣಗಳ ಪ್ರತಿಬಿಂಬ ವ್ಯಕ್ತಿಯನ್ನು ಒತ್ತಡ ಮುಕ್ತನನ್ನಾಗಿಸುತ್ತದೆ, ಕೂಲ್ ‌ಆಗಿರಿಸುತ್ತದೆ. ಆದ್ದರಿಂದ ಇವನ್ನು ಆರಿಸುವಾಗ ಆದಷ್ಟೂ ಎಚ್ಚರಿಕೆ ವಹಿಸಬೇಕು.

ಯಾವ ಬಣ್ಣ ಯಾವ ಭಾವ ಬಿಂಬಿಸುತ್ತದೆ?

ಈ ವಿಚಾರವನ್ನು ವಿಶ್ಲೇಷಿಸುವಾಗ, ಗಾಢ ಬಣ್ಣಗಳಾದ ಕೆಂಪು, ನೀಲಿ, ಹಸಿರು ತಾಪಮಾನ ಹೆಚ್ಚಾಗಿರುವಂತೆ ತೋರಿಸುತ್ತದೆ. ಅದರಲ್ಲೂ ಮುಖ್ಯವಾಗಿ ಬೆಡ್‌ ರೂಮಿನ ಗೋಡೆಗಳಿಗೆ ಆರೋಗ್ಯದ ದೃಷ್ಟಿಯಿಂದ ಹಿತಕರ ಲೈಟ್‌ ಕಲರ್ಸ್‌ನ್ನೇ ಆರಿಸಬೇಕು. ಒಂದು ಅಧ್ಯಯನದ ಪ್ರಕಾರ ಕೆಂಪು ಬಣ್ಣ ಬಿ.ಪಿ., ಹೃದ್ರೋಗ ಹೆಚ್ಚಿಸಿದರೆ, ಗಾಢ ಹಸಿರು ಒತ್ತಡ ಹೆಚ್ಚಿಸುತ್ತದೆ. ಗಾಢ ಹಳದಿ ಬಣ್ಣ ವ್ಯಕ್ತಿಯನ್ನು ಸಿಡಿಗುಟ್ಟುವಂತೆ ಮಾಡುತ್ತದೆ. ಈ ಬಣ್ಣ ಮಕ್ಕಳಿಗೂ ಮಾನಸಿಕ ಒತ್ತಡ ಹೆಚ್ಚಿಸಬಲ್ಲದು. ಅವು ಹೆಚ್ಚು ಹಠಮಾರಿಗಳಾಗಿ ಎಲ್ಲಕ್ಕೂ ರಂಪ ಮಾಡುತ್ತವೆ.

ಆದರೆ ಜನ ತಮ್ಮ ಷೋಕಿಗೆ ತಕ್ಕಂತೆ ಇಂಥ ಬಣ್ಣಗಳನ್ನೇ ಆರಿಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಪ್ರತಿ ವ್ಯಕ್ತಿಯ ಅಭಿರುಚಿ, ಆಯ್ಕೆ ವಿಭಿನ್ನವಾಗಿಯೇ ಇರುತ್ತದೆ. ಹೀಗಾಗಿ ಬಣ್ಣಗಳ ಮಧ್ಯೆ ಹೊಂದಾಣಿಕೆ ಮೂಡಿಸಲು ಗಾಢ ಬಣ್ಣಗಳ ನಡುವೆ ತೆಳು ಬಣ್ಣ ಬೆರೆಸಿ ಒಂದು ಉತ್ತಮ ಥೀಂ ಮಾಡಬಹುದು. ಟ್ರೆಂಡ್‌ ಪ್ರಕಾರ ಈಗ ಕಪ್ಪು, ಮೆರೂನ್‌, ಗಾಢ ಬೂದು ಬಣ್ಣಗಳು ಚಾಲ್ತಿಯಲ್ಲಿವೆ. ಇದರ ಜೊತೆ ಗೋಲ್ಡನ್‌, ಸಿಲ್ವರ್‌ ಕಾಂಬಿನೇಶನ್‌ ಬಲು ರಿಚ್‌ ಲುಕ್ಸ್ ಕೊಡುತ್ತವೆ.

ಸೂಕ್ತ ಲೈಟಿಂಗ್‌ ಅತ್ಯಗತ್ಯ

ಬಣ್ಣಗಳ ಜೊತೆ ಇಂಟೀರಿಯರ್ಸ್‌ನ ಮತ್ತೊಂದು ಪ್ರಮುಖ ಅಂಶವೆಂದರೆ ಬೆಳಕಿನ ವ್ಯವಸ್ಥೆ. ಇದರಲ್ಲಿ ಎಂದೂ ಜಿಪುಣತನ ಬೇಡ. ವಿಶೇಷವಾಗಿ ಗೃಹಿಣಿಯರು ಮನೆಯಲ್ಲಿ ಆದಷ್ಟೂ ವಿದ್ಯುತ್‌ ಖರ್ಚು ಉಳಿಸಬೇಕೆಂಬ ಧಾವಂತದಲ್ಲಿ ಅತಿ ಜಿಪುಣತನ ತೋರಿಸಿ, ಮನೆಯೊಳಗೆ ಬೆಳಕಿನ ವ್ಯವಸ್ಥೆ ಮಂಕಾಗಿಸಿ, ಒಳಾಲಂಕಾರದ ಅಂದ ಕೆಡಿಸುತ್ತಾರೆ. ಇತ್ತೀಚೆಗೆ ಬೆಂಗಳೂರಿನಂಥ ಮಹಾನಗರಗಳಲ್ಲಿ ಹೆಚ್ಚು ನೈಸರ್ಗಿಕ ಬೆಳಕು ನೀಡುವಂಥ ಗವಾಕ್ಷಿ, ಓಪನ್‌ ಬಾಲ್ಕನಿ ಒದಗಿಸುವ ಅಪಾರ್ಟ್‌ಮೆಂಟ್‌ಗಳೇ ಅಪರೂಪವಾಗುತ್ತಿವೆ. ನ್ಯಾಚುರಲ್ ಲೈಟ್‌ ಕಡಿಮೆ ಆದಾಗ ವಿದ್ಯುತ್‌ ಬೆಳಕು ಬೇಕೇಬೇಕಷ್ಟೆ? ವಿಶೇಷವಾಗಿ ಲಿವಿಂಗ್‌ ರೂಂ ಮತ್ತು ಅಡುಗೆಮನೆಯಲ್ಲಿ ಲೈಟಿಂಗ್‌ ವ್ಯವಸ್ಥೆ ಸಮರ್ಪಕವಾಗಿರಬೇಕು. ಇಲ್ಲಿ ಮನೆಯ ಇತರ ಕೋಣೆಗಳಿಗಿಂತ ಗೃಹಿಣಿ ಮತ್ತು ಕೌಟುಂಬಿಕ ಸದಸ್ಯರು ಇಲ್ಲಿ ಹೆಚ್ಚು ಕ್ರಿಯೇಟಿವ್ ‌ಆಗಿರುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ