ನೀವು ಸೆಕ್ಶುಯಾಲಿಟಿಗೆ ಸಂಬಂಧಪಟ್ಟಂತೆ ಹಲವು ಶಬ್ದಗಳನ್ನು ಕೇಳಿರಬಹುದು. ಬೈ ಸೆಕ್ಶುಯಲ್, ಪ್ಯಾನ್‌ ಸೆಕ್ಶುಯಲ್, ಸೆಪೊ ಸೆಕ್ಶುಯಲ್, ಪಾಲಿ ಸೆಕ್ಶುಯಲ್, ಅಸೆಕ್ಶುಯಲ್ ಹೀಗೆ ಅನೇಕ ಬಗೆಯ ಶಬ್ದಗಳಿವೆ. ಈಗ ಹೊಸದೊಂದು ಶಬ್ದ ಸೇರಿಕೊಂಡಿದೆ. ಅದೇ ಡೆಮಿ ಸೆಕ್ಶುಯಲ್. ಇವರು ಅಸೆಕ್ಶುಯಾಲಿಟಿ ಅಂದರೆ ಅಲೈಂಗಿಕತೆಯ ಅಂಚಿನಲ್ಲಿರಬಹುದು. ಆದರೆ ಇವರು ಪರಿಪೂರ್ಣ ಅಲೈಂಗಿಕ ವ್ಯಕ್ತಿಗಳಲ್ಲ. ನೀವು ಯಾರೊಂದಿಗಾದರೂ ಲೈಂಗಿಕವಾಗಿ ಆಕರ್ಷಿತರಾಗುವ ಮುಂಚೆ ಒಳ್ಳೆಯ ಸ್ನೇಹಿತರಾಗಬೇಕೆಂದು ಬಯಸುವಿರಾದರೆ ನೀವು ಖಚಿತವಾಗಿಯೂ ಡೆಮಿಸೆಕ್ಶುಯಲ್ ವ್ಯಕ್ತಿ.

ಸೆಕ್ಶುಯಾಲಿಟಿಯ ಗುರುತು

ನೀವು ಡೆಮಿ ಸೆಕ್ಶುಯಲ್ ಹೌದೊ, ಅಲ್ಲವೊ ಎಂದು ಕಂಡುಕೊಳ್ಳಲು ಹಲವು ವಿಧಾನಗಳಿವೆ. ಎಲ್ಲಕ್ಕೂ ಮುಖ್ಯ ವಿಧಾನವೆಂದರೆ, ನೀವು ಭಾವತನಾತ್ಮಕವಾಗಿ ಯಾರೊಂದಿಗೂ ನಿಕಟರಾಗುವುದಿಲ್ಲ. ನಿಮಗೆ ಲೈಂಗಿಕ ಅನುಭವಗಳೂ ಉಂಟಾಗುವುದಿಲ್ಲ. ನಿಮಗೆ ಭಾವನೆಗಳು ಮುಖ್ಯ. ನೀವು ಜೀವನವಿಡೀ ಒಬ್ಬನೇ ವ್ಯಕ್ತಿಯೊಂದಿಗೆ ಸಂಬಂಧ ಕಾಯ್ದುಕೊಂಡು ಹೋಗಲು ಇಚ್ಛಿಸುತ್ತೀರಿ. ಯಾವುದೇ ಪ್ರಯೋಗ ನಿಮಗೆ ಗಾಬರಿಯನ್ನುಂಟು ಮಾಡುತ್ತದೆ. ನೀವು ಸೆಕ್ಶುಯಲ್ ವ್ಯಕ್ತಿಯಲ್ಲ. ಇದರಲ್ಲಿ ಯಾವುದೇ ಕೆಡುಕಿಲ್ಲ. ಸೆಕ್ಸ್ ನ ಹಿಂದೆ ಧಾವಿಸುವುದಕ್ಕಿಂತ ಹೆಚ್ಚಾಗಿ ನಿಮಗೆ ಮುಖಾಮುಖಿ ಆಗಿ, ವಾಸ್ತವದ ನಿಟ್ಟಿನಲ್ಲಿ ಮಾತುಕತೆ ನಡೆಸಲು ಹೆಚ್ಚು ಇಷ್ಟವಾಗುತ್ತದೆ. ಒಂದು ವೇಳೆ ನೀವು ಯಾರೊಂದಿಗಾದರೂ ರಿಲೇಶನ್‌ಶಿಪ್‌ನಲ್ಲಿದ್ದರೆ, ಅವರೊಂದಿಗೆ ಭಾವನಾತ್ಮಕವಾಗಿ ನಿಕಟವಾಗಿದ್ದರೆ ಆಗ ಮಾತ್ರ ಲೈಂಗಿಕವಾಗಿ ಆಕರ್ಷಿತರಾಗುವಿರಿ. ಒಂದು ವೇಳೆ ನೀವು ಸಿಂಗಲ್ ಆಗಿದ್ದರೆ, ನೀವು ಸೆಕ್ಸ್ ಗಿಂತ ಹೆಚ್ಚಾಗಿ ಪಾರ್ಕ್‌ನಲ್ಲಿ ಸುತ್ತಾಡಲು ಅಥವಾ ನಿಮಗೆ ಇಷ್ಟವಾದ ತಿಂಡಿ ತಿನ್ನಲು ಇಷ್ಟಪಡುವಿರಿ.

ನೀವು ಯಾರನ್ನು ಇಷ್ಟಪಡುವಿರೊ, ಅವರನ್ನು ಭೇಟಿಯಾದ ಬಳಿಕ ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗುವಿರೇ ಹೊರತು ಅವರ ಲುಕ್ಸ್ ನಿಂದ ಅಲ್ಲ. ಹೀಗಾಗಿ ಯಾವುದೇ ಸಂಗಾತಿಗಿಂತ ಮುಂಚೆ ನಿಮಗೆ ಅವರೊಂದಿಗೆ ಸ್ನೇಹ ಮುಖ್ಯ. ನೀವು ಯಾರನ್ನಾದರೂ ಭೇಟಿಯಾದ ಮೇಲೆ ಸೆಕ್ಶುಯಲ್ ಆಗಿರುವ ಬಗ್ಗೆ ಅಥವಾ ಫ್ಲರ್ಟಿಂಗ್‌ನಲ್ಲಿ ನಂಬಿಕೆ ಇಡುವುದಿಲ್ಲ. ಒಬ್ಬ ವ್ಯಕ್ತಿ ನಿಮಗೆ ತನ್ನ ವ್ಯಕ್ತಿತ್ವದಿಂದ ಪ್ರಭಾವಿತಗೊಳಿಸಿದ್ದರೆ, ಮೊದಲು ನೀವು ಸ್ನೇಹದ ಹಸ್ತ ಚಾಚುವಿರಿ. ಹಲವು ವಾರಗಳಲ್ಲಿ ಅಥವಾ ಕೆಲವು ತಿಂಗಳುಗಳಲ್ಲಿಯೇ ಡೇಟಿಂಗ್‌ ಶುರು ಮಾಡುವುದನ್ನು ನೀವು ಕಲ್ಪನೆ ಕೂಡ ಮಾಡಿಕೊಳ್ಳಲಾರಿರಿ. ಫ್ಲರ್ಟಿಂಗ್‌ನ ಯೋಚನೆ ನಿಮ್ಮ ಮೆದುಳಿನಲ್ಲಿ ಬರುವುದೇ ಇಲ್ಲ.

ಆಕರ್ಷಣೀಯ ಪ್ರಕಾರಗಳು

ಆಕರ್ಷಣೆ 2 ಪ್ರಕಾರದ್ದು, ಪ್ರೈಮರಿ ಮತ್ತು ಎರಡನೆಯದು, ಮೊದಲ ಬಗೆಯ ಪ್ರೈಮರಿ ಆಕರ್ಷಣೆಯಲ್ಲಿ ನೀವು ಯಾರೊಂದಿಗಾದರೂ ಅವರ ಲುಕ್ಸ್ ನಿಂದ ಆಕರ್ಷಿತರಾಗುವಿರಿ. ಒಂದು ವೇಳೆ ನೀವು ಡೆಮಿಸೆಕ್ಶುಯಲ್ ಆಗಿದ್ದಲ್ಲಿ ನೀವು ಎರಡನೇ ಪ್ರಕಾರಕ್ಕೆ ಫಿಟ್‌ ಆಗುವಿರಿ. ಇದರರ್ಥ ನಿಮ್ಮನ್ನು ಯಾರೂ ಆಕರ್ಷಿತಗೊಳಿಸುವುದಿಲ್ಲ ಎಂದಲ್ಲ. ಬಹಳಷ್ಟು ಜನ ನಿಮಗೆ ಆಕರ್ಷಿತರಾಗಿ ಕಂಡಿರಬಹುದು. ಆದರೆ ನೀವು ಲುಕ್ಸ್ ಮಾತ್ರದಿಂದಲೇ ಆಕರ್ಷಿತರಾಗುವವರಲ್ಲ. ನಿಮ್ಮನ್ನು ಯಾರಾದರೂ ತಮ್ಮ ವ್ಯಕ್ತಿತ್ವದಿಂದ ಆಕರ್ಷಿತಗೊಳಿಸಿದರೆ ಮಾತ್ರ ನೀವು ಮುಂದೆ ಹೆಜ್ಜೆ ಹಾಕುವಿರಿ.

ನಿಮ್ಮ ಹೃದಯದಲ್ಲಿ  ಯಾರ ಬಗೆಗಾದರೂ ಫೀಲಿಂಗ್ಸ್ ಉಂಟಾಗತೊಡಗಿದರೆ ಅದರಲ್ಲೂ ವಿಶೇಷವಾಗಿ ಲೈಂಗಿಕ ಭಾವನೆಗಳು ಬರತೊಡಗಿದ್ದರೆ ನೀವು ದ್ವಂದ್ವದಲ್ಲಿ ಮುಳುಗುವಿರಿ. ಏಕೆಂದರೆ ನೀವು ಅಷ್ಟೊಂದು ಸೆಕ್ಶುಯಲ್ ವ್ಯಕ್ತಿಯಲ್ಲ. ಆ ಭಾವನೆಗಳಿಗೆ ಯಾವ ರೀತಿಯ ಪ್ರತಿಕ್ರಿಯೆ ಕೊಡಬೇಕೆಂದು ಆ ವ್ಯಕ್ತಿ ಜೊತೆ ದೈಹಿಕ ಸಂಪರ್ಕ ಹೇಗೆ ಬೆಳೆಸಬೇಕೆಂದು ನಿಮಗೆ ಗೊತ್ತಿರುವುದಿಲ್ಲ. ಈ ಎಲ್ಲ ದ್ವಂದ್ವ ಸ್ಥಿತಿಯಿಂದ ಹೊರಬಂದರೆ, ನೀವು ಆ ವ್ಯಕ್ತಿಯ ಜೊತೆಗೆ ಸಮಾಗಮ ನಡೆಸಲು ಇಚ್ಛಿಸುವಿರೇ ಹೊರತು ಬೇರಾರೊಂದಿಗೂ ಅಲ್ಲ, ಯಾರೊಂದಿಗಾದರೂ ಲೈಂಗಿಕವಾಗಿ ಮುಕ್ತರಾಗಲು ನಾನು ನಿಮ್ಮನ್ನು ಎಷ್ಟೊಂದು ಪ್ರೀತಿಸುತ್ತೇನೆ ಎಂಬುದನ್ನು ಹೇಳಬೇಕು. ಏಕೆಂದರೆ ನೀವು ಬಹಳ ಭಾವುಕರು, ಬಳಿಕ ಸಮಾಗಮ ನಿಮ್ಮಿಬ್ಬರಿಗೂ ಬಹಳ ಕಂಫರ್ಟಬಲ್ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ