ಆ ಸಂಬಂಧವನ್ನು ದಿನದಿನಕ್ಕೆ ಬಲಯುತಗೊಳಿಸಲು ನೀವು ವಿವಾಹ ಸಂಬಂಧಿತ ಈ ವಿಷಯಗಳನ್ನು ಅರಿತುಕೊಳ್ಳಿ.
ವಾಟ್ಸ್ಆ್ಯಪ್‌ನಲ್ಲಿ ವಿವಾಹವನ್ನು ಕುರಿತಾದ ಈ ಜೋಕ್ ಪ್ರಚಲಿತಾಗಿದೆ. ``ಹೆಚ್ಚು ಯೋಚಿಸದೆ ಮದುವೆ ಮಾಡಿಕೊಂಡರು ತಮ್ಮ ಮುಂದಿನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಆದರೆ ಬಹಳಷ್ಟು ಯೋಚನೆ ಮಾಡಿ ಮದುವೆಯಾದವರು ಏನು ಪಡೆಯುತ್ತಾರೆ?
''ತಮಾಷೆಯಾಗಿ ತೋರಿದರೂ ಈ ಜೋಕ್ ಮದುವೆಯ ಬಗೆಗಿನ ವಾಸ್ತವವನ್ನು ಬಯಲು ಮಾಡುತ್ತದೆ. ವಿವಾಹವೆಂಬುದು ಒಂದು ಜೂಜಿನಂತೆ, ನಿಮ್ಮ ಆಯ್ಕೆ ಸರಿಯಾಗಬಹುದು ಅಥವಾ ಆಗದಿರಬಹುದು. ನೀವಂತೂ ಮಾಂಗಲ್ಯ ತಂತುವಿನಲ್ಲಿ ಒಂದಾಗಿ, ಸಪ್ತಪದಿ ತುಳಿಯುವ ಮತ್ತು ಪರಸ್ಪರ ಸಿಹಿ ತಿನ್ನಿಸುವ ಸಂಭ್ರಮದ ಕನಸು ಕಾಣುತ್ತಿರಬಹುದು. ಅದಕ್ಕೆ ಮೊದಲು ಈ `ಪೋಸ್ಟ್ ಮ್ಯಾರೇಜ್ ಚೇಂಜ್' ನಿಮಗೇನೂ ತಿಳಿಹೇಳುವುದಿಲ್ಲ. ಇದನ್ನು ಓದಿ ಅರ್ಥ ಮಾಡಿಕೊಂಡಿದ್ದರೆ ಮುಂದೆ ನೀವು, `ನಮ್ಮ ಸಂಬಂಧಕ್ಕೆ ಏನಾಗಿದೆ. ನಮ್ಮ ಗಾಡಿ ಹಳಿ ತಪ್ಪಿ ಹೋಗುವಂತಾಗಲು ನಮ್ಮಿಬ್ಬರಲ್ಲಿ ಯಾರು ಕಾರಣ?' ಎಂದು ಚಿಂತಿಸುವುದು ತಪ್ಪಬಹುದು.
ಜಸ್ಟ್ ಚಿಲ್, ಯೋಚಿಸಬೇಡಿ,, ಇದೆಲ್ಲ ನಾರ್ಮಲ್ ವಿವಾಹಾನಂತರದ ಒಂದು ಸಾಮಾನ್ಯ ಘಟ್ಟ ಅಷ್ಟೆ.
ನಿಮ್ಮ ಪಾರ್ಟ್‌ನರ್ ಆಕರ್ಷಕ ವ್ಯಕ್ತಿಯಾಗಿ ಉಳಿದಿಲ್ಲಿವೆಂದ ಮಾತ್ರಕ್ಕೆ ನಿಮ್ಮ ಪ್ರೀತಿ ಮುಕ್ತಾಯವಾಯಿತು ಎಂದು ಅರ್ಥವಲ್ಲ. ವಾಸ್ತವವಾಗಿ ಇದು ಸಮಯದೊಂದಿಗೆ ಸರಿದುಹೋಗುವ ಒಂದು ಘಟ್ಟವಷ್ಟೇ.......?
ಪ್ರೀತಿಗೆ ಪ್ರಥಮ ಸ್ಥಾನ ನೀಡಿ
ಪತಿ-ಪತ್ನಿಯರ ನಡುವೆ ಸಂಘರ್ಷ ಉಂಟಾದಾಗ ವೈವಾಹಿಕ ಜೀವನದ ಬುನಾದಿ ಅಲುಗಾಡುತ್ತದೆ. ಈಗೋ ಎಂಬುದು ಅಡ್ಡವಿಲ್ಲದಿದ್ದರೆ ದಾಂಪತ್ಯ ಜೀವನ ಸುಗಮವಾಗಿ ಸಾಗುತ್ತದೆ. ಅಪೇಕ್ಷೆಗಳು ಹೆಚ್ಚಾಗಿದ್ದರೆ, ಅವು ಪೂರ್ಣಗೊಳ್ಳದಿದ್ದಾಗ ದಿನ ಒಂದೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ ಪತಿ-ಪತ್ನಿಯರ ನಡುವೆ ಸದಾ ಪ್ರೀತಿ ಮನೆ ಮಾಡಿದ್ದರೆ ವೈವಾಹಿಕ ಜೀವನ ಸಫಲವಾಗುತ್ತದೆ. ಪತಿ ಪತ್ನಿಯರು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಆದ್ದರಿಂದ ಇಬ್ಬರು ತಮ್ಮ ಅಹಂ ಡಿಕ್ಕಿ ಹೊಡೆಯದಂತೆ ನೋಡಿಕೊಂಡು ಪ್ರೀತಿಯ ಮಂತ್ರವನ್ನು ಜಪಿಸುತ್ತಿರಬೇಕು. ದಾಂಪತ್ಯ ಜೀವನ ಯಶಸ್ವಿಯಾಗಿಲ್ಲದಿದ್ದರೆ ಕೌಟುಂಬಿಕ ಜೀವನ ಸಮಸ್ಯೆಯ ಸುಳಿಗೆ ಸಿಕ್ಕಿಕೊಳ್ಳುತ್ತದೆ.
ರೂಪಾ ಪಾಂಡೆ ಗ್ಲೋಬಲ್ ಅಂಬಾಸಿಡರ್, ಯು.ಎನ್.ಎ.ಸಮಸ್ಯೆಗೆಲ್ಲ ಮದುವೆಯೇ ಪರಿಹಾರವಲ್ಲ.
ನಮ್ಮ ಸಮಾಜದಲ್ಲಿ ವಿವಾಹವನ್ನು ವಿಜೃಂಭೀಕರಿಸಿ, `ಯಾವುದೇ ಸಮಸ್ಯೆಗೂ ಮದುವೆಯೇ ರಾಮಬಾಣ,' ಮದುವೆಯ ನಂತರ ಎಲ್ಲ ತನ್ನಷ್ಟಕ್ಕೇ ಸರಿಹೋಗುವುದು ಎಂದು ನಂಬಿಸಲಾಗಿದೆ. ಹೀಗಾಗಿ ಮದುಮಗಳು ಆಸೆ ತುಂಬಿದ ಕಣ್ಣುಗಳಿಂದ ಮುಂದಿನ ಜೀವನದ ಬಗ್ಗೆ ಕನಸು ಕಾಣುತ್ತಾ ಹೊನ್ನಿನಂತಹ ಹಗಲು, ಬೆಳದಿಂಗಳಂತಹ ರಾತ್ರಿಯ ನಿರೀಕ್ಷೆಯಲ್ಲಿರುತ್ತಾಳೆ. ತನ್ನ ಪ್ರಿನ್ಸ್ ಚಾರ್ಮಿಂಗ್ ತನ್ನನ್ನು ರಾಜಕುಮಾರಿಯಂತೆ ನೋಡಿಕೊಳ್ಳುವನು ಎಂದು ಭಾವಿಸುತ್ತಾಳೆ. ಸ್ವಲ್ಪ ಮಟ್ಟಿಗೆ ಇದು ಸರಿಯೇ. ಹೊಸತರಲ್ಲಿ ಬಾಳು ಸಂತಸಮಯವಾಗಿರುತ್ತದೆ. ಆದರೆ ಕಾಲ ಬದಲಾಗುತ್ತದೆ ಎಂಬುದನ್ನು ಮರೆಯಬೇಡಿ. ಮದುವೆಯು ನಿಮ್ಮ ಬಾಳಿನ ಕೊರತೆಯನ್ನೆಲ್ಲ ಪೂರೈಸುತ್ತದೆಂದು ಎಣಿಸಬೇಡಿ. ನಿಮಗೆ ಪತಿ ಎಂಬ ವ್ಯಕ್ತಿ ದೊರೆಯುತ್ತಾನೆಯೇ ಹೊರತು ಅಲ್ಲಾವುದ್ದೀನನ ಮಾಯಾಲಾಂದ್ರವಲ್ಲ.
ಎರಡು ದೇಹ ಒಂದೇ ಪ್ರಾಣ
ಇದು ಹೇಳಲು, ಕೇಳಲು ಮತ್ತು ಹಾಡಲು ಬಹಳ ರೊಮ್ಯಾಂಟಿಕ್ ಮತ್ತು ರಂಜನೀಯವಾಗಿರುತ್ತದೆ. ಆದರೆ ವಾಸ್ತವವಾಗಿ ಇಬ್ಬರು ವಿಭಿನ್ನ ವ್ಯಕ್ತಿಗಳು ತಮ್ಮ ಸಂಬಂಧವನ್ನು ಜೀವಂತವಾಗಿ ಮತ್ತು ಯಶಸ್ವಿಯಾಗಿ ಉಳಿಸಿಕೊಳ್ಳಲು ಒಟ್ಟಾಗಿ ಹಾಗೂ ಸಮಾನವಾಗಿ ಪ್ರಯತ್ನಪಟ್ಟಾಗ ಮಾತ್ರ ಅದು ಸಕ್ಸೆಸ್‌ಫುಲ್ ಮ್ಯಾರೇಜ್ ಎನಿಸಿಕೊಳ್ಳುತ್ತದೆ. ಬಾಯಿಮಾತಿನಲ್ಲಿ `ನಿನ್ನ ಹೆಸರು ಹೇಳುತ್ತಾ ಬೆಳಕು ನೋಡಿ ನಿನ್ನ ಹೆಸರು ಹೇಳುತ್ತಲೇ ರಾತ್ರಿ ಮುಗಿಸುವೆ,' ಎಂದು ಹೇಳುವುದು, ಹಾಡುವುದೆಲ್ಲ ಈಗ ವಿವಾಹ ಜೀವನವನ್ನು ನಡೆಸುವ ಔಟ್‌ಡೇಟೆಡ್ ವಿಧಾನವಾಗಿದೆ.