ಈಗಲೂ ಅನೇಕ  ಕುಟುಂಬಗಳು ಸೊಸೆಯನ್ನು ತಮ್ಮ ಸಂಪತ್ತು, ಆಸ್ತಿ ಎಂಬಂತೆ ಪರಿಗಣಿಸುತ್ತವೆ. ಗಳಿಸುವ ಹುಡುಗಿಯನ್ನು ತಮ್ಮ ಹುಡುಗನಿಗೆ ತಂದುಕೊಳ್ಳುವ ಉದ್ದೇಶ ಅವಳ `ಸ್ಯಾಲರಿ ಪ್ಯಾಕೇಜ್‌' ಆಗಿರುತ್ತದೆ. ಮದುವೆಯ ಬಳಿಕ ಅವಳ ಆಯವ್ಯಯವನ್ನು ಗಮನಿಸಿ ಅವಳ ಬ್ಯಾಂಕ್‌ ಅಕೌಂಟ್‌ ಮೇಲೆ ತಮ್ಮದೇ ಹಕ್ಕು ಸಾಧಿಸುತ್ತಾರೆ. ಕೆಲವು ಹುಡುಗಿಯರಂತೂ ಅತ್ತೆಮನೆಯವರ ಒತ್ತಡಕ್ಕೆ ಜೀವನವಿಡೀ ದುಃಖಿತರಾಗಿರುತ್ತಾರೆ. ಆದರೆ ಹೆಚ್ಚಿನ ಹುಡುಗಿಯರು ಈ ತೆರನಾದ ಅನವಶ್ಯಕ ಒತ್ತಡಗಳನ್ನು ಬಿಲ್‌ಕುಲ್‌ ಒಪ್ಪುವುದಿಲ್ಲ.

ಈ ವಿಷಯದ ಬಗ್ಗೆ ಬೆಂಗಳೂರಿನ ಫೋಟೋಗ್ರಾಫರ್‌ ರಾಜೇಶ್ವರಿ ಹೀಗೆ ಹೇಳುತ್ತಾರೆ, ``ಸೊಸೆಯನ್ನು ಅತ್ತೆ ಮನೆಯವರು ಆಸ್ತಿಯೆಂದು ಏಕೆ ಭಾವಿಸಬೇಕು? ಅವಳೇನು ನಿರ್ಜೀವ ವಸ್ತುವೇ? ಅವಳಿಗೆ ತನ್ನದೇ ಆದ ಒಂದು ಅಸ್ತಿತ್ವವಿದೆ. ಅವಳಿಗೆ ತನ್ನ ಅತ್ತೆ ಮನೆಯ ಬಗ್ಗೆ ಎಷ್ಟು ಜವಾಬ್ದಾರಿಗಳಿರುತ್ತವೋ, ಅಷ್ಟೇ ಜವಾಬ್ದಾರಿಗಳು ತವರಿನ ಕುರಿತಾಗಿಯೂ ಇರುತ್ತವೆ.

``ನಾವಿಬ್ಬರು ಅಂದರೆ ನನ್ನ ಹಾಗೂ ಗಂಡನ ನಡುವೆ ಸಾಕಷ್ಟು ಒಳ್ಳೆಯ ಹೊಂದಾಣಿಕೆ ಇದೆ. ನಾನು ಅವರ ಕುಟುಂಬವನ್ನು ಒಪ್ಪಿಕೊಂಡಿರುವಂತೆ, ಅವರೂ ನನ್ನ ತಂದೆತಾಯಿಯ ಕುಟುಂಬವನ್ನು ಮನಸಾರೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ನಮ್ಮ ನಡುವೆ ವಾದವಿವಾದವಾಗಲಿ, ಜಗಳವಾಗಲಿ ಇಲ್ಲ.''

ಹುಬ್ಬಳ್ಳಿಯ ಸಂಗೀತಾ ಇಂಟರ್‌ ನ್ಯಾಷನಲ್ ಸ್ಕೂಲ್ ‌ಒಂದರಲ್ಲಿ ಶಿಕ್ಷಕಿ. ಅವರು ಹೇಳುತ್ತಾರೆ, ``ಸೊಸೆಯನ್ನು ಅತ್ತೆಮನೆಯ ಆಸ್ತಿ ಎಂದು ಕರೆಯುವುದು ಸೂಕ್ತವಲ್ಲ. ಆದರೆ ಮದುವೆಯ ಬಳಿಕ ಅತ್ತೆಮನೆಯ ಕುರಿತಾದ ಆಕೆಯ ಜವಾಬ್ದಾರಿಗಳು ದ್ವಿಗುಣಗೊಳ್ಳುತ್ತವೆ. ಮುಂಚೆ ಅವಳು ಯಾವ ಕುಟುಂಬದಲ್ಲಿ ವಾಸಿಸುತ್ತಿದ್ದಳೊ, ಆ ಕುಟುಂಬದಲ್ಲೂ ಅವಳ ಜವಾಬ್ದಾರಿಗಳು ಸಾಕಷ್ಟು ಮಟ್ಟಿಗೆ ಹೆಚ್ಚಾಗುತ್ತವೆ.''

ಶಿವಮೊಗ್ಗದ 60 ವರ್ಷದ ಗೃಹಿಣಿ ಸುಮಿತ್ರಾದೇವಿ ಇಬ್ಬರು ಸೊಸೆಯಂದಿರ ಅತ್ತೆ. ಅವರು ಹೀಗೆ ಹೇಳುತ್ತಾರೆ, ``ಇಂದಿನ ಸೊಸೆಯಂದಿರ ಕೈಯಿಂದ ನೀವು ಒತ್ತಾಯ ಪೂರ್ವಕವಾಗಿ ಅಥವಾ ಅಧಿಕಾರ ಬಲದಿಂದ ಯಾವುದೇ ಒಂದು ಕೆಲಸವನ್ನು ಮಾಡಿಸಲಿಕ್ಕೂ ಸಾಧ್ಯವಿಲ್ಲ. ನೀವು ಆಕೆಗೆ ಪ್ರೀತಿ, ಸ್ನೇಹ ಮತ್ತು ಗೌರವ ಕೊಡಬೇಕಾಗುತ್ತದೆ. ಆಗ ಆಕೆ ನಿಮ್ಮ ಇಚ್ಛೆಗನುಗುಣವಾಗಿ ಯಾವುದಾದರೂ ಕೆಲಸ ಮಾಡಬಹುದಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ, ಅವಳ ಗಂಡ ಅವಳ ಸಮಂಜಸ ಅಸಮಂಜಸ ನಿರ್ಧಾರಗಳಲ್ಲಿ ಅವಳ ಜೊತೆಗೇ ಇರುತ್ತಾನೆ. ಇಂದಿನ ಸೊಸೆ ಸುಶಿಕ್ಷಿತೆ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಹೀಗಾಗಿ ಅವಳ ಇಚ್ಛೆಗನುಗುಣ ನಮ್ಮನ್ನು ನಾವು ಬದಲಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ.

``ನಮ್ಮ ಕಾಲದಲ್ಲಿ ಗಂಡನಾದವನು ತನ್ನ ಅಮ್ಮನ ಸಲಹೆ ಸೂಚನೆಯ ಮೇರೆಗೆ ನಡೆಯುತ್ತಿದ್ದ. ಆದರೆ ಈಗ ಪರಿಸ್ಥಿತಿ ತುಂಬಾ ಬದಲಾಗಿದೆ. ಅದು ಹುಡುಗಿಯರಿಗೆ ಸಕಾರಾತ್ಮಕ ರೂಪದಲ್ಲಿದೆ.''

ಇದೇ ಕಾರಣವೆಂಬಂತೆ ಇಂದು ಹಲವು ಹುಡುಗಿಯರು ತಮ್ಮ ತವರುಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಇಂದು ಹಲವು ಹುಡುಗಿಯರು ತಮ್ಮ ತಂದೆತಾಯಿಯ ಅಂತ್ಯ ಸಂಸ್ಕಾರವನ್ನು ನಿಭಾಯಿಸಿದ ಹಾಗೂ ಅವರ ನಂತರದ ಜವಾಬ್ದಾರಿಗಳನ್ನೂ ವಹಿಸಿಕೊಂಡ ಹಲವು ಸುದ್ದಿಗಳನ್ನು ನಾವು ಪತ್ರಿಕೆಯಲ್ಲಿ ಓದಿದ್ದೇವೆ.

ಸೊಸೆಯನ್ನು ಅತ್ತೆಮನೆಯ ಆಸ್ತಿ ಎಂದು ಕರೆಯುವುದು ಸೂಕ್ತವಲ್ಲ. ಅವಳು ಆ ಮನೆಯ ಸದಸ್ಯಳಂತೆ ಆ ಮನೆಯ ಪ್ರತಿಯೊಂದು ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಳೆ. ಇಂದು ಆಕೆ ಸುಶಿಕ್ಷಿತೆ ಹಾಗೂ ಸ್ವಾವಲಂಬಿಯಾಗಿರುವ ಕಾರಣದಿಂದ ತನ್ನ ನಿರ್ಧಾರವನ್ನು ತಾನೇ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಸಮರ್ಥಳಾಗಿದ್ದಾಳೆ. ಹೀಗಾಗಿ ಅವಳನ್ನು ಯಾರಾದರೂ ತನ್ನನ್ನು ಸಂಪತ್ತು ಎಂದು ಭಾವಿಸಿದರೆ, ಅದು ಆ ವ್ಯಕ್ತಿಯ ಮೂರ್ಖತನವಂದೇ ಭಾವಿಸಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ