ನಡೆದ ತಪ್ಪಿಗೆಲ್ಲ ಯಾವಾಗಲೂ ಪತಿಯನ್ನೇ ದೂಷಿಸುವುದು ಸರಿಯಲ್ಲ. ಪತ್ನಿಯೂ ಸಾಕಷ್ಟು ಬಾರಿ ಅವಹೇಳನದ ಮಾತುಗಳನ್ನಾಡಿ ಪತಿಯ ಮನಸ್ಸನ್ನು ನೋಯಿಸುತ್ತಾಳೆ. ಅವರಿಗೆ ಬೇಸರವಾಗುವಂತಹ ಕೆಲವು ಮಾತುಗಳನ್ನು ಎಂದೂ ಆಡದಿರಿ. ಅಂತಹ ಮಾತುಗಳು ಯಾವುವು ಎಂದು ತಿಳಿದುಕೊಳ್ಳಿ.

ನಾನೇ ಮಾಡುತ್ತೇನೆ

ಪ್ಲಂಬಿಂಗ್‌ ಅಥವಾ ಎಲೆಕ್ಟ್ರಿಕ್‌ ವಸ್ತುಗಳ ರಿಪೇರಿ ಕೆಲಸವಿದ್ದಾಗ, `ನಾನು ಮಾಡುತ್ತೇನೆ,' ಎಂದು ಹೇಳದಿರಿ. ಅದು ನಿಮ್ಮ ಪತಿಗೆ ಇಷ್ಟವಾಗದಿರಬಹುದು. ಈ ಬಗ್ಗೆ ಮನೋವಿಜ್ಞಾನಿ ಐನಿ ಕ್ರೋಲಿ ಹೀಗೆ ಹೇಳುತ್ತಾರೆ, ``ನಿಮಗೆ ಕೆಲಸ ಮಾಡಿಕೊಟ್ಟು, ಖುಷಿ ಪಡಿಸಬೇಕೆಂದು ಅವರು ಇಷ್ಟಪಟ್ಟಿರಬಹುದು. ನಾನೇ ಮಾಡುತ್ತೇನೆ, ಎಂದು ನೀವು ಹೇಳಿಬಿಟ್ಟರೆ ಅವರಿಗೆ ಕೋಪ ಬರುವ ಸಾಧ್ಯತೆ ಇರುತ್ತದೆ. ಏಕೆಂದರೆ ಅವರ ಕೆಲಸ ಕಾರ್ಯದಲ್ಲಿ ನೀವು ಸಂದೇಹ ವ್ಯಕ್ತಪಡಿಸಿದಂತಾಗುತ್ತದೆ ಅಥವಾ ನಿಮಗೆ ಅವರ ಅವಶ್ಯಕತೆ ಇಲ್ಲ ಎಂಬ ಭಾವನೆ ಬರಬಹುದು.''

ನಿಮಗೆ ಅರ್ಥವಾಗಬೇಕಿತ್ತು

ಕ್ಲಿನಿಕ್‌ ಮನೋವಿಜ್ಞಾನಿ ರಿಯಾನ್‌ ಹೋಪ್ಸ್ ಹೇಳುತ್ತಾರೆ, ``ನಿಮ್ಮ ಮನಸ್ಸಿನ ಮಾತು, ಇಂಗಿತಗಳನ್ನು ನಿಮ್ಮ ಪತಿ ತಾವಾಗಿಯೇ ಅರ್ಥ ಮಾಡಿಕೊಳ್ಳಲಿ ಎಂದು ನೀವು ಬಯಸುತ್ತೀರಿ. ಹಾಗೆ ಮಾಡದಿದ್ದಾಗ ನೀವು ಅಪ್‌ಸೆಟ್‌ ಆಗುವಿರಿ. ಆದರೆ ವಾಸ್ತವವಾಗಿ ಪುರುಷರು ಮನಸ್ಸನ್ನು ಓದಲಾರರು. ಇದನ್ನು ಪತ್ನಿಯರು ಅರ್ಥ ಮಾಡಿಕೊಂಡರೆ ಎಷ್ಟೋ ದುಃಖದಿಂದ ತಪ್ಪಿಸಿಕೊಳ್ಳಬಲ್ಲರು. ತನಗೇನು ಬೇಕೆಂದು ಪತ್ನಿ ಬಾಯಿಬಿಟ್ಟು ಹೇಳಬೇಕು.''

ಅವಳು ಸುಂದರವಾಗಿದ್ದಳು

ಪುರುಷರ ಕೌನ್ಸೆಲಿಂಗ್‌ ಸ್ಪೆಷಲಿಸ್ಟ್ ಆದ ಕರ್ಟ್‌ ಸ್ಮಿತ್‌ ಹೇಳುತ್ತಾರೆ, ``ಒಬ್ಬ ಆಕರ್ಷಕ ಸ್ತ್ರೀಯ ಬಗ್ಗೆ ನಿಮ್ಮ ಪತಿಯ ಭಾವನೆ ಏನು ಎಂದು ತಿಳಿಯಬಯಸುವಿರೇ? ಆದರೆ ಆ ಪ್ರಶ್ನೆ ಕೇಳಿ ನಿಮ್ಮ ಪತಿಗೆ ಮುಜುಗರ ಉಂಟು ಮಾಡದಿರಿ. ಕೋಣೆಯನ್ನು ಪ್ರವೇಶಿಸಿದಾಗ ಅಲ್ಲಿರುವ ಸುಂದರ ಸ್ತ್ರೀಯನ್ನು ಪುರುಷರು ಮೊದಲೇ ಗಮನಿಸಿರುತ್ತಾರೆ. ನಿಮ್ಮ ಸಮಾಧಾನಕ್ಕಾಗಿ ಅವರು ಅತ್ತ ನೋಡದಿರಬಹುದು. ಹಾಗಿರುವಾಗ ನೀವು ಪ್ರಶ್ನೆ ಕೇಳಿದರೆ, ನಿಮಗೆ ಬೇಸರವಾಗದಿರಲು ಮತ್ತು ನೀವು ಅಪ್‌ಸೆಟ್‌ ಆಗದಿರಲು ಏನು ಮಾಡಬೇಕೆಂದು ಅವರಿಗೆ ತಿಳಿಯುವುದಿಲ್ಲ.''

ಪುರುಷರಾಗಿ

ಸ್ಮಿತ್‌ ಹೇಳುತ್ತಾರೆ, ``ನಿಮ್ಮ ಪತಿಗೆ ನೀವು ಈ ಮಾತನ್ನು ಹೇಳುವಿರಾ? ಪುರುಷತ್ವವನ್ನು ವ್ಯಕ್ತಪಡಿಸಲು ಯಾವುದೇ ವಿಧಾನವಿಲ್ಲ. ಪುರುಷನಾಗು ಎಂದು ಹೇಳುವುದು ಅವರ ವ್ಯಕ್ತಿತ್ವವನ್ನು ಘಾಸಿಗೊಳಿಸಬಲ್ಲ ಮಾತು. ಅದರಿಂದ ಅವಮಾನ ಮತ್ತು ತಿರಸ್ಕಾರ ಉಂಟಾಗುತ್ತದೆ. ಅದು ನಿಮ್ಮ ಸಂಬಂಧಕ್ಕೆ ಅತಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ.''

ನಾವು ಕುಳಿತು ಮಾತನಾಡಬೇಕಾಗಿದೆ

ಈ ಮಾತು ವಿವಾಹಿತ ಪುರುಷರ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತದೆ. ಕೌನ್ಸೆಲಿಂಗ್‌ ಥೆರಪಿಸ್ಟ್ ಹೇಳುತ್ತಾರೆ, ``ಏನಾದರೂ ವಿಷಯವಿದ್ದರೆ ನೇರ, ಸರಳವಾದ ಶಬ್ದಗಳಲ್ಲಿ ಹೇಳಿ. ಇಲ್ಲವಾದರೆ ಅಂತಹ ಮಾತು, ಪತ್ನಿಯು ಯಾವುದೋ ದೂರು ಅಥವಾ ಗಂಭೀರ ವಿಷಯದ ಕುರಿತು ಮಾತನಾಡಲಿದ್ದಾಳೆ ಎಂಬ ಭಾವನೆ ಉಂಟು ಮಾಡುತ್ತದೆ ಮತ್ತು ನೀವು ಅಂದುಕೊಂಡದ್ದಕ್ಕಿಂತ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ.''

ಮತ್ತೆ ಸ್ನೇಹಿತರ ಜೊತೆ ಹೊರಡುತ್ತಿದ್ದೀರಿ

ಪತಿಯು ಸ್ನೇಹಿತರ ಜೊತೆ ಕ್ರಿಕೆಟ್‌ ಅಥವಾ ಫುಟ್‌ಬಾಲ್ ಆಡುವುದರಿಂದ ಅಥವಾ ಆಟ ನೋಡಲು ಹೋಗುವುದರಿಂದ ನಿಮ್ಮ ವೈವಾಹಿಕ ಜೀವನಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಒಮ್ಮೊಮ್ಮೆ ಪತಿಯು ಗೆಳೆಯರೊಡನೆ ಕಾಲ ಕಳೆಯಲು ಹೋಗುವುದರಿಂದ ಪರಸ್ಪರ ಸಲಹೆ ಸಮಾಧಾನಗಳು, ಮಹತ್ವಪೂರ್ಣ ತೀರ್ಮಾನಗಳು ದೊರೆತು ಮಾನಸಿಕ ಬೆಂಬಲ ಸಿಗುತ್ತದೆ. ಈ ಸಪೋರ್ಟ್‌ ಸಿಸ್ಟಮ್ ನಿಂದಾಗಿ ಅವರು ಒಬ್ಬ ಒಳ್ಳೆಯ ಮನುಷ್ಯನಾಗುವವರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ