ಅದ್ಭುತ ಕಲೆ : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಒಂದು ಚಿತ್ರಕಲಾ ಪ್ರದರ್ಶನದಲ್ಲಿ, ಒಬ್ಬ ಕಲಾವಿದ ಹುಡುಗಿಯೊಬ್ಬಳನ್ನೇ ಚಿತ್ರಕಲೆಯಾಗಿಸಿಕೊಂಡ! ತನ್ನ ಅದ್ಭುತ ಪೇಪರ್ ವಿನ್ಯಾಸದ ಉಡುಗೆ ಸಿದ್ಧಪಡಿಸಿ, ಆಕೆಗೆ ತೊಡಿಸಿ ಕ್ಯಾಟ್‌ವಾಕ್ ಮಾಡಿಸಿಯೇಬಿಟ್ಟ! ಚಿತ್ರಕಲಾ ಪರಿಷತ್ತಿನ ಚಿತ್ರಸಂತೆ ತಂಡ ಪ್ರತಿ ವರ್ಷ ಸ್ಥಳೀಯ ಪ್ರತಿಭೆಗಳಿಗೆ ಮಿಂಚಲು ಇಂಥ ಅವಕಾಶ ಒದಗಿಸುತ್ತದೆ. ನೀವು ಕ್ಯಾನ್ವಾಸ್ ಆಗಬೇಕೇ? ಮುಂದಿನ ವರ್ಷ ಟ್ರೈ ಮಾಡಿ ನೋಡಿ!
ಬಿಂದಾಸ್ ಹುಡುಗಿಯರು : ಇಲ್ಲಿನ ಉಡುಗೆಯ ಡಿಸೈನ್ ನಿಜಕ್ಕೂ ಅತಿ ಸುಂದರ! ಆದರೆ ಅವಸರದಲ್ಲಿ ಅದನ್ನು ಧರಿಸೀರಿ, ಏಕೆಂದರೆ ಅದು ಕೇವಲ ದಟ್ಟ ಬಣ್ಣಗಳ ಡ್ರೆಸ್ ಅಷ್ಟೆ! ಬಾಡಿ ಪೇಂಟ್‌ನಿಂದ ರೂಪುಗೊಳ್ಳುವ ಇಂಥ ಉಡುಗೆ ಧರಿಸಿ ಬೀದಿಯಲ್ಲಿ ಓಡಾಡಲು ಮೀಟರ್ ಬೇಕು. ಈ ಬಿಂದಾಸ್ ಹುಡುಗಿಯರು ದ. ಅಮೆರಿಕಾದವರು, ಬಟ್ಟೆ ಧರಿಸಲಿಕ್ಕೂ ಕಳಚಲಿಕ್ಕೂ ಎರಡಕ್ಕೂ ಸೈ!
ಇಂಥವರ ಸಮಸ್ಯೆಗಳ ಅರಿವಾಗುವುದೇ? : ನಮ್ಮ ಪ್ರಧಾನಿಗಳೇನೋ ಪ್ರತಿಯೊಬ್ಬ ಬಡವರಿಗೂ 3 ವರ್ಷಗಳಲ್ಲೇ ಮನೆ ಸಿಗಲಿದೆ ಎಂದು ಘೋಷಿಸಿಬಿಟ್ಟರು. ಆದರೆ ದೇಶದ ಸದ್ಯದ ಪರಿಸ್ಥಿತಿ ಗಮನಿಸಿದರೆ ಅದು ನಿಜವಾಗುವಂತಿಲ್ಲ. ತಲೆ ಮೇಲೆ ಸೂರಿಲ್ಲದ ಇಂಥ ಮಂದಿ ಎಂಥ ಇಕ್ಕಟ್ಟಿನಲ್ಲಿ ಮಲಗಿದ್ದಾರೆ ನೋಡಿ, ಇದು ದೇಶದ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಲ್ಲವೇ? ದುಬಾರಿ ಜ್ಯಾಕೆಟ್ ಧರಿಸಿ ಭಾಷಣ ಮಾಡುವ ನೇತಾರರಿಗೆ ಇಂಥವರ ಸಮಸ್ಯೆಗಳ ಅರಿವಾಗುವುದೇ?
ಇಂಥ ದುಸ್ಸಾಹಸ ಬೇಡ : ಹುಲಿಯನ್ನು ಮನೆಯಲ್ಲೇ ಸಾಕುವಂಥ ದುಸ್ಸಾಹಸಕ್ಕೆ ಎಂದೂ ಕೈ ಹಾಕಬೇಡಿ. ಹುಲಿಯಂಥ ಪತಿ ನಿಮ್ಮ ಮುಂದೆ ಇಲಿ ಆಗಿರಬಹುದು, ಅದು ಬೇರೆ ವಿಷಯ... ಹಾಗೇಂತ ಅಸಲಿ ಹುಲಿಯೂ ಹುಲ್ಲು ಮೇಯಬೇಕೆಂದೇನಿಲ್ಲ! ಹುಲಿ ಮರಿ ಸಾಕುತ್ತಾ ಆಟವಾಡಿಸುವ ಮೋನಿಕಾ ಫರೇಲ್‌ರಂಥ ಗಂಡೆದೆ ಎಲ್ಲರಿಗೂ ಬಂದೀತೇ? ಈಕೆ ಮನೆಯಲ್ಲಿ ಮುದ್ದಿನ ಮರಿಯಾಗಿ ಬೆಳೆಯುತ್ತಿರುವ ಇದಕ್ಕೀಗ ಅಂದಾಜು 4 ತಿಂಗಳಂತೆ. ಸರ್ಕಸ್ ಕಂಪನಿಯ ಮಾಲೀಕಳಾದ ಈಕೆ ಇನ್ನಷ್ಟು ದಿನ ಸಾಕಿ, ಅದನ್ನು ದೊಡ್ಡದು ಮಾಡಿ ಟೈಗರ್ ಪಾರ್ಕ್‌ಗೆ ಬಿಡಲಿದ್ದಾಳಂತೆ!
ಹಕ್ಕಿನ ಹೋರಾಟ : ಪಾಶ್ಚಾತ್ಯ ದೇಶಗಳಲ್ಲಿ ಇದೀಗ ಎಲ್ಲೆಲ್ಲೂ ಪ್ರೊಟೆಸ್ಟ್ ಗಳ ಕೂಗು ಮುಗಿಲು ಮುಟ್ಟಿದೆ, ಅದು ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಗೊತ್ತಿಲ್ಲ. ಯೂರೋಪಿನ ಒಂದು ಕಾರ್ಖಾನೆಯಲ್ಲಿ ಇಬ್ಬರು ಕಾರ್ಮಿಕರು ಒಬ್ಬ ಮ್ಯಾನೇಜರ್‌ನ್ನು ಥಳಿಸಿದ್ದರಿಂದ, ಅವರನ್ನು 9 ತಿಂಗಳ ಕಾಲ ಸಸ್ಪೆಂಡ್ ಮಾಡಲಾಯಿತು. ಅದರ ವಿರುದ್ಧ ಈ ಹೋರಾಟ ಶುರುವಾಗಿದೆ. ಇಂಥ ಹೋರಾಟಗಳು ನಮ್ಮ ದೇಶದಲ್ಲಿ ಎಲ್ಲಾ ಮಹಾನಗರಗಳಲ್ಲೂ ಕಾರಣವಿಲ್ಲದೆಯೇ ಶುರುವಾಗುತ್ತವೆ. ಇಂದಿನ ಹುಡುಗಿಯರೂ ಸಹ ಅಮಿತಾಭ್‌ನಂಥ ಗಂಡ ವರದಕ್ಷಿಣೆ ಇಲ್ಲದೇ ಸಿಗಲಿ ಎಂದು ಹೋರಾಟಕ್ಕಿಳಿಯಬೇಕಿದೆ.
ಖುಷಿಯ ಕ್ಷಣಗಳ ಸಂಭ್ರಮ : ಇತ್ತೀಚೆಗೆ ಭಾರತೀಯ ಮುಖಗಳು ಒಂದಿಷ್ಟು ಹಾಲಿವುಡ್‌ನಲ್ಲೂ ಇಣುಕುತ್ತವೆ, ಅಂಥವರಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಒಬ್ಬರು. ಹಾಗೆ ನೋಡಿದರೆ ಬಾಲಿವುಡ್, ಟಾಲಿವುಡ್ ಸೇರಿ ಹಾಲಿವುಡ್‌ಗಿಂತ ಹೆಚ್ಚಿನ ಸಿನಿಮಾ ತಯಾರಿಸುತ್ತವೆ. ಆದರೆ ಕೋಟ್ಯಂತರ ಡಾಲರ್‌ಗಳ ಹೊಳೆ ಹರಿಯುವುದು ಹಾಲಿವುಡ್‌ನಲ್ಲೇ! ಅಪರೂಪಕ್ಕೆ ಭಾರತೀಯ, ಚೀನೀ, ಜಪಾನಿ ಸ್ಟಾರ್‌ಗಳು ಹಾಲಿವುಡ್‌ನಲ್ಲೂ ಇಣುಕುವುದುಂಟು. ಆದರೆ ತವರಿನಲ್ಲಿ ದಿಢೀರ್ ಎಂದು ಅವರುಗಳ ಸಂಭಾವನೆ ಗಗನಕ್ಕೇರುತ್ತದೆ! ಕಳೆದ ಜನವರಿಯಲ್ಲಿ ಪ್ರಿಯಾಂಕಾ ಚೋಪ್ರಾ ವಾರ್ನರ್ ಬ್ರದರ್ಸ್ ನೀಡಿದ ಫಿಲ್ಮಿ ಪಾರ್ಟಿಯಲ್ಲಿ ತಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದು ಹೀಗೆ.