ಹಾಲ್ಡಾದಲ್ಲಿ ಹುಟ್ಟಿ ಬೆಳೆದ ಛಂದಾರಿಗೆ, ಹಿಮಾಲಯದ ಗಿರಿಶಿಖರ ಏರಿ ಸೈ ಎನಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ.

2013ರ ಮೇ 1819, ಛಂದಾರ ಜೀವನದಲ್ಲಿ ಮರೆಯಲಾಗದ ಅಧ್ಯಾಯ ಬರೆದಂಥ ದಿನಗಳು. ಛಂದಾ ತಮ್ಮ ಜೀವನದ ಹೆಗ್ಗುರಿಯ ಬಳಿ ಇದ್ದರು, ಆದರೆ ಯಾರಿಗೂ ಛಂದಾ ಈ ಮಟ್ಟದಲ್ಲಿ ಯಶಸ್ಸಿನ ಶಿಖರವೇರುತ್ತಾರೆ, ವಿಶ್ವಮಾನ್ಯ ಕೀರ್ತಿ ಗಳಿಸುತ್ತಾರೆ ಎಂಬ ನಂಬಿಕೆ ಇರಲಿಲ್ಲ. ತಮ್ಮ ಅದ್ಭುತ ಇಚ್ಛಾಶಕ್ತಿಯ ಮಾತ್ರದಿಂದಲೇ, ತಮ್ಮ ಜೀವನವನ್ನೇ ಪಣಕ್ಕೊಡ್ಡಿ, ಮೇ 18 ರಂದು ಛಂದಾ ಎವರೆಸ್ಟ್ ಶಿಖರದ ತುದಿ ಮುಟ್ಟಿದರು. ಒಂದಿಷ್ಟೂ ಬ್ರೇಕ್‌ ಇಲ್ಲದೆ, ಮೇ 19 ರಂದು ವಾಲೋತ್ಸೇ ಶಿಖರದ ತುದಿಯ ಮೇಲೂ ವಿಜಯ ಗಳಿಸಿದರು!

ಈ ರೀತಿ ಛಂದಾ ಗೌರಿ ಶಂಕರದ ಗಿರಿಶಿಖರನ್ನೇರಿದ ಪ್ರಪ್ರಥಮ ಬಂಗಾಳಿ ಮಹಿಳೆ ಎನಿಸಿದರು. 2 ದಿನಗಳ ಅಂತರದಲ್ಲಿ ಎವರೆಸ್ಟ್ ಶಿಖರವನ್ನೇರಿ ಆಕೆ ವರ್ಲ್ಡ್ ರೆಕಾರ್ಡ್‌ ಮಾಡಿದರು.

ತಂದೆ ನೀಡಿದ ಪ್ರೋತ್ಸಾಹ

ಛಂದಾ ಹೇಳುತ್ತಾರೆ, ``ನನ್ನ ತಂದೆ ಸದಾ ಏನನ್ನು ಬಯಸುತ್ತಿದ್ದರು ಎಂದರೆ, ಒಂದಲ್ಲ ಒಂದು ದಿನ ನಾನು ಹಿಮಾಲಯದ ಶಿಖರವೇರಿ ನಮ್ಮ ರಾಷ್ಟ್ರಧ್ವಜ ಅಲ್ಲಿ ಹಾರಿಸಬೇಕು, ಅಂತ. ವಿಧಿವಶಾತ್‌, ನಾನು ಈ ಸಾಧನೆ ಮಾಡುವಷ್ಟರಲ್ಲಿ ಅವರು ಬದುಕಿರಲಿಲ್ಲ, ನನ್ನ ಸಾಧನೆಯ ಆರಂಭದ ದಿನಗಳಲ್ಲೇ ಅವರನ್ನು ಕಳೆದುಕೊಂಡಿದ್ದೆ. ಛಂದಾರ ತಂದೆ ಪಶುಪತಿ ಗ್ಯಾನ್‌ತೀರಿಕೊಂಡ ನಂತರ, ಆಕೆಗೆ ಬಂಧುಗಳೆಂದರೆ ತಾಯಿ ಮತ್ತು ತಮ್ಮ. ತನ್ನ ಕನಸನ್ನು ನನಸಾಗಿಸಿಕೊಳ್ಳುವುದರ ಜೊತೆಜೊತೆಯಲ್ಲೇ, ಛಂದಾ ಕೌಟುಂಬಿಕ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿದರು. ಎಂದೂ ಎದೆಗುಂದಲಿಲ್ಲ ಹಾಗೂ ತಮ್ಮನ ಜೊತೆಗೂಡಿ ಕೌಟುಂಬಿಕ ವ್ಯವಹಾರವನ್ನೂ ಮುಂದುವರಿಸಿದರು.

ಪ್ರಯಾಣ ಇನ್ನೂ ಎಷ್ಟೋ ಇದೆ

ಶಾಲೆಯ ದಿನಗಳಲ್ಲಿ  ವತಿಯಿಂದ ಛಂದಾರಿಗೆ ಒಮ್ಮೆ ರಾಕ್‌ ಕ್ಲೈಂಬಿಂಗ್‌ನ ಅವಕಾಶ ಸಿಕ್ಕಿತು. ಇದೇ ಅವರು ಪರ್ವತಾರೋಹಣದ ಕಡೆ ಒಲವು ಬೆಳೆಸಿಕೊಳ್ಳಲು ಮೂಲವಾಯ್ತು. ಕ್ರಮೇಣ ತಂದೆ ಈ ಕುರಿತಾಗಿ ಹೆಚ್ಚಿನ ಪ್ರೋತ್ಸಾಹ ನೀಡತೊಡಗಿದಂತೆ, ಈ ನಿಟ್ಟಿನಲ್ಲಿ ಅವರು ಹೆಚ್ಚಿನ ಸಾಧನೆ ಮಾಡತೊಡಗಿದರು.

ಹಿಮಾಲಯ ಮೌಂಟನೇರಿಂಗ್‌ ಇನ್‌ಸ್ಟಿಟ್ಯೂಟ್‌, ಡಾರ್ಜಿಲಿಂಗ್‌ ಹಾಗೂ ನೆಹರೂ ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟನೇರಿಂಗ್‌ನಿಂದ ಕೋರ್ಸ್‌ ಪೂರ್ತಿ ಮಾಡಿಕೊಂಡು, ಮೌಂಟ್‌ ಫ್ಲಟೇಟ್‌ ಮತ್ತು ಮೌಂಟ್‌ ಎವರೆಸ್ಟ್ ಮೇಲೆ ವಿಜಯ ಗಳಿಸಿದ ನಂತರ, ಛಂದಾ ಈಗ ಕಾಂಚನ ಜುಂಗಾ ವೆಸ್ಟ್ ಮೇಲೆ ವಿಜಯ ಗಳಿಸಲು ಸನ್ನದ್ಧರಾಗಿದ್ದಾರೆ.

ಛಂದಾರ ಈ ಪಯಣದಲ್ಲಿ ಅತ್ಯಂತ ಕಠಿಣಕರ ದೈಹಿಕ ಶ್ರಮದ ಜೊತೆಗೆ ಆರ್ಥಿಕ ಸಮಸ್ಯೆಗಳೂ ದಿನೇ ದಿನೇ ಹೆಚ್ಚುತ್ತಿವೆ. ತಮ್ಮ ಈ ಪಯಣ ಯಶಸ್ವಿಯಾಗಲು, ತಮ್ಮ ಬಳಿಯಿದ್ದ ಎಲ್ಲಾ ಬಂಡವಾಳವನ್ನೂ ಇದರಲ್ಲಿ ತೊಡಗಿಸಿಕೊಂಡಿರುವ ಛಂದಾ, ಸ್ವಂತದ ಒಡವೆ ಸೈಟ್‌ನ್ನೂ ಮಾರಿಕೊಂಡಿದ್ದಾರೆ. ಸ್ಥಾಪಿಸಿಕೊಳ್ಳಬೇಕು ಹಾಗೂ ತಂದೆಯ ಆಸೆಯನ್ನು ನೆರವೇರಿಸಲೇಬೇಕು ಎಂಬ ಇರಾದೆ, ಛಂದಾ ತಮ್ಮ ಕೆಲಸದಲ್ಲಿ ಅಪಾರ ಶ್ರದ್ಧೆ ವಹಿಸುವಂತೆ ಮಾಡಿದೆ. ಹೀಗಾಗಿ ಪರಿಸ್ಥಿತಿ ಎಷ್ಟೇ ಬಿಗಡಾಯಿಸಿರಲಿ, ಛಂದಾ ತಮ್ಮ ಗುರಿ ಸಾಧಿಸುವಲ್ಲಿ ಎಂದೂ ಹಿಂಜರಿಯುವವರಲ್ಲ, ಕಾಂಪ್ರಮೈಸ್‌ ಆಗುವವರಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ