ದೆಹಲಿಯಲ್ಲಿ ಬಹಳಷ್ಟು ಜಮೀನು ಕೇಂದ್ರ ಸರ್ಕಾರದ ವಶದಲ್ಲಿದೆ, ಇದನ್ನು ಕೆಲವು ವರ್ಷಗಳ ಹಿಂದೆ ಕೃಷಿ ನಡೆಸುವ ರೈತರಿಂದ ಕವಡೆಕಾಸಿಗೆ ಖರೀದಿಸಿತ್ತು. ಇದರಲ್ಲಿ ಬಹಳ ಜಾಗದಲ್ಲಿ ಕಮರ್ಷಿಯಲ್ ಪ್ಲಾಟ್ ಗಳಾಗಿವೆ, ಸಣ್ಣಪುಟ್ಟ ಉದ್ಯಮಗಳು ಶುರುವಾಗಿವೆ. ಬಹಳಷ್ಟು ಪ್ಲಾಟ್ ಗಳನ್ನು ಹೀಗೆ ನೀಡಲಾಗಿದೆ. ಯಾವ ಬೆಲೆಗೆ ಈ ಸೈಟ್ ಗಳು ಕಾರ್ಖಾನೆ, ಅಂಗಡಿ, ಮನೆಗಳಿಗೆ ನೀಡಲಾಗಿದೆಯೋ ಅದಕ್ಕಿಂತ ಎಷ್ಟೋ ಕಡಿಮೆ ಬೆಲೆಗೆ ಶಾಲೆ, ಆಸ್ಪತ್ರೆ, ಸಮಾಜಸೇವಾ ಸಂಸ್ಥೆಗಳಿಗೆ ನೀಡಲಾಗಿದೆ.
ಈ ಸೈಟ್ ಗಳನ್ನು ಹೀಗೆ ಅಲಾಟ್ ಮಾಡಿದ್ದೇನೋ ಆಯ್ತು, ಆದರೆ ಕೇಂದ್ರ ಸರ್ಕಾರದ ಡೆಲ್ಲಿ ಡೆವಲಪ್ ಮೆಂಟ್ ಅಥಾರಿಟಿ (DDA)ಅದರ ಮೇಲೆ ಈಗಲೂ 50-60 ವರ್ಷಗಳ ನಂತರ ತನ್ನದೇ ಜಾತಕ ಬಿಡಿಸಿ, ಹಿಡಿತ ಬಿಗಿ ಮಾಡಿ ಕುಳಿತಿದೆ. ಅಲ್ಲೆಲ್ಲ ಉದ್ಯಮಗಳು ನಡೆಯುತ್ತಿವೆ, ಅಂಗಡಿ ತೆರೆಯಲ್ಪಟ್ಟಿದೆ, ಜನ ವಾಸಿಸುತ್ತಿದ್ದಾರೆ, ಶಾಲೆ, ಆಸ್ಪತ್ರೆಗಳೂ ಕೆಲಸ ಮಾಡುತ್ತಿವೆ.
ಇದರ ವಿಧಾನ ಎಂದರೆ ಲೀಸ್ ಹೋಲ್ಡ್ ಸೈಸ್. DDA ಸಾಮಾನ್ಯ ಬಿಲ್ಡರ್ಸ್ ತರಹವೇ ಒಂದು ಕಾಂಟ್ರಾಕ್ಟ್ ನಲ್ಲಿ ಎಲ್ಲರಿಂದ ಸೈನ್ ಮಾಡಿಸಿಕೊಂಡು, ಈ ಕಾಂಟ್ರಾಕ್ಟ್ ನ್ನು ಸಬ್ ಲೀಸ್ ಹೆಸರಿನಲ್ಲಿ, ಯಾವುದೇ ಕಾಲಂ ವಿರುದ್ಧ ಕೆಲಸ ನಡೆದರೂ, ಅಾಟ್ಮೆಂಟ್ ಕ್ಯಾನ್ಸಲ್ ಆಗುವಂತೆ ಮಾಡಿಟ್ಟಿದೆ, ಅದು ಎಷ್ಟು ವರ್ಷಗಳ ಹಿಂದೆ ಅಲಾಟ್ ಆಗಿದ್ದರೂ ಈಗ ಅದು ವೆಕ್ಕಕ್ಕಿಲ್ಲ!
ದೇಶದ ಬಹುತೇಕ ಭಾಗಗಳಲ್ಲಿ ಹೀಗೇ ನಡೆದಿದೆ. ಲೀಸ್ ಹೋಲ್ಡರ್ ಸೈಟ್ ನಲ್ಲಿ ಜನ ಅಥವಾ ಕಂಪನಿ ಯಾ ಸಂಸ್ಥೆ ತಾವೇ ಮಾಲೀಕರಾಗಲು ಸಾಧ್ಯವಿಲ್ಲ. ನಿಯಮಗಳನ್ನು ಮೀರಿದಾಗ, ಪರೋಕ್ಷವಾಗಿ ಸರ್ಕಾರದ ವಿರುದ್ಧ ಮಾತನಾಡಿದಾಗ ಆಗುವಂತೆ, ಈ ಕಾಲಂ ಬಳಸಲಾಗಿದೆ. ಬಹಳಷ್ಟು ಜನ ಈ ಆತಂಕದಿಂದ ಚಿಂತೆಗೊಳಗಾಗುತ್ತಾರೆ.
ಎಲ್ಲಿಯವರೆಗೆ ಲೀಸ್ ಹೋಲ್ಡರ್ ತನ್ನ ಸೈಟ್‌ಅಲಾಟೀ ಸಬ್ ಲೀಸ್ ನಿಂದ ಬಂಧಿಸಲ್ಪಟ್ಟಿರುತ್ತಾನೋ, ಅಲ್ಲಿ ಕೊಳ್ಳುವವರು, ತನಗೆ ಪಿತ್ರಾರ್ಜಿತದಿಂದ ಬಂದಂತೆ, ಅಣ್ಣತಮ್ಮಂದಿರ ವ್ಯಾಜ್ಯದ ವಿವಾದದಲ್ಲಿ ಅಲಾಟ್ ಮಾಡುವಂತೆ ಸರ್ಕಾರಿ ವಿಭಾಗ, ತನ್ನ ಬಾಲ ಆಡಿಸುತ್ತಿರುತ್ತದೆ. 40-50 ವರ್ಷಗಳ ಹಳೆಯ ಷರತ್ತುಗಳು, ಇಂದು ಎಳ್ಳಷ್ಟೂ ಪ್ರಾಕ್ಟಿಕಲ್ ಅನ್ವಯಕ್ಕೆ ಬಾರವು! ನಗರದ ಸ್ಥಿತಿಗತಿ ಬದಲಾಗಿದೆ, ಕೆಲಸ ಮಾಡುವ ವಿಧಾನ ಬದಲಾಗಿದೆ, ಲೀಸ್ ನೀಡುವವರು ಇಂದೂ ಹಳೆಯ ಷರತ್ತುಗಳನ್ನೇ ಮುಂದೊಡ್ಡುತ್ತಾರೆ.
ಕೆಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಇದೇ ಲೀಸ್ ನ ಷರತ್ತುಗಳ ಆಧಾರದಿಂದ ದೆಹಲಿಯ ಸಾಕಷ್ಟು ವ್ಯಾಪಾರ ವಹಿವಾಟು ನೆಲ ಕಚ್ಚಿತು, ಸರ್ಕಾರಿ ಹೆಸರಿನಡಿ ಅಲಾಟ್ ಆದ ಸೈಟ್ ನಲ್ಲಿ, ಕಮರ್ಷಿಯಲ್ ಕೆಲಸ ಆಗದು ಅಂತ. ಬಹುಶಃ ಈ ಸಿದ್ಧಾಂತ 40-50 ವರ್ಷಗಳ ಹಿಂದೆ ಸರಿ ಇತ್ತೇನೋ..... ಇಂದು ಎಲ್ಲಾ ಕಡೆ ಅಂಗಡಿ ಮುಂಗಟ್ಟುಗಳ ತುರ್ತು ಅಗತ್ಯ ಇರುವಾಗ, ಚಾಂದನೀ ಚೌಕ್ ನ ಸರ್ಕಾರಿ ಜಾಗಗಳೂ ಅಂಗಡಿಗಳಾಗಿ ಮಾರ್ಪಟ್ಟಿರುವಾಗ, ಅದರಲ್ಲೂ ಖಾನ್ ಮಾರ್ಕೆಟ್ ನಂಥ ಪ್ರಮುಖ ಸ್ಥಳಗಳಲ್ಲಿ...... ಅನೇಕ ನಗರಗಳಲ್ಲಿ ಹೀಗೇ ಆಗುತ್ತಿದೆ. ಲಖ್ನೌನ ಹಜರತ್ ಗಂಜ್ ಮೇಲ್ಭಾಗದ ಮಹಡಿಗಳಲ್ಲಿ ಮನೆಗಳೆಲ್ಲ ಮಂಗಮಾಯ! ಜಯಪುರದ `ಸೀ' ಸ್ಕೀಂನಲ್ಲಿ ದೊಡ್ಡ ಸರ್ಕಾರಿ ಕಟ್ಟಡಗಳ ಜಾಗಗಳಲ್ಲೆಲ್ಲ ಈಗ ಮಾಲ್ ಗಳು ರಾರಾಜಿಸುತ್ತಿವೆ!