ನಾವು ಯಾರಿಗೇನು ಕಡಿಮೆ? : ಆಫ್ರಿಕಾ ಖಂಡದ ಗಾಂಬಿಯಾ ದೇಶದಲ್ಲಿ ಹೆಂಗಸರು ಹೊಲಗದ್ದೆಗಳಲ್ಲಿ ದುಡಿಯುವುದು ಅಪರೂಪವೇನಲ್ಲ. ಆದರೆ ಭಾರತಕ್ಕಿಂತ ಅವರ ಆರ್ಥಿಕ ಸ್ಥಿತಿ ಎಷ್ಟೋ ಮೇಲು ಎಂದು ಅವರ ಬಟ್ಟೆಗಳಿಂದ ತಿಳಿಯುತ್ತದೆ. ನಮ್ಮ ಭಾರತೀಯ ರೈತ ಆಂದೋಲನಕ್ಕೆ ಬರುತ್ತಿರುವ ಗ್ರಾಮೀಣ ಹೆಂಗಸರನ್ನು ಕಂಡು ನಗರದ ನಾರಿಮಣಿಯರು ದಂಗಾಗುತ್ತಿದ್ದಾರೆ! ಆದರೆ ರೈತ ಮಹಿಳೆಯರ ಪ್ರಗತಿಗಾಗಿ ಇನ್ನಷ್ಟು ಸುಧಾರಣೆಗಳಾಗಬೇಕು. ಈಗ ಬಹಳಷ್ಟು ದೇಶಗಳ ಹೊಲಗಳಲ್ಲಿ ಹೆಂಗಸರೇ ದುಡಿಯುತ್ತಿದ್ದಾರೆ. ಪತಿ ಯಾವುದೋ ಕಾರಣಕ್ಕೆ ತೀರಿಕೊಂಡಾಗ ಅಥವಾ ಬಿಟ್ಟು ಹೋದಾಗ, ಅಬಲೆಯಾಗಿ ಕಂಬನಿ ಮಿಡಿಯದೆ ಸಬಲೆಯಾಗಿ ಭೂತಾಯಿಯ ಸಂರಕ್ಷಣೆಗೆ ಮುಂದಾಗುತ್ತಾರೆ.

Image_2_0 (1)

 

ಇನ್ನಷ್ಟು ಬಣ್ಣ ಬೆರೆತುಕೊಳ್ಳಲಿ : ಸಾಮಾನ್ಯವಾಗಿ ಎಲ್ಲಾ ಕಡೆ ಗೋಡೆಗೆ ಬಣ್ಣ ಬಳಿಯುವ ಕೆಲಸವನ್ನು ಗಂಡಸರೇ ಏಕೆ ಮಾಡಬೇಕು, ಸಂಸಾರದಲ್ಲಿ ಅಸಲಿ ಬಣ್ಣ ಹಚ್ಚಿಸುವವಳು ಅರ್ಧಾಂಗಿಯಲ್ಲವೇ? ಪಾಕಿಸ್ತಾನದಲ್ಲಂತೂ ಈ ರೀತಿ ಬಣ್ಣ ಹಚ್ಚುವುದಕ್ಕಾಗಿಯೇ ಒಂದು ತರಬೇತಿಯ ಕೋರ್ಸ್‌ ಶುರು ಮಾಡಿದ್ದಾರೆ. ಗೃಹಿಣಿಯರಿಗಾಗಿ ಇದು ಒಳ್ಳೆಯ ಪಾರ್ಟ್‌ ಟೈಂ ಜಾಬ್ ಆಗಿದೆ. ಇದರಲ್ಲಿ ಕಲೆ ಪ್ರದರ್ಶಿಸುವ, ಹರಟೆ ಹೊಡೆಯುವ ಅವಕಾಶ ಹೆಚ್ಚು. ನಮ್ಮವರು ಇಲ್ಲಿ ಇದೆಂಥ ಕೀಳು ಕೆಲಸ ಎಂದು ಮೂಗು ಮುರಿಯಬಾರದಷ್ಟೆ!

36317_col

ಮಾರ್ಕೆಟ್‌ ಫಂಡಾ : ಸನ್‌ ಗ್ಲಾಸಸ್‌ ಬಲು ಮಾಮೂಲಿ ವಸ್ತು. ಆದರೆ ಇದನ್ನು ಬನಿಯನ್‌, ಲುಂಗಿ ಧರಿಸಿದ ಸ್ಟಾರ್‌ಗಳೇ ಮಾರಾಟ ಮಾಡಲು ನಿಂತರೆ.....? ಹಾಗಾಗಿಯೇ ಕ್ವೇ ಕಂಪನಿ ಆ್ಯಶ್ಲೆ ಗ್ರಾಹಂಳ ಹೆಸರು ಹೇಳಿಕೊಂಡು ಗ್ಲಾಸಸ್‌ ಮಾರಲು ಸಜ್ಜಾಗಿದೆ. ಎಷ್ಟೋ ಗ್ರಾಹಕರಿಗೆ ಇಂಥ ವಸ್ತುಗಳು ಉಪಯುಕ್ತವೇ ಅಲ್ಲವೋ ತಿಳಿಯದೆ, ಸೆಲೆಬ್ರಿಟಿ ಮುಖ ನೋಡಿ ಕೊಂಡುಕೊಳ್ಳುತ್ತಾರೆ. ಇದರಲ್ಲಿ ಅಂಥ ತಪ್ಪೇನಿಲ್ಲ ಬಿಡಿ, ಇಲ್ಲದಿದ್ದರೆ ಹೆಂಗಸರು ತಮ್ಮ ಅತ್ತಿಗೆಯ ತಂಗಿಯ ಗೆಳತಿಯ ಅಕ್ಕಾ ಹೇಳಿದಳೆಂದು ಕಂಡ ಕಡೆ ಶಾಪಿಂಗ್‌ಗೆ ಎದ್ದೇಬಿಡುತ್ತಾರೆ.

12592229_l-1

ನಮ್ಮ ಶಕ್ತಿ ಗುರುತಿಸಿ : ಹಾಗೆ ನೋಡಿದರೆ ಸಿಂಗಾಪುರ್‌ ಚಿಕ್ಕ ದೇಶವಾದರೂ ಅತಿ ಆಧುನಿಕತೆಯ ಐಡೆಂಟಿಟಿ ಹೊಂದಿದೆ. ಅಲ್ಲಿನ ಹೆಂಗಸರಿಗಾಗಿ ಸಮಾಜದಲ್ಲಿ ಸವಾಲುಗಳು ತಪ್ಪಿದ್ದಲ್ಲ. ಅಲ್ಲಿನ ಪೀಪಲ್ಸ್ ಆ್ಯಕ್ಷನ್‌ ಪಾರ್ಟಿ, ಹೆಂಗಸರ ಸಮಸ್ಯೆ ನಿವಾರಿಸಲೆಂದೇ ಅವರಿಗಾಗಿ ಸ್ಪೆಷಲ್ಸ್ ‌ಏರ್ಪಡಿಸಿದೆ. ಹಾಗಾಗಿ ಹೆಂಗಸರು ಅವರ ತಗ್ಗಿದ ದನಿ ರಾಜಕೀಯದಲ್ಲಿ ಮೊಳಗಲು ದಾರಿಯಾಗಿದೆ. ಈ ಸೆಲ್‌ನಲ್ಲಿ ಮಹಿಳಾ ಸಾಂಸದರೆ ಪ್ರಮುಖರಾಗಿದ್ದು, ಹೆಂಗಸರಿಗೆ ಪೂರ್ತಿ ನ್ಯಾಯ ದೊರಕಿಸಿಕೊಡಲು ಸರ್ಕಾರದ ಮೇಲೆ ಒತ್ತಡ ಹೇರಬಲ್ಲರು. ನಮ್ಮಲ್ಲೂ ಎಲ್ಲಾ ಪಕ್ಷಗಳಲ್ಲೂ ‌ಇದ್ದೇ ಇದೆ, ಆದರೆ ಅವರ ಕೆಲಸ ರಾಜಕೀಯದಲ್ಲಿ ಗ್ಲಾಮರ್‌ ನೀಡಲಿಕ್ಕಷ್ಟೆ!

istanbul-women-march-d9Xr_cover

ನಿರ್ಧಾರ ಸುಲಭ ಅಲ್ಲ :  ಮೆಟ್ರೋ ಟ್ರೇನುಗಳಲ್ಲಿ ಹೆಂಗಸರಿಗೆಂದೇ ಪ್ರತ್ಯೇಕ ಕಂಪಾರ್ಟ್‌ಮೆಂಟ್‌ ಕೊಡುವುದು ಅವರಿಗೆ ಒಳ್ಳೆಯದ್ದೋ, ಕೆಟ್ಟದ್ದೋ, ಖಂಡಿತಾ ಸುಲಭವಾಗಿ ನಿರ್ಧರಿಸಲಾಗದು. ಹೆಂಗಸರಿಗೆ ಸಮಾನತೆ ಬೇಕೇ ಬೇಕು ಎಂದ ಮೇಲೆ ಇಂಥ ಸಾರ್ವಜನಿಕ ಸ್ಥಳಗಳಲ್ಲಿ ಗಂಡಸರು ಪಟ್ಟಷ್ಟೇ ಕಷ್ಟವನ್ನು ಅವರೂ ಪಡಬೇಕಾಗುತ್ತದೆ. ಇಂಥ ರಿಸರ್ವೇಶನ್‌ಗಳಿಂದ ಅವರು ಚಿಪ್ಪಿನೊಳಗಿನ ಆಮೆ ಆಗುತ್ತಾರೆ. ಬಸ್ಸು, ರೈಲುಗಳಲ್ಲಿ ಇಬ್ಬರೂ ಸಮಾನವಾಗಿ ಕಲೆತು ಪ್ರಯಾಣಿಸಿದಾಗ ಮಾತ್ರ ಅರ್ಥ ಮಾಡಿಕೊಂಡು ಸರಿ ಜಾಗ ನೀಡಲು ಸಾಧ್ಯ. ಅದೇ ಸಮಯದಲ್ಲಿ ನೂಕು ನುಗ್ಗಲಿನ ಲಾಭ ಪಡೆಯುವ ಕರಾಳ ಗಂಡಸರು, ಹೆಂಗಸರ ಮೈ ಸರವದೇ ಬಿಡುವುದಿಲ್ಲ. ಅವರನ್ನು ಸದೆಬಡಿಯುವಂತೆಯೇ ಪಿಂಕ್‌ ಸೀಟ್‌ ರಿಸರ್ವೇಶನ್‌ನ್ನು ರದ್ದುಪಡಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ