ಗಣತಿಯವರು : ಎಷ್ಟು ಜನ ಮಕ್ಕಳು ನಿಮಗೆ?

ಮನೆ ಯಜಮಾನ : 5 ಮಂದಿ.

ಗಣತಿಯರು : ಹೆಸರು ಹೇಳ್ತೀರಾ...?

ಮನೆ ಯಜಮಾನ : ಮೊದಲನೆಯವನು ನೆಟ್‌ ನಾರಾಯಣ, ಎರಡನೆಯವನು  ಫೇಸ್‌ಬುಕ್‌ ಪ್ರಹ್ಲಾದ, ಮೂರನೆಯವನು ಚಾಟಿಂಗ್‌ ಚರಣ, ನಾಲ್ಕನೆಯವನು ಸ್ಕೈಪ್‌ ಸಂತೋಷ್‌...

ಗಣತಿಯವರು : ಸಾರ್‌ ಬರೀ ಗಂಡು ಮಕ್ಕಳೇ ಇರೋದಾ.....? ಹೆಣ್ಣು ಮಕ್ಕಳಿಲ್ವಾ....?

ಮನೆ ಯಜಮಾನ : ಕೊನೆಯವಳು ಮಗಳು. ಅವಳ ಹೆಸರು ವಾಟ್ಸಪ್‌ ವಾರುಣಿ.

ಗಣತಿಯವರು : ಹೆಂಡತಿ ಹೆಸರೇನು?

ಮನೆ ಯಜಮಾನ : ಗೂಗಲ್ ಗೀತಾ

ಗಣತಿಯವರು : ಸರಿ ಸಾರ್‌ ಬರ್ತೇವೆ.....

ಮನೆ ಯಜಮಾನ : ನನ್ನ ಹೆಸರು ಕೇಳಲಿಲ್ಲ...?

ಗಣತಿಯವರು : ಗೊತ್ತಾಯ್ತು ಬಿಡಿ ಸಾರ್‌.... ನೀವು `ಜಿಯೋ ಜಯರಾವ್‌' ಅಂತ....

ಶೆಟ್ರು ತಪಸ್ಸು ಮಾಡಿದರು. ಲಕ್ಷ್ಮೀ ಪ್ರತ್ಯಕ್ಷಳಾದಳು.

ಲಕ್ಷ್ಮೀ : ಶೆಟ್ರೆ ಏನು ಬೇಕು?

ಶೆಟ್ರು : ದುಡ್ಡು ಬೇಕು!

ಎರಡು ಗೋಣಿಚೀಲದಷ್ಟು ದುಡ್ಡು ಕೊಟ್ಟು ಲಕ್ಷ್ಮೀ ಮಾಯವಾದಳು. ಶೆಟ್ರು ಖುಷಿಯಿಂದ ಮನೆಗೆ ಬಂದು ಗೋಣಿಚೀಲಗಳನ್ನು ಬಿಚ್ಚಿ ನೋಡಿ ಬೆಚ್ಚಿ ಬಿದ್ದರು. ಆ ಗೋಣಿಚೀಲಗಳಲ್ಲಿದ್ದುದು 500 ರೂ. ಮತ್ತು 1000 ರೂ.ಗಳ ಹಳೆಯ ನೋಟುಗಳು! ಶೆಟ್ರು ಪುನಃ ತಪಸ್ಸು ಮಾಡಿದರು.

ಪ್ರತ್ಯಕ್ಷಳಾದ ಲಕ್ಷ್ಮೀ, ``ಏನಾಯಿತು ಶೆಟ್ರೇ?'' ಎಂದಳು.

ಶೆಟ್ರು ಹೇಳಿದರು, ``ಇವೆಲ್ಲ ಹಳೆಯ ನೋಟುಗಳು! ಇವುಗಳಿಗೆ ಈಗ ಬೆಲೆಯಿಲ್ಲ.''

ಲಕ್ಷ್ಮೀ : ಶೆಟ್ರೇ... ನಾನು ಕೂಡ ಹಳೆಯ ಲಕ್ಷ್ಮೀ.... ನೋಟ್‌ ಬದಲಾವಣೆ ಮಾಡಿದ್ದು ಮೋದಿ.... ಓಟ್‌ ಮೋದಿಗೆ ಹಾಕ್ತೀರಾ.... ನೋಟ್‌ ನನ್ನ ಕೇಳ್ತೀರಾ....? ಲಾಠಿ ಚಾರ್ಜ್‌ ಮಾಡಿಸಬೇಕಾ.....? ಎಂದ ಲಕ್ಷ್ಮೀ ಮಾಯಾದಳು. ಶೆಟ್ರು ಮೂರ್ಛೆ ಹೋದರು.

ಗುಂಡ : ಒಬ್ಬ ಹೆಂಗಸು ತನ್ನ ಗಂಡನಿಗಿಂತ ಮಕ್ಕಳನ್ನೇ ಹೆಚ್ಚು ಇಷ್ಟಪಡುತ್ತೀನಿ ಎಂದು ಹೇಳಿದರೆ ಅದು ಶುದ್ಧ ಸುಳ್ಳು!

ಕಿಟ್ಟಿ : ಅದು ಹೇಗೆ ಹೇಳ್ತೀಯಾ?

ಗುಂಡ : ಅವಳು ಎಷ್ಟು ಹೊತ್ತು ಬೇಕಾದರೂ ತನ್ನ ಮಕ್ಕಳನ್ನು ನೆರೆಮನೆಯವಳ ಬಳಿ ಬಿಟ್ಟು ಶಾಪಿಂಗ್‌ಗೆ ಹೋಗುತ್ತಾಳೆ, ಆದರೆ ಅದೇ ನೆರೆಮನೆಯವಳ ಬಳಿ ಗಂಡನನ್ನು ಒಂದು ಕ್ಷಣ ಬಿಟ್ಟಿರುತ್ತಾಳಾ?

ಒಮ್ಮೆ ಟೈಲರ್‌ ರಾಮಣ್ಣ ತುಂಬಾ ರಶ್ಶಿದ್ದ ಬಸ್ಸಿಗೆ ಹತ್ತಿದ. ಸ್ವಲ್ಪ ಹೊತ್ತಿಗೆ ಅವನ ಮೊಬೈಲ್ ಗೆ 2 ನಿಮಿಷದಲ್ಲಿ ಒಂದು ಕಾಲ್ ಬಂತು. ರಾಮಣ್ಣ ಕಾಲ್ ರಿಸೀವ್‌ ಮಾಡಿ ಶಿಷ್ಯನಿಗೆ ಹೇಳತೊಡಗಿದ, ``ನೀನು ಮೊದಲು ಕೈ ಕಾಲು ಕತ್ತರಿಸಿ ಬಿಡು, ನಾನು ಬಂದ ಮೇಲೆ ಕುತ್ತಿಗೆ ಕತ್ತರಿಸುತ್ತೀನಿ!'' ಮುಂದಿನ ಸ್ಟಾಪ್‌ನಲ್ಲಿ ಆ ಬಸ್ಸಿನಲ್ಲಿದ್ದವರೆಲ್ಲ ಖಾಲಿ!

ಪ್ರಕಾಶ್‌ : ಜೀವನದಲ್ಲಿ ಗರ್ಲ್ ಫ್ರೆಂಡ್ಸ್ ಇಲ್ಲದಿದ್ದರೂ ಪರವಾಗಿಲ್ಲ ಆದರೆ ಮಾತ್ರ.....

ಸುರೇಶ್‌ :  ಏನು ಆದರೆ ಮಾತ್ರ....?

ಪ್ರಕಾಶ್‌ : ಜಗಜೀತ್‌ ಸಿಂಗ್‌ರ ಗಜಲ್, ಕೇಳುತ್ತಾ ಕುಳಿತುಬಿಟ್ಟರೆ...

ಸುರೇಶ್‌ : ಕುಳಿತು ಬಿಟ್ಟರೆ.... ಏನಂತೀಯಾ?

ಪ್ರಕಾಶ್‌ : ಒಟ್ಟಿಗೆ 10-12 ಮಂದಿ ಗರ್ಲ್ಸ್ ಫ್ರೆಂಡ್ಸ್ ಬಿಟ್ಟು ಹೋದರೇನೋ ಎಂಬಷ್ಟು ದುಃಖ ಗಾಢವಾಗಿ ಆರಿಸುತ್ತದೆ!

ಗುಂಡ : ಜಗಜೀತ್‌ ಸಿಂಗ್‌ರ ಗಜಲ್ಸ್ ಕೇಳಿ ನಾನು ಒಂದು ಗಂಟೆ ಕಾಲ ಅಳುತ್ತಾ ಕುಳಿತೆ....

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ