ನೆನಪಿನಂಗಳದಿಂದ : 2003ನೇ ಫೆಬ್ರವರಿಯಲ್ಲಿ ಅಮೆರಿಕಾದ ಸ್ಪೇಸ್‌ ಶಟಲ್ ಕೊಲಂಬಿಯಾದಲ್ಲಿ ನಡೆದ ದುರ್ಘಟನೆಯಲ್ಲಿ ಭಾರತದ ಕಲ್ಪನಾ ಚಾವ್ಲಾ ಸಹ ಇದ್ದರು. ಇದೀಗ ಆಕೆ ಕುರಿತಾಗಿ ಸಿನಿಮಾ ಮೂಡಿಬರಲಿದೆ. ಆಕೆ ತಮ್ಮ ಜೊತೆ `ಚಂಪಕ' ಪತ್ರಿಕೆಯ ಒಂದು ಟೀಶರ್ಟ್‌ ಕೊಂಡೊಯ್ದಿದ್ದರು, ಅದೀಗ ದೆಹಲಿಯ `ಡೆಲ್ಲಿ ಪ್ರೆಸ್‌' ಕಾರ್ಯಾಲಯದಲ್ಲಿ ಪ್ರದರ್ಶನಕ್ಕಿದೆ. ಆಕೆಯ ಮರಣದ ನಂತರ ಅವರ ಪತಿ ಇದನ್ನು ಮರಳಿಸಿದ್ದರು. `ಭಾಗ್‌ ಮಿಲ್ಕಾ ಭಾಗ್‌, ಮೇರಿಕೋಮ್, ದಬಂಗ್‌' ಚಿತ್ರಗಳಂತೆ ಇದೂ ಯಶಸ್ಸಿನ ದಾರಿ ಕಾಯುತ್ತಿದೆ.

ವಾಹ್‌.... ಇದೆಂಥ ದೃಶ್ಯ! : `ಮಳೆ ಮಳೆ.... ಒಲವಿನಾ ಸುರಿಮಳೆ....' ಎಂಬಂತೆ ತುಂತುರು ಮಳೆ ಹನಿ ನಡುವೆ ಬರಲಿ ಹೇಗೆ? ನಡುವೆ ಈ ಐಫಿಲ್‌ ಟವರ್‌ ಅಡ್ಡ ಇದೆಯಲ್ಲ....? ಪ್ಯಾರಿಸ್‌ನಲ್ಲಿ ಒಮ್ಮೆ ಫೋಟೋಗ್ರಾಫರ್‌ ಮಳೆಯ ಮಧ್ಯೆ ಐಫಿಲ್‌ ಟವರ್‌ನ ಅದ್ಭುತ ಫೋಟೋ ಕ್ಲಿಕ್ಕಿಸಿ ಕಳುಹಿಸಿದ್ದು ಹೀಗೆ, ಇದು ಸ್ಯಾನಿಫಿಲೋದ ಫೋಟೋಗಿಂತ ಲಕ್ಷ ಪಾಲು ಆಕರ್ಷಕವಾಗಿದೆ.

ಸಡಿಲಗೊಳುತ್ತಿರುವ ಕಂದಾಚಾರದ ಪಟ್ಟು :  ಪಾಕಿಸ್ತಾನದಲ್ಲಿ ಫ್ಯಾಷನ್‌ ಉದ್ಯಮ ತಾಲಿಬಾನಿಗಳ ಕಂದಾಚಾರದ ಕಪಿಮುಷ್ಟಿಯ ಮಧ್ಯೆ ಪ್ರವರ್ಧಮಾನವಾಗಿ ಬೆಳೆಯುತ್ತಿದೆ. ಕರಾಚಿ, ಲಾಹೋರ್‌ಗಳಲ್ಲಿ ಫ್ಯಾಷನ್‌ ಶೋಗಳು ಸತತ ನಡೆಯುತ್ತಿವೆ. ಇದರಲ್ಲಿ ಗ್ಲಾಮರ್‌ ಸೆಕ್ಸೀ ಲುಕ್ಸ್ ಗೇನೂ ಕೊರತೆ ಇಲ್ಲ. ಧರ್ಮದ ಹೆಸರಿನಲ್ಲಿ ವಸ್ತ್ರಸಂಹಿತೆಯನ್ನು ಹೇರಿದಷ್ಟೂ ಅದು ಹೀಗೇ ಆಗುತ್ತದೇನೋ...?.

ವಿಷಯ ಅದೇ.... ಮುಖಗಳು ಬೇರೆ : ಇದು ವಿಶ್ವದ ಎಲ್ಲಕ್ಕಿಂತ ಶಕ್ತಿಶಾಲಿ ರಾಷ್ಟ್ರವೆನಿಸಿದ ಡೊನಾಲ್ಡ್ ಟ್ರಂಪ್‌ರ ವೈಟ್‌ ಹೌಸ್‌ ಕಛೇರಿ. ಇಲ್ಲಿನ ಹೆಚ್ಚಿನ ಫರ್ನೀಚರ್‌ ದಶಕಗಳಷ್ಟು ಹಳೆಯದು. 4 ಅಥವಾ 8 ವರ್ಷಗಳಲ್ಲಿ ರಾಷ್ಟ್ರಪತಿ  ಬದಲಾಗಬಹುದು, ಹಾಗೆಂದು ಪ್ರತಿಯೊಂದೂ ಬದಲಾದೀತೇ?

ಮಹತ್ವಾಕಾಂಕ್ಷೆಗಾಗಿ ಏನಾದರೂ ಸಹ : ಪಂಜಾಬ್‌ನ ಬೂಟಾ ಸಿಂಗ್‌ ಹಾಗೂ ಅವರ ಪತ್ನಿ ದಿಲಂದರ್‌ ಕೌರ್‌, ಪಂಜಾಬ್‌ನಲ್ಲಿ ತಮ್ಮ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂದು ಅಮೆರಿಕಾ ಸರಕಾರದಿಂದ ರಾಜಕೀಯ ರಕ್ಷಣೆ ಕೋರುತ್ತಿದ್ದಾರೆ, ಅಮೆರಿಕಾದಲ್ಲಿ ಕೇವಲ ನೌಕರಿ ಗಿಟ್ಟಿಸಲು ಇಂಥ ಸುಳ್ಳುಗಳನ್ನು ಹೇಳಲಾಗುತ್ತದೆ, ಆದರೆ ಟ್ರಂಪಣ್ಣ ಇಂಥದ್ದಕ್ಕೆಲ್ಲ `ಅಯ್ಯೋ!' ಅನ್ನುವರಲ್ಲ ಬಿಡಿ.

ಎಲೆಕ್ಟ್ರಿಕ್‌ ಕಾರುಗಳ ದರ್ಬಾರ್‌ : ಈಗ ಪ್ರತಿ ಕಂಪನಿಯೂ ಅತಿ ಸಣ್ಣ ಎಲೆಕ್ಟ್ರಿಕ್‌ ಕಾರ್‌ ತಯಾರಿಸುವ ಪ್ರಯತ್ನದಲ್ಲಿದೆ. ಏಕೆಂದರೆ ಅತ್ತ ನಗರಗಳಲ್ಲಿ ಜಾಗ ಇಲ್ಲ, ಇತ್ತ ಹೊಗೆ ಸಹಿಸುವ ಶಕ್ತಿಯೂ ಇಲ್ಲ. ಇದು ರೆನಾರ್ಟ್ ನ ಟ್ವೀಝಿ ಮಾಡೆಲ್‌ ಆಗಿದೆ.

ಕಂದಾಚಾರಿಗಳಿಂದ ರಕ್ಷಿಸಿ : ಆಫ್ರಿಕಾದ ಟ್ಯೂನಿಶಿಯಾ ದೇಶೀ ಅಸಲಿಗೆ ಇಸ್ಲಾಮಿ ದೇಶಗಳಲ್ಲಿ ಡಿಕ್ಟೇಟರ್‌ಶಿಪ್‌ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿತು. ಹೀಗಿರುವಾಗ ಟ್ಯೂನಿಶಿಯಾದ ಮಂದಿ ಈ ಭಯೋತ್ಪಾದನೆ ವಿರುದ್ಧ ಉಗ್ರ ಹೋರಾಟದ ಪ್ರದರ್ಶನಕ್ಕೆ  ಇಳಿದಿದ್ದಾರೆ. ಅವರನ್ನು ನಿಯಂತ್ರಿಸಲು ಬಂದ ಪೊಲೀಸರಿಗೆ, ಉಚಿತ ಕಿಸ್‌ ಸಿಕ್ಕಿದಾಗ ಅದನ್ನು ಹತ್ತಿಕ್ಕಲು ಸಾಧ್ಯವೇ....?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ