ಬ್ರಿಟೀಷರು ಭಾರತವನ್ನು ಬಿಟ್ಟು ಹೋದರೂ, ಭಾರತೀಯರು ಬ್ರೀಟಿಷರಿಂದ ಕಲಿತ ಇಂಗ್ಲೀಷ್ ಭಾಷೆ, ಅವರ ವೇಷ ಭೂಷಣ ಮತ್ತು ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಅವರು ಕಲಿಸಿಕೊಟ್ಟ ಕ್ರಿಕೆಟ್ ಆಟವನ್ನು ಅಪ್ಪಿ ಮುದ್ದಾಡುತ್ತಿದ್ದೇವೆ. ಇತ್ತೀಚೆಗಂತೂ ಭಾರತದಲ್ಲಿ ಕ್ರಿಕೆಟ್ ಎನ್ನುವುದು ಒಂದು ರೀತಿಯ ಧರ್ಮವಾಗಿದೆ ಎಂದರೂ ತಪ್ಪಾಗಲಾರದು. ಈ ರೀತಿಯ ಬದಲಾವಣೆಯಾದದ್ದು ಕಪಿಲ್ ದೇವ್ ಅವರ ತಂಡ 1983ರ ವರ್ಲ್ಡ್ ಕಪ್ ಗೆದ್ದ ನಂತರ ಎನ್ನುವುದು ಗಮನಿಸಬೇಕಾದ ಅಂಶ ಅದಕ್ಕೂ ಮೊದಲು ಕ್ರಿಕೆಟ್ ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಆಟಕ್ಕುಂಟು ಲೆಕ್ಕಕ್ಕಿಲ್ಲ. ಎಪ್ಪತ್ತರ ದಶಕದಲ್ಲಿ ಭಾರತದಲ್ಲಿ ಕ್ರಿಕೆಟ್ ಎಂದರೆ ಪುರುಷ ಪ್ರಧಾನವಾದ ಆಟ ಎಂದೇ ಪ್ರಖ್ಯಾತವಾಗಿದ್ದಾಗ ಬೆಂಗಳೂರಿನ ಎತ್ತರದ ಒಬ್ಬ ದಿಟ್ಟ ಹೆಣ್ಣು ಮಗಳು ಗಂಡು ಮಕ್ಕಳ ಜೊತೆ ಕ್ರಿಕೆಟ್ ಅಭ್ಯಾಸವನ್ನು ಮಾಡಿದ್ದಲ್ಲದೇ, ಫಾಲ್ಕನ್‌ನ ಮಹಿಳಾ ಕ್ರಿಕೆಟ್ ತಂಡವನ್ನು ಸ್ಥಾಪಿಸಿದ್ದಲ್ಲದೇ, ಬೆಂಗಳೂರಿನಲ್ಲಿಯೂ ಮಹಿಳಾ ಕ್ರಿಕೆಟ್ ತಂಡ ಕಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೇ ನಂತರ ದೇಶಾದ್ಯಂತ ಮಹಿಳಾ ಕ್ರಿಕೆಟ್ ಈ ಪರಿಯಾಗಿ ಬೆಳೆಯಲು ಕಾರಣೀಭೂತರಾದ ಶಾಂತಾ ರಂಗಸ್ವಾಮಿಯವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕಿ.

ಶಾಂತರವರು ಎಲ್ಲರೂ ಸುಲಭವಾಗಿ ನೆನಪಿಡುವಂತೆ ಜನವರಿ 01, 1954 ರಂದು ಶ್ರೀ ಸಿ.ವಿ.ರಂಗಸ್ವಾಮಿ ಮತ್ತು ರಾಜಲಕ್ಷ್ಮಿ ದಂಪತಿಗಳಿಗೆ ಬೆಂಗಳೂರಿನಲ್ಲಿ ಏಳು ಜನ ಹೆಣ್ಣು ಮಕ್ಕಳಲ್ಲಿ ಮೂರನೆಯವರಾಗಿ ಜನಿಸುತ್ತಾರೆ. ಹೆಣ್ಣು ಮಗಳಾಗಿದ್ದರೂ ಅವರ ಸ್ವಭಾವವೆಲ್ಲಾ ಗಂಡು ಮಕ್ಕಳ ರೀತಿಯಲ್ಲಿಯೇ ಇದ್ದು ಕ್ರಿಕೆಟ್ ಆಟದ ಬಗ್ಗೆ ಅವರಿಗಿದ್ದ ಅಮಿತೋತ್ಸಾಹದ ಪರಿಣಾಮವಾಗಿಯೇ ಅವರ ಅವಿಭಕ್ತ ಕುಟುಂಬ ಹಿರಿಯ-ಕಿರಿಯ ಸೋದರ ಸಂಬಂಧಿಗಳಾದ ಹುಡುಗರು ಮತ್ತು ಹುಡುಗಿಯರು ಎಂಬ ಭೇಧವಿಲ್ಲದೇ, ಸರಿಸಮಾನವಾಗಿ ಸುಮಾರು 20 ಜನರನ್ನು ಒಟ್ಟು ಗೂಡಿಸಿ, ತಮ್ಮ ಮನೆಯ ದೊಡ್ಡ ಹಿತ್ತಲಿನಲ್ಲಿ, ಟೆನಿಸ್ ಬಾಲ್ ಕ್ರಿಕೆಟ್ ಆಟವಾಡುತ್ತಾ ಉತ್ತಮ ಅಲ್ರೌಂಡರ್ ಅಗಿ ರೂಪುಗೊಳ್ಳುತ್ತಾರೆ. ರಾಜ್ಯದ ಪರ ಕ್ರಿಕೆಟ್ ಆಡುವ ಮೊದಲೇ ಆಕೆ ಬಾಲ್ ಬ್ಯಾಡ್ಮಿಂಟನ್ ಮತ್ತು ಸಾಫ್ಟ್‌ಬಾಲ್‌ನಂತಹ ಆಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಕೇವಲ ಕ್ರೀಡೆಯಲ್ಲದೇ, ಓದಿನಲ್ಲೂ ಚುರುಕಿನ ವಿದ್ಯಾರ್ಥಿನಿಯಾಗಿ ಬಿಎಂಎಸ್ ಮಹಿಳಾ ಕಾಲೇಜಿನಿಂದ ತಮ್ಮ ಪದವಿ ಗಳಿಸಿ, ಕ್ರೀಡಾ ಕೋಟಾದಡಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ದುರಾದೃಷ್ಟವಷಾತ್ ತಮ್ಮ 12 ನೇ ವಯಸ್ಸಿನಲ್ಲಿಯೇ ಅವರ ತಂದೆಯವರ ಅಕಾಲಿಕ ಮರಣದ ನಂತರ, ಅವರ ತಾಯಿಯವರು ಇಡೀ ಕುಟುಂಬದ ಜವಾಬ್ದಾರಿಯನ್ನು ನೋಡಿ ಕೊಂಡಿದ್ದಲ್ಲದೇ ಶಾಂತಾರವರ ಕ್ರಿಕೆಟ್ ಆಸಕ್ತಿಗೆ ಸಂಪೂರ್ಣವಾಗಿ ಆಸರೆಯಾಗಿ ನಿಂತರು. ಅವರ ಉಳಿದ ಆರು ಸಹೋದರಿಯಲ್ಲಿ ನಾಲ್ವರು ಎಂಜಿನಿಯರ್‌ಗಳು ಒಬ್ಬರು ಪಿಎಚ್‌ಡಿ, ಮತ್ತೊಬ್ಬರು ಸ್ನಾತಕೋತ್ತರ ಪದವೀಧರಾದರೇ, ಇವರು ಕ್ರಿಕೆಟ್ಟಿನಲ್ಲೇ ಮಗ್ನರಾದ ಕಾರಣ ಕೇವಲ ಪದವಿಯನ್ನು ಮುಗಿಸಿದರಾದರೂ, ತಮ್ಮೆಲ್ಲಾ ಸಾಧನೆಗಳನ್ನು ಕ್ರಿಕೆಟ್ಟಿನಲ್ಲಿಯೇ ತೋರಿಸುವ ಮುಖಾಂತರ ಎಲ್ಲರನ್ನೂ ಮೆಟ್ಟಿ ನಿಂತು‌ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದರು. ತಮ್ಮ ಸರ್ವಸ್ವವನ್ನೂ ಕ್ರಿಕೆಟ್ಟಿಗೇ ಅರ್ಪಿಸಿಕೊಂಡ ಕಾರಣ ಅವಿವಾಹಿತರಾಗಿಯೇ ಉಳಿದರೂ ಭಾವನಾತ್ಮಕವಾಗಿ ಕ್ರಿಕೆಟ್ಟಿನೊಂದಿಗೇ ವಿವಾಹಿತರಾಗಿದ್ದಾರೆ ಎಂದರೂ ತಪ್ಪಾಗಲಾರದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ