ನೀವು ಯಾವುದಾದರೊಂದು ಸ್ಥಳದಲ್ಲಿ ಕಳೆದುಹೋದರೆ, ಅಲ್ಲಿ ನಿಮಗೆ ವಾಪಸ್‌ ಬರುವ ದಾರಿಯನ್ನು ಹುಡುಕುವ ಅವಕಾಶ ಇರದೇ ಇದ್ದರೂ ನೀವು ನಿಮ್ಮ ಆನಂದದಾಯಕ ಪ್ರವಾಸವನ್ನು ಸಾಹಸಮಯ ಹಾಗೂ ಉತ್ಸಾಹಜನಕ ಪ್ರವಾಸವನ್ನಾಗಿ ಪರಿರ್ತಿಸಿಕೊಳ್ಳಿ. ಆದರೆ ನಿಮ್ಮ ಬಳಿ ಇದಕ್ಕಾಗಿ ಒಂದು ಸ್ಮಾರ್ಟ್‌ ಫೋನ್‌ ಇರುವುದು ಅತ್ಯವಶ್ಯ. ಅದು ನಿಮಗಿಂತ ಹೆಚ್ಚು ಸ್ಮಾರ್ಟ್‌ ಆಗಿದೆ. ಈ ಸ್ಮಾರ್ಟ್‌ ಫೋನ್‌ಗೆ ಎಲ್ಲವೂ ಗೊತ್ತು. ಹೀಗಾಗಿ ಅದು ನಿಮ್ಮ ಪ್ರವಾಸದ ಸಂಗಾತಿಯಾಗಬಹುದು.

ಕೆಲವೇ ಕ್ಲಿಕ್‌ಗಳಲ್ಲಿ ಚಿಕ್ಕ ಪಿನ್‌ನಿಂದ ಹಿಡಿದು ವಿಮಾನದ ಟಿಕೆಟ್‌ ತನಕ ಎಲ್ಲ ವಹಿವಾಟುಗಳನ್ನೂ ಮುಗಿಸಬಹುದು. ದೇಶದ ಯಾವುದೇ ಮೂಲೆಗೆ ಪ್ರವಾಸದ ಯೋಜನೆ ರೂಪಿಸಬಹುದು. ಮುಂದಿನ ಬಾರಿ ಪ್ರವಾಸದ ಯೋಜನೆ ರೂಪಿಸಬೇಕೆಂದರೆ ನೀವು ಯಾವುದೇ ಸ್ಕೌಟ್‌ನ ನೆರವು ಪಡೆದುಕೊಳ್ಳಬೇಕಾದ ಅಗತ್ಯವಿಲ್ಲ. ಇಲ್ಲಿ ನಿಮಗೆ ಸಂಪೂರ್ಣ ಟ್ರಾವೆಲ್ ‌ಗೈಡ್‌ ಬಗ್ಗೆ ತಿಳಿಸಲಾಗುತ್ತದೆ. ಅದರ ನೆರವಿನಿಂದ ನೀವು ಪ್ರವಾಸದ ಅನುಭವವನ್ನು ವಿಶೇಷವಾಗಿಸಿಕೊಳ್ಳಬಹುದು.

ಗೂಗಲ್ ಆ್ಯಪ್‌ : ನೀವು ಎಲ್ಲಿಯಾದರೂ ಹೊರಟಿದ್ದೀರಾ? ಹೌದು ಎಂದಾದರೆ ಮ್ಯಾಪ್‌ ಜೊತೆಗೆ ಹೋಗಿ. ನೀವು ರಿಯಲ್ ಟೈಮ್ ಜಿಪಿಎಸ್‌ ನ್ಯಾವಿಗೇಶನ್‌ ಟ್ರಾಫಿಕ್‌, ಟ್ರಾಂಜಿಟ್‌ ಹಾಗೂ ನೂರಾರು ಸ್ಥಳಗಳ ಕುರಿತಂತೆ ನೀವು ಈ ಆ್ಯಪ್‌ ಮೇಲೆ ಅವಲಂಬಿಸಬಹುದು. ಈ ಆ್ಯಪ್‌ ನಿಮಗೆ ಸೂಕ್ತ ಸಮಯದಲ್ಲಿ ಅಪ್‌ಡೇಟ್‌ ಆಗಲು ನೆರವಾಗುತ್ತದೆ. ರಿಯಲ್ ಟೈಮ್ ನ್ಯಾವಿಗೇಶನ್‌, ಇಟಿಎ ಜೊತೆಗೆ ನಿಮ್ಮ ಪ್ರವಾಸವನ್ನು ಸುಲಭಗೊಳಿಸಿ. ಇದರಿಂದ ಸಮಯದ ಉಳಿತಾಯ ಆಗುತ್ತದೆ ಹಾಗೂ ನಿಮಗೆ ಸರಿಯಾದ ದಾರಿಯನ್ನೂ ತೋರಿಸುತ್ತದೆ. ಈ ಅಪ್ಲಿಕೇಶನ್‌ನ ನೆರವಿನಿಂದ ಪ್ರವಾಸಿ ಸ್ಥಳಗಳನ್ನು ಶೋಧಿಸಿ. ಅದರ ಜೊತೆ ಜೊತೆಗೆ ನೀವು ಸಮೀಕ್ಷೆಗಳ ರೇಟಿಂಗ್‌ ಮತ್ತು ಫುಡ್‌ ಅಂಡ್‌ ಇಂಟೀರಿಯರ್‌ನ ಫೋಟೋಗಳ ಮುಖಾಂತರ ಅತ್ಯುತ್ತಮ ಸ್ಥಳಗಳ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ನೀವು ನಿಮ್ಮ ಪ್ರವಾಸದ ಕಹಿ ಮತ್ತು ಸಿಹಿ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಏಕೆಂದರೆ ಬೇರೆಯವರಿಗೂ ಕೂಡ ಪ್ರವಾಸಕ್ಕಾಗಿ ಉತ್ತಮ ಸ್ಥಳಗಳನ್ನು ಆಯ್ದುಕೊಳ್ಳಲು ನೆರವಾಗುತ್ತದೆ. ಯಾವ ಪ್ರವಾಸಿ ಸ್ಥಳಗಳ ಬಗ್ಗೆ ನೀವು ಮೇಲಿಂದ ಮೇಲೆ ತಿಳಿದುಕೊಳ್ಳಲು ಬಯಸುತ್ತೀರೋ, ಆ ವಿವರವನ್ನು ನೀವು ಒಂದು ಕಡೆ ಸೇವ್ ಮಾಡಿಟ್ಟುಕೊಳ್ಳಿ. ಯಾವುದಾದರೂ ಕಂಪ್ಯೂಟರ್‌ ಅಥವಾ ಡಿವೈಸ್‌ ಮುಖಾಂತರ ಆ ಸ್ಥಳಗಳನ್ನು ತಕ್ಷಣವೇ ಶೋಧಿಸಬಹುದು. ಟ್ರ್ಯಾವೆಲ್‌ಯಾರಿ : ಇದು ಒಂದು ಆನ್‌ಲೈನ್‌ ಬುಕ್ಕಿಂಗ್‌ ಪ್ಲಾಟ್‌ಫಾರ್ಮ್ ಆಗಿದ್ದು, ಅದು ಬಸ್‌ ಟಿಕೆಟಿಂಗ್‌ ಪ್ರಕ್ರಿಯೆಯನ್ನು  ಸುಗಮಗೊಳಿಸುತ್ತದೆ. ಟ್ರ್ಯಾವೆಲ್‌ಯಾರಿ ಆ್ಯಂಡ್ರಾಯ್ಡ್ ಆ್ಯಪ್‌ ತನ್ನ ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ. ಏಕೆಂದರೆ ಮ್ಯಾಟಿಜ್‌ನ ಕಸ್ಟಮರ್‌ ರಿಸರ್ವೇಶನ್‌ ಸಿಸ್ಟಮ್ (ಸಿಆರ್‌ಎಸ್‌) ಭಾರತದಲ್ಲಿ ಶೇ.55ಕ್ಕೂ ಹೆಚ್ಚು ಬಸ್ ಸರ್ವೀಸ್‌ ಪ್ರೊವೈಡರ್‌ಗಳ ಇನ್‌ವೆಂಟ್ರಿ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವ ಒಂದು ಪ್ರಮುಖ ತಂತ್ರಜ್ಞಾನ ಪ್ಲಾಟ್‌ಫಾರ್ಮ್ ಆಗಿದೆ. ಆಕರ್ಷಕ ಗ್ರಾಹಕ ಸೇವೆ ಸುಲಭವಾಗಿ ತಲುಪುವಿಕೆ, ಸೀಟುಗಳ ಖಚಿತತೆ ಮತ್ತು ಅದರಲ್ಲೂ ವಿಶೇಷವಾಗಿ 100% ಲೈವ್‌ಬಸ್‌ ಟಿಕೆಟ್‌ನ ಇನ್‌ವೆಂಟ್ರಿಯ ಲಭ್ಯತೆ ಈ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದೆ. ಇದರಿಂದ ಕಂಪನಿಗೆ ಸ್ವಯಂ ಪಡಿಯಚ್ಚು ಮೂಡಿಸಲು ನೆರವಾಗುತ್ತದೆ. ಈ ಒಂದು ಆ್ಯಪ್‌ ಮುಖಾಂತರ ನೀವು ಬಸ್‌, ಹೋಟೆಲ್‌, ಟೂರ್‌ ಪ್ಯಾಕೇಜ್‌, ಸುಲಭ ಪಾವತಿ ಹಾಗೂ ಇತರೆ ಆಗುಹೋಗುಗಳ ಮೇಲೆ ವಿಚಾರಣೆ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ