ನಮ್ಮದು ಭಾರತೀಯ ಹೃದಯ. ಬುದ್ಧಿವಂತಿಕೆ ಮತ್ತು ಕೊಂಚ ಅಪ್ರಾಮಾಣಿಕತೆ ಇದ್ದರೆ ನನ್ನನ್ನು ಹೆಚ್ಚು ಭೇಟಿ ಮಾಡಬೇಡ. ಎಲ್ಲಾದರೂ ಪ್ರೀತಿಯಾಗಿಬಿಟ್ಟೀತು ಎನ್ನುತ್ತೇನೆ.

ಅದು ನಿಜ ಕೂಡ. ನನ್ನೊಂದಿಗೆ ಯಾರೇ ಆಗಲಿ ಸಂಪರ್ಕಕ್ಕೆ ಬಂದರು ನನ್ನ ವಶರಾಗಿಬಿಡುತ್ತಾರೆ ನನ್ನೊಂದಿಗೆ ಹೆಚ್ಚು ಭೇಟಿಯಾಗಬೇಡಿ ಎಂದು ನಾನು ಮೊದಲೇ ಎಚ್ಚರಿಸುತ್ತೇನೆ.

ಭೇಟಿಯಾಗುವುದು ತಪ್ಪಲ್ಲ ಎಂದು ನಾನೂ ಒಪ್ಪುತ್ತೇನೆ. ಇಡೀ ವಿಶ್ವ ಪ್ರೀತಿಯ ಮೇಲೆ ನಿಂತಿದೆ. ಪ್ರೀತಿಯಿಲ್ಲದಿದ್ದರೆ ಜೀವನ ಅಪೂರ್ಣವೆಂದು ತಿಳಿಯಲಾಗುತ್ತದೆ. ಆದರೆ ಪ್ರೀತಿ ಎನ್ನುವುದು ನೀಟ್‌ ಅಂಡ್‌ ಕ್ಲೀನ್‌ ಆಗಿರಬೇಕು. ಅದರಲ್ಲಿ ಯಾವುದೇ ದುರ್ಭಾವನೆಗೂ ಜಾಗ ಇಲ್ಲ. ನಾನಂತೂ ಪ್ರೀತಿಗಾಗಿ ಯಾವಾಗಲೂ ಹಪಹಪಿಸುತ್ತೇನೆ. ಅದಕ್ಕೆ ಯಾರೂ ಸಹಕರಿಸದಿದ್ದರೆ ಅದರಲ್ಲಿ ನನ್ನ ತಪ್ಪೇನಿದೆ? ಪ್ರೀತಿಗೆ ಯಾವ ಎಲ್ಲೆಯೂ ಇಲ್ಲ. ಯಾವುದೇ ಸಮಯದಲ್ಲಿ ಯಾವುದೇ ವಯಸ್ಸಿನಲ್ಲಿ ಪ್ರೀತಿ ಮಾಡಬಹುದು.

ವ್ಯಾಲೆಂಟೈನ್‌ ಡೇ ಹತ್ತಿರ ಬಂದಂತೆಲ್ಲ ನನ್ನ ಎದೆ ವೇಗವಾಗಿ ಹೊಡೆದುಕೊಳ್ಳುತ್ತದೆ. ವ್ಯಾಕುಲತೆ ನಿರಂತರವಾಗಿ ಹಿಂಬಾಲಿಸುತ್ತದೆ. ಸೇಂಟ್‌ ವ್ಯಾಲೆಂಟೈನ್‌ನ ಸಂದೇಶವನ್ನು ಕಂಠಪಾಠ ಮಾಡಿಕೊಂಡು ನಾನು ಪ್ರೀತಿಗಾಗಿ ಅತ್ತಿತ್ತ ಅಲೆಯುತ್ತೇನೆ. ಹಿಂದೆ ವ್ಯಾಲೆಂಟೈನ್‌ ಡೇನ ಮಹತ್ವ ತಿಳಿಯದಿದ್ದಾಗಲೇ ನನ್ನ ಮನಸ್ಸು ಪ್ರೀತಿಗಾಗಿ ಹಾತೊರೆಯುತ್ತಿತ್ತು. ಇನ್ನು ಜೀವನದಲ್ಲಿ ವ್ಯಾಲೆಂಟೈನ್‌ ಡೇ ಬಂದು ಅದರ ಮಹತ್ವ ತಿಳಿದಿರುವಾಗ ನನ್ನ ಮನಸ್ಸಿಗೆ ರೆಕ್ಕೆಗಳು ಮೂಡಿಬಿಟ್ಟವು.

ಫೆಬ್ರವರಿ 14ರಂದು ನೀವೇನಾದರೂ ನನ್ನನ್ನು ನೋಡಿದರೆ ದಂಗಾಗಿಬಿಡುತ್ತೀರಿ. ಬೆಳಗಿನಿಂದಲೇ ಟ್ರಿಮ್ ಆಗಿ ಡ್ರೆಸ್‌ ಮಾಡಿ, ಚೆನ್ನಾಗಿ ಅಲಂಕರಿಸಿಕೊಂಡು ಮುಖದಲ್ಲಿ ಮುಗುಳ್ನಗೆ ಮೂಡಿಸಿ ಓಡಾಡುತ್ತಿರುತ್ತೇನೆ. ನಾನು ಪತ್ರಿಕೆಗಳಲ್ಲಿ ಯಾರಾದರೂ ಅಪರಿಚಿತ ಪ್ರೇಮಿಗೆ ವ್ಯಾಲೆಂಟೈನ್‌ ಡೇನ ಸಂದೇಶದ ಜಾಹಿರಾತು ಕೊಡುತ್ತೇನೆ. ಎಷ್ಟು ದಿನಾಂತ ಹೀಗೆ ಮಾಡುವುದು ಎಂದು ಅನೇಕ ಬಾರಿ ಯೋಚಿಸುತ್ತಿರುತ್ತೇನೆ. ಇವೆಲ್ಲಾ ಶ್ರಮ ಯಾರಿಗಾಗಿ? ನನ್ನಾಕೆಯಂತೂ ನನ್ನ ಮನೆಯ ಕೋಳಿ, ನನ್ನ ಮನೆಯ ಬೇಳೆ, ಬೇರೆ ಜಾಗದಲ್ಲಿ ನನ್ನ ಬೇಳೆ ಬೇಯವುದಿಲ್ಲ. ಇನ್ನು ವ್ಯಾಲೆಂಟೈನ್‌ ಡೇನಂದು ನನ್ನ ಪರಿಸ್ಥಿತಿ ಏನಾಗಿರಬಹುದೆಂದು ನೀವೇ ಊಹಿಸಿ......

ಈ ಪ್ರೆಮದ ದೊಡ್ಡ ತಲೆನೋವು ಎಂದರೆ ನನ್ನ ಶ್ರೀಮತಿಯೇ! ಏನು ಮಾಡುವುದು? ಇದ್ದುದರಲ್ಲಿಯೇ ಸುಧಾರಿಸಬೇಕು. ಕುರುಡುಗಣ್ಣಿಗಿಂತ ಮೆಳ್ಳೆಗಣ್ಣು ಮೇಲು ಎಂಬುದು ಇದಕ್ಕೆ ಏನೋ? ಈ ಗಾದೆ ಮಾತನ್ನೇ ನಂಬಿಕೊಂಡು ನನ್ನ ಶ್ರೀಮತಿಯನ್ನೇ ನನ್ನ ವ್ಯಾಲೆಂಟಿನಿಯಾಗಿ ಆರಿಸಿಕೊಳ್ಳಬೇಕಾಗಿದೆ. ಕಾಲೇಜಿನ ಹಿಂದಿನ ದಿನಗಳು ನೆನಪಾಗುತ್ತವೆ. ಆಗೆಲ್ಲ ಒಂದಿಷ್ಟು ಲವ್ವು ಮಣ್ಣು ಮಸಿ ಇತ್ತು, ಆದರೆ ಅವೇನೂ ಕೈಗೂಡಲಿಲ್ಲ ಅನ್ನೋದು ಬೇರೆ ಕಥೆ. ಏನು ಮಾಡುವುದು? ಆ ಹಳೆಯ ಮಧುರ ನೆನಪುಗಳನ್ನೇ ಮೆಲುಕುಹಾಕುತ್ತಾ ಹೀಗೆ  ವರ್ಷ ವರ್ಷ ವ್ಯಾಲೆಂಟೈನ್‌ ಡೇ ಕಳೆಯುವುದೇ ಆಗಿಹೋಗಿದೆ. ಆ ನೆನಪುಗಳಲ್ಲೇ ಇಂದಿನ ಹಸಿವು, ಬಾಯಾರಿಕೆ, ನಿದ್ದೆ ಎಲ್ಲಾ ಮರೆಯುವಂತಾಗಿದೆ.

ಅದೆಲ್ಲ ನೆನೆಸಿಕೊಂಡು ದೇವದಾಸ್‌ನಂತೆ ಗಡ್ಡ ಬಿಟ್ಟು ಗಡಿಗೆ ಮುಖದಲ್ಲಿ ಊರೆಲ್ಲ ಅಂಡಲೆಯುವಾಗ, ನನ್ನ ಶ್ರೀಮತಿ ಅದರ ಗುರುತು ಹಿಡಿದವಳಂತೆ,  ``ಕಣ್ಣು ಬಿಟ್ಟಾಗ ಬೆಳಗಾಯಿತೆಂದು ತಿಳಿಯಿರಿ. ಅಜ್ಞಾನ ಕಳೆದಾಗ ಜ್ಞಾನ ಮೂಡಿತು ಎಂಬಂತೆ.  ಆದದ್ದೆಲ್ಲ ಒಳಿತೇ ಆಯಿತು.... ಅಂದುಕೊಳ್ಳಿ. ಏನೋ ಕಾಲೇಜು ದಿನಗಳಲ್ಲಿ ನಿಮ್ಮ ಮುಸುಡಿ ಒಂದಿಷ್ಟು ಚೆನ್ನಾಗಿದ್ದಾಗ ಯಾರೋ ಕಿಸಕ್ಕನೆ ನಕ್ಕು ನಿಮಗೆ ಗ್ರೀನ್‌ ಸಿಗ್ನಲ್ ಕೊಟ್ಟಿರಬೇಕು, ಅದನ್ನೇ ದೊಡ್ಡದಾಗಿ ರೊಮ್ಯಾಂಟಿಕ್‌ ಹೀರೋ ಅಂದುಕೊಳ್ಳುವುದೇ?  ಹೋಟೆಲ್‌ಗೆ ಹೋಗಿ ಊಟತಿಂಡಿ ಮಾಡುವಾಗ ನಾವು ನಮ್ಮ ತಟ್ಟೆ ನೋಡುವುದಕ್ಕಿಂತ ಬೇರೆಯವರು ಏನು ಆರ್ಡರ್‌ಮಾಡಿದ್ದಾರೋ.. ಛೆ..ಛೇ! ನಮಗೆ ಅದು ಮಿಸ್‌ ಆಯ್ತಲ್ಲ ಅಂತ ಪೇಚಾಡುವುದರಿಂದ ಲಾಭವೇನು? ಪಾಲಿಗೆ ಬಂದದ್ದು ಪಂಚಾಮೃತ ಅಂತ ಹೆಂಡ್ತೀನೇ ಲವರ್‌ ಅಂತ ಹಾಯಾಗಿರಿ!''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ