ಹಬ್ಬಗಳ ಸಂದರ್ಭ ಎಂದರೆ ಬಂಧು ಬಳಗ, ಆಪ್ತೇಷ್ಟರು ಮುಂತಾದವರ ಜೊತೆ ಒಡನಾಟ, ಹೀಗಾಗಿ ಅಂದದ ಅಲಂಕಾರ ಅತ್ಯಗತ್ಯ. ಈ ಸಂದರ್ಭದಲ್ಲಿ ಚಂದದ ಶೃಂಗಾರ ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಶೋಭೆ ನೀಡುವುದು ಮಾತ್ರವಲ್ಲದೆ, ಹಬ್ಬದ ಉತ್ಸಾಹ, ಸಡಗರ ಸಂಭ್ರಮ ಹೆಚ್ಚಿಸುವಲ್ಲಿಯೂ ಪೂರಕ. ಈ ಸಡಗರ ಸಂಭ್ರಮ ನಿಮ್ಮ ಮುಖದಲ್ಲಿಯೂ ಮಿಂಚಲಿದ್ದು, ಎಲ್ಲೆಲ್ಲೂ ನವೋಲ್ಲಾಸ ತರಿಸುತ್ತದೆ.

ವಿಶೇಷವಾಗಿ ಹಬ್ಬದ ಸಂದರ್ಭಗಳಿಗೆ ಯಾವ ರೀತಿಯ ಮೇಕಪ್‌ ಸೂಕ್ತ ಎಂಬದನ್ನು ಆಧುನಿಕ ಸೌಂದರ್ಯ ತಜ್ಞೆಯರು ಇಲ್ಲಿ ಸಲಹೆ ನೀಡಿದ್ದಾರೆ, ವಿವರವಾಗಿ ಪರಿಶೀಲಿಸೋಣವೇ?

face-clean

ಫೇಸ್ಮೇಕಪ್

ಮುಖದ ಮೇಕಪ್‌ಗಾಗಿ ಮೊದಲು ಅದಕ್ಕೆ ಬೇಸ್‌ ಒದಗಿಸಬೇಕು. ಬೇಸ್‌ಗಾಗಿ ಮುಖಕ್ಕೆ ಫೌಂಡೇಶನ್‌ ಹಚ್ಚಬೇಕು ಫೌಂಡೇಶನ್ನಿನ ಟೋನ್‌ ಮುಖದ ಚರ್ಮದ ಬಣ್ಣಕ್ಕಿಂತ 1 ಟೋನ್‌ ತೆಳು ಇರಬೇಕು. ಆಯ್ಲಿ ತ್ವಚೆಗಾಗಿ ವಾಟರ್‌ ಬೇಸ್ಡ್ ಫೌಂಡೇಶನ್‌ ಇರಲಿ, ಆದರೆ ಡ್ರೈ ಸ್ಕಿನ್‌ಗಾಗಿ ಮಾಯಿಶ್ಚರೈಸರ್‌ ಬೇಸ್ಡ್ ಇರಲಿ. ತರುಣಿಯರು ಪ್ಲೇನ್‌ ಸ್ಟಿಕ್‌ ಆರಿಸಬೇಕು, ಪ್ರೌಢ ಹಾಗೂ ಡ್ರೈ ಸ್ಕಿನ್ನಿನ ಮಹಿಳೆಯರು ಆಯಿಲ್ ಬೇಸ್ಡ್ ಫೌಂಡೇಶನ್‌ ಆರಿಸಬೇಕು. ಮುಖಕ್ಕೆ ಫೌಂಡೇಶನ್‌ ಹಚ್ಚುವ ಮೊದಲು ಕುತ್ತಿಗೆಯನ್ನು ಕ್ಲೆಂಝರ್‌ನಿಂದ ಚೆನ್ನಾಗಿ ಶುಚಿಗೊಳಿಸಬೇಕು. ನಂತರ ಒದ್ದೆಯಾದ ಮುಖಕ್ಕೆ ಲಘುವಾಗಿ ಬೇಸ್‌ನ್ನು ಏಕರೀತಿಯಲ್ಲಿ ಹರಡಬೇಕು, ಆಮೇಲೆ ಲೂಸ್‌ ಪೌಡರ್‌ ಮತ್ತು ಕಾಂಪ್ಯಾಕ್ಟ್ ಬಳಸಬೇಕು.

eye-makeup

ಕಂಗಳ ಮೇಕಪ್

ನಂತರ ಕಂಗಳ ಮೇಕಪ್‌ ಗಮನಿಸೋಣ. ದೀಪಾವಳಿಯ ಈವ್ನಿಂಗ್‌ ಪಾರ್ಟಿಗಳಿಗಾಗಿ ಐ ಮೇಕಪ್‌ ಮಾಡುವ ಮೊದಲು, ಕಣ್ಣಿನ ರೆಪ್ಪೆಗಳ ಮೇಲೆ ತೆಳು ಬ್ರಶ್‌ನಿಂದ ಮೊದಲು ಫೌಂಡೇಶನ್‌, ನಂತರ ಲೂಸ್‌ ಪೌಡರ್‌ ಕ್ರಮದಲ್ಲಿ ಹಚ್ಚಬೇಕು. ಕಾಡಿಗೆ ಪೆನ್ಸಿಲ್ ನಿಂದ ಮೇಲಿನ ರೆಪ್ಪೆ ಮೇಲಿ ತೆಳು ಗೆರೆ ಎಳೆದು, ಅದನ್ನು ಬ್ರಶ್‌ನಿಂದ ಹರಡುವಂತೆ ಮಾಡಿ. ಆಗ ಐ ಲಿಡ್‌ ದೊಡ್ಡದಾಗಿ ಕಾಣಿಸುತ್ತದೆ. ನೀವು ಮಲ್ಟಿಶೇಡೆಡ್‌ ಲಹಂಗಾ ಅಥವಾ ಸೀರೆ ಉಡುವಿರಾದರೆ, ಒಂದು ಶೇಡ್‌ನ ಐ ಶ್ಯಾಡೋ ಹಚ್ಚಿರಿ ಹಾಗೂ ಇನ್ನೊಂದು ಬಣ್ಣದ ಲೈನರ್‌ನ್ನು ಕಂಗಳ ಮೇಲೆ ಹಚ್ಚಿರಿ.

ಕಂಗಳನ್ನು ಹೈಲೈಟ್‌ಗೊಳಿಸಲು ಸಿಲ್ವರ್‌ ಕಲರ್‌ನ ಹೈಲೈಟರ್‌ ಬಳಸಿರಿ. ರೆಪ್ಪೆಗಳಿಗೆ ಗಾಢ ಲುಕ್ಸ್ ನೀಡಲು ಕೃತಕ ಲ್ಯಾಶೆಸ್ ಬಳಸಿ, ಕರ್ಲರ್‌ನಿಂದ ಕರ್ಲ್ ಮಾಡಿ ಹಾಗೂ ಕೊನೆಯಲ್ಲಿ ಮ್ಯಾಜಿಕ್‌ ಮಸ್ಕರಾದ ಕೋಟ್‌ ಹಚ್ಚಿರಿ. ನಿಮ್ಮ ಐ ಲ್ಯಾಶೆಸ್‌ ಸಹಜವಾಗಿಯೇ ಗಾಢವಾಗಿದ್ದರೆ, ಮಸ್ಕರಾದ ಒಂದು ಕೋಟ್‌ ಸಾಕು. ಮಸ್ಕರಾ ಐ ಬ್ರೋಸ್‌ನ್ನು ಮೇಲೆ ತೆಗೆದುಕೊಳ್ಳುತ್ತಾ, ಮೇಲು ಭಾಗದಲ್ಲಿ ಹಚ್ಚಬೇಕು. ಇದರಿಂದ ಇದು ಚೆನ್ನಾಗಿ ಹರಡುತ್ತದೆ. ಇದಾದ ಮೇಲೆ, ಕೆಳಗಡೆ ಬೋಲ್ಡ್ ಕಾಡಿಗೆ ಹಚ್ಚಿರಿ ಹಾಗೂ ಮೇಲಿನಿಂದ ಲೈನರ್‌ ಎಳೆಯಿರಿ. ಇದರಿಂದ ಕಾಡಿಗೆ ಪೂರ್ತಿ ಸೀಲ್ ‌ಆಗುತ್ತದೆ.

BEAUTY

ಗ್ಲೋ ಎಫೆಕ್ಟ್ ಗಾಗಿ ಮುಖದ ಮೇಲೆ ಗ್ಲೋ ಎಫೆಕ್ಟ್ ನೀಡಲಿಕ್ಕಾಗಿ ಶಿಮರ್‌ಗ್ಲಿಟರ್‌ ಬಳಸಿರಿ. ತುಟಿಗಳ ಮೇಲೆ ಲಿಪ್‌ಸ್ಟಿಕ್‌ನ ಡಾರ್ಕ್‌ ಶೇಡ್‌ ಹಚ್ಚಬೇಕು ಹಾಗೂ ಲಿಪ್‌ ಸೀಲರ್‌ನಿಂದ ಸೀಲ್ ಮಾಡಿ. ಹೀಗೆ ಮಾಡುವುದರಿಂದ ಲಿಪ್‌ಸ್ಟಿಕ್‌ ಬಹಳ ಹೊತ್ತು ಹಾಗೇ ಉಳಿಯುತ್ತದೆ. ಅದರ ಮೇಲೆ ಗ್ಲಾಸ್‌ ಹಚ್ಚಿರಿ. ಲಿಪ್‌ ಡಸ್ಟ್ ಸಿಂಪಡಿಸಿ.

ನೀವು ಇಂಡೋ ವೆಸ್ಟರ್ನ್‌ ಡ್ರೆಸ್‌ ಧರಿಸುವಿರಾದರೆ, ಕಂಗಳಿಗೆ ಸ್ಮೋಕಿ ಲುಕ್‌ ಕೊಡಿ. ಐ ಲಿಡ್‌ ಮೇಲೆ ಗ್ರೇಯಿಶ್‌ ಬ್ಲ್ಯಾಕ್‌ ಅಥವಾ ಡ್ರೆಸ್‌ಗೆ ಮ್ಯಾಚ್‌ ಆಗುವ ಯಾವುದಾದರೂ ಐ ಶ್ಯಾಡೋ ಬಳಸಿರಿ. ಇಂಡೋ ವೆಸ್ಟರ್ನ್‌ ಲುಕ್ಸ್ಗಾಗಿ ಅಗತ್ಯವೆನಿಸಿದರೆ ಟ್ಯಾಟೂ ಅಥವಾ ಫ್ಯಾಂಟಸಿ ಮೇಕಪ್‌ಮಾಡಿಸಬಹುದು.

ಹೇರ್ಸ್ಟೈಲ್

ನೀವು ಸಾಂಪ್ರದಾಯಿಕ ಸಿಂಗಾರದೊಂದಿಗೆ ಸಿಂಪಲ್ ಹೇರ್‌ ಸ್ಟೈಲ್ ಬಯಸಿದರೆ, ಕೂದಲಿನ ಮುಂಭಾಗದ ಫ್ರಂಟ್‌ನಲ್ಲಿ ಪಫ್ ಮಾಡಿಸಿ, ಸೈಡ್‌ ಫಿಶ್‌ ಜಡೆ ಹೆಣೆದುಕೊಳ್ಳಿ. ನಿಮ್ಮ ಜಡೆಯನ್ನು ಸ್ವರೋಸ್ಕಿ, ಕಲರ್‌ಫುಲ್ ಬೀಡ್ಸ್ ನಿಂದ ಅಲಂಕರಿಸಿ ಅಥವಾ ಹೈಬನ್‌ (ಕೊಂಡೆ) ಮಾಡಿ ಸ್ಟೈಲಿಶ್‌ ಹೇರ್‌ ಆ್ಯಕ್ಸೆಸರೀಸ್‌ನಿಂದ ಅಲಂಕರಿಸಿ.

ಪೀಕು ಲುಕ್ಸ್

ಪೀಕು ಅಥವಾ ದೀಪಿಕಾ ಪಡುಕೋಣೆಯ ಲುಕ್ಸ್ ಗಾಗಿ ಮುಂಭಾಗದ ಎಲ್ಲಾ ಕೂದಲನ್ನೂ ಬ್ಯಾಕ್‌ ಕೋಂಬಿಂಗ್‌ ಮಾಡಿ ಪಫ್ ಮಾಡಿ. ಹಿಂಭಾಗದ ಸ್ವಲ್ಪ ಕೂದಲನ್ನು ಕರ್ಲ್ ಮಾಡಿ ಮೇಲ್ಭಾಗದಲ್ಲಿ ಪಿನ್‌ ಅಪ್‌ ಮಾಡಿ. ಉಳಿದ ಕೂದಲನ್ನು ಬಾಚಿ, ರಬ್ಬರ್‌ಬ್ಯಾಂಡ್‌ ಹಾಕಿ ಜಡೆ ಹೆಣೆಯಿರಿ. ಜಡೆಗೆ ಪಿನ್ನಿನ ಸಹಾಯದಿಂದ ಉದ್ದನೆ ಸ್ಟಫಿಂಗ್‌ ತುಂಬಿಸಿ. ಹಿಂಬದಿಯ ಕೂದಲಿನಿಂದ ಸ್ಟಫಿಂಗ್‌ನ್ನು ಕವರ್‌ ಮಾಡಿ. ಉಳಿದ ಕೂದಲಿನಿಂದ ಜಡೆಯ ಸ್ಟಫಿಂಗ್‌ ತುಂಬಿಸಬೇಕು. ಕೂದಲನ್ನು ಟ್ವಿಸ್ಟ್ ಮಾಡುತ್ತಾ ಜಡೆಯನ್ನು ಕವರ್ ಮಾಡಿ. ಕೊನೆಯಲ್ಲಿ ಸ್ಟೋನ್‌ ವರ್ಕ್‌ ಹೇರ್‌ ಆ್ಯಕ್ಸೆಸರೀಸ್‌ನಿಂದ ಅಲಂಕರಿಸಿ.

ಗಮನವಿರಲಿ : ಮೇಕಪ್‌ ಮಾಡಿಸಿ ಕೊಳ್ಳುವಾಗ ನಿಮ್ಮ ಸ್ಕಿನ್‌ ಟೋನಿನತ್ತಲೂ ಗಮನವಿರಲಿ. ನಿಮ್ಮ ಚರ್ಮ ಪಿಗ್ಮೆಂಟೆಡ್ ಎನಿಸಿದರೆ, ಫೌಂಡೇಶನ್‌ ಜೊತೆ ಕನ್ಸೀಲರ್‌ ಸಹ ಬಳಸಬೇಕು. ಆದರೆ ಅದು ಸ್ಕಿನ್‌ ಟೋನಿಗಿಂತ ಲೈಟ್‌ ಆಗಿರಬೇಕು. ಡಾರ್ಕ್ ಮೇಕಪ್‌ಗಾಗಿ ಹಸಿರು, ಕಪ್ಪು, ಗ್ರೇ, ಪರ್ಪಲ್ ಕಲರಿನ ಐ ಶ್ಯಾಡೋಗಳನ್ನು ಬಳಸಬೇಕು. ಮೇಕಪ್‌ಗೆ ತಕ್ಕಂತೆ ಮ್ಯಾಚಿಂಗ್ ಜ್ಯೂವೆಲರಿ ಧರಿಸಬೇಕು. ಟ್ರೆಡಿಷನಲ್ ಲುಕ್ಸ್ಗಾಗಿ ಹೆವಿ ಇಯರ್‌ ರಿಂಗ್ಸ್ ನೆಕ್‌ಲೇಸ್‌ ಧರಿಸಿ. ಹಣೆಗೆ ಸ್ಟೋನ್‌ವುಳ್ಳ ಬಿಂದಿ ಸುಂದರವಾಗಿ ಒಪ್ಪುತ್ತದೆ. ಕೈಗಳಿಗೂ ಮ್ಯಾಚಿಂಗ್‌ ಬಳೆಗಳನ್ನೇ ಧರಿಸಿರಿ.

ನಿಮಗೆ ಇಂಡೋ ವೆಸ್ಟರ್ನ್ಸ್ ಲುಕ್ಸ್ ಬೇಕೆನಿಸಿದರೆ, ಲಾಂಗ್‌ ಗೌನ್‌ ಜೊತೆ ಹೈ ಬನ್‌ ಇರಲಿ,  ಜೊತೆಗೆ ಕ್ರೌನ್‌ ಸಹ. ಬೇಕೆನಿಸಿದರೆ ಹಾಫ್‌ ಫಂಕಿ ಲುಕ್ಸ್ ನ ಜಡೆಯೂ ಆಗಬಹುದು. ಇದರಲ್ಲಿ ಮುಂಭಾಗಕ್ಕೆ ಫ್ರಿಲ್ಸ್ ವು‌ಳ್ಳ ಜಡೆ ಆದೀತು. ಕೈಗಳಲ್ಲಿ ಸ್ಟೋನಿನ ಬ್ರೇಸ್‌ಲೆಟ್ ಚಂದ, ಕಿವಿಗಳಿಗೆ ಡಾಂಗ್ಲರ್ಸ್‌ ಇರಲಿ.

ಪುಷ್ಟಲತಾ

ಫೆಸ್ಟಿವ್ ಲುಕ್ಸ್ ಗಾಗಿ ಟ್ರೆಂಡಿ ಟಿಪ್ಸ್

ಮೊದಲು ನಿಮ್ಮ ಮುಖದಲ್ಲಿನ ದಟ್ಟ ಗೆರೆಗಳನ್ನು ಅಡಗಿಸಲು, ಕನ್ಸೀಲರ್‌ ಬಳಸಿರಿ. ನಂತರ ಕಾಡಿಗೆಯನ್ನು ನಿಮ್ಮ ಕಂಗಳ ಕೆಳಗಿನ ಭಾಗದಿಂದ ಮೇಲ್ಭಾಗಕ್ಕೆ ಎಳೆ ತನ್ನಿ ಹಾಗೂ ಕಣ್ಣಿನ ಮೇಲ್ಭಾಗದ ರೆಪ್ಪೆಯ ಬಳಿ ಜೋಡಿಸಿ. ಸುಸ್ತಾಗಿರುವ ನೋಟ ತಪ್ಪಿಸಲು, ರೆಪ್ಪೆಗಳನ್ನು ಭಾರಿಯಾಗಿ ತೋರಿಸುವ ಮಸ್ಕರಾ ಹಚ್ಚಿರಿ. ಹೊಳೆಯುವ ತುಟಿಗಳು ಬಹಳ ಚಂದ ಎನಿಸುತ್ತವೆ. ಆದ್ದರಿಂದ ನಿಮ್ಮ ಈ ಲುಕ್‌ನ್ನು ನ್ಯೂಟ್ರಲ್ ಅಥವಾ ಗುಲಾಬಿ ಲಿಪ್‌ಸ್ಟಿಕ್‌ನಿಂದ ತೀಡಿರಿ.

ಒಂದು ಪಕ್ಷ ನಿಮಗೆ ನಿಮ್ಮ ಕಂಗಳು ಮುಖದ ಚೆಲುವಾದ ಭಾಗ ಎನಿಸಿದರೆ, ಅದಕ್ಕೆ ಪಾಷ್‌ ಎಫೆಕ್ಟ್ ಕೊಡಿ ಹಾಗೂ ಬೊಂಬಾಟ್ ಲುಕ್ಸ್ ಗಾಗಿ ಕಂಗಳ ಅಕ್ಕಪಕ್ಕ ಸಣ್ಣ ವಿಂಗ್ಸ್ ಮಾಡಿಕೊಳ್ಳಿ.

ನೀವು ನಿಮ್ಮ ತುಟಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡ ಬಯಸಿದರೆ, ಆಗ ಗಾಢ ಬಣ್ಣದ ಲಿಪ್‌ಸ್ಟಿಕ್‌ನ್ನೇ ಆರಿಸಿ. ಮುಖ ತುಂಬಿದಂತೆ ಕಾಣಿಸಲು, ಪಿಂಕ್‌ ಅಥವಾ ಪೀಚ್‌ ಬಣ್ಣದ ಬ್ಲಶರ್‌ ಆರಿಸಿ, ಆಗ ಅದು ನಿಮ್ಮ ಚೀಕ್‌ ಬೋನ್ಸ್ ನ್ನು ಉಬ್ಬಿದಂತೆ ತೋರಿಸುತ್ತದೆ.

ಕಡಿಮೆ ಸಮಯದಲ್ಲಿ ಸ್ಮೋಕಿ ಐ ಲುಕ್ಸ್ ಗಳಿಸಲು, ಕಲರ್‌ ಐ ಪೆನ್ಸಿಲ್ ‌ಬಳಸಬೇಕು. ಅದರಿಂದ ಮೇಲ್ಭಾಗದ ರೆಪ್ಪೆಗೆ ಟಚ್ ಕೊಡಲು ಒಳಗಿನಿಂದ ಹೊರಭಾಗಕ್ಕೆ ಎಳೆಯುತ್ತಾ ದಪ್ಪ ಗೆರೆ ಮಾಡಿ. ಈ ಗೆರೆಯನ್ನೇ ಹೊರಭಾಗದಲ್ಲಿ ಹರಡಿಕೊಳ್ಳಿ ಹಾಗೂ ಈ ಲುಕ್‌ನ್ನು ಪೂರ್ತಿ ಮಾರ್ಡಲು ಕೆಳರೆಪ್ಪೆಯ ಹೊರಭಾಗಕ್ಕೂ ಹೀಗೇ ಮಾಡಿ.

ನೀವು ಭಾರಿ ರೇಷ್ಮೆ ಸೀರೆ ಅಥವಾ ಸಲ್ವಾರ್‌ ಸೂಟ್‌ ಧರಿಸಲಿದ್ದರೆ, ಲೈಟ್‌ ಮೇಕಪ್‌ ಮಾಡುವುದೇ ಲೇಸು. ಬದಲಿಗೆ ಲೈಟ್ ಎನಿಸುವ ಸೀರೆ ಅಥವಾ ಸೂಟ್‌ ಸಾಕು ಎನಿಸಿದರೆ ಭಾರಿ ಮೇಕಪ್‌ ಮಾಡಿ. ನ್ಯೂಟ್ರಲ್ ಲುಕ್ಸ್ ಎಂಥದೇ ಉಡುಗೆಗೂ ಒಪ್ಪುತ್ತದೆ. ಸಾಂಪ್ರದಾಯಿಕ ಟಚ್‌ಗಾಗಿ ಬಿಂದಿ, ಹೂ, ಬಳೆಗಳನ್ನು ಮರೆಯಬೇಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ