ಸೀದಾಸಾದಾ ಜೀವನದಲ್ಲಿ ಇದ್ದಕ್ಕಿದ್ದಂತೆ ಎಲ್ಲಿಂದಲೋ ಒಂದು ಕಲ್ಲು ರಪ್ಪನೆ ಬಡಿದಂತಾಗುವ ಸಂದರ್ಭ ಎಂದರೆ ಇದೇ ಇರಬೇಕು.

ಆದು ಯಾವಾಗ ಅಂತೀರಾ? ಯಾವುದಾದರೂ ಪಾರ್ಟಿ, ಸಮಾರಂಭ ವೃಥಾ ಹೊರಗಿನ ಓಡಾಟದ ಮಧ್ಯೆ ನಿಮ್ಮನ್ನು ಕಂಡು ಯುವಕ ಯುವತಿಯರು, `ಆಲ್ಲಿ ನೋಡು… ಪೂರ್ವಕಾಲದ ಪುಟ್ಟಮ್ಮನ ಹಾಗೆ….’ ಎಂದಾಗ ನೋವು ಅನುಭವಿಸಿದವರಿಗೇ ಗೊತ್ತು. ಕಾಲೇಜು, ಆಫೀಸ್‌, ಇತರ ಸಾಮಾಜಿಕ ಸಂದರ್ಭಗಳಲ್ಲಿ ಇದು ಆಗುತ್ತಿರುತ್ತದೆ.

ಇಂಥ ವ್ಯಂಗ್ಯದ ಮಾತುಗಳಿಂದ ಅದನ್ನು ಕೇಳಿಸಿಕೊಂಡ ಪ್ರತಿಭಾನ್ವಿತ ಯುವತಿಯ ಆತ್ಮವಿಶ್ವಾಸವೇ ಹಾರಿಹೋಗುತ್ತದೆ. ಆದರೆ ಅದನ್ನಾಡಿದವರು 2 ನಿಮಿಷದಲ್ಲಿ ಅದನ್ನು ಮರೆತುಬಿಡುತ್ತಾರೆ. ಈ ವ್ಯಂಗ್ಯೋಕ್ತಿ ಎಷ್ಟು ದಿನಗಳಾದರೂ ಕುಟುಕುತ್ತಲೇ ಇರುತ್ತದೆ. ಇದರ ಪರಿಣಾಮ ಆ ಯುವತಿಯ ಇಡೀ ವ್ಯಕ್ತಿತ್ವದ ಮೇಲಾಗಿ ಅವಳು ಕೀಳರಿಮೆಯಿಂದ ಕುಗ್ಗಿಹೋಗುತ್ತಾಳೆ. ಇಂಥವರಿಗಾಗಿಯೇ ಇಲ್ಲಿವೆ ಸಲಹೆಗಳು.

ಇದನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂದು ನೀವು ಯೋಚಿಸಬಹುದು. ದೃಢ ಆತ್ಮವಿಶ್ವಾಸ, ಸಾಧಿಸಿ ತೋರಿಸುತ್ತೇನೆ ಎಂಬ ಛಲ ನಿಮ್ಮನ್ನು ಈ ವ್ಯಂಗ್ಯದಿಂದ ಪಾರು ಮಾಡುತ್ತದೆ. ಅದಕ್ಕಾಗಿ ನೀವು ಕಟ್ಟುನಿಟ್ಟಾಗಿ ಈ ಕ್ರಮಗಳನ್ನು ಅನುಸರಿಸಿದರೆ ಆಯಿತು.

ಸತ್ಯವನ್ನು ಮನಗಾಣಿರಿ

Gsk-August-50-10

ಇಂದು ಸುಮಾರು ಶೇ.40ಕ್ಕೂ ಹೆಚ್ಚು ಮಂದಿ ಹೇಗಿರುತ್ತಾರೆಂದರೆ, ಪ್ರತಿಭಾಶಾಲಿಗಳಾಗಿದ್ದರೂ ತಮ್ಮ ಕೀಳರಿಮೆ, ಝೀರೋ ಕಾನ್‌ಫಿಡೆನ್ಸ್ ಲೆವೆಲ್‌ನಿಂದ, ಅಸಲಿಗೆ ತಾವು ಯಾವ ಮಟ್ಟದಲ್ಲಿ ಇರಬೇಕಾಗಿತ್ತೋ, ಆ ಮಟ್ಟದಲ್ಲಿ ಇರದೆ, ಜೀವನದ ಯಾವುದೇ ತಿರುವಿನಲ್ಲಿ, ಅದು ಕಾಲೇಜಿನ ವಿದ್ಯಾರ್ಥಿ ಜೀವನ ಅಥವಾ ಸಂದರ್ಶನಕ್ಕೆ ಹೋದಾಗ, ಸಾಮಾಜಿಕ ಸಮಾರಂಭ ಮುಂತಾದೆಡೆ ತಮ್ಮ ಪರ್ಸನಾಲ್ಟಿ, ಕಾಂಪ್ಲೆಕ್ಷನ್‌, ಡ್ರೆಸ್‌ಸೆನ್ಸ್, ಆರ್ಥಿಕ ಕೊರತೆ, ಹಿಂಜರಿಕೆಯ ಸ್ವಭಾವಗಳಿಂದಾಗಿ ತಮ್ಮ ಸಹಪಾಠಿ, ಸಹೋದ್ಯೋಗಿಗಳ ಬಳಿ ಇಂಥ ಮಾತು ಕೇಳಬೇಕಾಗುತ್ತದೆ. ಆ ಘಟನೆ ನಡೆದು, ಅನೇಕ ದಿನಗಳ ನಂತರ ಅದರ ಕುರಿತು ಚಿಂತಿಸಿದರೆ, ನಿಮ್ಮನ್ನು ಹಾಗೆ ಆಡಿಕೊಂಡವರು ತಮ್ಮ ಪಾಡಿಗೆ ತಾವು ಹಾಯಾಗಿದ್ದಾರೆ.

ನೀವು ಇದ್ದೀರೋ ಇಲ್ಲವೋ ಎಂಬುದು ಕೂಡ ಅವರಿಗೆ ಮರೆತುಹೋಗಿರುತ್ತದೆ. ಹಾಗಿರುವಾಗ ಎಂದೋ ಯಾರೋ ಆಡಿದ ಮಾತಿಗೆ ನೀವೇಕೆ ಅಷ್ಟು ನೊಂದುಕೊಳ್ಳಬೇಕು?

ಕೆಲವರಂತೂ ಇದನ್ನೇ ಆಳವಾಗಿ ಯೋಚಿಸುತ್ತಾ ಡಿಪ್ರೆಶನ್‌ಗೆ ಒಳಗಾಗುತ್ತಾರೆ. ನಿಮ್ಮ ಅಮೂಲ್ಯ ಜೀವನದ ಕ್ಷಣಗಳನ್ನು ಇಂಥ ಕ್ಷುಲ್ಲಕ ಟೀಕೆ ಟಿಪ್ಪಣಿಗಳ ಕುರಿತು ಯೋಚಿಸುತ್ತಾ ನಿಮ್ಮ ಮನಶ್ಶಾಂತಿ ಹಾಳುಮಾಡಿಕೊಳ್ಳುವಿರಾ? ಈಗ ಮುಂದೇನು ಮಾಡಬೇಕೆಂದು ಯೋಚಿಸಿ. ಜೀವನದುದ್ದಕ್ಕೂ ಹೀಗೆ ಯೋಚಿಸುತ್ತಾ ಇರುವುದೇ ಅಥವಾ ಕಳೆದುಕೊಂಡ ಆತ್ಮವಿಶ್ವಾಸ ಮರಳಿ ಪಡೆಯುವುದೇ?

ಫ್ಯಾಷನ್‌ ಸ್ಟೈಲಿಸ್ಟ್ ಆಗಿರಿ ಪೂರ್ವ ಕಾಲದ ಪುಟ್ಟಮ್ಮನನ ಟೈಪ್‌ ಎಂದರೆ, ನೀವು ನಿಮ್ಮ ಪರ್ಸನಾಲ್ಟಿ  ಡ್ರೆಸ್‌ ಸೆನ್ಸ್ ಕಾರಣ ಗುಂಪಿನಲ್ಲಿ ಎಲ್ಲೋ ಹಿಂದುಳಿದಿದ್ದೀರಿ ಎಂದರ್ಥ. ಬೋಲ್ಡ್ ಬೂಟ್ಟಿೞುಲ್ ಎನಿಸಲು ಗುಂಪಿನಲ್ಲಿ ಹಿಂದುಳಿಯಬಾರದು, ಮುನ್ನುಗ್ಗಿ ಬರಬೇಕು. ನೀವು ನಿಮ್ಮ ವಾರ್ಡ್‌ ರೋಬ್‌ನಿಂದ ಹೊಳೆಯುವ, ನಕ್ಷತ್ರ ಬುಟ್ಟಾಗಳ, ಔಟ್‌ಡೇಟೆಡ್‌ ಸಡಿಲ ವಸ್ತ್ರಗಳನ್ನು ಹೊರಗೆ ತೆಗೆದು, ಅದರ ಜಾಗದಲ್ಲಿ ನಿಮ್ಮ ಫಿಗರ್‌ಗೆ ತಕ್ಕಂಥ ಲೇಟೆಸ್ಟ್ ಫ್ಯಾಷನ್ನಿನ ಡ್ರೆಸ್‌ ಆರಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಪತ್ರಿಕೆಗಳನ್ನು, ಟಿ.ವಿ ಕಾರ್ಯಕ್ರಮ, ಲೋಕಲ್ ಶಾಪಿಂಗ್‌ನ ನೆರವು ಪಡೆಯಿರಿ.

ಕನ್ನಡಿ ಸುಳ್ಳು ಹೇಳದು

Gsk-August-50-35

ಕನ್ನಡಿ ಮುಂದೆ ನಿಂತು ನೀವು ನಿಮ್ಮ ವ್ಯಕ್ತಿತ್ವದಲ್ಲಿ ಏನೆಲ್ಲ ಬದಲಾವಣೆ ತರಲು ಬಯಸುತ್ತೀರಿ ಎಂದು ನೋಡಿ. ಅದೇ ದಿಕ್ಕಿನಲ್ಲಿ ಹೆಜ್ಜೆ ಇಟ್ಟು ಮುಂದುವರಿಸಿ. ಅಂದರೆ, ನಿಮ್ಮ ಎತ್ತರ ಕಡಿಮೆ ಇದ್ದರೆ ಹೈಹೀಲ್ಸ್, ಮುಖಕ್ಕೆ ಕನ್ನಡಕದ ಬದಲು ಕಾಂಟ್ಯಾಕ್ಟ್ ಲೆನ್ಸ್ ಇತ್ಯಾದಿ. ಹೇರ್‌ ಸ್ಟೈಲ್ ‌ಪರ್ಫೆಕ್ಟ್ ಹೇರ್‌ ಕಟ್‌ ನೆರವಿನಿಂದ ನೀವು ನಿಮ್ಮ ಪರ್ಸನಾಲ್ಟಿಯಲ್ಲಿ ಸುಲಭವಾಗಿ ವಿಝಿಬಲ್ ಚೇಂಜ್ ತರಬಹುದು. ಹೀಗಾಗಿ ನೀವು ಅಗತ್ಯಕ್ಕಿಂತ ಹೆಚಾತಿ ಎಣೆ? ಸರಿ, ಬಿಗಿಯಾಗಿ ಬಾಚಿ ಜಡೆ ಅಥವಾ ಕೊಂಡೆಯನ್ನು ತೊರೆದು, ನಿಮ್ಮ ಮುಖ ಹಾಗೂ ಪ್ರೊಫೆಶನ್‌ಗೆ ತಕ್ಕಂತೆ ಹೇರ್‌ ಕಟ್‌ ಮಾಡಿಸಿಕೊಳ್ಳಿ. ಅದರಲ್ಲಿನ ಬೆಳ್ಳಿಗೂದಲು ಅಡಗಿಸಲು ಸಿಂಪಲ್ ಬ್ಲ್ಯಾಕ್‌ಬ್ರೌನ್‌ ಕಲರ್‌ನ ಜಾಗದಲ್ಲಿ ರಿಚ್‌ ಕಲರ್‌ ಹೈಲೈಟ್ ನ್ನು ಬಳಸಬೇಕು. ಗ್ರೇ ಹೇರ್‌ ಸಮಸ್ಯೆ ಇಲ್ಲದಿದ್ದರೂ, ಹಾಟ್ ಗ್ಲಾಮರಸ್‌ ಲುಕ್ಸ್ ಗಾಗಿ ಹೈಲೈಟ್ ಟ್ರೈ ಮಾಡಿ.

ಫಿಟ್‌ನೆಸ್‌ ಸ್ಪಾ

Gsk-August-48-3

ನಿಮ್ಮ ವ್ಯಕ್ತಿತ್ವದ ಮೇಕ್‌ ಓವರ್‌ ಜೊತೆಯಲ್ಲೇ ನಿಮ್ಮ ಮೈಂಡ್‌ಸೋಲ್ ‌ಮೇಕ್‌ ಓವರ್‌ನ ಅಗತ್ಯ ಇದೆ. ಆಗ ಮಾತ್ರವೇ ನಿಮ್ಮ ಇಡೀ ದೇಹಕ್ಕೆ ಹೊಸ ಶಕ್ತಿ, ಸ್ಛೂರ್ತಿಗಳ ಸಂಚಾರವಾಗಲು ಸಾಧ್ಯ. ಇದಕ್ಕಾಗಿ ನಿಯಮಿತವಾಗಿ ಯೋಗಾಭ್ಯಾಸ ಮಾಡಿ. ಬಾಡಿ  ಹೇರ್‌ ಸ್ಪಾ ಮಾಡಿಸಿ, ಇದಕ್ಕಿಂತ ಉತ್ತಮ ಇನ್‌ಸ್ಟೆಂಟ್‌ ಆಪ್ಶನ್‌ ಇಲ್ಲ. ನಿಮಗೆ ಸ್ಪಾ  ಟ್ರೀಟ್‌ ಮೆಂಟ್‌ ದುಬಾರಿ ಎನಿಸಿದರೆ, ಮನೆಯಲ್ಲೇ ಬಾಡಿ ಆಯಿಲ್ ‌ಮತ್ತು ಸ್ಕ್ಕಬ್‌ ಬಳಸಿಕೊಂಡು, ಸ್ನಾನದ ನೀರಿಗೆ ಕೆಲವು ಹನಿ ಲ್ಯಾವೆಂಡರ್‌, ಟ್ರೀಟ್‌ ಅಥವಾ ಶ್ರೀಗಂಧದ ಎಣ್ಣೆ  ಬೆರೆಸಿ, ಬೆಳಗೂ ಬೈಗೂ ಸ್ನಾನ ಮಾಡಿ. ಆಗ ನೋಡಿ, ನಿಮ್ಮ ಮೈ ಕಾಂತಿಯ ಪರಿಣಾಮ!

ಬ್ಯೂಟಿ ಟ್ರೀಟ್‌ ಮೆಂಟ್‌

Gsk-August-48-1

ಇತ್ತೀಚೆಗೆ ಪಾರ್ಲರ್‌ ದರ್ಶನ ಎಂಬುದು ಕೇವಲ ಐಷಾರಾಮಿ ಅನುಕೂಲವಾಗಿರದೆ, ಅತಿ ಅಗತ್ಯದ ಬಾಬತ್ತಾಗಿದೆ. ಏಕೆಂದರೆ ಕೇವಲ ಪ್ರತಿಭಾಸಂಪನ್ನರಾಗಿದ್ದರೆ ಸಾಲದು, ಆಲ್ ದಿ ಟೈಂ ಪ್ರೆಸೆಂಟೆಬಲ್ ಕಾನ್ಛಿಡೆಂಟ್‌ ಆಗಿದ್ದು, ಹಾಗೆ ತೋರ್ಪಡಿಸಿ ಕೊಳ್ಳುವುದೂ ಅತ್ಯಗತ್ಯ. ಇದಕ್ಕಾಗಿ ನೀವು ನಿಯಮಿತವಾಗಿ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಿರಬೇಕು.

ಪರ್ಫೆಕ್ಟ್ ಮೇಕಪ್

ಆಫೀಸ್‌ ಟೈಮಿಗೆ ತಕ್ಕಂತೆ ಶಿಷ್ಟಾಚಾರವಾಗಿ ಮಾಡಿಕೊಂಡ ಲೈಟ್‌ ಮೇಕಪ್‌ನಿಂದಾಗಿ ನೀವು ಮತ್ತಷ್ಟು ಸುಂದರ ಹಾಗೂ ಫ್ರೆಶ್‌ಆಗಿ ಕಂಗೊಳಿಸುವಿರಿ. ಇದಕ್ಕಾಗಿ ಹಗಲಿನ ಹೊತ್ತು ಸನ್‌ಸ್ಕ್ರೀನ್‌ ಲೋಶನ್‌ ಹಚ್ಚಿದ ನಂತರ, ಮಾಯಿಶ್ಚರೈಸರ್‌ಯುಕ್ತ ಫೌಂಡೇಶನ್‌ ಬಳಸಬೇಕು. ಲಿಪ್‌ಸ್ಟಿಕ್‌ ಶೇಡ್ಸ್ ನ್ಯಾಚುರಲ್ ಆಗಿರಲಿ ಮತ್ತು ಅಪ್ಪರ್‌ ಲಿಡ್‌ (ಐ)ನಲ್ಲಿ ನ್ಯಾಚುರಲ್ ಶೇಡ್‌ ಹಚ್ಚಿ, ಐ ಲೈನರ್‌ ಹಾಗೂ ಕಾಡಿಗೆ ತೀಡಿರಿ. ಆಫೀಸಿಗೆ ಸೀರೆ ಉಡುವಿರಾದರೆ, ಸಣ್ಣ ಬಿಂದಿ ಇಟ್ಟುಕೊಳ್ಳಿ. ಇದಾದ ನಂತರ ಡಿಯೋಡರೆಂಟ್‌, ಪರ್ಫ್ಯೂಮ್ ಗಳನ್ನೂ ಅಗತ್ಯ ಬಳಸಿಕೊಳ್ಳಿ.

ಸಂಭಾಷಣೆಯ ವೈಖರಿ

Gsk-August-50-47

100% ಪ್ರೆಸೆಂಟೆಬಲ್ ಆಗಿರಲು, ಗ್ಲಾಮರಸ್‌ ಪರ್ಸನಾಲ್ಟಿ ಜೊತೆ, ನಿಮ್ಮ ಸಂಭಾಷಣಾ ವೈಖರಿ ಸಮರ್ಪಕವಾಗಿ ಇರಲೇಬೇಕು. ಇದಕ್ಕಾಗಿ ನೊದಲು ಬೇರೆಯವರು ಹೇಳುವ ಮಾತು ಕೇಳಿಸಿಕೊಳ್ಳುವ ಸಹನೆ ತೋರಿರಿ ಹಾಗೂ ತರ್ಕ ವಿತರ್ಕಗಳ ಆಧಾರದಿಂದ ನಿಮ್ಮ ಮನದ ಭಾವನೆಗಳನ್ನು ಆತ್ಮವಿಶ್ವಾಸ ತುಂಬಿಕೊಂಡು ಹೇಳಲು ಪ್ರಯತ್ನಿಸಿ. ಜೊತೆಗೆ ವಿಷಯ ಗೊತ್ತಿದ್ದೂ ಸಹ, ಯಾರೇನು ಅಂದುಕೊಳ್ಳುವರೋ ಎಂದು ಮೌನವಾಗಿದ್ದು ಬಿಡಬೇಡಿ. ಯಾರಿಗೆ ಏನು ಹೇಳಬೇಕೋ ಅವರಂತೂ ಏನಾದರೂ ಹೇಳುತ್ತಿರುತ್ತಾರೆ. ನೀವು ನಿಮ್ಮ ಮನಸ್ಸು ಬುದ್ಧಿಗೆ ತೋಚಿದಂತೆ ನಿಮ್ಮ ಅರಿವನ್ನು ಶಾಂತವಾಗಿ ಪ್ರದರ್ಶಿಸಿ. ಎಂದೂ ಜೋರು ಧ್ವನಿಯಲ್ಲಿ ಕಿರುಚಾಡಬೇಡಿ. ಇದಕ್ಕಾಗಿ ಡ್ರೆಸ್ಸಿಂಗ್‌ ಮಿರರ್‌ಮುಂದೆ ನಿಂತು ತುಸು ಪ್ರಾಕ್ಟೀಸ್‌ ಮಾಡಿಕೊಳ್ಳಿ.ಇದರಿಂದ ಒಟ್ಟಾರೆ ನೀವು ಆಮ್ಮವಿಶ್ವಾಸದಿಂದ ಮಾತನಾಡುವಾಗ, ಯಾರೂ ನಿಮ್ಮ `ಪೂರ್ವಕಾಲದ ಪುಟ್ಟಮ್ಮ’ ಎನ್ನಲು ಅವಕಾಶವಿಲ್ಲದಂತೆ ಎದುರಿಗಿರುವವರ ಮೇಲೆ ನಿಮ್ಮ ಹಾಟ್‌, ಗ್ಲಾಮರಸ್‌, ಗ್ರೇಸ್‌ ಫುಲ್ ಲುಕ್ಸ್ ನ ಪ್ರಭಾವ ಬೀರಿ.

– ಪ್ರೀತಿ ಕುಮಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ