ಒಂದು ಸಲ ಜೇನ್ನೊಣವೊಂದು ನನ್ನ ಕುತ್ತಿಗೆಯ ಭಾಗದಲ್ಲಿ ಕಚ್ಚಿತು. ತಕ್ಷಣವೇ ನನ್ನ ಪತಿ ಆಲೂಗಡ್ಡೆಯ ಒಂದು ತುಂಡನ್ನು ಕತ್ತರಿಸಿ ಜೇನ್ನೊಣ ಕಚ್ಚಿದ ಜಾಗದಲ್ಲಿ ಇರಿಸಿದರು. ಹೀಗೆ ಮಾಡುವುದರಿಂದ ಕಚ್ಚಿದ ಭಾಗದಲ್ಲಿ ಅದರ ಪರಿಣಾಮವನ್ನು ಕಡಿಮೆಗೊಳಿಸುತ್ತದೆ. ಆದರೆ ಹಲವು ದಿನಗಳ ಕಾಲ ಅಷ್ಟಿಷ್ಟು ನೋವು ಇದ್ದೇ ಇರುತ್ತದೆ.

ರಾಜೀವ್ ಮತ್ತು ಸೋನಿಯಾ ಒಂದು ದಿನ ಮಕ್ಕಳ ಜೊತೆ ಪಿಕ್ನಿಕ್‌ಗೆ ಹೋದರು. ಮಕ್ಕಳಲ್ಲಿ ಯಾರೊ ಒಬ್ಬರು ಕಡಜಗಳ ಗೂಡಿಗೆ ಕಲ್ಲೆಸೆದರು. ಅದರ ಪರಿಣಾಮ ಎಂಬಂತೆ ಕಡಜಗಳ ಗುಂಪು ಎಲ್ಲರ ಮೇಲೆ ಹಲ್ಲೆ ನಡೆಸಿ ಕಚ್ಚಿದವು. ಅವರು ಹಲವು ದಿನಗಳ ಕಾಲ ಅನಾರೋಗ್ಯಕ್ಕೆ ತುತ್ತಾದರು. ಒಳ್ಳೆಯ ಸಂಗತಿ ಏನೆಂದರೆ, ಅವರಲ್ಲಿ ಯಾರೊಬ್ಬರೂ ವಿಷದ ವಿರುದ್ಧ ಅಲರ್ಜಿಕ್‌ ಆಗಿರಲಿಲ್ಲ. ಯಾರಾದರೂ ಅದರ ವಿಷದ ವಿರುದ್ಧ ಅಲರ್ಜಿಕ್‌ ಆಗಿದ್ದರೆ ಅವರು ಬದುಕುಳಿಯುವುದು ಕಷ್ಟ ಆಗುತ್ತಿತ್ತು.

ಜೇನ್ನೊಣಗಳು ಕೂಡ ಅಪಾಯಕಾರಿ : ಜೇನ್ನೊಣವೊಂದು ಮನುಷ್ಯನನ್ನು ಕಚ್ಚಿದಾಗ ಸ್ವತಃ ಜೇನ್ನೊಣವೇ ಸಾಯುತ್ತದೆ. ಏಕೆಂದರೆ ಅದು ಮನುಷ್ಯನನ್ನು ಕಚ್ಚಿದಾಗ ದೇಹದಲ್ಲಿ ಹೂತುಹೋಗುವ ಮುಳ್ಳಿನಂತಹ ಭಾಗ ಅದರ ಹೊಟ್ಟೆಯ ಒಂದು ಪ್ರಮುಖ ಭಾಗವೇ ಆಗಿರುತ್ತದೆ. ಜೇನ್ನೊಣ ಕಚ್ಚುವಾಗ ಅದು ಮನುಷ್ಯನ ದೇಹದಲ್ಲಿಯೇ ಮುರಿದಿದ್ದರೆ, ಅದನ್ನು ತೆಗೆಯದೇ ಇದ್ದಾಗ ಅದರ ವಿಷ ದೇಹದಲ್ಲಿ ಪಸರಿಸುತ್ತದೆ. ಹೀಗಾಗಿ ನೋವಾಗುತ್ತದೆ.

ವಿಹಂಗಮ

ಪರಾಗ ಸ್ಪರ್ಶ ಕ್ರಿಯೆಯಲ್ಲಿ ಜೇನ್ನೊಣಗಳ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಜೇನುತುಪ್ಪವನ್ನು ಜನರು ಅತ್ಯಂತ ಉತ್ಸಾಹದಿಂದಲೇ ಸವಿಯುತ್ತಾರೆ. 2001ನೇ ಸಾಲಿನಲ್ಲಿ ಬಳಕೆಗೆ ಬಂದ ನಿಕೋಟಿನೈಡ್‌ ಪೆಸ್ಟಿಸೈಡ್ಸ್ ಜೇನ್ನೊಣಗಳ ಒಂದು ಪ್ರಕಾರವನ್ನು ನಾಶಗೊಳಿಸಿತು. ಕೆಲವೊಂದು ಬಗೆಯ ಜೇನ್ನೊಣಗಳನ್ನು ನಮ್ಮ ಇಂದಿನ ಯುವಜನತೆ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಈ ಬಗೆಯ ಜೇನ್ನೊಣಗಳ ಸಂಖ್ಯೆ ಶೇ.70 ರಷ್ಟು ನಿರ್ನಾಮವಾಗಿವೆ. ಒಂದು ಕಾಲಕ್ಕೆ ಇತಿಹಾಸ ಸೃಷ್ಟಿಸಿದ್ದ ಈ ಜೇನ್ನೊಣಗಳು ಹಾಗೂ ಇತರೆ ಜೀವಿಗಳ ಪಾತ್ರದ ಕುರಿತಂತೆ ಸ್ವಲ್ಪ ತಿಳಿದುಕೊಳ್ಳಬೇಕು.

sos

ಜೇನ್ನೊಣಗಳೆಂಬ ಸೈನಿಕರು : `ಸಿಕ್ಸ್ ಲೆಗ್ಡ್ ಸೋಲ್ಜರ್‌’ ಎಂಬ ಪುಸ್ತಕದ ಪ್ರಕಾರ, ಯುದ್ಧದಲ್ಲಿಯೂ ಜೇನ್ನೊಣಗಳನ್ನು ಬಳಸಿಕೊಳ್ಳಲಾಗಿತ್ತು. ಇದು ಮನುಷ್ಯ ಗುಹೆಯಲ್ಲಿ ವಾಸಿಸುತ್ತಿದ್ದ ಕಾಲದಲ್ಲಿ ಯುದ್ಧ ಮಾಡುತ್ತಿದ್ದ ಒಂದು ಜನಾಂಗದ ಜನರು ಜೇನುಗೂಡುಗಳನ್ನು ರಾತ್ರಿಯ ಸಮಯದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತರುತ್ತಿದ್ದರು. ಬಳಿಕ ಜೇನುಗೂಡುಗಳನ್ನು ಹಸಿಮಣ್ಣಿನಿಂದ ಬಚ್ಚಿಡುತ್ತಿದ್ದರು. ಏಕೆಂದರೆ ಅ ಗೂಡಿನಿಂದ ಹೊರಬರದಂತೆ ನೋಡಿಕೊಳ್ಳುತ್ತಿದ್ದರು. ಯಾರ ಮೇಲಾದರೂ ದಾಳಿ ಮಾಡಬೇಕೆನಿಸಿದಾಗ ಆ ಜೇನುಗೂಡುಗಳನ್ನು ಅವರ ಮೇಲೆ ಎಸೆದುಬಿಡುತ್ತಿದ್ದರು. ಮಣ್ಣಿನಿಂದ ಮುಕ್ತಗೊಳ್ಳುತ್ತಿದ್ದಂತೆ ಜೇನ್ನೊಣಗಳು ಅಲ್ಲಿದ್ದವರ ಮೇಲೆ ಮುಗಿಬಿದ್ದು ಕಚ್ಚುತ್ತಿದ್ದವು. ಜೇನ್ನೊಣಗಳಿಂದ ಕಚ್ಚಿಸಿಕೊಂಡು ದಾಳಿಕೋರರು ಹೊರಗೆ ಬರುತ್ತಿದ್ದಂತೆ ಅಡಗಿ ಕುಳಿತವರು ಅವರನ್ನು ಹಿಡಿದು ತಮ್ಮ ಸೇಡು ತೀರಿಸಿಕೊಳ್ಳುತ್ತಿದ್ದರು.

ಬೈಬಲ್ ನ ಹಳೆಯ ಗ್ರಂಥಗಳಲ್ಲಿ ಜೇನ್ನೊಣಗಳು, ಕಡಜಗಳನ್ನು ದಾಳಿಗೆ ಬಳಸಿಕೊಳ್ಳುವ ಯುಕ್ತಿಯ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಯೆಹೋಷುವಾನ ಅಧ್ಯಾಯ 24 :12ರ ಪ್ರಕಾರ, ನಾನು ವೈರಿಯನ್ನು ಹೊರಗೆ ಎಳೆಯಲು ಕಡಜಗಳನ್ನು ಕಳಿಸಿದ್ದೇನೆ. ಅವು ಅವರನ್ನು ಹೊರಗೆಳೆದುಕೊಂಡು ಬರುತ್ತವೆ. ಅಮೋರೈಟ್‌ನ ಇಬ್ಬರು ರಾಜರನ್ನು ಕೂಡ.

ಎಕ್ಸೊಡಸ್‌ನ ಪ್ರಕಾರ, “ನಾನು ಅವರಿಗಾಗಿ ಕಡಜಗಳನ್ನು ಕಳಿಸುವೆ. ಅವು ಹೆಲೈಟ್‌, ದಿ ಕೆನನೈಟ್ಸ್ ಮತ್ತು ಹೈಟೈಟ್‌ ಅವರನ್ನು ಹೊರಗೆಳೆದುಕೊಂಡು ಬರುತ್ತವೆ.

ಇತಿಹಾಸ : ಪ್ರಾಚೀನ ಕಾಲದ ನೈಜೀರಿಯನ್‌ ಜನಾಂಗದಲ್ಲಿ ಜೇನ್ನೊಣಗಳ ಒಂದು ತೋಪನ್ನು ಸಿದ್ಧಪಡಿಸಿದ್ದರು. ಈ ತೋಪುಗಳಲ್ಲಿ ಒಂದು ವಿಶೇಷ ತಂತ್ರಜ್ಞಾನದ ಮುಖಾಂತರ ಜೇನ್ನೊಣಗಳನ್ನು ಭರ್ತಿ ಮಾಡಿ ವೈರಿ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದರು. ಮಾಯನ್‌ ಸಮುದಾಯದ ಜನರು ಒಂದು ವಿಶಿಷ್ಟ ಶಸ್ತ್ರಾಸ್ತ್ರ ಸಿದ್ಧಪಡಿಸಿದ್ದರು. ಸೈನಿಕರ ಪುತ್ಥಳಿಗಳನ್ನು ಸಿದ್ಧಪಡಿಸಿ, ತಲೆಯ ಭಾಗದಲ್ಲಿ ಜೇನ್ನೊಣಗಳನ್ನು ಅಡಗಿಸಿಡುತ್ತಿದ್ದರು. ವೈರಿಗಳು ಈ ಪ್ರತಿಮೆಗಳ ರುಂಡದ ಮೇಲೆ ದಾಳಿ ನಡೆಸಿದಾಗ ಅದರಲ್ಲಿದ್ದ ಜೇನ್ನೊಣಗಳು ಒಮ್ಮೆಲೆ ಹೊರಬಂದು ವೈರಿ ಸೈನಿಕರನ್ನು ಮನಬಂದಂತೆ ಕಚ್ಚುತ್ತಿದ್ದವು. ಮಧ್ಯಪ್ರಾಚ್ಯ ದೇಶಗಳ ಸೈನ್ಯಗಳು ಇನ್ನಷ್ಟು ಚಾತುರ್ಯ ಮೆರೆದವು. ಮಣ್ಣಿನ ಪಾತ್ರೆಗಳನ್ನು ಸಿದ್ಧಪಡಿಸುವ ವೀರರು ಎಂತಹ ಮಣ್ಣಿನ ಪಾತ್ರೆಗಳನ್ನು ಸಿದ್ಧಪಡಿಸಿದರೆಂದರೆ, ಕೀಟಗಳು ಆಕರ್ಷಿತಗೊಂಡು ಅಲ್ಲಿಯೇ ತಮ್ಮ ಗೂಡು ನಿರ್ಮಿಸಿಕೊಳ್ಳುತ್ತಿದ್ದವು. ವೈರಿಗಳ ಮೇಲೆ ಇವನ್ನು ಎಸೆಯಬೇಕೆಂದಾಗ, ಹುಲ್ಲಿನಿಂದ ಅವನ್ನು ಮುಚ್ಚಿಡುತ್ತಿದ್ದರು. ಬಳಿಕ ಮಣ್ಣಿನ ಕುಡಿಕೆಯನ್ನು ಅವರ ಮೇಲೆ ಎಸೆಯುತ್ತಿದ್ದರು. ಜೇನ್ನೊಣಗಳಿಂದ ದಾಳಿ ನಡೆಸುವುದರಿಂದ ದೊರೆತ ಯಶಸ್ಸಿನ ಬಳಿಕ ಇರುವೆ ಮತ್ತು ಚೇಳುಗಳನ್ನು ಕೂಡ ಬಳಸಲಾಯಿತು.

ಕಾಲ ಬದಲಾದರೂ ಅಸ್ತ್ರ ಬದಲಾಗಲಿಲ್ಲ : ನಗರಗಳು ಬೆಳವಣಿಗೆ ಆಗುತ್ತ ಹೋದಂತೆ ನಗರಗಳು ಹಾಗೂ ರಾಜ್ಯಗಳ ಮಧ್ಯೆ ಯುದ್ಧಗಳು ಕೂಡ ಹೆಚ್ಚುತ್ತಾ ಹೋದವು. ನಗರಗಳ ವ್ಯಾಪ್ತಿ ಹೆಚ್ಚುತ್ತಾ ಹೋದಂತೆ, ಪ್ರತಿಯೊಂದು ನಗರ ಕೋಟೆಯ ರೀತಿಯಲ್ಲಿ ರೂಪುಗೊಂಡವು. ಕೋಟೆಯ ಮೇಲೆ ದಾಳಿ ನಡೆಸುವವರು ಕೋಟೆಯ ನಾಲ್ಕೂ ಬದಿ ಜಮೆಗೊಳ್ಳುತ್ತಿದ್ದರು. ಏಕೆಂದರೆ ಕೋಟೆಯೊಳಗೆ ಪೂರೈಕೆಯಾಗುತ್ತಿದ್ದ ಆಹಾರ ಸಾಮಗ್ರಿ ಹಾಗೂ ಇತರೆ ಸಲಕರಣೆಗಳನ್ನು ತಡೆಯುತ್ತಿದ್ದರು.

ಪರಿವರ್ತನೆಯ ಪರ್ವದಲ್ಲಿ ರಂಗನತಿಟ್ಟು ಪಕ್ಷಿಧಾಮ

ಕ್ರಿ.ಪೂ. 400ರಲ್ಲಿಯೇ ಯುದ್ಧ ನೀತಿ ತಜ್ಞ ಎನಿಯಸ್‌ನು ಗಡಿ ಉಲ್ಲಂಘನೆಯ ವಿಧಾನಗಳ ಬಗ್ಗೆ ಒಂದು ಪುಸ್ತಕ ಬರೆದಿದ್ದ. ಕಳ್ಳ ಮಾರ್ಗದಲ್ಲಿ ಸಿಲುಕಿಕೊಂಡಿರುವ ಜನರಿಗೆ ಸಲಹೆ ನೀಡುತ್ತ, ಯಾವ ಸುರಂಗ ಮಾರ್ಗದಲ್ಲಿ ವೈರಿ ಪಡೆಯ ಸೈನಿಕರು ಬರುವ ಸಾಧ್ಯತೆ ಇರುತ್ತೋ ಅವರ ಮೇಲೆ ಕಡಜ ಹಾಗೂ ಜೇನ್ನೊಣಗಳನ್ನು ಬಿಡಬೇಕು. ರೋಮ್ ಸೈನ್ಯ ಜೇನ್ನೊಣಗಳನ್ನು ಹಾಗೂ ಇತರೆ ಕೀಟಗಳನ್ನು ತಮ್ಮ ಸಾಮ್ರಾಜ್ಯ ವಿಸ್ತರಣೆಯ ಪ್ರಮುಖ ಅಸ್ತ್ರವಾಗಿಟ್ಟುಕೊಂಡಿದ್ದರು. ಪ್ಲೀನಿ ಎಂಬುವನನ್ನು ಆಗಿನ ಕಾಲದ ಅತ್ಯಂತ ಪ್ರಭಾವಿ ನಿಸರ್ಗ ವಿಜ್ಞಾನಿ ಎಂದು ಭಾವಿಸಲಾಗುತ್ತಿತ್ತು. ಅವನು ನಿಸರ್ಗದ ಜೀವಜಂತುಗಳ ಬಗ್ಗೆ ಏನೇನೋ ಬರೆದಿದ್ದಾನೆ. ಮನುಷ್ಯನೊಬ್ಬ ಜೇನ್ನೊಣಗಳ ಕಚ್ಚುವಿಕೆಯಿಂದ ಸಾಯಬೇಕೆಂದರೆ 27 ಸಲ ಕಚ್ಚಬೇಕಾಗುತ್ತದೆ.

ರೋಮ್ ನಲ್ಲಿ ಜೇನ್ನೊಣಗಳಿಂದ ಹಲ್ಲೆ ನಡೆಸುವ ಪ್ರಕ್ರಿಯೆ ಅದೆಷ್ಟು ಜೋರಾಯಿತೆಂದರೆ, ರೋಮನ್‌ ಆಳ್ವಿಕೆಯ ಕಾಲದಲ್ಲಿ ಜೇನುಗೂಡುಗಳು ಕಾಣಿಸುವುದೇ ಅಪರೂಪವಾಗಿಬಿಟ್ಟಿತ್ತು.

ಜೇನ್ನೊಣಗಳೆಂಬ ಅಪ್ಪಟ ಅಸ್ತ್ರಗಳು : ರೋಮನ್‌ ಸಾಮ್ರಾಜ್ಯದ ಅವಧಿಯಲ್ಲಿ ಕೋಟೆಗಳನ್ನು ರಕ್ಷಿಸಲು ಈ ಉಪಾಯ ಸಾಮಾನ್ಯ ಎಂಬಂತಾಗಿತ್ತು. ಇಂಗ್ಲೆಂಡ್‌ನ ಚೆಸ್ಟರ್‌ ನಗರದ ಮೇಲೆ ದಾಳಿ ನಡೆಸಲು ಸ್ಕ್ಯಾಂಡಿನೇವಿಯನ್‌ರು ಸುರಂಗ ಮಾರ್ಗ ನಿರ್ಮಿಸಿದ್ದರು. ಚೆಸ್ಟರ್‌ ನಗರವಾಸಿಗಳು ಈ ದಾಳಿಯಿಂದ ರಕ್ಷಿಸಿಕೊಳ್ಳಲು ಜೇನ್ನೊಣಗಳನ್ನು ಸುರಂಗದಲ್ಲಿ ಬಿಡುತ್ತಿದ್ದರು. ಆ ಕಾರಣದಿಂದ ವೈರಿ ಸೈನಿಕರು ಪಲಾಯನ ಮಾಡಬೇಕಾದ ಸ್ಥಿತಿ ಬಂತು.

ಈ ಘಟನೆ ನಡೆದ 700 ವರ್ಷಗಳ ಬಳಿಕ ಸ್ಕ್ಯಾಂಡಿನೇವಿಯನ್‌ರು ಸಿಟಿ ಆಫ್‌ ಕಿರ್ಸಿಜಿನ್‌ ಮೇಲೆ ಹಲ್ಲೆ ನಡೆಸಿದರು. ಆ ಹಲ್ಲೆಯಿಂದ ರಕ್ಷಿಸಿಕೊಳ್ಳಲು ನಾಗರಿಕರು ಸೈನಿಕರ ಮೇಲೆ ಜೇನ್ನೊಣಗಳ ಪ್ರಯೋಗ ಮಾಡಿದರು. ಜೇನ್ನೊಣಗಳ ಹಲ್ಲೆಯಿಂದ ತಪ್ಪಿಸಿಕೊಳ್ಳುವ ಸಕಲ ಸಿದ್ಧತೆಯೊಂದಿಗೆ ಸೈನಿಕರು ಬಂದಿದ್ದರು. ಆದರೆ ಅವರೊಂದಿಗಿದ್ದ ಕುದುರೆಗಳು ಜೇನ್ನೊಣಗಳ ದೆಸೆಯಿಂದ ಕಂಗಾಲಾಗಿ ಅತ್ತಿತ್ತ ಚೆಲ್ಲಾಪಿಲ್ಲಿಯಾದವು. ಈ ರೀತಿಯಲ್ಲಿ ಈ ಯುದ್ಧ ಸೋಲಿನಲ್ಲಿ ಅಂತ್ಯ ಕಂಡಿತು.

ಕ್ರಮೇಣ ಯೂರೋಪ್‌ ಖಂಡ ಈ ವಿಧಾನವನ್ನು ಅನುಸರಿಸತೊಡಗಿತು. ಜರ್ಮನ್ನರು ಆಸ್ಟ್ರಿಯನ್ನರ ವಿರುದ್ಧ, ಗ್ರೀಕರು ಲೂಟಿಕೋರರ ವಿರುದ್ಧ ಹಾಗೂ ಹಂಗೇರಿ ನಿವಾಸಿಗಳು ಟರ್ಕಿ ದಾಳಿಕೋರರ ವಿರುದ್ಧ ಈ ವಿಧಾನವನ್ನು ಅನುಸರಿಸಿದರು. ಯುನೈಟೆಡ್‌ ಕಿಂಗ್‌ಡಮ್ ನಲ್ಲಿಯೂ ಭಾರಿ ಪ್ರಮಾಣದಲ್ಲಿ ಜೇನ್ನೊಣಗಳ ಸಾಕಣೆಯನ್ನು ಆರಂಭಿಸಲಾಗಿತ್ತು. ಅದರಲ್ಲೂ ವಿಶೇಷವಾಗಿ ಸ್ಕಾಟ್ಲೆಂಡ್‌ನಲ್ಲಿ ಈಗಲೂ ಈ ತೆರನಾದ ಹಲ್ಲೆಯ ಗುರುತುಗಳು ನೋಡಲು ಸಿಗುತ್ತವೆ.

ರಿಂಗ್‌ ರಿಚರ್ಡ್‌ ಎಂಬ ಸಾಹಸಿಯ ಕಥೆ ರಾಬಿನ್‌ ಹುಡ್‌ನ ಕಥೆಗಳಲ್ಲೂ ನೋಡಲು ಸಿಗುವುದಿಲ್ಲ. ಆತ ಮುಸ್ಲಿಂ ಸಾಮ್ರಾಜ್ಯದ ಮೇಲೆ ದಾಳಿ ನಡೆಸಲು ಇಂಗ್ಲೆಂಡ್‌ನ್ನೇ ತೊರೆದಿದ್ದ. ಈ ಯುದ್ಧವನ್ನು ಧರ್ಮಯುದ್ಧ  ಎಂದು ಹೇಳಲಾಗಿತ್ತು. ಆ ಸಂದರ್ಭದಲ್ಲಿಯೇ ಆತನಿಗೆ `ಬೀ ಆರ್ಮ್ಡ್’ ಎಂದು ಹೆಸರು ಬದಲಾಯಿತು. ಏಕೆಂದರೆ ರಿಚರ್ಡ್‌ ಯುದ್ಧದಲ್ಲಿ ಜೇನ್ನೊಣಗಳ ದಾಳಿಯ ತಂತ್ರಜ್ಞಾನವನ್ನು ಬಳಸುತ್ತಿದ್ದ.

ಮಹಿಳೆಯ ಅಸ್ತಿತ್ವ ಇಷ್ಟೇನಾ?

ಕ್ರಿ.ಪೂ.300ರ ಆಸುಪಾಸಿನಲ್ಲಿ ಸಮುದ್ರ ಯುದ್ಧದಲ್ಲೂ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಹಡಗುಗಳಲ್ಲಿ ಜೇನ್ನೊಣಗಳನ್ನು ಕೊಂಡೊಯ್ದು ವೈರಿ ಹಡಗುಗಳ ಮೇಲೆ ಎಸೆಯಲಾಗುತ್ತಿತ್ತು. 16ನೇ ಶತಮಾನದ ತನಕ ಈ ತೆರನಾದ ದಾಳಿಗಳನ್ನು ನಡೆಸಲಾಯಿತು. ಬಾಂಬ್‌ ವಾರ್ಡ್‌ ಶಬ್ದದ ಅರ್ಥ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಚಲಾಯಿಸುವುದಾಗಿದೆ. ಇದು ಲ್ಯಾಟಿನ್‌ ಶಬ್ದ ಬಂಬಸ್‌ನಿಂದ ಬಂದುದಾಗಿದೆ.

– ಮೇನಕಾ ಸಂಜಯ್‌ ಗಾಂಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ