– ರಾಘವೇಂದ್ರ ಅಡಿಗ ಎಚ್ಚೆನ್.

ಚನ್ನಪಟ್ಟಣದ ಶಾಸಕರು ಹಾಗೂ ನಟರಾದ ಸಿ.ಪಿ. ಯೋಗೇಶ್ವರ್ ಅವರು ಹಾಗೂ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಅಭಿನಯಿಸಲಿರುವ ಸೈನಿಕ -2 ಹಾಗೂ ಕರ್ಣಾಟಬಲಂ ಚಲನಚಿತ್ರದ ಮುಹೂರ್ತ ಸಮಾರಂಭ ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಅದ್ದೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು.

1001604498

ಬಮೂಲ್ ಅಧ್ಯಕ್ಷರಾದ ಡಿಕೆ ಸುರೇಶ್ ಅವರು   ಭಾಗವಹಿಸಿ, ಚಿತ್ರತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ, ಮಾಜಿ ಸಚಿವ, ಶಾಸಕರಾದ ಸುಧಾಕರ್, ಉದಯ್ ಕದಲೂರು, ಎಂಎಲ್ಸಿಗಳಾದ ಎಸ್ ರವಿ, ಮೋಹನ್, ನಟ ಜಗಪತಿ ಬಾಬು  ಜನಪ್ರತಿನಿಧಿಗಳು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ . ‘ಇತಿಹಾಸ ಯಾರೂ ಮರೆಯೋಕೆ ಸಾಧ್ಯ ಇಲ್ಲ’ ಎಂದು ಹೇಳಿದರು. ಸಿಪಿ ಯೋಗೇಶ್ವರ್ ಪುತ್ರ ಧ್ಯಾನ್ ಅವರಿಗೆ ಒಳಿತಾಗಲಿ. ಇತಿಹಾಸವನ್ನ ನೆನಪು ಮಾಡುವ ಕೆಲಸವನ್ನು ಧ್ಯಾನ್ ಮಾಡಲಿ. ತುಂಬು ಹೃದಯದಿಂದ ನಾನು ಆಶೀರ್ವಾದ ಮಾಡುತ್ತೇನೆ’ ಎಂದು ಡಿಕೆ ಶಿವಕುಮಾರ್ ಅವರು ಶುಭ ಕೋರಿದರು.

1001604497

ಇನ್ನು . ‘ನಾನೊಬ್ಬ ವಿತರಕನಾಗಿದ್ದೆ. ಈಗಲೂ ವಿತರಕನಾಗಿ ಕೆಲಸ ಮಾಡುತ್ತಾ ಇದ್ದೇನೆ’ ಎಂದು ಡಿಕೆಶಿ ಅವರು ಹೇಳಿದರು. ಅಲ್ಲದೆ ಥಿಯೇಟರ್ ಮಾಲೀಕರು ಭೇಟಿ ಮಾಡಿ ಕಷ್ಟ ಹೇಳಿಕೊಳ್ಳುತ್ತಿದ್ದಾರೆ. ಜಯಮಾಲಾ ಕೂಡ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ. ಪ್ರೇಕ್ಷಕರು ಕೂಡ ಸಾಥ್ ನೀಡಬೇಕು. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಹೊತ್ತಿನಲ್ಲಿ ಸಿ ಪಿ ಯೋಗೇಶ್ವರ್‌ ಪುತ್ರ ಧ್ಯಾನ್ ಸ್ಯಾಂಡಲ್‌ವುಡ್‌ ಗೆ ಹೊಸ ಹೀರೋ ಆಗಿ ಎಂಟ್ರಿಯಾಗಿದ್ದಾರೆ. ಧ್ಯಾನ್ ಅವರ ಚೊಚ್ಚಲ ಪ್ರವೇಶದಲ್ಲಿಯೇ ಒಟ್ಟೊಟ್ಟಿಗೆ ಎರಡು ಅದ್ದೂರಿ ಸಿನಿಮಾಗಳು ಘೋಷಣೆಯಾಗಿದ್ದು, ಎರಡೂ ಚಿತ್ರಗಳಲ್ಲಿ ತಂದೆ-ಮಗ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಲಿರುವುದು ವಿಶೇಷ.

1001604514

ಪಿ.ಎಂ.ಜಿ ಫಿಲಂ ಪ್ರೊಡಕ್ಷನ್ ಪ್ರೈ. ಲಿ. ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಧ್ಯಾನ್ ಯೋಗೇಶ್ವರ್ ಅವರನ್ನು ನಾಯಕನನ್ನಾಗಿ ಪರಿಚಯಿಸಲಾಗುತ್ತಿದೆ. ಹಿರಿಯ ನಿರ್ದೇಶಕ ನಾಗಣ್ಣ ಆ್ಯಕ್ಷನ್ ಕಟ್ ಹೇಳಲಿರುವ ಈ ಚಿತ್ರಕ್ಕೆ ‘ಕರ್ಣಾಟಬಲಂ ಅಜೇಯಂ’ ಎಂದು ಹೆಸರಿಡಲಾಗಿದೆ. ಈ ಚಿತ್ರದ ಮೂಲಕ ಸಿ. ಪಿ. ಯೋಗೇಶ್ವರ್ ಅವರು ಸುಮಾರು 25 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಮತ್ತೆ ಬಣ್ಣದ ಪ್ರಪಂಚಕ್ಕೆ ಮರಳುತ್ತಿರುವುದು ವಿಶೇಷ. ಚಿತ್ರದಲ್ಲಿ ಧ್ಯಾನ್ ಜೊತೆಗೆ ಯೋಗೇಶ್ವರ್ ಕೂಡ ಪ್ರಮುಖ ಪಾತ್ರದಲ್ಲಿದ್ದು, ಮಿಸ್ ಯೂನಿವರ್ಸ್ ಇಂಡಿಯಾ ಮಣಿಕ ವಿಶ್ವಕರ್ಮ, ಮಿಸ್ ಯೂನಿವರ್ಸ್ ಇಂಡಿಯಾ ರನ್ನರ್ ಅಪ್ ರೇಖಾ ಪಾಂಡೆ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ಪ್ರಮುಖ ತಾರಾಗಣದಲ್ಲಿದ್ದಾರೆ.

1001604509ಸಿ. ಪಿ. ಯೋಗೇಶ್ವರ್ ಅವರ ಹೋಮ್ ಬ್ಯಾನರ್ ‘ರಾಜಯೋಗಿ ಫಿಲಂಸ್’ ಮೂಲಕ 25 ವರ್ಷಗಳ ಹಿಂದೆ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ಸೈನಿಕ’ ಚಿತ್ರದ ಮುಂದುವರಿದ ಭಾಗ ‘ಸೈನಿಕ 2’ ಚಿತ್ರವನ್ನೂ ಘೋಷಣೆ ಮಾಡಲಾಗಿದೆ. ಈ ಚಿತ್ರವನ್ನು ಪುನೀತ್ ರುದ್ರನಾಗ್ ನಿರ್ದೇಶಿಸಲಿದ್ದು, ಸಿ. ಪಿ. ಯೋಗೇಶ್ವರ್ ಹಾಗೂ ಪುತ್ರ ಧ್ಯಾನ್ ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ