ಕ್ರಾಂತಿ ಎಂಬ ಪದವು ನಮ್ಮ ಮನಸ್ಸಿನಲ್ಲಿ ಒಂದು ಗದ್ದಲವನ್ನು ಎಬ್ಬಿಸುತ್ತದೆ. ಧ್ವಜಗಳು, ಘೋಷಣೆಗಳು, ಹೋರಾಟಗಳು, ರಾಜಕೀಯ ಬದಲಾವಣೆಗಳು — ಇವೆಲ್ಲವೂ ಕ್ರಾಂತಿಯ ರೂಪಗಳಂತೆ ಕಾಣಿಸುತ್ತವೆ. ಆದರೆ ನಿಜವಾಗಿ ನೋಡಿದರೆ, ಕ್ರಾಂತಿ ಎಂದರೆ ಶಬ್ದದ ಸಂಗತಿ ಅಲ್ಲ; ಅದು ಮೌನದ ಘಟನೆ. ನಿಸರ್ಗವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಬೀಜವು ಮಣ್ಣಿನೊಳಗೆ ಸಿಡಿಯುತ್ತದೆ, ಆದರೆ ಅದರ ಸಿಡಿತ ಯಾರಿಗೂ ಕೇಳಿಸದು. ಹೂವು ಅರಳುತ್ತದೆ, ಆದರೆ ಅದು ಘೋಷಣೆ ಮಾಡುವುದಿಲ್ಲ. ಈ ಮೌನವೇ ನಿಜವಾದ ಕ್ರಾಂತಿಯ ಸ್ವಭಾವ.

ನಾವು ಎಲ್ಲರೂ ಬದಲಾವಣೆ ಬೇಕು ಎಂದು ಹೇಳುತ್ತೇವೆ. ಸಮಾಜ ಬದಲಾಗಬೇಕು, ವ್ಯವಸ್ಥೆ ಬದಲಾಗಬೇಕು, ರಾಜಕೀಯ ಸುಧಾರಿಸಬೇಕು — ಈ ಬೇಡಿಕೆಗಳು ಸಾಮಾನ್ಯ. ಆದರೆ ಒಂದು ಮೂಲಭೂತ ಪ್ರಶ್ನೆಯನ್ನು ನಾವು ವಿರಳವಾಗಿ ಕೇಳುತ್ತೇವೆ: “ನಾನು ಬದಲಾಗಲು ಸಿದ್ಧನೇ?” ಬಹುಪಾಲು ಸಂದರ್ಭಗಳಲ್ಲಿ, ನಾವು ಕ್ರಾಂತಿಗೆ ತೆರೆದುಕೊಳ್ಳುವುದಿಲ್ಲ; ನಾವು ಅದರ ಕಲ್ಪನೆಗೆ ಮಾತ್ರ ಆಕರ್ಷಿತರಾಗುತ್ತೇವೆ. ಈ ಆಕರ್ಷಣೆಯೊಳಗೆ ಆತ್ಮವಂಚನೆಯೂ ಇದೆ, ಸೂಕ್ಷ್ಮ ಹಿಪೋಕ್ರಸಿಯೂ ಇದೆ. ಹೊರಗಿನ ಬದಲಾವಣೆಯನ್ನು ಬಯಸುವ ನಾವು, ನಮ್ಮೊಳಗಿನ ಅಹಂಕಾರ ˌ ಅಧಿಕಾರ ದಾಹˌ ದುರಾಸೆˌ ಹಿಂಸೆ....ಸ್ಥಿತಿಯನ್ನು ಹಾಗೆಯೇ ಉಳಿಸಿಕೊಂಡಿರುತ್ತೇವೆ. ನಮ್ಮೊಳಗಿನ ಅಹಂಕಾರˌ ದುರಾಸೆಗಳು ಸಾಯದ ಹೊರತು ಯಾವ ಕ್ರಾಂತಿಯು ಬದಲಾವಣೆ ತರದು.

August_Kranti_Din_Hindi_Preview_1_10_299984d1-998b-40d5-ba09-9b717ab57ff1

ಕ್ರಾಂತಿ ಎಂದರೆ ಒಂದರಿಂದ ಮತ್ತೊಂದಕ್ಕೆ ಜಿಗಿತವಲ್ಲ. ಹಳೆಯ ವ್ಯವಸ್ಥೆಯನ್ನು ಬಿಟ್ಟು ಹೊಸ ವ್ಯವಸ್ಥೆಯನ್ನು ಸ್ವೀಕರಿಸುವುದೂ ಅಲ್ಲ. ಹಾಗಿದ್ದರೆ ಅದು ಕೇವಲ ಹೊರಗಡೆ ಬದಲಾವಣೆ ಮಾತ್ರ — ಅದರಿಂದ ಯಾವ ಪ್ರಯೋಜನವಿಲ್ಲ. ಉದಾ: ಅಂಗಡಿಯಲ್ಲಿ ಕೆಲಸ ಮಾಡುವವರನ್ನು ಬದಲಾಯಿಸಿದ್ರೆ ಅಂಗಡಿ ಬದಲಾಗುವುದಿಲ್ಲ. ಕೆಲಸಗಾರ ಬದಲಾದನಷ್ಟೆ. ಅಂಗಡಿಯ ಒಳಗಿನ ವಸ್ತುಗಳನ್ನೆ ಬದಲಾಯಿಸು. ಅಂಗಡಿಯು ಆಕರ್ಷಕವಾಗಿ ಕಾಣುವುದು. ಜನಗಳು ಬರುವರು. ಅಂಗಡಿಯಲ್ಲಿ ವಸ್ತುಗಳಲ್ಲಿ ಗುಣಮಟ್ಟ ಸುಧಾರಿಸು ಅಲ್ಲಿ ಗಮನನೀಡು. ನಿಜವಾದ ಕ್ರಾಂತಿ ಅಂದರೆ ಅದು ಹೊರಗಿನ ಲೋಕದೊಂದಿಗೆ ಅಲ್ಲ, ನಮ್ಮೊಳಗಿನ ಹಳೆಯ ಚಿಂತನೆ ಮತ್ತು ಹೊಸ ಅರಿವಿನ ನಡುವೆ.

ಮಾನವ ಇತಿಹಾಸವನ್ನು ನೋಡಿದರೆ, ನಾವು ಸಾವಿರಾರು ವರ್ಷಗಳಿಂದ ಒಂದರಿಂದ ಮತ್ತೊಂದಕ್ಕೆ ಓಡುತ್ತಿದ್ದೇವೆ. ಒಂದು ನಂಬಿಕೆಯಿಂದ ಮತ್ತೊಂದಕ್ಕೆ, ಒಂದು ವ್ಯವಸ್ಥೆಯಿಂದ ಇನ್ನೊಂದಕ್ಕೆ. ಆದರೆ ಪ್ರತಿಯೊಂದು “ಹೊಸದು” ನಮ್ಮದೇ ಹಳೆಯ ಮನಸ್ಸಿನ ಉತ್ಪನ್ನ. ಆದ್ದರಿಂದ ಅದು ಹೊಸ ರೂಪದ ನರಕವಾಗುತ್ತದೆ. ಈ ನಿರಂತರ ನೆಗೆತವೇ ನಮ್ಮೊಳಗಿನ ಸ್ವರ್ಗ ಮತ್ತು ನರಕದ ಸಂಘರ್ಷವನ್ನು ಮುಂದುವರಿಸುತ್ತದೆ. ಮನುಷ್ಯ ಇತಿಹಾಸದಲ್ಲಿ ರಾಜ ಪ್ರಭುತ್ವದಿಂದ ಹಿಡಿದೂ ಸರ್ವಾಧಿಕಾರˌ ಕಮ್ಯುನಿಷ್ಟˌ  ಪ್ರಜಾಪ್ರಭುತ್ವ...ಎಲ್ಲಾ ಪ್ರಭುತ್ವಗಳ ಆಡಳಿತವನ್ನು ನೋಡಿದ್ದಾನೆ. ಯಾವ ಪ್ರಭುತ್ವದಲ್ಲಿ ಮನುಷ್ಯ ಸಂತೋಷವಾಗಿದ್ದಾನೆ? ಮಹಾಭಾರತ ರಾಮಾಯಣ ಕಾಲದಲ್ಲಿ? ಯುದ್ಧಗಳು ಏಕೆ ನಡೆದವು? ಸಂಸಾರ ಹೊರಗಡೆ ಓಡಿಸುತ್ತದೆ. ಅದು ಭ್ರಮೆ ಎಂದು ತಿಳಿಯುವಷ್ಟರಲ್ಲಿ ಆಯುಷ್ಯ ಮುಗಿದಿರುತ್ತದೆ. ಆಧ್ಯಾತ್ಮ ಒಳಗಡೆ..

ಹಾಗಾದರೆ ನಿಜವಾದ ಕ್ರಾಂತಿ ಎಲ್ಲಿದೆ? ಅದು ಸಮಾಜದಲ್ಲಿ ಹುಟ್ಟುವುದಿಲ್ಲ. ಅದು ರಾಜಕೀಯದಿಂದ ಬರೋದಿಲ್ಲ. ಅದು ವ್ಯಕ್ತಿಯ ಒಳಗೆ ಹುಟ್ಟುತ್ತದೆ. ಬುದ್ಧ ತನ್ನೊಳಗಿನ ಸತ್ಯವನ್ನು ಕಂಡುಕೊಂಡಾಗ, ಅವನು ಸಮಾಜವನ್ನು ಬದಲಿಸಲು ಹೊರಟಿರಲಿಲ್ಲ. ಆದರೆ ಅವನ ಒಳಗಿನ ಬದಲಾವಣೆ ಸಮಾಜದ ಮೇಲೆ ಆಳವಾದ ಪರಿಣಾಮ ಬೀರಿತು. ಹಾಗೆಯೇ ಬಸವಣ್ಣ ತನ್ನ ಅನುಭವದಿಂದಲೇ ಒಂದು ಹೊಸ ದಾರಿಯನ್ನು ತೆರೆದರು. ಅವರು ಕ್ರಾಂತಿಯನ್ನು ಬದುಕಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ