ಬೇಸಿಗೆಯಲ್ಲಿ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಹವಾಮಾನದಲ್ಲಿ ಮದುವೆಯಾಗುತ್ತಿದ್ದರೆ ಹೊಳೆಯುವ ತ್ವಚೆ ಪಡೆಯಲು ಈ ಉಪಾಯಗಳು ನಿಮಗೆ ನೆರವಾಗುತ್ತವೆ.....!
ಮದುವೆಯ ದಿನ ಯಾರಿಗಾದರೂ ಅತ್ಯಂತ ವಿಶೇಷ ದಿನವಾಗಿರುತ್ತದೆ. ಈ ಸಂದರ್ಭದಲ್ಲಿ ಪ್ರತಿ ವಧು ಸುಂದರವಾಗಿ ಕಾಣಲು ಬಯಸುತ್ತಾಳೆ. ಮದುವೆಯ ಫೋಟೋಗಳು ಮತ್ತು ನೆನಪುಗಳು ಸದಾ ಇರುತ್ತವೆ. ಆದ್ದರಿಂದಲೇ ಮದುವೆ ಬಟ್ಟೆಗಳು ಹಾಗೂ ಛತ್ರವನ್ನು ಮೊದಲೇ ನಿರ್ಧರಿಸಲಾಗುತ್ತದೆ. ಇವೆಲ್ಲದರ ಮಧ್ಯೆ ನಿಮ್ಮ ತ್ವಚೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೀರಾ?
ತ್ವಚೆ ಸ್ವಚ್ಛವಾಗಿರುವುದು ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಜನರ ದೃಷ್ಟಿಯಲ್ಲಿ ವ್ಯಕ್ತಿತ್ವನ್ನು ಹೊಳೆಯುವಂತೆ ಮಾಡಲು ಸಹಾಯಕವಾಗುತ್ತದೆ. ಶರೀರದ ರೂಪುರೇಷೆಗಳನ್ನು ಅಲಂಕರಿಸುವುದು (ಬಾಡಿ ಕಾಂಟೂರಿಂಗ್), ತ್ವಜೆಯ ಹೊಳಪು (ಸ್ಕಿನ್ ಲೈಟ್ನಿಂಗ್) ಮತ್ತು ನವೀಕರಣ (ಸ್ಕಿನ್ ರಿಜುವಿನೇಶನ್), ಕಲೆ ತೆಗೆಯುವುದು (ಸ್ಕಾರ್ಸ್ ರಿಮೂವಿಂಗ್), ಮುಖವನ್ನು ಆಕರ್ಷಕಗೊಳಿಸುವುದು (ಫೇಸ್ ಲಿಫ್ಟಿಂಗ್) ಲೇಸರ್ ಚಿಕಿತ್ಸೆ, ಡರ್ಮಲ್ ಫಿಲ್ಲರ್ಸ್ ನಂತಹ ವಿಭಿನ್ನ ಚಿಕಿತ್ಸೆಗಳು ನಿಮ್ಮ ತ್ವಚೆ ಹಾಗೂ ಶರೀರದಲ್ಲಿ ಮತ್ತೆ ಜೀವ ತುಂಬುತ್ತವೆ.
ಈ ಚಿಕಿತ್ಸೆಗಳಿಂದ ಅತ್ಯಂತ ದೊಡ್ಡ ಲಾಭವೆಂದರೆ, ಅವು ಮೊಡವೆಗಳು, ಕೂದಲು ಉದುರುವುದು, ಬ್ಲ್ಯಾಕ್‌ಹೆಡ್ಸ್, ಪಿಗ್ಮೆಂಟೇಶನ್, ಸುಕ್ಕುಗಳು ಮತ್ತು ಕಲೆಗಳನ್ನು ತಡೆಯುತ್ತವೆ. ಈ ಫೇಶಿಯಲ್ ಚಿಕಿತ್ಸೆ ಕಳೆದುಹೋಗಿದ್ದ ಮುಖದ ಕಾಂತಿಯನ್ನು ವಾಪಸ್ ತರುತ್ತದೆ.
ಒಂದು ಬ್ರೈಡಲ್ ಪ್ಯಾಕೇಜ್ ನಿಮ್ಮ ತ್ವಚೆಯ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲಿ ಮದುವೆಯ ಸಂದರ್ಭದಲ್ಲಿ ನಿಮ್ಮ ತ್ವಚೆಯ ಸೌಂದರ್ಯಕ್ಕೆ ಬೇಕಾದುದೆಲ್ಲ ಇರುತ್ತದೆ.
ಡಾ. ನರೇಶ್ ಪ್ರಕಾರ, ನೀವು ಸ್ಕಿನ್ ಟ್ರೀಟ್‌ಮೆಂಟ್‌ನ ಪ್ಲ್ಯಾನ್ ಮಾಡುತ್ತಿದ್ದರೆ ಆ ವಿಶೇಷ ಸಂದರ್ಭಕ್ಕೆ 6 ತಿಂಗಳು ಮೊದಲಿನಿಂದಲೇ ತಯಾರಿ ಆರಂಭಿಸಬೇಕು. ನಮ್ಮಲ್ಲಿ ಹೆಚ್ಚಿನ ವಧುಗಳು ಮೆಸೋಥೆರಪಿ, ಫುಲ್ ಬಾಡಿ ಪಾಲಿಶಿಂಗ್, ನಾನ್ ಸರ್ಜಿಕಲ್ ನೋಸ್ ಕರೆಕ್ಷನ್, ಹೈಡ್ರಾಫೇಶಿಯಲ್ ಇತ್ಯಾದಿಗಳಿಗೆ ಬರುತ್ತಾರೆ. ಅವನ್ನು `ಸೆಲೆಬ್ರಿಟಿ ಟ್ರೀಟ್‌ಮೆಂಟ್' ಎಂದೂ ಕರೆಯುತ್ತಾರೆ.
ಮದುವೆಯ ಸಿದ್ಧತೆಗಾಗಿ ನೀವು ಫಿಲ್ಲರ್ಸ್ ಮತ್ತು ಬೊಟಾಕ್ಸ್ ಬಗ್ಗೆ ಯೋಚಿಸುತ್ತಿದ್ದರೆ ಅವನ್ನು ಸಮಯವಿದ್ದಾಗ ಮುಂಚೆಯೇ ಮಾಡಿಸಿಕೊಳ್ಳಬೇಕು. ಬೊಟಾಕ್ಸ್ ನ ಪ್ರಕ್ರಿಯೆ ಪೂರ್ತಿಯಾಗಲು 3-4 ತಿಂಗಳ ಸಮಯ ಬೇಕು. ಸುಕ್ಕುಗಳನ್ನು ತೆಗೆಯಲು ಇದು ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಇದು ನಿಮ್ಮ ಮುಖದ ಮಾಂಸಖಂಡಗಳನ್ನು ನುಣುಪಾಗಿಸಿ ಅವುಗಳಲ್ಲಿ ಜೀವ ತುಂಬುತ್ತದೆ.
ಒಂದುವೇಳೆ ನಿಮ್ಮ ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಅವುಗಳ ಚಿಕಿತ್ಸೆಗೆ ಯಾರಾದರೂ ತ್ವಚಾ ರೋಗ ತಜ್ಞರಿಂದ ಸಲಹೆ ಪಡೆಯಿರಿ. ಲೇಸರ್ ಚಿಕಿತ್ಸೆ, ಫೋಟೋ ಫೇಶಿಯಲ್ಸ್, ಪ್ಯಾಡ್ಸ್ ಮತ್ತು ಕ್ರೀಂನಂತಹ ಉತ್ಪನ್ನಗಳು ತ್ವಚೆಯಲ್ಲಿ ಹೊಳಪು ತರುತ್ತವೆ.
ಒಂದು ವೇಳೆ ನಿಮ್ಮ ಮುಖ ಹಾಗೂ ಶರೀರದಲ್ಲಿ ಹೆಚ್ಚು ಕೂದಲಿದ್ದರೆ ಹಾಗೂ ನೀವು ಲೇಸರ್ ಹೇರ್ ರಿಮೂವರ್ ಚಿಕಿತ್ಸೆ ಮಾಡಿಸಲು ಇಚ್ಛಿಸುತ್ತಿದ್ದರೆ, ಅದನ್ನು ಮದುವೆಗೆ 6 ತಿಂಗಳ ಮೊದಲು ಮಾಡಿಸುವ ಅಗತ್ಯವಿದೆ. ಪರಿಸ್ಥಿತಿಗೆ ಅನುಗುಣವಾಗಿ ಇದರ ಚಿಕಿತ್ಸೆಗೆ ಹಲವಾರು ಬಾರಿ ಹೋಗಬೇಕು.